Recent Posts

ಎದೆಗೆ ಬಿದ್ದ ಅಕ್ಷರ - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಎದೆಗೆ ಬಿದ್ದ ಅಕ್ಷರ
ಕೃತಿಕಾರರ ಪರಿಚಯ
ದೇವನೂರ  ಮಹಾದೇವ  (ಸಾ.ಶ.  1948)  ಮೈಸೂರು  ಜಿಲ್ಲೆಯ  ನಂಜನಗೂಡು ತಾಲೂಕು  ದೇವನೂರಿನವರು.  ಮೈಸೂರಿನ  ಭಾರತೀಯ  ಭಾಷಾಸಂಸ್ಥಾನದಲ್ಲಿ ಅಧ್ಯಾಪಕರಾಗಿ  ಸೇವೆ  ಸಲ್ಲಿಸಿದ  ಇವರು  ಬಂಡಾಯ  ಮತ್ತು  ದಲಿತ  ಸಾಹಿತ್ಯದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.         
  ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೊ, ನಂಬಿಕೆಯನೆಂಟ, ನೋಡು ಮತ್ತು  ಕೂಡು,  ಎದೆಗೆ  ಬಿದ್ದ  ಅಕ್ಷರ  ಶ್ರೀಯುತರ  ಪ್ರಮುಖ  ಕೃತಿಗಳು.  ಇವರ ಕುಸುಮಬಾಲೆ  ಕಾದಂಬರಿಗೆ  ಕೇಂದ್ರ  ಸಾಹಿತ್ಯ  ಅಕಾಡೆಮಿ  ಪ್ರಶಸ್ತಿ,  ಒಡಲಾಳ  ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.

ಆಶಯ
ಭಾವವಚನಕಾರರ  ನಡೆ-ನುಡಿಗಳ  ಸಮನ್ವಯವೇ  ಅರಿವು.  ಅಂತರಂಗದ  ಹೊಂದಾಣಿಕೆಯಿಂದ  ಮಾತ್ರ ಸಮಾನತೆ,  ಸಾಮರಸ್ಯ  ಸಾಧ್ಯ  ಅದಕ್ಕಾಗಿ  ಹೋರಾಡಿದ  ಮಹನೀಯರ  ದಾರಿಯಲ್ಲಿ  ಜಾಗತೀಕರಣವನ್ನು ರೂಪಿಸಬೇಕಾಗಿದೆ. ಕಾರುಣ್ಯ, ಸಮತೆ, ಪ್ರಜ್ಞೆಗಳೇ ದೇವರು. ಅವು ಜಾಗೃತವಾಗಬೇಕೆಂಬುದೇ ಆಶಯವಾಗಿದೆ.
ದೇವನೂರ ಮಹಾದೇವ ವಿರಚಿತ ಎದೆಗೆ ಬಿದ್ದ ಅಕ್ಷರ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ಈ ಗದ್ಯಭಾಗವನ್ನು ಆಯ್ಕೆಮಾಡಲಾಗಿದೆ.

ಪದಗಳ ಅರ್ಥ
ಆವಾಹಿಸು  -  ಮೈಮೇಲೆ ಬರುವಂತೆ ಮಾಡಿಕೊ
ಗುಡಿಮನೆ  -  ಚಿಕ್ಕ ದೇವಸ್ಥಾನ
ಕ್ಷೊಭೆ  -  ತಳಮಳ

ಅಭ್ಯಾಸ

ಅ)  ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1.  ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
2.  ಮನೆಮಂಚಮ್ಮ ಯಾರು?
3.  ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?
4.  ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಯಾರು?
5.  ವಚನಕಾರರಿಗೆ ಯಾವುದು ದೇವರಾಗಿತ್ತು?
6.  ಅಶೋಕ ಪೈ ಅವರ ವೃತ್ತಿ ಯಾವುದು?
7.  ದೇವನೂರರ ನನ್ನ ದೇವರು ಯಾರೆಂಬುದನ್ನು ಸ್ಪಷ್ಟೀಕರಿಸಿ.

