Recent Posts

ಅಸಿ-ಮಸಿ-ಕೃಷಿ - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಅಸಿ-ಮಸಿ-ಕೃಷಿ
 - ಡಾ|| ಶ್ರೀ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಕವಿ/ಲೇಖಕರ ಪರಿಚಯ
?  ಡಾ||  ಶ್ರೀ.ಪಂಡಿತಾರಾಧ್ಯ  ಶಿವಾಚಾರ್ಯ  ಸ್ವಾಮಿಗಳು  1951  ರಲ್ಲಿ  ಹಾವೇರಿ  ಜಿಲ್ಲೆಯ  ರಾಣೆಬೆನ್ನೂರು  ತಾಲೂಕಿನ ಹೆಡಿಯಾಲ ಎಂಬಲ್ಲಿ  ಜನಿಸಿದರು.
?  ಇವರು ವ್ಯಕ್ತಿತ್ವ, ಜೀವನ ದರ್ಶನ, ಕೈದೀವಿಗೆ ಮತ್ತು ಕಾಯಕ ದಾಸೋಹ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿ, ಗೌರವ ಫೆಲೋಷಿಪ್, ಪಾಲ್ಹ್ಯಾರೀಸ್ ಮುಂತಾದ ಪ್ರಶಸ್ತಿಗಳು ಲಭಿಸಿವೆ.
?  ಪ್ರಸ್ತುತ ಅಸಿ-ಮಸಿ-ಕೃಷಿ ಲೇಖನವನ್ನು ಅವರ ವ್ಯಕ್ತಿತ್ವ ಎಂಬ ಪ್ರಬಂಧ ಸಂಕಲನದಿಂದ  ಆರಿಸಲಾಗಿದೆ.                                               

                                                 ಅಭ್ಯಾಸ
1.  ಪದಗಳ ಅರ್ಥ :  

ಅಣೆಕಟ್ಟು - ನದಿಗೆ ಅಡ್ಡ ಕಟ್ಟಿರುವ ಡ್ಯಾಂ, ಜಲಾಶಯ, ತಡೆಗೋಡೆ.     
ಅತಿವೃಷ್ಟಿ - ಅಗತ್ಯಕ್ಕಿಂತ ಹೆಚ್ಚುಮಳೆ ಬೀಳುವುದು.
ಅಸಿ - ಖಡ್ಗ; ಯುದ್ಧ.                                   
 ಉತ್ಪ್ರೇಕ್ಷೆ - ಅಧಿಕವಾಗಿ ವಣರ್ಿಸುವುದು.                             
ಉಪೇಕ್ಷೆ - ತಿರಸ್ಕಾರ; ಅಲಕ್ಷ್ಯ, ನಿರಂಕುಶ ಪ್ರಭುತ್ವ                  
ಒಕ್ಕಲಿಗ - ಕೃಷಿಕ; ರೈತ.
ಕೃತಘ್ನ - ಉಪಕಾರ ಸ್ಮರಣೆ ಇಲ್ಲದಿರುವವನು.                    
 ಗುಲಾಮ - ಅಡಿಯಾಳು
ದುರಾಕ್ರಮಣ - ಮೋಸದ ಧಾಳಿ                             
ನಶ್ವರ - ನಶಿಸು; ಇಲ್ಲವಾಗು.
ನಿರಾಶವಾದಿ - ಜೀವನದಲ್ಲಿ ಆಸೆ ಕಳೆದುಕೊಂಡವ.                  
 ಬಜೆಟ್ -ಆಯವ್ಯಯದ ಸಮತೋಲನ ಪಟ್ಟಿ.
ಬವಣೆ - ತೊಂದರೆ; ಕಷ್ಟ.                                                            
ಬಿಕ್ಕು - ಅಳು
ಮಸಿ - ಶಾಯಿ; ಸಾಹಿತ್ಯ ರಚನೆ.                                                  
ಮೇಟಿ - ವ್ಯವಸಾಯ
ಮೇಟಿಗಂಬ-ಒಕ್ಕಲು ಕಣದ ಮಧ್ಯದಲ್ಲಿರುವ ಕಂಬ                   
ರಾಟೆ  ಚಕ್ರ .      
ಹರಿತ - ಚೂಪಾದ                                                                     
ಸತ್ಪರಿಣಾಮ - ಒಳ್ಳೆಯ ಪರಿಣಾಮ                             
ಸರ್ವಾಧಿಕಾರಿ - ಅಧಿಕಾರ ಒಬ್ಬನಲ್ಲಿರುವುದು  

