Recent Posts

ಆಚಾರವಿಲ್ಲದ ನಾಲಗೆ - Class 9th Second Language Kannada Textbook Solutions

 ಪದ್ಯ ೧೬ 
ಆಚಾರವಿಲ್ಲದ ನಾಲಗೆ

ಕವಿ/ಲೇಖಕರ ಪರಿಚಯ

*  ಪುರಂದರದಾಸರು, ಮೊದಲ ಹೆಸರು ಶ್ರೀನಿವಾಸನಾಯಕ ಇವರು ಕ್ರಿಶ. 1484ರಿಂದ 1564 ನಡುವಿನ ಕಾಲಾವಧಿಯಲ್ಲಿ  ಪುರಂದರಘಡ ದಲ್ಲಿ ಜನಿಸಿದರು.
* ಇವರು ಕೀರ್ತನೆ, ಸುಳಾದಿ, ಉಗಾಭೋಗಗಳನ್ನು ರಚಿಸಿದ್ದಾರೆ.  
* ಅಂಕಿತನಾಮ:- 'ಪುರಂದರವಿಠಲ'
* ಬಿರುದು:- 'ಕರ್ನಾಟಕ ಸಂಗೀತ ಪಿತಾಮಹ' ಎಂಬ ಬಿರುದು ಇದೆ.
*ಪ್ರಸ್ತುತ ಕೀರ್ತನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಪ್ರಕಟಿಸಿರುವ ಡಾ. ಟಿ.ಎನ್.ನಾಗರತ್ನ ಅವರ 'ದಾಸ ಸಾಹಿತ್ಯ ಸೌರಭ' ಕೃತಿಯಿಂದ ಆರಿಸಿದೆ.

ಟಿಪ್ಪಣಿಗಳು

1. ಕೀರ್ತನೆ : ಹರಿ ಮಹಿಮೆಯನ್ನು ಕೀರ್ತಿಸುವುದೇ ಕೀರ್ತನೆಗಳು, ಕೀರ್ತನೆಗಳು ಪಲ್ಲವಿ, ಅನುಪಲ್ಲವಿ ಹಾಗೂ ಚರಣಗಳಿಂದ ಕೂಡಿ ರಾಗಯುಕ್ತವಾಗಿ, ತಾಳಬದ್ಧವಾಗಿರುತ್ತವೆ. ಸುಳಾದಿಗಳಿಗಿಂತ ಸರಳವಾಗಿಯೂ, ಉಗಾಭೋಗಗಳಿಗಿಂತ ಬಿಗಿಯಾಗಿಯೂ ಇರುತ್ತವೆ. ಕೊನೆಯ ಚರಣದಲ್ಲಿ ಕೀರ್ತನೆ ರಚಿಸಿದ ಹರಿದಾಸರ ಇಷ್ಟದೈವದ ಅಂಕಿತವಿರುತ್ತದೆ.
2. ಸುಳಾದಿ : ಸುಳಾದಿ ಹರಿದಾಸ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ, ತಾಳ ಪ್ರಧಾನವಾದ ಗೇಯ ರಚನೆ. ಉಗಾಭೋಗಗಳಿಗಿಂತ ಬಿಗಿಯಾದ ಬಂಧವೇ ಸುಳಾದಿ, ಸಂಗೀತದ ಹಿನ್ನೆಲೆ, ತಾಳಗಳ ಪಟ್ಟು, ಸಾಹಿತ್ಯದ ಚೌಕಟ್ಟಿನಲ್ಲಿ ತತ್ತ್ವಗಳ ನಿರೂಪಣೆಯೇ ಸುಳಾದಿಯ ಲಕ್ಷಣವಾಗಿದೆ. ಧ್ರುವ, ಮಠ, ತ್ರಿಪುಟ, ಝಂಪೆ, ರೂಪಕ, ಅಟ್ಟ ಹಾಗೂ ಏಕತಾಳ ಇವೇ ಸುಳಾದಿಯ ತಾಳಗಳು.
3. ಉಗಾಭೋಗ : ಇದು ಹರಿದಾಸ ಸಾಹಿತ್ಯದ ಇನ್ನೊಂದು ವಿಶಿಷ್ಟ ಗೇಯ ಪ್ರಕಾರ, ಉಗಾಭೋಗವೆಂಬ ಮಾತು ಕ್ರಿ.ಶ.ಸುಮಾರು 13 ನೆಯ ಶತಮಾನದಲ್ಲಿದ್ದ ಶಾರ್ಙ್ಗದೇವನ ಕಾಲದಿಂದ ಬಳಕೆಯಲ್ಲಿ ಬಂದಂತೆ ಕಾಣುತ್ತದೆ. ನಂತರ ಹರಿದಾಸರಲ್ಲಿ ಇದು ಹೆಚ್ಚಾಗಿ ಬಳಕೆಯಾಗಿದೆ. ಇದು ರಾಗ ಪ್ರಧಾನ ರಚನೆ, ತಾಳದ ಪಟ್ಟಿಲ್ಲ. ಸಾಮಾನ್ಯವಾಗಿ ದ್ವಿತೀಯ ಪ್ರಾಸವಿರುತ್ತದೆ. ಅಂತ್ಯ ಪ್ರಾಸವಿರುವುದೂ ಉಂಟು. ಕೊನೆಯಲ್ಲಿ ಆಯಾ ದಾಸರ ಅಂಕಿತ ಬರುತ್ತದೆ.