ಆ)  ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1.  ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
2.  ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು? ವಿವರಿಸಿ.

ಇ)  ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1.  ಕವಿ ಸಿದ್ಧಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ.

ಈ)  ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1.  ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ.
2.  ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.
3.  ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು
4.  ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.

ಭಾಷೆಯ ಸೊಬಗು

ಕೆಲವು  ಶಬ್ದಗಳು  ಒಂದೇ  ಭಾಷೆಯಲ್ಲಿ  ಬಳಕೆಯಾಗುವಾಗಲೂ  ಸಂದರ್ಭಕ್ಕೆ  ತಕ್ಕಂತೆ  ಭಿನ್ನ  ಅರ್ಥಗಳನ್ನು ಪಡೆಯುತ್ತವೆ. ಅಂಥ ಕೆಲವು ಉದಾಹರಣೆಗಳು:
ಶಿರ - ಇದನ್ನು ಕರ್ನಾಟಕದ ಕೆಲವು ಕಡೆ ಒಂದು ಸಿಹಿಭಕ್ಷ್ಯದ ಹೆಸರಾಗಿ ಬಳಸುತ್ತಾರೆ. ಗ್ರಾಂಥಿಕ ಭಾಷೆಯಲ್ಲಿ ಶಿರ ಎಂದರೆ ತಲೆ ಎಂದು ಅರ್ಥ.
(1) ರಾವಣನು ದಶಶಿರನೆಂದೇ ಪ್ರಸಿದ್ಧ. ಯಾಕೆಂದರೆ ಅವನಿಗೆ ಹತ್ತು ತಲೆಗಳಿವೆ.
(2) ನನಗೆ ಶಿರ ಎಂದರೆ ಬಲು ಇಷ್ಟ. ಅದನ್ನು ಎಷ್ಟು ಕೊಟ್ಟರೂ ತಿನ್ನುತ್ತೇನೆ.
ಕಟ್ಟೆ - ಎತ್ತರವಾಗಿ ನಿರ್ಮಿಸಿದ ವೇದಿಕೆ ಎಂಬುದು ಒಂದು ಅರ್ಥವಾದರೆ ಇರುವೆಯ ಜಾತಿ ಎಂಬುದು ಇನ್ನೊಂದು ಅರ್ಥ.
(3) ನಡೆದೂ ನಡೆದು ಸುಸ್ತಾಗಿ ಕೊನೆಗೆ ಕಟ್ಟೆಯ ಮೇಲೆ ಕೂತುಗೊಂಡೆನು.
(4) ಹಾಗೆ ಕೂತು ದಣಿವಾರಿಸಿಕೊಳ್ಳುತ್ತಿರುವಾಗಲೇ ಒಂದು ಕಟ್ಟೆಯು ನನ್ನ ಕಾಲನ್ನು ಕಚ್ಚಿತು.
ಇಂಥ ಇನ್ನಷ್ಟು ಶಬ್ದಗಳನ್ನು ಪಟ್ಟಿ ಮಾಡಿ, ಅವುಗಳ ಅರ್ಥಗಳನ್ನು ಬರೆಯಿರಿ.