2.ಪ್ರಶ್ನೆಗಳು:
ಅ) ಕೆಳಗೆ ನೀಡಲಾಗಿರುವ ಗಾದೆ ಮಾತುಗಳನ್ನು ಪೂರ್ಣಗೊಳಿಸಿರಿ

1. ಪೆನ್ನು ಖಡ್ಗಕ್ಕಿಂತ  ಹರಿತ
2. ಒಕ್ಕಲಿಗ ಒಕ್ಕದಿದ್ದರೆ  ಜಗವೆಲ್ಲ ಬಿಕ್ಕುವುದು  
3. ಕೋಟಿ ವಿದ್ಯೆಗಳಲಿ  ಮೇಟಿ ವಿದ್ಯೆಯೇ ಮೇಲು
4. ಹಾಸಿಗೆ ಇದ್ದಷ್ಟು    ಕಾಲು ಚಾಚು  

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ  
 
1.ದೇಶದುದ್ದಾರ ಯಾರು ಯಾರನ್ನು ಅವಲಂಬಿಸಿದೆ ಎಂದು ಲೇಖಕರು ಹೇಳಿದ್ದಾರೆ?
 ಮತ್ತು ರೈತರನ್ನು ಅವಲಂಬಿಸಿದೆ.

2. ಅಸಿ-ಮಸಿ- ಎಂದರೇನು?
ಅಸಿ ಎಂದರೆ ಯುದ್ಧ (ಸೈನಿಕ) ಮಸಿ ಎಂದರೆ ಸಾಹಿತ್ಯ ರಚನೆ.

3. ಈ ನಾಡಿನ ಬೆನ್ನೆಲುಬು ಯಾರು?

ಕೃಷಿಕ ಈ ನಾಡಿನ ಬೆನ್ನೆಲುಬು.

4.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಏನೆಂದು ಖ್ಯಾತರಾಗಿದ್ದಾರೆ?
ರಂಗ ಜಂಗಮ ಎಂದು ಖ್ಯಾತರಾಗಿದ್ದಾರೆ.

5. .ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರಿಗೆ ರೋಟರಿ ಸಂಸೆ ಸೈನಿಕ, ಸಾಹಿತಿ ವ್ಥ ಯಾವ ಪ್ರಶಸ್ತಿ ನೀಡಿದೆ?
ಪಾಲ್ ಹ್ಯಾರಿಸ್ ಪ್ರಶಸ್ತಿಯನ್ನು ನೀಡಿದೆ.

6. ಸರ್ವಜ್ಞನು ತಿಳಿಸುವಂತೆ ಕೋಟಿ ವಿದ್ಯೆಗಳಲ್ಲಿ ಯಾವ ವಿದ್ಯೆ ಮೇಲು?
ಸರ್ವಜ್ಞನು ತಿಳಿಸುವಂತೆ  ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು.

7. ನಾವು ಕಾಖರ್ಾನೆಯಿಂದ ಯಾವುದನ್ನು ಬೆಳೆಯಲು ಸಾಧ್ಯವಿಲ್ಲ ಎಂದು ಶ್ರೀ ಪಂಡತಾರಾಧ್ಯ ಶಿವಾಚಾರ್ಯರು ಹೇಳಿದ್ದಾರೆ?
ಟೊಮೋಟೋ, ಅಕ್ಕಿ ಮತ್ತು ರಾಗಿಯನ್ನು ಬೆಳೆಯಲು ಸಾಧ್ಯವಿಲ್ಲ.

8. ಮಹಾತ್ಮ ಗಾಂಧೀಜಿಯವರು ಏನು ಹೇಳುತ್ತಿದ್ದರು?
ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಹೇಳುತ್ತಿದ್ದರು.

