Recent Posts

ಹಿಲ್ಟನ್ ಹೆಡ್ ಚಳುವಳಿ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಹಿಲ್ಟನ್ ಹೆಡ್ ಚಳುವಳಿ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

1. ಹಿಲ್ಟನ್ ಹೆಡ್ ದ್ವೀಪ ಯಾವ ಸಾಗರದಲ್ಲಿದೆ?
ಹಿಲ್ಟನ್ ಹೆಡ್ ದ್ವೀಪ ಅಟ್ಲಾಂಟಿಕ್ ಸಾಗರದಲ್ಲಿದೆ.

2. ಅಮೆರಿಕಾದಲ್ಲಿ ವಾಸವಾಗಿದ್ದ ಮೂಲ ನಿವಾಸಿಗಳನ್ನು ಏನೆನ್ನುತ್ತಾರೆ?
ಅಮೆರಿಕಾದಲ್ಲಿ ವಾಸವಾಗಿದ್ದ ಮೂಲ ನಿವಾಸಿಗಳಿಗೆ ಅಮೆರಿಂಡಿಯನ್ನರು ಎನ್ನುವರು.

3. ಹಿಲ್ಟನ್ ಹೆಡ್ ನಲ್ಲಿ ಬಂದಿಳಿಯುವ ಶ್ರೀಮಂತರ ಉಡುಗೆ ತೊಡುಗೆ ಹೇಗಿತ್ತು?
ಹೆಲ್ಟನ್ ಹೆಡ್ ನಲ್ಲಿ ಬಂದಿಳಿಯುವ ಶ್ರೀಮಂತರು ಬೂಟು ಚಡ್ಡಿ ಟೀಶರ್ಟು ಕೂಲಿಂಗ್ ಗ್ಲಾಸ್ ಸ್ಕಲ್ ಕ್ಯಾಪ್ ಹಾಕಿಕೊಳ್ಳುತ್ತಿದ್ದರು.

4. ಹಿಲ್ಟನ್ ಹೆಡ್ ದ್ವೀಪದಲ್ಲಿ ಏನೇನು ಕ್ರೀಡೆಗಳನ್ನು ಆಯೋಜಿಸಲಾಗುತ್ತಿತ್ತು?
ಹಿಲ್ಟನ್ ಹೆಡ್ ದ್ವೀಪದಲ್ಲಿ ಬೋಟಿಂಗ್ ಹಾಗೂ ವಿವಿಧ ರೀತಿಯ ಕ್ರೀಡಾ ವಿನೋದಗಳನ್ನು ಆಯೋಜಿಸಲಾಗುತ್ತಿತ್ತು.

5. ಕಡಲತಡಿಯ ಲೈಟ್ ಹೌಸನ್ನೇರಿದರೆ ಯಾವ ಚಿತ್ರಣವು ಕಾಣ ಸಿಗುತ್ತದೆ?
ಕಡಲತಡಿಯ ಲೈಟ್ ಹೌಸನ್ನೇರಿದರೆ ಅಟ್ಲಾಂಟಿಕ್ ಮಹಾಸಾಗರ ಸಮುದ್ರದಲ್ಲೋಡಾಡುತ್ತಿದ್ದ ನೌಕೆಗಳು ಕಡಲ ಕಾಗೆಗಳು ನಮ್ಮ ಬಡ್ಡೆಗೇ ಬಂದಿಳಿಯುವ ರೇವನ್ ಮೈನಾಗಳು ಕಾಣಸಿಗುತ್ತವೆ.

6. ಹಿಲ್ಟನ್ ಹೆಡ್ ನಲ್ಲಿರುವ ಸ್ಮಾರಕ ಯಾವುದು?
ಹಿಲ್ಟನ್ ಹೆಡ್ ನಲ್ಲಿರುವ ಸ್ಮಾರಕ ಲಿಬರ್ಟಿ ಓಕ್ ಮರದ್ದಾಗಿದೆ.
 
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಯುರೋಪಿಯನ್ನರು ಬಂದ ಮೇಲೆ ಏನೇನು ಬದಲಾವಣೆಗಳಾದವು?
ಹಿಲ್ಟನ್ ಹೆಡ್ ನಲ್ಲಿ ಯುರೋಪಿಯನ್ನರು ಬಂದಮೇಲೆ ಪ್ರಾಕೃತಿಕ ಸೌಂದರ್ಯ ಅಳಿಸಿ ಹೋಯಿತು. ಆ ಸ್ಥಳದಲ್ಲಿ ಸೀ ಬೀಚ್ ಹೋಟೆಲ್ ಗಳು, ಸ್ಟೇ ಹೋಂ ಗಳು ಗಾಲ್ಫ ಕೋರ್ಸುಗಳು ಮತ್ತು ಲಕ್ಸುರಿ ಹೋಟೆಲ್ ಗಳು ತಲೆಯೆತ್ತಿದ್ದವು.