  ಪದಗಳ ಅರ್ಥ
ಅಮೃತ - ಸುಧೆ; ಹಾಲು.
ಕಡುಚತುರ - ಅತೀ ಬುದ್ಧಿವಂತಿಕೆ ಉಳ್ಳವನು.
ನೀಚ - ಕೆಟ್ಟ,ಕೀಳಾದ
ಸಿರಿವರ – ಸಮೃದ್ಧಿ ಹೊಂದಿದ ಸಂಪದ್ಭರಿತ
ಆಚಾರ -  ಸಂಪ್ರದಾಯ, ಕಟ್ಟುಪಾಡು.
ಗತಿ -  ಆಧಾರ; ಚಲನಶೀಲ ಸ್ಥಿತಿ,
ನೀಚ – ಕೆಟ್ಟ: ಕೀಳಾದ -
ಲಜ್ಜೆ – ನಾಚಿಕೆ; ಸಿಗ್ಗು.
ಹುಸಿ - ಸುಳ್ಳು

     ಪ್ರಶ್ನೆಗಳು 

●    ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಪುರಂದರದಾಸರ ಪೂರ್ವದ ಹೆಸರು: ಶ್ರೀನಿವಾಸನಾಯಕ
2. ಪುರಂದರದಾಸರ ಗುರುಗಳ ಹೆಸರು: ವ್ಯಾಸರಾಯರು
3. ದಾಸ ಸಾಹಿತ್ಯವು ಶ್ರೀಪಾದರಾಜರು ಅವರಿಂದ ಆರಂಭಗೊಂಡಿತು.
4. ಪುರಂದರ ದಾಸರ ಇಷ್ಟದೈವ ಪುರಂದರವಿಠಲರಾಯ

●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಪುರಂದರದಾಸರ ಅಂಕಿತನಾಮವೇನು?

ಉತ್ತರ:- ಪುರಂದರದಾಸರ ಅಂಕಿತನಾಮ ಪುರಂದರ ವಿಠಲ,

2. ಪುರಂದರದಾಸರಿಗೆ ಯಾವ ಬಿರುದು ಇದೆ?
ಉತ್ತರ:- ಪುರಂದರದಾಸರಿಗೆ 'ಕರ್ನಾಟಕ ಸಂಗೀತ ಪಿತಾಮಹ' ಎಂಬ ಬಿರುದು ಇದೆ.

3. ಆಚಾರವಿಲ್ಲದ ನಾಲಗೆ ಮಾನವನ ಯಾವ ವರ್ತನೆಗಳನ್ನು ಸೂಚಿಸುತ್ತದೆ?
ಉತ್ತರ:- ಆಚಾರವಿಲ್ಲದ ನಾಲಗೆ ಮಾನವನ ರೀತಿ-ನೀತಿ, ಆಚಾರ ವಿಚಾರ ಹಾಗೂ ಗುಣ ನಡತೆಗಳನ್ನು ಸೂಚಿಸುತ್ತದೆ.

