ಭುವನೇಶ್ವರಿ
ಕೃತಿಕಾರರ ಪರಿಚಯ ; ಸತ್ಯವಿಠಲ ಅಂಕಿತದಿಂದ ಪ್ರಸಿದ್ಧರಾಗಿರುವ ಬಿ . ವಿ ಸತ್ಯನಾರಾಯಣರಾವ್ ಅವರು ( 1948 ) ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದವರು . ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಇವರು ಪುಕೃತ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಉಪಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವರು . ಗೀತ , ಸ್ತೋತ್ರ , ಕಾವ್ಯ , ಲಾವಣಿ , ಗದ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಅರವತ್ತು ಕೃತಿಗಳನ್ನು ರಚಿಸಿದ್ದಾರೆ . ಹನ್ನೊಂದು ಭಾಮಿನಿ ಕಾವ್ಯಗಳನ್ನೂ ಬಸವ ಭಾರತಿ ಸುದೀರ್ಘ ಲಾವಣಿ ಕಾವ್ಯವನ್ನೂ ಸಂಪೂರ್ಣ ದೇವೀ ಮಹಾತ್ಮ ಬಸವೇಶ್ವರ ಲೀಲಾ ವೈಭವಂ , ಲಂಕೇಶ್ವರ ಸೋಮನಾಥ ಚಾರಿತ್ರ ಮುಂತಾದ ಕಾವ್ಯಗಳನ್ನೂ ರಚಿಸಿದ್ದಾರೆ . ಕನ್ನಡ – ಸಂಸ್ಕೃತ ಭಾಷೆಗಳೆರಡರಲ್ಲೂ ಪಾಂಡಿತ್ಯವುಳ್ಳವರು . ಬಾಹುಬಲಿಚರಿತಂ , ಗಾಯತ್ರೀರಾಮಾಯಣ , ಸಿರಿಗನ್ನಡ ವೈಜಯಂತಿ , ಕನ್ನಡನಾಡ ಚರಿತ್ರೆ , ತತ್ವಭಾರತಿ , ಭಾವಗೀತೆಗಳು , ಶ್ರೀಶಿವಕುಮಾರಸ್ವಾಮಿಗುರುಚರಿ ಗುರುದತ್ತಚರಿತಂ ಇವರ ಪ್ರಮುಖ ಕೃತಿಗಳು ನೃತ್ಯರೂಪಕ , ಹಾಗೂ ನಾಮಾವಳಿ ಗಳನ್ನು ರಚಿಸಿದ್ದಾರೆ .
ಪದಗಳ ಅರ್ಥ
ಪದ = ಪಾದ , ಕಾಲುಗಳು
ಚರಿತೆ = ಇತಿಹಾಸ
ಸೊಬಗು = ಚೆಲುವು , ಅಂದ
ಮೆರೆ = ಖ್ಯಾತಿಹೊಂದು
ವೀರತಾಣ = ವೀರರ ಸ್ಥಳ
ಹಿರಿಮ = ಹೆಚ್ಚುಗಾರಿಕೆ
ಸಿರಿ = ಶ್ರೀ , ಸಂಪತ್ತು , ಚೆಲುವು
ವೈಭವ = ಐಶ್ವರ್ಯ , ಡೌಲು
ಗರಿಮೆ = ಹಿರಿಮೆ
ಪತನ = ಅವನತಿ , ನಾಶ
ಶೀಘ್ರದಲಿ = ಬೇಗನೆ , ಅಲ್ಪ ಸಮಯದಲ್ಲೇ
ಬೆರಗಾಗು = ವಿಸ್ಮಯಪಡು
ಸಿರಿ ಸಂಪದ = ಸಂಪತ್ತು
ದ್ರೋಹ = ಕೇಡನ್ನೆಣಿಸು , ವಿಶ್ವಾಸಘಾತ
