ಹುತ್ತರಿ ಹಾಡು
ಅ. ಕೆಳಗಿರುವ ಪ್ರಶ್ನೆಗಳಿಗೆ ಉತ್ತರಿಸಿ.
1.ಕಾವೇರಿಯು ಹೇಗೆ ಹೊಳೆಯುತ್ತಾಳೆ?
ಕಾವೇರಿಯು ಮುಗಿಲಿನ ಮಿಂಚಿನಂತೆ ಹೊಳೆಯುತ್ತಾಳೆ.
2. ಸೋಲು ಸಾವರಿಯದವರು ಯಾರು?
ಕೊಡಗಿನ ಕಡುಗಲಿ ಹಿರಿಯರು ಸೋಲು ಸವರಿಯದವರು.
3. ಕೊಡಗು ಯಾವ ಗಿರಿಯಿಂದ ಯಾವ ಗಿರಿಯ ಪರ್ಯಂತ ಬೆಳೆದಿದೆ?
ಕೊಡಗು ಬೊಮ್ಮಗಿರಿಯಿಂದ ಪುಷ್ಪಗಿರಿಯವರೆಗೂ ಬೆಳೆದಿದೆ.
4. ಕಾಬೇರಿಯ ತವರ್ಮನೆ ಯಾವುದು?
ಕಾವೇರಿ ತಾಯ ತವರ್ಮನೆ ಈ ಕೊಡಗು ನಾಡು ಅಥವಾ ಈ ಸುಂದರವಾದ ಕೊಡಗು ಕಾವೇರಿ ತಾಯಿಯ ತವರುಮನೆ
5. ಯಾವ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು?
ಚಿಮ್ಮಿಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು.
ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಹಾಗೂ ಕಂಠಪಾಠ ಮಾಡಿರಿ.
1.ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ?
2. ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
ಸುಮ್ಮನಿತ್ತರೊ ದಟ್ಟಿಕುಪ್ಪಸ? ಹಾಡುಹುತ್ತರಿಗೇಳಿರಿ!
ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ!
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
0 Comments