Recent Posts

ಹುತಾತ್ಮ ಬಾಲಕ  - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಹುತಾತ್ಮ ಬಾಲಕ  
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಯಾರು ?
ಉತ್ತರ :
ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಗಾಂಧೀಜಿಯವರು .
 
2.    ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ ಯಾವುದು ?
ಉತ್ತರ :
1942 ರ ಆಗಸ್ಟ್ 15 ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ .
 
3.    ನಾರಾಯಣನ ತಾಯಿ ಏನೆಂದು ಮಗನನ್ನು ಹರಸಿದಳು ?
ಉತ್ತರ :
ನಾರಾಯಣನ ತಾಯಿ ‘ ದೇವರು ನಿನಗೆ ಮಾಡಲಿ ‘ ಎಂದು ಮಗನನ್ನು ಹರಸಿದಳು .
 
4.    ನಾರಾಯಣನು ಕೂಗಿದ ಘೋಷಣೆ ಯಾವುದು ?
 ಉತ್ತರ :
ಎಂಬ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ  ‘ ಘೋಷಣೆಯನ್ನು ನಾರಾಯಣನು ಕೂಗಿದನು .
 
5.ಸಾವಿನ ಅನಂಚಿನಲ್ಲಿದ್ದ ಬಾಲಕ  ಏನನ್ನು ಕೇಳಿದ ?
ಉತ್ತರ :
ಸಾವಿನ ಅಂಗಿ ಬಾಲಕ ತನ್ನ ನೋವನ್ನು ಮರೆತು ‘ ಸ್ವರಾಜ್ಯ ‘ ಬೇಕೆಂದು ಕೇಳಿದ .
 
ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ
 
1.    ಬಾಲಕ ನಾರಾಯಣ ಮುಂಜಾನೆ ಎದ್ದು ಹೇಗೆ ಸಿದ್ಧನಾದನು ?
ಉತ್ತರ :
ಬಾಲಕ ನಾರಾಯಣ ಅಂದು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ ಕೈಯಲೇ ನೇಯ್ದ   ಖಾದಿ ಚಡ್ಡಿ , ಅಂಗಿ ಮತ್ತು ಗಾಂಧಿ ಟೋಪಿಯನ್ನು ಧರಿಸಿದನು . ಮನೆಯ ಬೀರುವಿನಲ್ಲಿದ್ದ ತ್ರಿವರ್ಣದ ಧ್ವಜವನ್ನು ತೆಗೆದುಕೊಂಡು ಬ್ರಿಟೀಷರ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಸಿದ್ದನಾದನು .
 
2.    ನಾರಾಯಣನ ತಾಯಿ ಏಕೆ ಅಚ್ಚರಿಗೊಂಡಳು
ಉತ್ತರ :
” ಅಮ್ಮಾ ಬ್ರಿಟೀಷರ ವಿರುದ್ದ ಪ್ರತಿಭಟನಾ ಮೆರವಣಿ ನಡೆಯುತ್ತಿದೆ . ಅದನ್ನು ಕೂಡಿಕೊಳ್ಳನು ನಾನು ಹೋಗುತ್ತಿದ್ದೇನೆ ‘ ಎಂದ ನಾರಾಯಣ , ಬಾಲಕ ನಾರಾಯಣನ ಕಣ್ಣಿನಲ್ಲಿ ಅಪೂರ್ವ ಕಾಂತಿಯಿತ್ತು . ‘ ಮಗು ನೀನು ಇನ್ನೂ ಚಿಕ್ಕವನು . ದೊಡ್ಡವರ ಮೆರವಣಿಗೆಯಲ್ಲಿ ನೀನು ಹೇಗೆ ಸೇರಲು ಸಾಧ್ಯ ? ” ಎಂದು ತಾಯಿ ಕೇಳಿದಳು . ಅದಕ್ಕೆ ಅವನು ” ಅಮ್ಮ ಹಿರಿಯರು ಕಿರಿಯರು ಎನ್ನುವುದು ಮುಖ್ಯವಲ್ಲ , ಭಾರತ ಮಾತೆಯ ಸೇವೆಯನ್ನು ಹೇಗೆ ಮಾಡುತ್ತೇವೆ ಎನ್ನುವುದೇ ಮುಖ್ಯ ‘ ಎಂದು ಹೇಳಿದನು . ಮಗನ ಈ ರೀತಿಯ ಮಾತನ್ನು ಕೇಳಿ ತಾಯಿ ಅಚ್ಚರಿಗೊಂಡಳು .
 