ಸೈದ್ಧಾಂತಿಕ ಭಾಷಾಭ್ಯಾಸ

ತದ್ಧಿತಾಂತಗಳು
ಈ ವಾಕ್ಯಗಳನ್ನು ಗಮನಿಸಿ.
1.  ಮೋಸವನ್ನು ಮಾಡುವವನು ಇದ್ದಾನೆ.
2.  ಕನ್ನಡವನ್ನು ಬಲ್ಲವನು ಬಂದನು.
ಮೊದಲ ವಾಕ್ಯದಲ್ಲಿ ಇರುವ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬ ಅರ್ಥದಲ್ಲಿ ಗಾರ ಎಂಬ ಪ್ರತ್ಯಯವನ್ನು ಸೇರಿಸಿ ಮೋಸಗಾರ ಎಂಬ ಪದವನ್ನು ಮಾಡಬಹುದು.
ಅಂದರೆ  ಮೋಸವನ್ನು  +  (ಮಾಡುವವನು)  +  ಗಾರ  =  ಮೋಸಗಾರ  ಎಂಬ  ರೀತಿಯಲ್ಲಿ ಪದರಚನೆಯಾಗುತ್ತದೆ. ಒಂದು ಪ್ರಕೃತಿ ಪದಕ್ಕೆ ಎರಡು ಪ್ರತ್ಯಯವನ್ನು ಸೇರಿಸುವ ಕ್ರಮವಿಲ್ಲ. ಹಾಗಾಗಿ ಮೋಸ ಎಂಬ ಪ್ರಕೃತಿ ಪದದ ಜೊತೆಗೆ ಇದ್ದ ಅನ್ನು ಎಂಬ ಪ್ರತ್ಯಯವನ್ನು ತೆಗೆದು ಗಾರ ಎಂಬ ತದ್ಧಿತ ಪ್ರತ್ಯಯವನ್ನು ಮಾತ್ರ ಉಳಿಸಿಕೊಂಡು ಮೋಸಗಾರ ಎಂಬ ತದ್ಧಿತಾಂತ ಪದರಚನೆ ಮಾಡಲಾಗುವುದು.
ಎರಡನೆಯ ವಾಕ್ಯದಲ್ಲಿ ಕೂಡಾ ಇದೇ ರೀತಿಯ ಪ್ರಕ್ರಿಯೆ ನಡೆದು ಕನ್ನಡವನ್ನು (ಪ್ರಕೃತಿಪದ) + ಇಗ (ತದ್ಧಿತ ಪ್ರತ್ಯಯ) = ಕನ್ನಡಿಗ ಎಂಬ ತದ್ಧಿತಾಂತ ಪದರಚನೆಯಾಗಿದೆ.
ತದ್ಧಿತಾಂತ :  ನಾಮಪದಗಳ ಮೇಲೆ ಬೇರೆಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ಇಕ, ಗಾರ್ತಿ, ಕಾರ್ತಿ, ಇತಿ, ವಂತೆ ಮುಂತಾದ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳಾಗುತ್ತವೆ.
ಹೀಗೆ ರಚನೆಯಾಗುವ ತದ್ಧಿತ ಪ್ರತ್ಯಯಗಳಲ್ಲಿ ತದ್ಧಿತಾಂತನಾಮ, ತದ್ಧಿತಾಂತಭಾವನಾಮ ಮತ್ತು ತದ್ಧಿತಾಂತ ಅವ್ಯಯಗಳೆಂದು ಮೂರು ವಿಭಾಗಗಳಿವೆ.
ತದ್ಧಿತಾಂತ  ನಾಮಗಳು  :  ನಾಮಪದಗಳಿಗೆ  ತದ್ಧಿತ  ಪ್ರತ್ಯಯಗಳು  ಸೇರಿ  ಆಗುವ  ಪದಗಳೇ ತದ್ಧಿತಾಂತನಾಮಗಳು.