ಸೆರೆ = ಬಂಧನ
ಅಂತಃಕಲಹ = ಒಳಜಗಳ
ಅಮರಿದರು = ಆಕ್ರಮಿಸು
ಚಳುವಳಿ = ಹೋರಾಟ
ತತ್ತ್ವ = ಸಿದ್ಧಾಂತ , ಸಾರಸತ್ವ
ಅಸಹಕಾರ = ಸಹಕರಿಸದಿರುವುದು
ಮೊಳೆತವು = ಚಿಗುರಿದವು
ವಿಶಾಲ = ವಿಸ್ತಾರವಾದ
ಉದಯ = ಮೂಡು, ಹುಟ್ಟು
ಪರಿ = ರೀತಿ
ಪಂಥ = ಮಾರ್ಗ, ಸಂಪ್ರದಾಯ
ಚಿಮ್ಮು = ತಳಿ, ನೆಗೆ, ಬೀಸು
ಪೋಷಿಸು = ಕಾಪಾಡು, ಮೊರೆ
ಪದ = ಪಾದ , ಕಾಲುಗಳು
ಚರಿತೆ = ಇತಿಹಾಸ
ಸೊಬಗು = ಚೆಲುವು , ಅಂದ
ಮೆರೆ = ಖ್ಯಾತಿಹೊಂದು
ವೀರತಾಣ = ವೀರರ ಸ್ಥಳ
ಹಿರಿಮ = ಹೆಚ್ಚುಗಾರಿಕೆ
ಸಿರಿ = ಶ್ರೀ , ಸಂಪತ್ತು , ಚೆಲುವು
ವೈಭವ = ಐಶ್ವರ್ಯ , ಡೌಲು
ಗರಿಮೆ = ಹಿರಿಮೆ
ಪತನ = ಅವನತಿ , ನಾಶ
ಶೀಘ್ರದಲಿ = ಬೇಗನೆ , ಅಲ್ಪ ಸಮಯದಲ್ಲೇ
ಬೆರಗಾಗು = ವಿಸ್ಮಯಪಡು
ಸಿರಿ ಸಂಪದ = ಸಂಪತ್ತು
ದ್ರೋಹ = ಕೇಡನ್ನೆಣಿಸು , ವಿಶ್ವಾಸಘಾತ
ಸೆರೆ = ಬಂಧನ
ಅಂತಃಕಲಹ = ಒಳಜಗಳ
ಅಮರಿದರು = ಆಕ್ರಮಿಸು
ಚಳುವಳಿ = ಹೋರಾಟ
ತತ್ತ್ವ = ಸಿದ್ಧಾಂತ , ಸಾರಸತ್ವ
ಅಸಹಕಾರ = ಸಹಕರಿಸದಿರುವುದು
ಮೊಳೆತವು = ಚಿಗುರಿದವು
ವಿಶಾಲ = ವಿಸ್ತಾರವಾದ
ಉದಯ = ಮೂಡು, ಹುಟ್ಟು
ಪರಿ = ರೀತಿ
ಪಂಥ = ಮಾರ್ಗ, ಸಂಪ್ರದಾಯ
ಚಿಮ್ಮು = ತಳಿ, ನೆಗೆ, ಬೀಸು
ಪೋಷಿಸು = ಕಾಪಾಡು, ಮೊರೆ
ಅಭ್ಯಾಸ
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
೧. ಪಲ್ಲವರನ್ನು ಗೆದ್ದು ಮೆರೆದವರು ಯಾರು ?
೨. ಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರಾರು ?
೩. ಯಾರ ಪತನದ ನಂತರ ವಿಜಯನಗರ ಬೆಳೆಯಿತು ?
೪. ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಯಾರು ?
೫. ಭಾರತ ಸ್ವಾತಂತ್ರದ ಚಳುವಳಿ ಯಾರ ತತ್ವದಲ್ಲಿ ಬೆಳೆಯಿತು ?
೬. ವಿಶಾಲ ಮೈಸೂರಿನ ಉದಯವಾದುದು ಯಾವಾಗ ?