3.    ಪೊಲೀಸರು ಸಿಟ್ಟಿನಿಂದ ಏಕೆ ಕುದಿಯುತ್ತಿದ್ದರು ?
ಉತ್ತರ :
ದುರ್ಗದ ಬಯಲಿನಲ್ಲಿ ಸೇರಿದ್ದ ಜನರನ್ನು ನಾರಾಯಣ ಸೇರಿಕೊಂಡನು . ಮಿಂಚಿನ ಕಣ್ಣಿನ ಚತುರ ಹುಡುಗನ ಆಗಮನ ಎಲ್ಲರನ್ನೂ ಆಕರ್ಷಿಸಿತು . ಮೆರವಣಿಗೆ ಆರಂಭವಾಯಿತು . ನಾರಾಯಣ ತಾರಕ ಸ್ವರದಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ‘ ಎಂದು ಘೋಷಣೆ ಕೂಗುತ್ತಿದ್ದನು . ಇತರರು ಅವನ ಕೂಗನ್ನು ಪ್ರತಿಧ್ವನಿಸುತ್ತಿದ್ದರು . ಇದನ್ನು ಕಂಡ ಪೊಲೀಸರು ಸಿಟ್ಟಿನಿಂದ ಕುದಿಯುತ್ತಿದ್ದರು .
 
ಇ ) ಈ ಮಾತನ್ನು ಯಾರು ? ಯಾರಿಗೆ ಹೇಳಿ
 
1.    ” ಎಲ್ಲಿಗೆ ಹೋಗುತ್ತಿರುವೆ ಮಗು ? ”
 ಉತ್ತರ : ಯಾರು ? : ತಾಯಿ
 ಯಾರಿಗೆ ? : ನಾರಾಯಣನಿಗೆ
 
2.    “ ಅಮ್ಮ ಹಿರಿಯರು ಕಿರಿಯರು ಎನ್ನುವುದು ಮುಖ್ಯವಲ್ಲ . “
ಉತ್ತರ :
ಯಾರು ? : ನಾರಾಯಣ
ಯಾರಿಗೆ ? : ತಾಯಿಗೆ
 
3.    ” ನಿನಗೆ ಏನು ಬೇಕು ? ”
ಉತ್ತರ :
ಯಾರು ? : ಆಂಗ್ಲ ಅಧಿಕಾರಿ ,
ಯಾರಿಗೆ ? : ನಾರಾಯಣನಿಗೆ
 
ಭಾಷಾ ಚಟುವಟಿಕೆ
 
ಅ ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ .
 
ಉತ್ತರ :
1.    ಅಹಿಂಸೆ • ಹಿಂಸೆ
2.    ಕಿರಿಯ • ಹಿರಿಯ
3.    ಸಾಧ್ಯ • ಅಸಾಧ್ಯ
4.    ಬೇಕು • ಬೇಡ
 
ಆ ) ಮಾದರಿಯಲ್ಲಿ ಸೂಚಿಸಿರುವ ತೆ ಪದ ಬಿಡಿಸಿ ಬರೆಯಿರಿ .
ಮಾದರಿ : ಧೈರ್ಯವಂತ ಒರ್ಯ + ವಂತ
 
ಉತ್ತರ :

1.    ಗುಣವಂತ = ಗುಣ : + ವಂತ
2.    ಶೌರ್ಯವಂತ = ಶೌರ್ಯ + ವಂತ
3.    ಶಕ್ತಿವಂತ = ಶಕ್ತಿ + ವಂತ
4.    ಬುದ್ದಿವಂತ : ಬುದ್ದಿ : + ವಂತ
5.ಹಣವಂತ = ಹಣ + ವಂತ
 
ಇ ) ಕೊಟ್ಟಿರುವ ಪದಗಳನ್ನು ಬಳಸಿ ಸಂತ ವಾಕ್ಯ ರಚಿಸಿ .
 