4. ಪುರಂದರದಾಸರು ನಮ್ಮ ನಡೆನುಡಿಗಳಲ್ಲಿ ಯಾರ ಸರಣೆ ಇರಬೇಕೆಂದು ಹೇಳುತ್ತಾರೆ?
ಉತ್ತರ:- ಪುರಂದರದಾಸರು ನಮ್ಮ ನಡೆನುಡಿಗಳಲ್ಲಿ ಹರಿನಾಮ ಸರಣೆ ಇರಬೇಕೆಂದು ಹೇಳುತ್ತಾರೆ. 

5, ಪುರಂದರದಾಸರು ಬಡವರ ಪಾಲಿಗೆ ನಮ್ಮ ನುಡಿ ಹೇಗಿರಬೇಕೆಂದು ಹೇಳುತ್ತಾರೆ?
ಉತ್ತರ:- ಪುರಂದರದಾಸರು ಬಡವರ ಪಾಲಿಗೆ ನಮ್ಮ ನುಡಿಯು ಅವರ ಮನಸ್ಸನ್ನು ನೋಯಿಸುವಂತಿರಬಾರದು ಎಂದು ಹೇಳುತ್ತಾರೆ.

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1 ಪುರಂದರದಾಸರು ಯಾವ ರೀತಿ ಹೇಳಿದ್ದಾರೆ?

ಉತ್ತರ:- ಯಾವುದೇ ಸಮಯದಲ್ಲೂ ಇದ್ದಂತ ಸತ್ಯವನ್ನು ನುಡಿಯಬೇಕು. ಸತ್ಯವನ್ನು ನುಡಿಯುವುದರಿಂದ ಯಾವುದೇ ತೊಂದರೆಗಳಿಲ್ಲದೆ ಸುಖ ಸಂತೋಷದಿಂದ ಇರಬಹುದು. ಅಂದರೆ ಹಾಲು ಅಮೃತದಂತಹ ಸವಿಯನ್ನು ಉಣ್ಣಬಹುದು. ಹಾಗಾಗಿ ನಾಲಗೆಯು ಬುದ್ಧಿಯ ಹಿಡಿತದಲ್ಲಿರಬೇಕೆಂದು ಪುರಂದರದಾಸರು ಹೇಳುತ್ತಾರೆ. 

2. ಪುರಂದರದಾಸರು ಹುಸಿ ನುಡಿಯಬಾರದು ಎಂಬುದನ್ನು ಯಾವ ರೀತಿ ಹೇಳಿದ್ದಾರೆ?
ಉತ್ತರ:- ಯಾವುದೇ ಸಮಯದಲ್ಲೂ ಇದ್ದದ್ದನ್ನು ಇದ್ದಂತೆ ನುಡಿಯಬೇಕು. ಹಿಡಿದು ಒದ್ದು ನಮ್ಮನ್ನು ಹಿಂಸಿಸಿದರೂ ಸಹ ಸುಳ್ಳನ್ನು ಹೇಳಬಾರದು. ಸತ್ಯವನ್ನು ನುಡಿಯುವುದರಿಂದ ಯಾವುದೇ ತೊಂದರೆಗಳಿಲ್ಲದೆ ಸುಖ ಸಂತೋಷದಿಂದ ಇರಬಹುದು. ಆದ್ದರಿಂದ ಹಸಿಯನ್ನು ನುಡಿಯಬಾರದೆಂದು ಪುರಂದರದಾಸರು ಹೇಳಿದ್ದಾರೆ.