೭. ನಮ್ಮ ನಾಡಿನಲ್ಲಿ ಯಾವುದು ಗೆಲ್ಲಬೇಕು? ಯಾವುದು ಬಾಳಬೇಕು ?
೧. ಪಲ್ಲವರನ್ನು ಗೆದ್ದು ಮೆರೆದವರು ಯಾರು ?
೨. ಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರಾರು ?
೩. ಯಾರ ಪತನದ ನಂತರ ವಿಜಯನಗರ ಬೆಳೆಯಿತು ?
೪. ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಯಾರು ?
೫. ಭಾರತ ಸ್ವಾತಂತ್ರದ ಚಳುವಳಿ ಯಾರ ತತ್ವದಲ್ಲಿ ಬೆಳೆಯಿತು ?
೬. ವಿಶಾಲ ಮೈಸೂರಿನ ಉದಯವಾದುದು ಯಾವಾಗ ?
೭. ನಮ್ಮ ನಾಡಿನಲ್ಲಿ ಯಾವುದು ಗೆಲ್ಲಬೇಕು? ಯಾವುದು ಬಾಳಬೇಕು ?
ಆ)ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
1. ಹೊಯ್ಸಳ ಪತನದ ನಂತರ ಬೆಳೆಯಿತು
ವಿಜಯನಗರವತಿ ಶೀಘ್ರದಲ್ಲಿ ಲೋಕವೆ ಬೆರಗಾಗುವ
ಸಿರಿಸಂಪದ ಮೆರೆಯಿತು ಈ ಸಾಮ್ರಾಜ್ಯದಲಿ
ವಿಜಯನಗರವತಿ ಶೀಘ್ರದಲ್ಲಿ ಲೋಕವೆ ಬೆರಗಾಗುವ
ಸಿರಿಸಂಪದ ಮೆರೆಯಿತು ಈ ಸಾಮ್ರಾಜ್ಯದಲಿ
2. ಯುದ್ಧದಿ ಆಂಗ್ಲರನೆದುರಿಸಿ ಗೆದ್ದಳು ಚನ್ನಮ್ಮನು
ಕಿತ್ತೂರಿನಲ್ಲಿ | ದೊಹಕೆ ಸೆರೆಯಾಗುತ ದಿನವನ್ನು
ದೂಡಿದಳವಳು ಜೈಲಿನಲಿ
ಕಿತ್ತೂರಿನಲ್ಲಿ | ದೊಹಕೆ ಸೆರೆಯಾಗುತ ದಿನವನ್ನು
ದೂಡಿದಳವಳು ಜೈಲಿನಲಿ
3. ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬಸವೇಶ್ವರರ
ಸಿರಿಪಂಥವಿದೆ | ಕೊಂಕಣಿ ಉರ್ದು ತುಳುವಿನ
ಸಂಸ್ಕೃತಿ ಕನ್ನಡತನ ಜಲ ಚಿಮ್ಮುತಿದೆ
ಸಿರಿಪಂಥವಿದೆ | ಕೊಂಕಣಿ ಉರ್ದು ತುಳುವಿನ
ಸಂಸ್ಕೃತಿ ಕನ್ನಡತನ ಜಲ ಚಿಮ್ಮುತಿದೆ
4. ” ಕನ್ನಡ ಗೆಲ್ಲಲಿ ಕನ್ನಡಬಾಳಲಿ ” ನಮ್ಮಿ ಕನ್ನಡ
ನೆಲದಲಿ “ ಕನ್ನಡ ಕಲಿಯಿರಿ ಕನ್ನಡ ಪೋಷಿಸಿ”
ನಮ್ಮಯ ಕನ್ನಡನಾಡಿನಲಿ
