Recent Posts

ಮೆಚ್ಚಿನ ಗೊಂಬೆ   - ೫ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಮೆಚ್ಚಿನ ಗೊಂಬೆ
 
ಅಭ್ಯಾಸ
 
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ಗೊಂಬೆಗಳನ್ನು ಯಾವ ಯಾವ ವಸ್ತುಗಳಿಂದ ತಯಾರಿಸುತ್ತಾರೆ ?
2. ಗೊಂಬೆಗೆ ನೋವಾದರೆ ಮಕ್ಕಳು ಏನು ಮಾಡುತ್ತಾರೆ ?
3. ಅಳುವ ಗೊಂಬೆಗೆ ಮಕ್ಕಳು ಏನೆಂದು ಹಾಡಿ ಸಮಾಧಾನ ಮಾಡುತ್ತಾರೆ ?
4. ಯಾವ ಹಬ್ಬದಂದು ಗೊಂಬೆಗಳನ್ನು ಅಲಂಕರಿಸು ತ್ತಾರೆ ?
5. ಗೊಂಬೆಗಳು ಯಾವ ಯಾವ ರೂಪದಲ್ಲಿ ಜನ್ಮ ತಾಳಿದೆ ?
೫ನೇ ತರಗತಿ ಪದ್ಯದ ಸಾರಾಂಶ
 