3. ಪುರಂದರದಾಸರು ಮಾತಿನಲ್ಲಿ ಹರಿಯನ್ನು ಹೇಗೆ ಕಾಣಬೇಕೆಂದು ಬಯಸಿದ್ದಾರೆ?
ಉತ್ತರ:- ನಾವು ಸದಾ ಕಾಲ ಕೆಟ್ಟದ್ದನ್ನೇ ನುಡಿಯುತ್ತಿದ್ದರೆ ಯಮಭಟರು ನಮ್ಮನ್ನು ಹಿಡಿದುಕೊಂಡೊಯ್ಯುತ್ತಾರೆ. ಆದುದರಿಂದ ಮುಕ್ತಿ ಮಾರ್ಗಕ್ಕೆ ಕೊಂಡೊಯ್ಯುವ ಹರಿನಾ ಪುರಂದರದಾಸರು ಹೇಳಿದ್ದಾರೆ. ನಾಮವನ್ನೇ ಸ್ಮರಿಸುತ್ತಿರಬೇಕು. ಪರಿಪಾದವೇ ಪರದು ಗತಿಯೆಂದು ತಿಳಿಯಬೇಕೆಂದು

4. ಪುರಂದರದಾಸರು ಪರರ ಚಿಂತೆಯನ್ನು ಬಿಡು ಎಂದು ಏಕೆ ಹೇಳಿದ್ದಾರೆ?
ಉತ್ತರ:- ಹರಿಪಾದವೇ ಪರಮ ಗತಿಯೆಂದು ತಿಳಿದು ಸದಾ ಕಾಲವು ಪರರ ಚಿಂತೆಯನ್ನು ಬಿಡಬೇಕು. ಅನ್ಯರ ಚಿಂತೆಯಲ್ಲಿ ಕಾಲಹರಣ ಮಾಡದೆ, ಸಿರಿ ಸಂಪತ್ತನ್ನು ನೀಡುವ ಪುರಂದರವಿಠಲರಾಯನನ್ನು ಮರೆಯದೇ ಧ್ಯಾನ ಮಾಡಬೇಕೆಂದು ಪುರಂದರದಾಸರು ಹೇಳಿದ್ದಾರೆ.

●    ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಪುರಂದರದಾಸರು ಮಾನವನ ನಡೆನುಡಿಯ ಮಹತ್ವವನ್ನು ಹೇಗೆ ವರ್ಣಿಸಿದ್ದಾರೆ?

ಉತ್ತರ:- ಆಚಾರ ವಿಚಾರ, ರೀತಿ ನೀತಿ, ನಡವಳಿಕೆಯನ್ನು ಅರಿಯದ ನಾಲಗೆಯೇ ನಿನ್ನ ಕೆಟ್ಟ ಬುದ್ಧಿಯನ್ನು ಬಿಡು, ನಾಚಿಕೆ, ಲಜ್ಜೆಗಳನ್ನು ಅರಿಯದೆ ಎಲ್ಲಾ ಸಂದರ್ಭದಲ್ಲೂ ಮಾತನಾಡಲು ಮುಂದೆ ಚಾಚಿಕೊಳ್ಳುವ ನಾಲಗೆಯೇ ನಿನ್ನ ಕೆಟ್ಟ ತನವನ್ನು ಬಿಡು ಎಂದು ಪುರಂದರದಾಸರು ಹೇಳುತ್ತಾರೆ. ಮನುಷ್ಯ ಆಡಂಬರ ಹಾಗೂ ಡಂಭಾಚಾರದ ಬದುಕನ್ನು ಬಿಡಬೇಕು. ದ್ವೇಷ, ಅಸೂಯೆ, ಕೋಪ, ತಾಪಗಳನ್ನು ಬಿಟ್ಟು ಧರ್ಮದ ಹಾದಿಯಲ್ಲಿ ನಡೆಯಬೇಕು. ನಮ್ಮ ನಡೆ ನುಡಿ, ತನು ಮನ, ಅಂತರಂಗ ಬಹಿರಂಗಗಳು ಪರಿಶುದ್ಧವಾಗಿರಬೇಕು. 'ನಾಲಗೆ ಶುದ್ಧವಾದರೆ ನಾಡೆಲ್ಲಾ ನೆಂಟರು' ಎನ್ನುವಂತೆ ಬದುಕಬೇಕೆಂದು ಪುರಂದರದಾಸರು ಹೇಳಿದ್ದಾರೆ. 