ನೆಲದಲಿ “ ಕನ್ನಡ ಕಲಿಯಿರಿ ಕನ್ನಡ ಪೋಷಿಸಿ”
ನಮ್ಮಯ ಕನ್ನಡನಾಡಿನಲಿ
ವ್ಯಾಕರಣ ಮಾಹಿತಿ
ʼತಿನ್ನುʼ ಧಾತು ಹಿಂದಿನ ಅಧ್ಯಾಯಗಳಲ್ಲಿ ಕ್ರಿಯಾಪದದ ರೂಪಗಳನ್ನು ಪರಿಚಯಿಸಿಕೊಂಡಿದ್ದೇವಲ್ಲವೆ ? ಕ್ರಿಯಾಪದದ ಮೂಲ ರೂಪವನ್ನು ಕ್ರಿಯಾಪಕೃತಿ ‘ ಅಥವಾ ‘ ಧಾತು ‘ – ಎಂದು ಕರೆಯುತ್ತೇವೆ . ಉದಾಹರಣೆಗೆ : ತಿನ್ನುತ್ತಾನೆ , ತಿನ್ನುತ್ತಾಳೆ , ತಿನ್ನುತ್ತದೆ , ತಿನ್ನುವರು , ತಿನ್ನಲಿ , ತಿಂದರು , ತಿಂದಿತು ಮುಂತಾದ ಕ್ರಿಯಾಪದಗಳ ಮೂಲರೂಪವು ‘ ತಿನ್ನು ‘ ಎಂಬುದಾಗಿದೆ . ಇದೇ ರೀತಿಯಲ್ಲಿ ನಾವು ಭೂತ ಕಾಲ , ವರ್ತಮಾನಕಾಲ ಹಾಗೂ ಭವಿಷ್ಯತ್ ಕಾಲಗಳನ್ನು ಪರಿಚಯಿಸಿಕೊಂಡಿದ್ದೇವೆ . ಈ ಮೇಲಿನ ‘ ತಿನ್ನು ‘ ಎಂಬ ಧಾತುವು ಭೂತ , ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಕ್ರಿಯಾಪದ ರೂಪ ಪಡೆದಿರುವುದನ್ನು ಈ ಕೆಳಗಿನ ಪಟ್ಟಿಯಿಂದ ಅರ್ಥಮಾಡಿಕೊಳ್ಳಿರಿ . ಈ ಮೇಲಿನ ಪಟ್ಟಿಯಲ್ಲಿ ‘ ತಿನ್ನು ‘ ಧಾತುವು ವರ್ತಮಾನಕಾಲ , ಭೂತಕಾಲ ಮತ್ತು ಭವಿಷ್ಯತ್ಕಾಲಗಳಲ್ಲಿ , ಏಕವಚನ , ಬಹುವಚನ , ಪ್ರಥಮ ಪುರುಷ , ಮಧ್ಯಮ ಪುರುಷ , ಉತ್ತಮ ಪುರುಷಗಳಲ್ಲಿ ಬಳಕೆಯಾಗಿರುವುದನ್ನು ಗಮನಿಸಿದಿರಿ . ಇದೇ ರೀತಿಯಲ್ಲಿ ಇತರ ಧಾತುಗಳನ್ನು ಬಳಸಿ , ಉಪಯೋಗ ಮಾಡುವುದನ್ನು ಅಭ್ಯಾಸ ಮಾಡಿರಿ .
ಭಾಷಾಭ್ಯಾಸ
ಅ ) ಕೊಟ್ಟಿರುವ ಪದಗಳನ್ನು ಸೂಚನೆಯಂತೆ ಬದಲಾಯಿಸಿ .
1. ಆಡಿದಳು – ಇದನ್ನು ವರ್ತಮಾನಕ್ಕೆ ಬದಲಿಸಿ .
ಆಡುತ್ತಿದ್ದಾಳೆ .
2. ನೋಡುವರು – ಇದನ್ನು ಏಕವಚನಕ್ಕೆ ಬದಲಿಸಿ .
ನೋಡುವಳು – ನೋಡುವನು
3. ತಿಂದಿತು – ಇದರ ಮೂಲರೂಪ ಬರೆಯಿರಿ ತಿನ್ನು
4. ಬರುವುದು – ಇದನ್ನು ಭೂತಕಾಲಕ್ಕೆ ಬದಲಾಯಿಸಿ .