ಉತ್ತರ :
 
   1. ಘೋಷಣೆ = ಬಾಲಕ ನಾರಾಯಣ ‘ ಬ್ರಿಟೀಷರೇ ಭಾರತ ಬಿಟ್ಟು
ತೊಲಗಿ ‘ ಎಂಬ ಘೋಷಣೆ ಕೂಗುತ್ತಿದ್ದನು .
 
2.    ಅಹಿಂಸೆ : ಗಾಂಧೀಜಿಯವರು ಭಾರತವನ್ನು ಸ್ವತಂತ್ರವನ್ನಾಗಿಸಲು
ಬ್ರಿಟೀಷರ ವಿರುದ್ದ ಅಹಿಂಸೆಯ ಮಾರ್ಗವನ್ನು ಅನುಸರಿಸಿದರು .
 
3.     ಜೋರಾಗಿ = ಬಾಲಕ ನಾರಾಯಣನ ಜೊತೆಯಲ್ಲಿದ್ದ ಜನರು
ಬ್ರಿಟೀಷರ ವಿರುದ್ಧ ಜೋರಾಗಿ ಘೋಷಣೆ ಕೂಗುತ್ತಿದ್ದರು .
 
4.    ಆಶ್ಚರ್ಯ
= ಬಾಲಕ ನಾರಾಯಣನ ಮಾತು ಕೇಳಿ
 ಅವನ ತಾಯಿ ಆಶ್ಚರ್ಯ . ಬ್ರಿಟೀಷರ ವಿರುದ್ಧ
 
5.    ಮೆರವಣಿಗೆ
= ಬಾಲಕ ಕ ನಾರಾಯಂಗಿ ಜೊತೆಯ
ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದನು .
 
ಈ ) ‘ ಈ ಕೆಳಗಿನ ಪದಗಳಿಗೆ ನುಡಿ ಕಣಜದಿಂದ ಅರ್ಥ ಹುಡುಕಿ ಬರೆಯಿರಿ .
 
ಉತ್ತರ : 
 1. ನೆರವು : ಸಹಾಯ , ಬೆಂಬಲ , ಆಸರೆ
 
 2.ಹರಸು = ಆಶೀರ್ವದಿಸು
 
3.    ಅದ್ಭುತ = ಆಶ್ಚರ್ಯ , ವಿಸ್ಮಯ
 
4.    ಕಸುಬು = ಕೆಲಸ , ಉದ್ಯೋಗ ,
 
ಬಳಕೆ ಚಟುವಟಿಕೆ
 
 ಅ ) ವೃತ್ತದೊಳಗಿನ ಪದವನ್ನು ಅದರ ಸಮಾನಾರ್ಥಕ ಪದಗಳೊಂದಿಗೆ ಗೆರೆ ಎಳೆದು ಜೋಡಿಸಿ .
ಉತ್ತರ  ಚತುರ ಕುರುಹು ಸುಳಿವು ಗುರುತು ನೆನಪು

 
 ಆ ) ಕೊಟ್ಟಿರುವ ಅಕ್ಷರ ಬಳಸಿ ಪದ ರಚಿಸಿ , ಅಕ್ಷರ ಬಂಧ ಪೂರ್ಣಗೊಳಿಸು . ರಚನೆಯಾದ ಖಾಲಿ ಜಾಗದಲ್ಲಿ ಬರೆದಿದೆ . ( ಡೆ , ಣ , ರ , ನೆ , ವು )
 



You Might Like

Post a Comment

0 Comments