ಉದಾ:- (ಪುಲ್ಲಿಂಗರೂಪದಲ್ಲಿ)  
ಬಳೆಯನ್ನು  +  ಮಾರುವವನು  =  ಬಳೆಗಾರ  
ಕೋಲನ್ನು  +  ಹಿಡಿಯುವವನು  =  ಕೋಲುಕಾರ   
ಕನ್ನಡವನ್ನು  +  ಬಲ್ಲವನು  =  ಕನ್ನಡಿಗ  
ಸಿರಿಯನ್ನು  +  ಉಳ್ಳವನು  =  ಸಿರಿವಂತ  
ಪ್ರಮಾಣವನ್ನು  +  ಉಳ್ಳವನು  =  ಪ್ರಾಮಾಣಿಕ (ಸ್ತ್ರೀಲಿಂಗರೂಪದಲ್ಲಿ)  
ಬಳೆಯನ್ನು  +  ಮಾರುವವಳು  =  ಬಳೆಗಾರ್ತಿ  
ಕೋಲನ್ನು  +  ಹಿಡಿಯುವವಳು  =  ಕೋಲುಕಾರ್ತಿ   
ಕನ್ನಡವನ್ನು  +  ಬಲ್ಲವಳು  =  ಕನ್ನಡಿತಿ  
ಸಿರಿಯನ್ನು  +  ಉಳ್ಳವಳು  =  ಸಿರಿವಂತೆ
ಹೀಗೆ_
_ಇತಿ, ಇತ್ತಿ, ಗಿತ್ತಿ, ತಿ, ಎ ಇತ್ಯಾದಿ ಸ್ತ್ರೀಲಿಂಗ ರೂಪದ ತದ್ಧಿತ ಪ್ರತ್ಯಯಗಳು ಸೇರಿ ಸ್ತ್ರೀಲಿಂಗದ ತದ್ಧಿತಾಂತಗಳಾಗುತ್ತವೆ.
ತದ್ಧಿತಾಂತ ಭಾವನಾಮಗಳು :
ಈ ವಾಕ್ಯಗಳನ್ನು ಗಮನಿಸಿ.
- ಬಡತನ, ಸಿರಿತನಗಳು ಶಾಶ್ವತವಲ್ಲ.
- ನಮಗೆ ಅದೊಂದು ಹಿರಿಮೆ.
ಈ ವಾಕ್ಯಗಳಲ್ಲಿರುವ ಬಡತನ, ಸಿರಿತನ, ಹಿರಿಮೆ ಎಂಬ ಪದಗಳನ್ನು ಗಮನಿಸಿದಾಗ ಬಡವನ ಭಾವ- ಬಡತನ ಸಿರಿವಂತನ ಭಾವ - ಸಿರಿತನ, ಹಿರಿದರ ಭಾವ - ಹಿರಿಮೆ ಎಂಬುದು ತಿಳಿಯುತ್ತದೆ. ಇಲ್ಲಿರುವ ತನ, ಮೆ ಎಂಬ ಪದಗಳು ಭಾವಾರ್ಥದಲ್ಲಿ ಪ್ರಯೋಗವಾಗಿವೆ. ಹೀಗೆ...
ಸಾಮಾನ್ಯವಾಗಿ ಷಷ್ಠೀ ವಿಭಕ್ತ್ಯಂತ ನಾಮಪದಗಳ ಮುಂದೆ ಭಾವಾರ್ಥದಲ್ಲಿ - ತನ,- ಇಕೆ, -ಪು, - ಮೆ ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತ ಭಾವನಾಮಗಳೆನಿಸುವುವು.
ಉದಾ:-  
ಜಾಣನ (ಭಾವ) ತನ   - ಜಾಣತನ     
ಚೆಲುವಿನ (ಭಾವ) ಇಕೆ   - ಚೆಲುವಿಕೆ     
ಕರಿದರ (ಭಾವ) ಪು   - ಕಪ್ಪು    
ಪಿರಿದರ (ಭಾವ) ಮೆ   - ಪೆರ್ಮೆ