ಬಂದವು – ಬಂದಿತು .
1. ಆಡಿದಳು – ಇದನ್ನು ವರ್ತಮಾನಕ್ಕೆ ಬದಲಿಸಿ .
ಆಡುತ್ತಿದ್ದಾಳೆ .
2. ನೋಡುವರು – ಇದನ್ನು ಏಕವಚನಕ್ಕೆ ಬದಲಿಸಿ .
ನೋಡುವಳು – ನೋಡುವನು
3. ತಿಂದಿತು – ಇದರ ಮೂಲರೂಪ ಬರೆಯಿರಿ ತಿನ್ನು
4. ಬರುವುದು – ಇದನ್ನು ಭೂತಕಾಲಕ್ಕೆ ಬದಲಾಯಿಸಿ .
ಬಂದವು – ಬಂದಿತು .
ಆ ) ಇವುಗಳ ‘ ಧಾತು ‘ ರೂಪ ಬರೆಯಿರಿ
ಮಾದರಿ : ಬಂದರು – ಬರು
1. ಕುಣಿವಳು – ಕುಣಿ
2. ಕುಡಿಯಿತು – ಕುಡಿ
3. ಬರೆವಳು – ಬರೆ
4. ಬಂದನು – ಬರು
5. ಹೋಗುವರು – ಹೋಗು
ಈ ) ಶುಭನುಡಿ .
1. ತಾಯಿ – ತನ್ನೂರುಗಳು ಸ್ವರ್ಗಕ್ಕಿಂತಲೂ ಮಿಗಿಲು .
2. ನಮ್ಮ ನಾಡು – ನುಡಿಗೆ ಗೌರವ ಸಲ್ಲಿಸಬೇಕಾದುದು ನಮ್ಮ ಪ್ರಥಮ ಕರ್ತವ್ಯ .
3. ಕನ್ನಡ ನಾಡಿನಲ್ಲಿ ಕನ್ನಡವೇ ರಾಜ -ರಾಣಿ ಎಲ್ಲವೂ .
ಮಾದರಿ : ಬಂದರು – ಬರು
1. ಕುಣಿವಳು – ಕುಣಿ
2. ಕುಡಿಯಿತು – ಕುಡಿ
3. ಬರೆವಳು – ಬರೆ
4. ಬಂದನು – ಬರು
5. ಹೋಗುವರು – ಹೋಗು
ಈ ) ಶುಭನುಡಿ .
1. ತಾಯಿ – ತನ್ನೂರುಗಳು ಸ್ವರ್ಗಕ್ಕಿಂತಲೂ ಮಿಗಿಲು .
2. ನಮ್ಮ ನಾಡು – ನುಡಿಗೆ ಗೌರವ ಸಲ್ಲಿಸಬೇಕಾದುದು ನಮ್ಮ ಪ್ರಥಮ ಕರ್ತವ್ಯ .
3. ಕನ್ನಡ ನಾಡಿನಲ್ಲಿ ಕನ್ನಡವೇ ರಾಜ -ರಾಣಿ ಎಲ್ಲವೂ .
ಪ್ರವೇಶ
ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಎಳೆಯರಲ್ಲಿ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ . ನಮ್ಮ ನಾಡಿನ ಇತಿಹಾಸ , ಆಳಿದ ಪರಾಕ್ರಮಿಗಳು , ನಾಡನ್ನು ಕಟ್ಟಲು ಶ್ರಮಿಸಿದ ನೇತಾರರು , ಇಲ್ಲಿನ ಶಿಲ್ಪ ಕಲೆ , ಸಂಸ್ಕೃತಿ ಮುಂತಾದ ಪರಂಪರೆಯನ್ನು , ಅದರ ಶ್ರೀಮಂತಿಕೆಯನ್ನು ಮಕ್ಕಳಿಗೆ ಅರ್ಥಮಾಡಿಸುವ ಮೂಲಕ , ಅವರೆಲ್ಲರಲ್ಲೂ ನಾವು ಎಂತಹ ಪರಂಪರೆಯ ವಾರಸುದಾರರಾಗಿದೇವೆಂಬ ಬಗ್ಗೆ ಹೆಮ್ಮೆ ಮೂಡಿಸುವ ಆಶಯವನ್ನು ಪ್ರಸ್ತುತ ಪದ್ಯವು ಒಳಗೊಂಡಿದೆ .
