ಬಸವಣ್ಣನವರ ಜೀವನ ದರ್ಶನ
ಅ . ಕೆಳಗೆ ಕಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯವಲ್ಲ ಉತ್ತರಿಸಿ .
1 . ಬಸವಣ್ಣನವರ ತಂದೆ ತಾಯಿಯವರ ಹೆಸರೇನು ?
ಉತ್ತರ : ಬಸವಣ್ಣನವರ ತಂದೆ ಬಾಗೇವಾಡಿಯ ಮಾದಿರಾಜ ತಾಯಿ ಮಾದಂಬೆ .
2 . ಬಸವಣ್ಣನವರು ಬಾಗೇವಾಡಿಯನ್ನು ಎಲ್ಲಿಗೆ ಹೋದರು ?
ಉತ್ತರ : ಬಸವಣ್ಣನವರು ಬಾಗೇವಾಡಿಯನ್ನು ಬಿಟ್ಟು , ಕೂಡಲ ಸಂಗಮನಿರುವ ಕಪ್ಪಡಿ ಸಂಗಮಕ್ಕೆ ಹೋದರು .
3 . ಈಶಾನ ಗುರುಗಳು ಬಸವಣ್ಣನವರಿಗೆ ಏನು ಹೇಳಿದರು ?
ಉತ್ತರ : ಈಶಾನ ಗುರುಗಳು ಬಸವಣ್ಣನವರಿಗೆ ನೀನೆಲ್ಲಿಗೂ ಹೋಗದೆ ಹೊಸ ಹೂವುಗಳು ಮತ್ತು ತಿಳಿನೀರು ತೆಗೆದುಕೊಂಡು ಹೋಗಿ ನಿತ್ಯವೂ ಸಂಗಮೇಶ್ವರನನ್ನು ಪೂಜಿಸಿ , ಪುಸಾದ ಕಾಯಕನಾಗಿ ಸುಖವಾಗಿರು ಎಂದರು .
4 . ಬಸವಣ್ಣನವರ ವಚನಗಳು ಏಕೆ ಪ್ರಸಿದ್ಧವಾಗಿವೆ ?
ಉತ್ತರ : ಬಸವಣ್ಣನವರ ವಚನಗಳಲ್ಲಿ ಭಾವತೀವ್ರತೆ , ಏಕಾಗ್ರತೆ ಮತ್ತು ಆತ್ಮೀಯತೆ ಪಶಂಸನೀಯವೂ ಪ್ರಸಿದ್ಧವೂ ಆಗಿದೆ .
5 . ಬಸವಣ್ಣನವರು ಬೋಧಿಸಿದ ಧರ್ಮದ ಜೀವಾಳ ಯಾವುದು ?
ಉತ್ತರ : ಬಸವಣ್ಣನವರು ಬೋಧಿಸಿದ ಧರ್ಮದ ಜೀವ ದಾನ, ದಯೆ ನಿರಾಡಂಬರ – ವಿನಯ – ಭಕ್ತಿ – ದುಡಿದು ನಿಷ್ಕಾಮ – ಕರ್ಮ ಮತ್ತು ಸರಳಜೀವನ .
0 Comments