2. ನಾಲಗೆ ಬುದ್ಧಿಯ ಹಿಡಿತದಲ್ಲಿರುವುದರಿಂದ ಆಗುವ ಪ್ರಯೋಜನಗಳೇನು?
ಉತ್ತರ:- ನಾಲಗೆ ಯಾವಾಗಲೂ ಸತ್ಯವನ್ನು ನುಡಿಯುವುದರಿಂದ ಯಾವುದೇ ತೊಂದರೆಗಳಿಲ್ಲದೆ ಸುಖ ಸಂತೋಷದಿಂದ ಇರಬಹುದು. ಅಂದರೆ ಹಾಲು ಅಮೃತದಂತಹ ಸವಿಯನ್ನು ಉಣ್ಣಬಹುದು. ಮನುಷ್ಯ ಆಡಂಬರ ಹಾಗೂ ಡಂಭಾಚಾರದ ಬದುಕನ್ನು ಬಿಡಬೇಕು, ದ್ವೇಷ,ಅಸೂಯೆ, ಕೋಪ, ತಾಪಗಳನ್ನು ಬಿಟ್ಟು ಧರ್ಮದ ಹಾದಿಯಲ್ಲಿ ನಡೆಯಬೇಕು, ನಾಲಗೆಯ ಯಜಮಾನರಾದ ನಾವು ನಾಲಗೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ಆಗ ನಮ್ಮಿಂದ ಆಗುವ ತಪ್ಪುಗಳು ಕಡಿಮೆಯಾಗುತ್ತವೆ ಎಂದು ಪುರಂದರದಾಸರು ಹೇಳಿದ್ದಾರೆ.

●    ಸಂದರ್ಭದೊಡನೆ ವಿವರಿಸಿ,

1. ಪರರ ಚಿಂತೆಯ ಬಿಡು ನಾಲಗೆ
ಆಯ್ಕೆ:-
ಈ ವಾಕ್ಯವನ್ನು "ಪುರಂದರದಾಸರು" ಅವರು ಬರೆದಿರುವ'ದಾಸ ಸಾಹಿತ್ಯ ಸೌರಭ'ಎಂಬ ಕೃತಿಯಿಂದ ಆಯ್ದ "ಆಚಾರವಿಲ್ಲದ ನಾಲಗೆ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಪುರಂದರದಾಸರು ಹೇಳುತ್ತಾರೆ.
ಸ್ವಾರಸ್ಯ :- ಹರಿಪಾದವೇ ಪರಮ ಗತಿಯೆಂದು ತಿಳಿದು ಸದಾ ಕಾಲವು ಪರರ ಚಿಂತೆಯನ್ನು ಬಿಡಬೇಕು. ಅನ್ಯರ ಚಿಂತೆಯಲ್ಲಿ ಕಾಲಹರಣ ಮಾಡದೆ, ಸಿರಿ ಸಂಪತ್ತನ್ನು ನೀಡುವ ಪುರಂದರವಿಠಲನನ್ನು ಮರೆಯದೇ ಧ್ಯಾನ ಮಾಡಬೇಕೆಂದು ಪುರಂದರದಾಸರು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2. ಬುದ್ಧಿಯಲಿರು ಕಂಡ್ಯ ನಾಲಗೆ
ಆಯ್ಕೆ:
- ಈ ವಾಕ್ಯವನ್ನು "ಪುರಂದರದಾಸರು" ಅವರು ಬರೆದಿರುವ'ದಾಸ ಸಾಹಿತ್ಯ ಸೌರಭ' ಎಂಬ ಕೃತಿಯಿಂದ ಆಯ್ದ"ಆಚಾರವಿಲ್ಲದ ನಾಲಗೆ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಪುರಂದರದಾಸರು ಹೇಳುತ್ತಾರೆ.
ಸ್ವಾರಸ್ಯ:- ಯಾವುದೇ ಸಮಯದಲ್ಲೂ ಇದ್ದದ್ದನ್ನು ಇದ್ದಂತೆ ನುಡಿಯಬೇಕು. ಹಿಡಿದು ಒದ್ದು ನಮ್ಮನ್ನು ಹಿಂಸಿಸಿದರೂ ಸಹ ಸುಳ್ಳನ್ನು ಹೇಳಬಾರದು. ಸತ್ಯವನ್ನು ನುಡಿಯುವುದುಂದ ಯಾವುದೇ ತೊಂದರೆಗಳಿಲ್ಲದೆ ಸುಖ ಸಂತೋಷದಿಂದ ಇರಬಹುದು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