ಮುಖ್ಯಾಂಶಗಳು
ನಮ್ಮ ಕನ್ನಡ ನಾಡು ಶ್ರೇಷ್ಠವಾದ ಹಿರಿಮೆಗರಿಮೆಗಳನ್ನು ಹೊಂದಿರುವ ನಾಡು , ನಮ್ಮ ನಾಡದೇವತೆ ಶ್ರೀ ಭುವನೇಶ್ವರಿ ಯನ್ನು ಪೂಜಿಸಿ , ಈ ದೇಶದ ಕೀರ್ತಿ ಚರಿತ್ರೆಯನ್ನು ಹೇಳಲು ಪ್ರಾರಂಭಿಸುವೆನು . ಕನ್ನಡ ನಾಡಿನ ಹೆಮ್ಮೆಯ ಮಕ್ಕಳಾದ ನೀವೆಲ್ಲಾ ನಿಮ್ಮ ನಾಡಿನ ಸೊಬಗನ್ನು ತಿಳಿದುಕೊಳ್ಳಬೇಕು . ಕನ್ನಡ ನಾಡಿನ ಚರಿತ್ರೆ ಶ್ರೀಮಂತವಾದುದು . ಪಲ್ಲವರನ್ನು ಗೆದ್ದು ಕದಂಬರ ಮಯೂರ ವರ್ಮನು ವೈಭವದಿಂದ ಈ ನಾಡನ್ನು ಆಳಿದ್ದಾನೆ . ಹಿರಿಮೆಯ ಬನವಾಸಿ ಪ್ರಸಿದ್ಧತೆಯನ್ನು ಪಡೆದಿತ್ತು . ನಂತರ ಚಾಲುಕ್ಯರ ಆಳ್ವಿಕೆ ವೀರನಾಡಾದ ಬಾದಾಮಿಯಲ್ಲಿತ್ತು. ಹೆಮ್ಮೆಯ ಗಂಗ ಮನೆತನ , ರಾಷ್ಟ್ರಕೂಟರು , ಹೊಯ್ಸಳರು ಆಳಿದ ನಾಡಿದು . ವಿಜಯನಗರದ ಅರಸರು , ಕೆಳದಿಯ ವೈಭವ ಇವೆಲ್ಲಾ ಕನ್ನಡ ತಾಯಿಯ ಮುಡಿಗೆ ನಿಜವಾದ ಗರಿಮೆಯನ್ನು ಮುಡಿಸಿದೆ . ಹೊಯ್ಸಳರ ಪತನದ ನಂತರ , ಅತಿ ಶೀಘ್ರದಲ್ಲಿ ವಿಜಯನಗರ ಸಾಮ್ರಜ್ಯ ಪ್ರಪಂಚವೇ ಬೆರಗಾಗುವಷ್ಟು ಸಿರಿ ಸಂಪದಗಳಿಂದ ಮೆರೆಯಿತು . ಮುತ್ತು ರತ್ನಗಳನ್ನು ಬೀದಿಯಲ್ಲಿ ರಾಶಿರಾಶಿಯಾಗಿ ಮಾರುತ್ತಿದ್ದ ಕಾಲ , ಈಗ ಅದು ನಂಬಲು ಅಸಾಧ್ಯವಾಗುವಂತಹದು . ಕಿತ್ತೂರ ರಾಣಿ ಚೆನ್ನಮ್ಮ ಆಂಗ್ಲರನ್ನು ಎದುರಿಸಿ ಯುದ್ಧ ಮಾಡಿ ಗೆದ್ದಳು . ಆದರೆ ದೇಶದ್ರೋಹಿಗಳ ಸಂಚಿನಿಂದ ಸೆರೆಯಾಗಿ ಜೈಲಿನಲ್ಲಿ ಖೈದಿಯಾಗಿ ಸೆರೆವಾಸವನ್ನು