9. ಅತಿವೃಷ್ಟಿ ಎಂದರೇನು?
ಅಗತ್ಯಕ್ಕಿಂತ ಹೆಚ್ಚುಮಳೆ ಬೀಳುವುದನ್ನು ಅತಿವೃಷ್ಟಿ ಎನ್ನುವರು.

10. ಬಜೆಟ್ ಎಂದರೇನು?

ಆಯವ್ಯಯದ ಸಮತೋಲನ ಪಟ್ಟಿಯನ್ನು ಬಜೆಟ್ ಎನ್ನುವರು.  

ಅ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ

1. ದೇಶದ ಅಭಿವೃದ್ದಿ ಕುರಿತು ಜನರಾಡುವ ಮಾತುಗಳಾವುವು?

ವೈಜ್ಞಾನಿಕ  ಬೆಳವಣಿಗೆಯೇ  ನಿಜವಾದ  ಪ್ರಗತಿ.  ದೊಡ್ಡ  ದೊಡ್ಡ  ಅಣೆಕಟ್ಟುಗಳ  ನಿಮರ್ಾಣವೇ  ಜನರ  ಉದ್ಧಾರದ  ದಾರಿ,  ವಿದ್ಯತ್ ಉತ್ಪಾದನೆಯೇ  ಇವೆಲ್ಲಕ್ಕೂ  ಮೂಲ  ಪ್ರೇರಣೆ  ಎಂದೆಲ್ಲ  ಹೇಳಬಹುದು.  ನಮ್ಮ  ಹಿರಿಯರು  ದೇಶದ  ಪ್ರಗತಿ,  ಜನರ  ಉದ್ಧಾರ ಅಸಿ,ಮಸಿ, ಕೃಷಿಯನ್ನು ಅವಲಂಬಿಸಿದೆ ಎನ್ನುತ್ತಿದ್ದರು.

2. ನಮ್ಮ ದೇಶದ ರಕ್ಷಣಾ ಪಡೆ ಏಕೆ ಪ್ರಬಲವಾಗಿರಬೇಕು?
 ಅಸಿ  ಎಂದರೆ  ಯುದ್ಧ,  ಯುದ್ಧ  ಎಂದರೆ  ಸೈನಿಕರು.  ಸೈನಿಕರು  ಪ್ರಬಲರಾಗಿದ್ದಾಗ  ಮುಳುಗದ  ಸಾಮ್ರಾಜ್ಯವನ್ನು  ಸ್ಥಾಪಿಸಿ  ಸರ್ವಾಧಿಕಾರಿಯಂತೆಮೆರೆಯಬಹುದು. ಆದುದರಿಂದ ನಮ್ಮ ರಕ್ಷಣಾ ಪಡೆ ತುಂಬಾ ಪ್ರಬಲರಾಗಿರಬೇಕು.

3. ಪೆನ್ನು ಖಡ್ಗಕ್ಕಿಂತ ಹರಿತವಾದದ್ದು ಏಕೆ? ಅಥವಾ  ಅಸಿಗಿಂತ ಮಸಿ ಶ್ರೇಷ್ಠವಾದುದು ಏಕೆ?
ಏಕೆಂದರೆ  ಖಡ್ಗದಿಂದ  ಸಾಧಿಸಲು  ಸಾಧ್ಯವಾಗದ್ದನ್ನು  ಪೆನ್ನಿನ  ಮೂಲಕ  ಸಾಧಿಸಬಹುದು.  ಅಂದರೆ  ಬರವಣಿಗೆ  ಅಷ್ಟೊಂದು ಪರಿಣಾಮಕಾರಿಯಾದುದು.  ಪತ್ರಿಕೆಯ  ಒಂದು  ಲೇಖನ,  ಕಾದಂಬರಿ,  ಕತೆ,  ಕವನ  ಹಲವರ  ಬದುಕನ್ನು  ಬದಲಾಯಿಸಬಲ್ಲದು. ಒಂದು ಸರ್ಕಾರವನ್ನು ಉರುಳಿಸಿ ಮತ್ತೊಂದು ಸರ್ಕಾರ  ತರಬಹುದು. ಈ  ನಿಟ್ಟಿನಲ್ಲಿ ಬರವಣಿಗೆ ಹೆಚ್ಚು ಶಕ್ತಿಶಾಲಿಯಾದದು.