2. ಹಿಲ್ಟನ್ ಹೆಡ್ ಮೊದಲು ಹೇಗಿತ್ತು?
ಹಿಲ್ಟನ್ ಹೆಡ್ ಮೊದಲು ಒಂದು ಸುಂದರ ದ್ವೀಪವಾಗಿತ್ತು. ಅಲ್ಲಿ ಪುರಾತನ ಸಸ್ಯ ಸಂಪತ್ತು ಹಳೆಯ ಕಾಲದ ಹೊಂಡಗಳು ಹಿನ್ನೀರಿನ ಕೋವುಗಳು ಕಡಲ ತೀರದ ಸಸ್ಯಗಳು ಮತ್ತು ಕಾಡಿನ ಮರಗಳು ಇದ್ದವು.

3. ಹಿಲ್ಟನ್ ಹೆಡ್ ಡ್ಯಾಮ್ ಸ್ಮಾರಕ ಮರದ ಬಗ್ಗೆ ವಿವರಿಸಿ.
ಅದು ಲಿಬರ್ಟಿ ಓಕ್ ಮರ. ಐವತ್ತರ ದಶಕದಲ್ಲಿ ಪರಿಸರ ರಕ್ಷಣೆಗಾಗಿ ಜನ ಒಗ್ಗೂಡಿ ಪಣತೊಟ್ಟಿದ್ದು ಈ ಮರದಲ್ಲಿಯೇ ಇದು ಸಂರಕ್ಷಿತ ಜಾಗ ದಯವಿಟ್ಟು ಕಟ-ಕಟೆಯ ಒಳಗೆ ಪ್ರವೇಶ ಬೇಡಿ ಎನ್ನುವ ಫಲಕವನ್ನು ನೆಟ್ಟಿದ್ದರು. ನಂತರ ಈ ಮರದ ಸಾನಿಧ್ಯ ಎಷ್ಟು ಪ್ರಸಿದ್ದವಾಯಿತು ಎಂದರೆ ಎಷ್ಟೋ ವಿವಾಹಗಳಾಗಿವೆ ಎಂದು ಲೇಖಕರು ಹೇಳುತ್ತಾರೆ.

4. ಹಿಲ್ಟನ್ ಹೆಡ್ ದ್ವೀಪದಲ್ಲಿ ಏನೇನು ಕಟ್ಟಡಗಳು ನಿರ್ಮಾಣಗೊಂಡವು?
ಹಿಲ್ಟನ್ ಹೆಡ್ ದ್ವೀಪದಲ್ಲಿ ಸೀ ಬೀಚ್ ಹೋಟೆಲ್ ಗಳು , ಸ್ಟೇ ಹೋಂಗಳು, ಗಾಲ್ಫ್ ಕೋರ್ಸ್ ಗಳು, ರೆಸಾರ್ಟುಗಳು ಹೀಗೆ ಹಲವಾರು ಕಟ್ಟಡಗಳು ನಿರ್ಮಾಣಗೊಂಡವು. ಈ ಕಟ್ಟಡಗಳ ಜೊತೆಗೆ ರಸ್ತೆಗಳು ಸೇತುವೆಗಳು ಕೂಡ ನಿರ್ಮಾಣಗೊಂಡವು.

5. ಹಿಲ್ಟನ್ ಹೆಡ್ ನಲ್ಲಿ ಪರಿಸರ ಹೋರಾಟ ಹೇಗೆ ಪ್ರಾರಂಭವಾಯಿತು?
ಪುರಾತನ ಸಸ್ಯಗಳು ಹಳೆಯ ಕಾಲದ ಹೊಂಡಗಳು ಹಿನ್ನೀರಿನ ಕೋವುಗಳೂ ಕಡಲ ತೀರದ ಸಸ್ಯಗಳು ಮತ್ತು ಕಾಡಿನ ಮರಗಳನ್ನು ಕಡಿದು ರೆಸಾರ್ಟ್ ಹೋಟೆಲ್ ಇತ್ಯಾದಿ ಮಾಡುವುದನ್ನು ಪರಿಸರ ಅಭಿಮಾನಿಗಳು ವಿರೋಧಿಸಿ ಚಳುವಳಿ ಆರಂಭಿಸಿದರು. ದುಡ್ಡು ಮತ್ತು ದೌಲತ್ತುಗಳಿಂದ ಪರ್ಯಾವರಣದ ಚಳುವಳಿಗೆ ಮೊದಲು ನೆಲದಲ್ಲಾಳಿ ಹಾಗೂ ಅಭಿಯಂತರರು ಆಸಕ್ತಿ ತೋರಿ ತಾವು ಈ ಚಳುವಳಿಯಲ್ಲಿ ಸೇರಿಕೊಂಡರು. ಚಳುವಳಿ ಕೊನೆಗೆ ಯಶಸ್ವಿಯಾಯಿತು.