ತದ್ಧಿತಾಂತಾವ್ಯಯ
ಈ ವಾಕ್ಯಗಳನ್ನು ಗಮನಿಸಿ.  
- ಇವನು ಭೀಮನಂತೆ ಬಲಶಾಲಿ.   
- ಶಾಲೆಯ ತನಕ ಬನ್ನಿ.  
- ಆಕೆಗಿಂತ ಚಿಕ್ಕವಳು.
ಈ  ವಾಕ್ಯಗಳಲ್ಲಿರುವ  ಭೀಮನಂತೆ, ಶಾಲೆಯತನಕ, ಆಕೆಗಿಂತ ಎಂಬ  ಪದಗಳನ್ನು  ಬಿಡಿಸಿದಾಗ  ಭೀಮನ  + ಅಂತೆ, ಶಾಲೆಯ + ತನಕ, ಆಕೆಗೆ + ಇಂತ ಎಂದಾಗುವುದು. ಹೀಗೆ....
ನಾಮಪದಗಳ ಮುಂದೆ ಅಂತೆ, ವೊಲ್, ವೋಲು, ತನಕ, ವರೆಗೆ, ಇಂತ, ಆಗಿ, ಓಸುಗ ಮುಂತಾದ ಪ್ರತ್ಯಯಗಳು ಸೇರಿ  ತದ್ಧಿತಾಂತಾವ್ಯಯಗಳಾಗುತ್ತವೆ.  ಈ  ಪ್ರತ್ಯಯಗಳು  ಬಂದಾಗ  ನಾಮಪದದಲ್ಲಿರುವ  ವಿಭಕ್ತಿ  ಪ್ರತ್ಯಯಗಳು ಲೋಪವಾಗುವುದಿಲ್ಲ.
ಉದಾ:  
ಅಂತೆ  :  ಚಂದ್ರನಂತೆ, ಅವನಂತೆ
ವೊಲ್  :  ಚಂದ್ರನವೊಲ್, ಅವನವೊಲ್  
ವೊಲು  :  ನನ್ನವೊಲು, ಅವಳವೊಲು  
ವೋಲು  :  ಮನೆಯವೋಲು, ಇದರವೋಲು  
ವೋಲ್  :  ಕರಡಿಯವೋಲ್, ನದಿಯವೋಲ್  
ತನಕ  :  ಮನೆಯತನಕ, ಹಿಮಾಲಯದತನಕ  
ವರೆಗೆ  :  ಶಾಲೆಯವರೆಗೆ, ಪಟ್ಟಣದವರೆಗೆ  
ಮಟ್ಟಿಗೆ  :  ಇವಳಮಟ್ಟಿಗೆ, ಸುಂದರನಮಟ್ಟಿಗೆ  
ಓಸ್ಕರ  :  ನನಗೋಸ್ಕರ, ಬೆಕ್ಕಿಗೋಸ್ಕರ  
ಸಲುವಾಗಿ  :  ಅರ್ಜುನನ ಸಲುವಾಗಿ, ಕಟ್ಟಡದ ಸಲುವಾಗಿ   
ಇಂತ  :  ರಾಧೆಗಿಂತ, ಅದಕ್ಕಿಂತ  
ಆಗಿ  :  ನಿನಗಾಗಿ, ಇದಕ್ಕಾಗಿ  
ಓಸುಗ  :  ಮದುವೆಗೋಸುಗ, ಕಾಗೆಗೋಸುಗ