4. ರೈತರು ಎದುರಿಸುತ್ತಿರುವ ಸಮಸ್ಯೆಗಳಾವವು?
ರೈತರು ಒಂದಡೆ ನಿಸರ್ಗದ ಜೊತೆ ಸೆಣಸಬೇಕು. ಸಕಾಲಕ್ಕೆ ಸರಿಯಾಗಿ ಮಳೆ ಬರುವುದಿಲ್ಲ. ಉತ್ತಮ ಬೀಜ ಸಿಗುವುದಿಲ್ಲ.  ಭೂಮಿ ಬರಡಾಗುತ್ತದೆ. ಕ್ರಿಮಿಕೀಟಗಳ ಹಾವಳಿಯಿಂದ ಬೆಳೆಗೆ ವಿವಿಧ  ರೀತಿಯ ರೋಗಗಳು ತಗುಲಿ ಬೇಸಾಯವೇ ಬೇಡ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.  ಮತ್ತೊಂದೆಡೆ  ತಾನು  ಬೆಳೆದ  ಬೆಳೆಗೆ  ಸರಿಯಾದ  ಬೆಲೆ  ಸಿಗದೆ  ವ್ಯವಸ್ಥೆಯ  ವಿರುದ್ಧವೂ  ಹೋರಾಟ ನಡೆಸಬೇಕಾಗಿದೆ.

5. ಕೃಷಿಕರು ಉಳುವುದನ್ನು ಬಿಟ್ಟು ಸತ್ಯಾಗ್ರಹ ಮಾಡಿದರೆ ಉಂಟಾಗುವ ಸಮಸ್ಯೆಗಳಾವುವು?
ಆಹಾರವಿಲ್ಲದೇ  ಬರೀ  ವೈಜ್ಞಾನಿಕ  ಬೆಳವಣಿಗೆಯಿಂದ  ಬದುಕಲು  ಸಾಧ್ಯವಿಲ್ಲ.  ಯಾವ  ಕಾರ್ಖಾನೆಯಿಂದಲೂ  ಟೊಮೋಟೊ ತಯಾರಿಸಲು,  ಅಕ್ಕಿ  ಪಡೆಯಲು,  ರಾಗಿ  ಬೆಳೆಯಲು  ಸಾಧ್ಯವಿಲ್ಲ.  ಇವಕ್ಕೆಲ್ಲಾ  ಭೂಮಿಯೇ  ಬೇಕು.  ರೈತರ  ಬೆವರು  ಭೂಮಿಗೆ ಸುರಿಯಬೇಕು. ರೈತರು ಉಳದಿದ್ದರೆ ದೇಶದ ಆಟವೇ ನಡೆಯದು.  

ಈ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ

 1. ದೇಶದ ಬಜೆಟ್ನಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚಿನ ಹಣವನ್ನು ಏಕೆ ಮೀಸಲಾಗಿದುತ್ತದೆ?