3 ಕಡುಚತುರ ನುಡಿಯದಿರು ನಾಲಗೆ
ಆಯ್ಕೆ:-
ಈ ವಾಕ್ಯವನ್ನು "ಪುರಂದರದಾಸರು" ಅವರು ಬರೆದಿರುವ'ದಾಸ ಸಾಹಿತ್ಯ ಸೌರಭ'ಎಂಬ ಕೃತಿಯಿಂದ ಆಯ್ದ"ಆಚಾರವಿಲ್ಲದ ನಾಲಗೆ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಪುರಂದರದಾಸರು ಹೇಳುತ್ತಾರೆ.
ಸ್ವಾರಸ್ಯ:- ಬಡವರಿಗೆ, ನೊಂದವರಿಗೆ ನಾವು ಅತಿ ಬುದ್ಧಿವಂತಿಕೆಯ ನುಡಿಗಳನ್ನಾಡಿ ಅವರನ್ನು ನೋಯಿಸಬಾರದು. ಅವರನ್ನು ಒರಿದು ಹಂಗಿಸಬಾರದು. ಬಡವರ ಮಾತಿಗೆ ನಾವು ಕಡುಚತುರ ನುಡಿಗಳನ್ನು ನುಡಿಯಬಾರದು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

     ಭಾಷಾಭ್ಯಾಸ
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.

ಆಚಾರ X ಅನಾಚಾರ
ನೀಚಗುಣ x ಶ್ರೇಷ್ಠಗುಣ
ಲಜ್ಜೆ X ನಿರ್ಲಜ್ಜೆ 
ಬೇಡ X ಬೇಕು

ಇ) ಕೆಳಗಿನ ಪದಗಳಿಗೆ ತತ್ಸಮ-ತದ್ಭವ ರೂಪ ಬರೆಯಿರಿ.
ಅಮೃತ - ಅಮರ್ದು
ಯಮ - ಜಮ
ಸಿರಿ – ಶ್ರೀ 
ಚತುರ - ಚದುರ

ಈ ಕೆಳಗಿನ ಪದಗಳನ್ನು ಬಿಡಿಸಿ, ಸಂಧಿಯ ಹೆಸರು ಬರೆಯಿರಿ.
1.ಆಚಾರವಿಲ್ಲದ,= ಆಚಾರ + ಇಲ್ಲದ -ಆಗಮಸಂಧಿ
2.ಮಾತನಾಡು = ಮಾತನ್ನು + ಆಡು - ಲೋಪಸಂಧಿ
3.ನುದಿಯದೆ= ನುಡಿ + ಅದೆ - ಆಗಮ ಸಂಧಿ
4.ಹರಿಯೆಂದು = ಹರಿ + ಎಂದು -ಆಗಮ ಸಂಧಿ

ಉ) ಕೆಳಗಿನ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳ ವಿಭಕ್ತಿ ಪ್ರತ್ಯಯಗಳ ಹೆಸರನ್ನು ಬರೆಯಿರಿ.
1. ಪುರಂದರದಾಸರು ಹರಿಯನ್ನು ಪ್ರಾರ್ಥಿಸಿದರು= ಅನ್ನು ದ್ವಿತೀಯ ವಿಭಕ್ತಿ ಪ್ರತ್ಯಯ
2. ಹಣ್ಣಿಗೆ ಒಂದು ಆಕಾರವಿರುತ್ತದೆ ಈ ಗೆ – ಚತುರ್ಥಿ ವಿಭಕ್ತಿ ಪ್ರತ್ಯಯ
3. ಶಿಕ್ಷಣದಿಂದ ಜ್ಞಾನ ವೃದ್ಧಿಸುತ್ತದೆ. = ಇಂದ - ತೃತೀಯ ವಿಭಕ್ತಿ ಪ್ರತ್ಯಯ
4, ಉಳುವವನೇ ಭೂಮಿಯ ಒಡೆಯ= ಅ ಷಷ್ಠಿ ವಿಭಕ್ತಿ ಪ್ರತ್ಯಯ

You Might Like

Post a Comment

0 Comments