ಭಾಷಾ ಚಟುವಟಿಕೆ

ಅ)  ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1.  ತದ್ಧಿತಾಂತಗಳೆಂದರೇನು?
2.  ತದ್ಧಿತಾಂತ ಭಾವನಾಮಗಳೆಂದರೇನು? ಉದಾಹರಣೆ ಸಹಿತ ವಿವರಿಸಿ.

ಆ)  ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ.
ಕಕ್ಕಾಬಿಕ್ಕಿ, ಆರಂಭಿಸು, ಪ್ರಯತ್ನಿಸು, ಘಾಸಿಗೊಳಿಸು.

ಇ)  ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ.
ಒಳಿತು, ಸಮಷ್ಟಿ, ಪುಣ್ಯ, ಬೆಳಕು, ಧರ್ಮ.

ಈ)  ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
1.  ಕಟ್ಟುವುದು ಕಠಿಣ; ಕೆಡಹುವುದು ಸುಲಭ.
2.  ಹೆತ್ತ ತಾಯಿ; ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು.  

ಪತ್ರಿಕಾ ವರದಿ
ಇಂದಿನ ಮಕ್ಕಳೇ ಮುಂದಿನ ಜನಾಂಗ
ತುಮಕೂರು: ನ.14:- ಭಾರತದ ಪ್ರಧಾನಿ ಜವಾಹರಲಾಲರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಕರೆಯಿತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ನೆಹರೂರವರ ಚಿಂತನೆಯಂತೆ ಇಂದಿನ ಮಕ್ಕಳೇ ಮುಂದಿನ ಜನಾಂಗ. ಅದಕ್ಕಾಗಿ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂಬುದು ಅವರ ಆಶಯವಾಗಿತ್ತು. ಇಂದು ನಿಮ್ಮ ಶಾಲೆಯಲ್ಲಿ ಆಚರಿಸುತ್ತಿರುವ ಮಕ್ಕಳದಿನದ ಸಂಭ್ರಮದಿಂದಾಗಿ ನೆಹರೂರವರ ಆತ್ಮಕ್ಕೆ ಶಾಂತಿ ಲಭಿಸಿದಂತಾಯ್ತು ಎಂದು ಸ್ಥಳೀಯ ಶಾಸಕರು ಹೇಳಿದರು. ಇಲ್ಲಿನ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷಸ್ಥಾನದಿಂದ ಅವರು ಮಾತನಾಡಿದರು.
  ಅನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶಾಸಕರು ಬಹುಮಾನ ವಿತರಿಸಿದರು. ಮಕ್ಕಳಿಂದ ವಿವಿಧ ವಿನೋದಾವಳಿ ನಡೆಯಿತು. ಸಹಶಿಕ್ಷಕ ರಾಮಯ್ಯನವರು ಸ್ವಾಗತಿಸಿ, ಸಹಶಿಕ್ಷಕಿ ಕುಮುದ ವಂದಿಸಿದರು.
ಚಿತ್ರಕಲಾಶಿಕ್ಷಕ ರೋಬರ್ಟ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಸಂಪನ್ನಗೊಂಡಿತು.
  ......................
(ವರದಿಗಾರರ ಸಹಿ)
 
ಪೂರಕ ಓದು
  ದೇವನೂರರ ಕತೆಗಳನ್ನು ಓದಿರಿ.
   ದೇವನೂರರ  ಎದೆಗೆ  ಬಿದ್ದ  ಅಕ್ಷರ  ಮತ್ತು  ಅವರನ್ನು  ಕುರಿತು  ಹೊರತಂದಿರುವ  ಯಾರ  ಜಪ್ತಿಗೂ ಸಿಗದ ನವಿಲುಗಳು ಪುಸ್ತಕಗಳನ್ನು ಗಮನಿಸಿ.

ಬಹು ಆಯ್ಕೆ ಪ್ರಶ್ನೆಗಳು

1.‘ಖುಷಿ’ ಈ ಪದದ  ಈ ಭಾಷೆಯಿಂದ ಬಂದಿದೆ
ಅ] ಇಂಗ್ಲೀಷ್ ಆ] ಉರ್ದು ಇ] ಪಾರ್ಸಿ ಈ] ತಮಿಳು

2. ‘ಮಹೋನ್ನತ’ ಇದು ಈ ಸಂಧಿಗೆ ಉದಾಹರಣೆ
ಅ] ಯಣ್ ಸಂಧಿ ಆ] ಸವರ್ಣಧೀರ್ಘ ಸಂಧಿ ಇ] ಗುಣ ಈ] ವೃದ್ಧಿ ಸಂಧಿ.

3. “ನಿಲ್ಲಿ ನನ್ ಮಕ್ಕಳಾ” ಇಲ್ಲಿರುವ ಚಿಹ್ನೆ
ಅ] ಪ್ರಶ್ನಾರ್ಥಕ ಆ] ಉದ್ಧರಣ ಇ] ವಾಕ್ಯವೇಷ್ಠನ ಈ] ಆಶ್ಚರ್ಯಸೂಚಕ

4. ‘ನನಗಿಲ್ಲಾ ತಾಯಿ’ ಇಲ್ಲಿರುವ ಚಿಹ್ನೆ
ಅ] ಪ್ರಶ್ನಾರ್ಥಕ ಆ] ಆಶ್ಚರ್ಯಸೂಚಕ. ಇ] ಉದ್ಧರಣ ಈ] ವಾಕ್ಯವೇಷ್ಠನ.