ದೇಶದಲ್ಲಿ ಸೈನಿಕರ ಪಾತ್ರ ಹಿರಿದಾಗಿರುತ್ತದೆ. ಏಕೆಂದೆರೆ ಅವರು ತಮ್ಮ ತಾಯ್ನಾಡಿಗಾಗಿ ದೂರದಲ್ಲಿ ಗಡಿಕಾಯುತ್ತಾರೆ. ದಾಳಿ ಮಾಡಿದರೆ ಅಥವಾ ಮಾಡುವರೆನೋ ಎನ್ನುವ ಸಂದರ್ಭದಲ್ಲಿ ದಾಳಿಗೆ ಧೃತಿಗೆಡದೆ ಹಗಲು ರಾತ್ರಿ ಗಡಿ ಕಾಯುವ ಕಾಯಕವನ್ನು ಮಳೆ  ಚಳಿಯೆನ್ನದೆ ಎಷ್ಟೇ ಬಿಸಿಲಿದ್ದರೂ ಕಷ್ಟ ಬಂದರೂ ಧೈರ್ಯದಿಂದ ಎದುರಿಸುತ್ತಾರೆ. ಸೈನಿಕ ಬಲ ಇದ್ದಾಗ ಮಾತ್ರ ರಕ್ಷಣೆ ಸಾಧ್ಯ. ಇಲ್ಲದಿದ್ದರೆ ಬೇರೆ ದೇಶದವರು ಸುಲಭವಾಗಿ ನಮ್ಮ ದೇಶಕ್ಕೆ ನುಗ್ಗಿ ನಮ್ಮ ಮೇಲೆ ದುರಾಕ್ರಮ ಮಾಡಿ ಯುದ್ಧದಿಂದ ನಮ್ಮನ್ನು ಸೋಲಿಸಿ ಗುಲಾಮರನ್ನಾಗಿ ಮಾಡಿಸಿಕೊಳ್ಳಬಹುದು. ಆದ್ದರಿಂದ ದೇಶದ ರಕ್ಷಣೆಗೆ ಸೈನಿಕರು ಅಗತ್ಯ, ಸೈನಿಕರು ಪ್ರಬಲರಿದ್ದಾಗ ಮಾತ್ರ ದೇಶವನ್ನು ರಕ್ಷಿಸಿಕೊಳ್ಳಲು ಸಾಧ್ಯ. ದೇಶದಲ್ಲಿ ಸೈನ್ಯವನ್ನು ಮೂರು ವಿಭಾಗಗಳಾಗಿ ಭೂಸೇನೆ, ವಾಯುಸೇನೆ, ಜಲಸೇನೆಯಾಗಿ ವಿಭಾಗಿಸಿ ಎಷ್ಟೇ ಖಚರ್ಾದರು ಚಿಂತೆ ಇಲ್ಲ ಎಂದು ನಮ್ಮ ದೇಶವನ್ನು ಕಾಪಾಡುವುದು ನಮ್ಮ ಧರ್ಮ ಎಂದು ತಿಳಿದು ಮೀಸಲಾಗಿಡುತ್ತಾರೆ.

2. ದೇಶದ ಪ್ರಗತಿಯಲ್ಲಿ ಸಾಹಿತಿಗಳ ಪಾತವೇನು?
 ಅಸಿಯ ನಂತರ ಮಸಿಯ ಪ್ರಾಮುಖ್ಯತೆ ಬಗ್ಗೆ ಅಂದರೆ ಸಾಹಿತ್ಯದ ಬಗ್ಗೆ ವಿವರಿಸುವುದೇನೆಂದರೆ ಅಸಿಗಿಂತ ಮಸಿ ಮುಖ್ಯವಾಗಿದೆ. ಸಾಹಿತ್ಯದ ರಚನೆಯಿಂದ ಉನ್ನತಿ ಸಾಧಿಸಬಹುದಾಗಿದೆ. ಲೇಖಕರು ಪೆನ್ನು ಖಡ್ಗಕ್ಕಿಂತ ಹರಿತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಖಡ್ಗದಿಂದ ಸಾಧಿಸಲಾಗದಿದ್ದನ್ನು ಪೆನ್ನಿನ ಮೂಲಕ ಸಾಧಿಸಬಹುದು. ಉದಾಹರಣೆಗೆ ಒಂದು ಲೇಖನದಿಂದ ಆ ರಾಜ್ಯ ಅಥವಾ ದೇಶದ ಸಕರ್ಾರವನ್ನು ಉರುಳಿಸಿ ಮುಂದೊಂದು ದಿನ ಹೊಸ ಸರ್ಕಾರವನ್ನೇ ರಚಿಸಬಹುದು. ಅಂಥಹ ಎಷ್ಟೋ ಉದಾಹರಣೆ ದಿನನಿತ್ಯ ಪತ್ರಿಕೆಗಳಲ್ಲಿ ಕಾಣಬಹುದು. ಇದರರ್ಥ ಬರವಣಿಗೆ ಎಷ್ಟೊಂದು ಪರಿಣಾಮಕಾರಿ ಎಂದು ಬಿಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿಯವರೆಗೆ ಸಾಹಿತಿಗಳಿಗೆ ನಮ್ಮ ನಾಡಿನಲ್ಲಿ ಅಪಾರ ಗೌರವವಿದೆ. ಈ ಗೌರವಿರುವುದು ಅವರ ಸಾಹಿತ್ಯದ ಸತ್ವದಿಂದಾಗಿ ಅಭಿವೃದ್ಧಿಯ ಮೆಟ್ಟಿಲು ತುಳಿಯಲು ಸಾಧ್ಯ. ಬದುಕಿಗೆ ಶಿವಶರಣ ಬಸವಾದಿಗಳ ವಚನಗಳು, ದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ. ಅವರು ಬರೆದಿರುವ ಸಾಹಿತ್ಯ ಈಗಿನವರಿಗೆ ಮುನ್ನುಡಿಯಂತಾಗಿದೆ.