ಮುಖ್ಯಾಂಶಗಳು
 
ಗೊಂಬೆಯನ್ನು ಎಲ್ಲರೂ ಮೆಚ್ಚುತ್ತಾರೆ . ಸುಂದರವಾದ ಗೊಂಬೆಗಳು ತನ್ನ ಸೌಂದರ್ಯದಿಂದ , ಮನಮೋಹಕ ಬಣ್ಣಗಳಿಂದ , ವಿವಿಧ ರೀತಿಯ ಚಟುವಟಿಕೆಗಳಿಂದ ಎಲ್ಲರನ್ನೂ ಆಕರ್ಷಿಸುತ್ತದೆ . ಗೊಂಬೆಗಳು ಎಂದರೆ ಮಕ್ಕಳಿಗೆ ಪ್ರೀತಿ ಮತ್ತು ಅವುಗಳು ಅವರ ಪ್ರಮುಖ ಆಸ್ತಿ, ಮಕ್ಕಳು ಗೊಂಬೆಗಳ ಜೊತೆ ಚೆನ್ನಾಗಿ ಆಟವಾಡುತ್ತಾರೆ . ಅದನ್ನು ಎತ್ತಿ , ಬಿಸಾಡಿ , ನೂಕಿ , ಎಳೆದು , ನಲಿಯುತ್ತಾರೆ . ಸ್ವಲ್ಪ ದೊಡ್ಡ ಮಕ್ಕಳು ಮನೆಯಾಟವಾಡಲು ಗೊಂಬೆಗಳನ್ನು ಬಳಸುತ್ತಾರೆ , ತಾವು ಅಮ್ಮ ಅಪ್ಪನಾಗಿ ಗೊಂಬೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ . ಅವುಗಳಿಗೆ ಸ್ನಾನ ಮಾಡಿಸುವುದು , ಮಲಗಿಸಿ ಲಾಲಿ ಹಾಡುವುದು , ಬಟ್ಟೆ ತೊಡಿಸುವುದು , ಶೃಂಗಾರ ಮಾಡುವುದು ಹೀಗೆ ಪ್ರೀತಿಸಿ ಮುದ್ದಿಸುತ್ತಾರೆ . ಮಕ್ಕಳ ಕೈಯಲ್ಲಿ ಗೊಂಬೆಗಳಿಗೆ ಜೀವ ಇರುತ್ತದೆ . ಯಾರಾದರೂ ಅವರ ಗೊಂಬೆಗಳ ಬಗ್ಗೆ ಕೀಟಲೆ ಮಾಡಿದರೆ ಸುಮ್ಮನಿರುವುದಿಲ್ಲ . ನೋವಾಯಿತೆಂದು ಎತ್ತಿ ಮುದ್ದಾಡಿ , ಸಮಾಧಾನ ಮಾಡುತ್ತಾರೆ . ತಮ್ಮ ತಾಯಿತಂದೆಯರು ಹೇಳುವಂತೆ ಮಕ್ಕಳು ತಮ್ಮ ಗೊಂಬೆಗೆ ಹೇಳಿ ಸೂಸಿ ಹೊಡೆಯುತ್ತಾರೆ .
ಗೊಂಬೆಗಳನ್ನು ಮರ , ಮಣ್ಣು , ಪ್ಲಾಸ್ಟಿಕ್ , ಪಿಂಗಾಣಿ , ಬಟ್ಟೆ , ಹತ್ತಿ , ಬಿದಿರು ,ಕಾಗದಗಳಿಂದ ತಯಾರಿಸುತ್ತಾರೆ . ಗೊಂಬೆಗಳು ಮನುಷ್ಯ , ಪ್ರಾಣಿ , ಪಕ್ಷಿ , ಕೀಟ ಎಲ್ಲಾ ರೂಪಗಳಲ್ಲೂ ಜನ್ಮತಾಳಿವೆ, ಗೊಂಬೆಯ ಪೆನ್ನು , ಪೆನ್ಸಿಲ್ ಮತ್ತು ತಿಂಡಿತಿನಿಸುಗಳಲ್ಲೂ ಈ ರೂಪವನ್ನು ನೋಡಬಹುದು . ಜಾತ್ರೆ , ಉತ್ಸವಗಳಲ್ಲಿ ಸಹ ಗೊಂಬೆಗಳದೇ ಆಕರ್ಷಣೆ , ಕುಣಿಯುವ ಗೊಂಬೆಗಳು ಆನಂದವನ್ನು ತರುತ್ತದೆ . ಜೋಕರ್ ಗೊಂಬೆಗಳು ತಾವೂ ನಗುತ್ತಾ ಎಲ್ಲರನ್ನೂ ನಗಿಸುತ್ತವೆ . ನಮ್ಮ ನಾಡಹಬ್ಬ ದಸರಾದಲ್ಲಿ ಮನೆ – ಮನೆಗಳಲ್ಲಿ ಗೊಂಬೆಗಳನ್ನು ಅಲಂಕರಿಸುವ ಸಂಪ್ರದಾಯವಿದೆ . ನೂರಾರು ಗೊಂಬೆಗಳನ್ನು ಒಂದೇ ಕಡೆ ನೋಡುವುದೇ ಒಂದು ಹಬ್ಬ . ಸ್ಟಿಂಗ್ ಗೊಂಬೆಗಳು , ಕೀ ಗೊಂಬೆಗಳು , ಕೀಲುಗೊಂಬೆಗಳು , ಮಂತ್ರದ ಗೊಂಬೆಗಳು , ವಿವಿಧ ರಂಗಿನ ಗೊಂಬೆಗಳು ಹಾಗೂ ಇವುಗಳು ಆಟಗಳ ಮೂಲಕ ಎಲ್ಲರನ್ನೂ ಸೆಳೆಯುತ್ತವೆ . ಆಗ ಅವು ನಿಜವಾಗಿ ಜೀವವಿದ್ದವುಗಳಂತೆ ವರ್ತಿಸುತ್ತವೆ . ಗೊಂಬೆಗಳು ಮಾನವನಿಗೆ ಅನೇಕ ಜೀವನ ಪಾಠಗಳನ್ನು ತಿಳಿಸುತ್ತವೆ . ಯಾರ ಹೊಗಳಿಕೆಗೂ , ತೆಗಳಿಕೆಗೂ ಜಗ್ಗುವುದಿಲ್ಲ . ಈ ಕೆಳಗಿನ ಸಾಲುಗಳನ್ನು ಯಾರಾದರೂ ಮರೆಯಲು ಸಾಧ್ಯವೇ ? ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು || ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು || ಗೊಂಬೆಗಳು ಸುಂದರ , , ಮನಮೋಹಕವಾದರೂ , ಸ್ತುತಿನಿಂದೆಗಳಿಗೆ ಮನಸ್ಸು ಕೊಡಬಾರದು ಎಂಬ ನೀತಿಪಾಠವನ್ನು ಕಲಿಸುತ್ತದೆ .


You Might Like

Post a Comment

0 Comments