ಅನುಭವಿಸಬೇಕಾಗಿ ಬಂತು, ನಮ್ಮ ದೇಶದ ರಾಜರುಗಳ ಅಂತಃಕಲಹದಿಂದ ಇಂಗ್ಲೀಪರು ಸಂಪೂರ್ಣ ಭಾರತವನ್ನೇ ವಶಪಡಿಸಿಕೊಂಡರು . ಮೈಸೂರಿನ ‘ ಹುಲಿ ಟಿಪ್ಪು ಸುಲ್ತಾನನ್ನು ಸೋಲಿಸಿ ಶ್ರೀರಂಗಪಟ್ಟಣವನ್ನು ಆಕ್ರಮಿಸಿದರು . ಗಾಂಧೀಜಿಯ ಚಳುವಳಿಗಳು , ಹೋರಾಟಗಳು ನಡೆದು ಹೋದವು . ದೇಶದ ಹಿರಿಯರು , ದೇಶಭಕ್ತರ ಅಸಹಕಾರವು ಮೊಳಗಿ , ಕೊನೆಗೆ 1947 ರ ಆಗಸ್ಟ್ 15 ರಂದು ಭಾರತದೇಶವು ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಿದರು . 1956 ರ ನವೆಂಬರ್ ಒಂದರಂದು ವಿಶಾಲ ಮೈಸೂರು ರಾಜ್ಯದ ಉದಯ ವಾಯಿತು . ಇದು ಕರ್ನಾಟಕವಾಗಿ ಪರಿವರ್ತಿತವಾದದ್ದು 1973 ರಲ್ಲಿ . ಈ ಸಿರಿನಾಡಿನಲ್ಲಿ ಹಿಂದೂಗಳು , ಮುಸ್ಲಿಂರು . ಕ್ರಿಶ್ಚಿಯನ್ರು , ಜೈನರು , ವೀರಶೈವರು ಹೀಗೆ ಎಲ್ಲಾ ಧರ್ಮದವರಿದ್ದಾರೆ . ಕೊಂಕಣಿ , ಉರ್ದು , ತುಳುವಿನ ಸಂಸ್ಕೃತಿಯು ಕನ್ನಡತನದ ಜಲದಲ್ಲಿ ಚಿಮ್ಮುತ್ತಿದೆ . ಇಂತಹ ಕನ್ನಡ ಗೆಲ್ಲಲಿ , ಬಾಳಲಿ , ನಮ್ಮ ನೆಲದಲಿ ವಾಸಿಸುವರೆಲ್ಲರೂ ಕನ್ನಡವನ್ನು ಕಲಿಯಲಿ ಎಂದು ಎಲ್ಲರೂ ಒಮ್ಮತದಿಂದ ಕನ್ನಡವನ್ನು ಪೋಷಿಸಬೇಕು . ಇದು ನಮ್ಮ ಕನ್ನಡನಾಡು ಎಂಬ ಹೆಮ್ಮೆ ಎಲ್ಲರಲ್ಲೂ ಇರಬೇಕು . ಇಂತಹ ಭವ್ಯವಾದ ಕನ್ನಡ ನಾಡು ನಮ್ಮದು ಎಂದು ಎಲ್ಲರೂ ಹೆಮ್ಮೆ ಪಡಬೇಕು . ಕನ್ನಡ ಚರಿತ್ರೆಯನ್ನು ತಿಳಿದಾಗ ನಿಜವಾದ ಸಾರ್ಥಕತೆ ಉಂಟಾಗುತ್ತದೆ .
0 Comments