3.ಕೃಷಿ ನಾಡಿನ ಬೆನ್ನೆಲುಬು ಈ ಮಾತನ್ನು ಸಮರ್ಥಿಸಿರಿ.
ಅಸಿ ಮತ್ತು ಮಸಿಗಳಿಗಿಂತ ಮಹತ್ವವಾದದ್ದು ಕೃಷಿ ಅಂದರೆ ಒಕ್ಕಲಿಗ ಒಕ್ಕದಿದರೆ ಜಗವೆಲ್ಲಾ ಬಿಕ್ಕುವುದು ಎನ್ನುವ ಮಾತನ್ನು ಉಲ್ಲೇಖಿಸಿದ್ದಾರೆ.
ಇದರ ಅರ್ಥ ಒಂದು ವೇಳೆ ಕೃಷಿಯನ್ನು ಮಾಡದೆ ಕೃಷಿಕ ಸತ್ಯಾಗ್ರಹ ಮಾಡಿದರೆ ನಾವು ಭಿಕ್ಷುಕರಂತಾಗುತ್ತೇವೆ. ತಿನ್ನಲು ಆಹಾರವಿಲ್ಲದೆ ನರಳುತ್ತೇವೆ. ಎಲ್ಲಾ ವರ್ಗದ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಇವತ್ತು ಜಗತ್ತಿನಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಆಹಾರವಿಲ್ಲದೆ  ಬದುಕಲು  ಹೇಗೆ ಸಾಧ್ಯ? ಯಾರೂ ಕೂಡ ಅಕ್ಕಿ, ರಾಗಿ ಪಡೆಯಲು ಸಾಧ್ಯವಿಲ್ಲ. ನಾವು ಯಾವ ಕಾರ್ಖಾನೆಗಳಿಂದಲೂ ಸಹ ಉತ್ಪಾದಿಸಲು ಸಾಧ್ಯವಿಲ್ಲ. ಇದಕ್ಕೆಲ್ಲ ಭೂಮಿಯೇ ಬೇಕು. ರೈತರು ಬೆವರು ಸುರಿಸಿ ಭೂಮಿಯನ್ನು ಹದಮಾಡಿ ಬೆಳೆಯನ್ನು ಬೆಳೆಯಲೇ ಬೇಕು ಹಾಗಾದರೆ ಮಾತ್ರ ಪ್ರಗತಿ ಸಾಧ್ಯ. ಲೇಖಕರು ರೈತರನ್ನು ಅವರ ವೃತ್ತಿಯನ್ನು ತಮ್ಮ ಲೇಖನದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. ಎಲ್ಲಾ ವಿದ್ಯೆಗಳಿಗಿಂತ ವ್ಯವಸಾಯ ವಿದ್ಯೆಯೇ ಮೇಲು ಎನ್ನಬಹುದು.

 ಉ) ಸಂದರ್ಭದೊಡನೆ ವಿವರಿಸಿ

1. ವ್ಯವಸಾಯ ಇಲ್ಲದಿದ್ದರೆ ದೇಶದ ಆಟವೇ ನಡೆಯದು.