ಇ. ಬಿಟ್ಟಸ್ಥಳ ತುಂಬಿರಿ.

1. ಯುರೋಪಿಯನ್ನರ ಅಗಮನವಾದ ಮೇಲೆ ಅಮೆರಿಂಡಿಯನ್ನರ ಸಮುದಾಯವು ಧೂಳಿಪಟ ಆಯಿತು.
(ಅಭಿವೃದ್ಧಿ, ಶಿಕ್ಷಿತ,ಧೂಳಿಪಟ)

2. ಅಟ್ಲಾಂಟಿಕ್ ಸಾಗರವು ಅಮೆರಿಕದ ಪೂರ್ವ ಭಾಗದಲ್ಲಿದೆ.
( ಪೂರ್ವ, ಉತ್ತರ, ಪಶ್ಚಿಮ)

3. ವಿಧಿಯಿಲ್ಲದೆ ಕೊನೆಗೆ ನ್ಯಾಯಲಯದ ಮೊರೆ ಹೋಗಬೇಕಾಯಿತು.
( ಧನಿಕರ, ಅಮೆರಿಕಾಧ್ಯಕ್ಷರ, ನ್ಯಾಯಾಲಯದ)

4. ಕಟ್ಟಡಗಳಿಗೆ ತೋರುತ್ತಿದ್ದ ಅಭಿಯಂತರ ಶ್ರದ್ದೆಯನ್ನೇ ಜನ ಪರಿಸರಕ್ಕೂ ನೀಡತೊಡಗಿದರು.
( ಪಾರಂಪರಿಕ , ಅಭಿಯಂತರ, ರಾಜಕೀಯ)

5. ದ್ವೀಪದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮೊದಲು ಎಲ್ಲರೂ ಸೇರಿ ಮಂತ್ರಾಲೋಚನೆ ನಡೆಸಿದರು.
(ಮಂತ್ರಾಲೋಚನೆ, ಜಾಥಾ, ಪ್ರತಿಭಟನೆ)

6. ಹೋರಾಟ ಮುಂದುವರಿದ ಬಳಿಕ ಹಿಲ್ಟನ್ ಹೆಡ್ ನಂದನವನದಂತೆ ಕಂಗೊಳಿಸತೊಡಗಿತು.
( ರಾಜಧಾನಿಯಂತೆ, ನಂದನವನದಂತೆ, ಅಭಯಾರಣ್ಯದಂತೆ)

ಈ. ಕೆಳಗಿನ ಶಬ್ದಗಳಿಗೆ ವಿರುದ್ಧಾರ್ಥಕ ಶಬ್ದಗಳನ್ನು ಬರೆಯಿರಿ.
ಮಾದರಿ : ಆಗಮನ X ನಿರ್ಗಮನ
1.    ಲಾಭ X ಹಾನಿ
2.    ಚುರುಕು X ಮಂದ
3.    ಪುರಾತನ X ನವೀನ
4.    ಪ್ರಸಿದ್ದ X ಸಾಮಾನ್ಯ
5.    ಸಾಧಾರಣ X ಶ್ರೇಷ್ಠ

ಉ. ಈ ಕೆಳಗಿನ ಪದಗಳನ್ನು ಬಳಸಿಕೊಂಡು ವಾಕ್ಯಗಳನ್ನು ರಚಿಸಿರಿ.

1.ಭರಾಟೆ: ಈಗ ಎಲ್ಲ ಕಡೆ ಹಣದುಬ್ವರದ ಭರಾಟೆ ನಡೆದಿದೆ.

2.ಸುಧಾರಣೆ: ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡಬೇಕೆಂದು ಜನ ಬಯಸುತ್ತಾರೆ.

3. ಸಾರ್ವಭೌಮ : ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು.

4. ದೌಲತ್ತು: ಶ್ರೀಮಂತರು ದೌಲತ್ತು ತೋರಸದೆ ಬಡವರಿಗೆ ನೆರವಾಗಬೇಕು.

5. ಹೊಯ್ದಾಟ: ರಮೇಶನಿಗೆ ಸರಿಯಾದ ಉತ್ತರ ತಿಳಿಯದೆ ಮನಸ್ಸಿನಲ್ಲಿ ಬಹಳ ಹೊಯ್ದಾಟವಾಯಿತು.

6. ಪಣತೊಡು: ದುರ್ಯೋಧನನು ಪಾಂಡವರನ್ನು ಸೋಲಿಸಲು ಪಣತೊಡುವುದಾಗಿ ಹೇಳಿದನು.

7. ಅಭಿಮಾನಿ: ಸ್ವಾಮೀಜಿಗಳಿಎ ಬಹಳ ಜನ ಅಭಿಮಾನಿಗಳಿದ್ದಾರೆ.
You Might Like

Post a Comment

0 Comments