ಈ  ವಾಕ್ಯವನ್ನು  ಶ್ರೀ  ಪಂಡಿತಾರಾಧ್ಯ  ಶಿವಾಚಾರ್ಯ  ಸ್ವಾಮಿಗಳು  ಬರೆದಿರುವ  ಅಸಿ-ಮಸಿ-ಕೃಷಿ  ಎಂಬ  ಗದ್ಯಭಾಗದಿಂದ ಆರಿಸಲಾಗಿದೆ.
ಈ ವಾಕ್ಯವನ್ನು ಲೇಖಕರು ಕೃಷಿ ಮತ್ತು ರೈತನ ಸಂಕಷ್ಟ ಮತ್ತು ಅದರ ಮಹತ್ವವನ್ನು ವಿವರಿಸುವ ಸಂಧರ್ಭದಲ್ಲಿ ಹೇಳಿದ್ದಾರೆ. ಅಸಿ- ಮಸಿಗಿಂತ  ಕೃಷಿ  ಮಹತ್ವದ್ದು.  ಅಂದರೆ  ದೇಶದ  ಸೈನಿಕರು  ಮತ್ತು  ಸಾಹಿತ್ಯಕ್ಕಿಂತ  ಕೃಷಿ  ವೃತ್ತಿ  ಮತ್ತು  ಕೃಷಿಕರು  ಪ್ರಮುಖವಾಗಿದ್ದಾರೆ. ಇದು ಇಲ್ಲದೇ ದೇಶ ಪ್ರಗತಿ ಹೊಂದಲು ಅಸಾಧ್ಯ.

2. ರೈತರು ನಿರಾಶಾವಾದಿಗಳಾಗದೆ ಆಶಾವಾದಿಗಳಾಗಿ ಬಾಳನ್ನು ಸಾಗಿಸುತ್ತಿದ್ದಾರೆ.

ಈ  ವಾಕ್ಯವನ್ನು  ಶ್ರೀ  ಪಂಡಿತಾರಾಧ್ಯ  ಶಿವಾಚಾರ್ಯ  ಸ್ವಾಮಿಗಳು  ಬರೆದಿರುವ   ಅಸಿ-ಮಸಿ-ಕೃಷಿ  ಎಂಬ  ಗದ್ಯಭಾಗದಿಂದ ಆರಿಸಲಾಗಿದೆ.
ರೈತರಲ್ಲಿ  ಕಾಣುವ  ದುರಾವಸ್ಥೆಯನ್ನು  ವಿವರಿಸುವಾಗ  ಅವರು  ನಿರ್ಲಕ್ಷಕ್ಕೊಳಗಾಗಿದ್ದರು.  ಅವರ  ಕೆಲಸವನ್ನು  ಶ್ರದ್ದೆಯಿಂದ ಮಾಡುತ್ತಾರೆಂದು  ಎಂದು  ವಿವರಿಸುವಾಗ  ಲೇಖಕರು  ಹೇಳಿದ್ದಾರೆ.  ರಾಜಕಾರಣಿಗಳು,  ಅಧಿಕಾರಿಗಳು,  ಬಂಡವಾಳ  ಶಾಹಿಗಳು, ವ್ಯಾಪಾರಸ್ಥರು, ಸಾಹಿತಿಗಳು, ಸಂಶೋಧಕರು, ವಿಜ್ಞಾನಿಗಳು, ತಂತ್ರಜ್ಞಾನಿಗಳು ಪ್ರತಿಯೊಬ್ಬರ ಬದಕು ಕೃಷಿಕರನ್ನೇ ಅವಲಂಬಿಸಿದ್ದರೂ ಅವರೆಲ್ಲರೂ  ಕೃಷಿಯನ್ನು  ಕೃಷಿ  ಮಾಡುವ  ರೈತನನ್ನು  ನಿರ್ಲಕ್ಷಿಸಿದ್ದಾರೆ  ಎಂದು  ತಮ್ಮ  ಮನದಾಳದ  ಮಾತುಗಳಿಂದ  ಲೇಖಕರು ಹೇಳಿದ್ದಾರೆ.

3. ಅವರು ಯಾರಿಗೂ ಮೋಸ, ವಂಚನೆ ಮಾಡುವವರಲ್ಲ.
ಈ  ವಾಕ್ಯವನ್ನು  ಶ್ರೀ  ಪಂಡಿತಾರಾಧ್ಯ  ಶಿವಾಚಾರ್ಯ  ಸ್ವಾಮಿಗಳು  ಬರೆದಿರುವ  ಅಸಿ-ಮಸಿ-ಕೃಷಿ  ಎಂಬ  ಗದ್ಯಭಾಗದಿಂದ ಆರಿಸಲಾಗಿದೆ.
ಈ ವಾಕ್ಯವನ್ನು ಲೇಖಕರು ಕೃಷಿಕರ ಮುಗ್ದತೆಯನ್ನು ಎತ್ತಿ ಹಿಡಿದಿದ್ದಾರೆ. ಕಳಪೆ ಬೀಜ ಸಿಕ್ಕರೂ ಉತ್ತಮವಾದ ಬೆಳೆ  ಬೆಳೆಯುತ್ತಾರೆ. ಸರಿಯಾಗಿ  ಮಳೆ  ಬಾರದಿದ್ದರೂ,  ನೀರನ್ನು  ಸಂಗ್ರಹಿಸಿ  ಭೂಮಿಯನ್ನು  ಉಳುಮೆ  ಮಾಡುತ್ತಾರೆ.  ಆದರೆ  ಇವರು  ಎಲ್ಲರಿಂದಲೂ ಮೋಸ ಹೋಗುತ್ತಾರೆ. ವಂಚನೆಗೆ ಒಳಗಾಗುತ್ತಾರೆ.

4. ಸಾಹಿತಿಗಳು ನಾಡಿನಲ್ಲಿ ಹೆಚ್ಚಿದ್ದಷ್ಟು ಸಮಾಜವು ಪ್ರಗತಿಯ ಮೆಟ್ಟಿಲು ತುಳಿಯಲು ಸಾಧ್ಯ?
ಈ  ವಾಕ್ಯವನ್ನು  ಶ್ರೀ  ಪಂಡಿತಾರಾಧ್ಯ  ಶಿವಾಚಾರ್ಯ  ಸ್ವಾಮಿಗಳು  ಬರೆದಿರುವ   ಅಸಿ-ಮಸಿ-ಕೃಷಿ  ಎಂಬ  ಗದ್ಯಭಾಗದಿಂದ ಆರಿಸಲಾಗಿದೆ. 
ಈ  ವಾಕ್ಯವನ್ನು  ಲೇಖಕರು  ಅಸಿಗಿಂತ  (ರಕ್ಷಣೆ)  ಮಸಿ  (ಸಾಹಿತ್ಯ)  ಮುಖ್ಯವಾದದ್ದು  ಎಂದು  ಹೇಳುವ  ಸಂದರ್ಭದಲ್ಲಿ  ಹೇಳಿದ್ದಾರೆ. ಪೆನ್ನು  ಖಡ್ಗಕ್ಕಿಂತ  ಹರಿತ  ಎಂದು  ಉಲ್ಲೇಖಿಸಿದ್ದಾರೆ.  ಪತ್ರಿಕೆಯಲ್ಲಿ  ಬರುವ  ಒಂದು  ಲೇಖನಕ್ಕೆ  ಸರ್ಕಾರವನ್ನು  ಉರಳಿಸುವಷ್ಟು ಪ್ರಭಾವವಿರುತ್ತದೆ,  ನಾಳೆ  ಮತ್ತೊಂದು  ಸರ್ಕಾರವನ್ನು  ತರಬಹುದು.  ಸಾಹಿತ್ಯದ  ಸತ್ವದಿಂದ  ಇಂತಹ  ಸಾಹಿತಿಗಳು  ನಾಡಿನಲ್ಲಿ  ಹೆಚ್ಚು ಹೆಚ್ಚು ಇದ್ದರೆ ಸಮಾಜ ಪ್ರಗತಿಯ ಮೆಟ್ಟಲು ತುಳಿವುದು ಸಾಧ್ಯ.         


 
You Might Like

Post a Comment

0 Comments