5. ‘ಜಾತಿಯ ಬಚ್ಚಲು’ ಇಲ್ಲಿರುವ ಅಲಂಕಾರ
ಅ] ರೂಪಕ ಆ] ಉಪಮಾ ಇ] ದೃಷ್ಟಾಂತ ಈ] ಅರ್ಥಾಂತರನ್ಯಾಸ

6. ‘ಗುಡಿ ಮನೆ’ ಇಲ್ಲಿರುವ ಅಲಂಕಾರ
ಅ] ಉಪಮ ಆ] ಅರ್ಥಲಂಕಾರ ಇ] ರೂಪಕ ಈ] ದೃಷ್ಟಾಂತ.

7. ‘ಕಕ್ಕಾಬಿಕ್ಕಿ’ ಇದು ಯಾವ ವ್ಯಾಕರಣಾಂಶ.
ಅ] ಜೋಡಿನುಡಿ ಆ]ದ್ವಿಯುಕ್ತಿ  ಇ] ನುಡಿಗಟ್ಟು ಈ] ಅವ್ಯಯ.

8. ತದ್ಧಿತಾಂತ ನಾಮಕ್ಕೆ ಉದಾಹರಣೆ
ಅ] ಬಳೆಗಾರ ಆ] ಜಾಣತನ ಇ] ಬಡತನ ಈ] ಶಾಲೆಯ ತನಕ.

9. ‘ಚಲುವಿಕೆ’ ಇದು ಯಾವ ನಾಮ.
ಅ] ಭಾವನಾಮ ಆ] ತದ್ಧಿತಾಂತ ಇ] ಸಹನಾಭಾವ ಈ] ಕರುಣಾಭಾವ.

10. ತಾಂತದ್ಧಿತಂತಾ ವ್ಯಯಕ್ಕೆ ಉದಾಹರಣ.
ಅ] ಚಂದ್ರನಂತೆ  ಆ] ಭೀಮ ಇ] ಬಣ್ಣ ಈ] ಗೆಜ್ಜೆ.

11. ‘ಸೃಷ್ಡ್ತಿ ’ ಪದದ ತದ್ಭವ ರೂಪ
ಅ] ವ್ಯಷ್ಟಿ ಆ] ಗೋಷ್ಠಿ ಇ] ಸಮ  ಈ] ವ್ಯಕ್ತಿ.

12. ‘ಬುದ್ಧನನ್ನು’ ಇದು ಈ ವಿಭಕ್ತಿ  ಪ್ರತ್ಯಯ
ಅ] ಪಂಚಮೀ ಆ] ದ್ವಿತೀಯ ಇ] ತೃತೀಯಾ ಈ] ಪ್ರಥಮ

13. ಕನ್ನಡಿಗ  ಇದು
ಅ]ಭಾವನಾಮ ಆ] ತದ್ಧಿತಾಂತ ಇ] ತದ್ಧಿತಾಂತನಾಮ ಈ] ಅವ್ಯಯ
 
14.‘ಕಟ್ಟಡದ ಸಲುವಾಗಿ’ ಇದು
ಅ]ಭಾವನಾಮ ಆ] ತದ್ಧಿತಾಂತ ಇ] ತದ್ಧಿತಾಂತನಾಮ ಈ] ತದ್ಧಿತಾಂತಾವ್ಯಯ

15.ಕಡೆಗಣ್ಣು ಈ ಸಮಾಸಕ್ಕೆ  ಉದಾ
ಅ] ತತ್ಪುರುಷ  ಆ] ಕರ್ಮಧಾರಯ ಸಮಾಸ ಇ] ಅಂಶಿ ಈ] ದ್ವಿರುಕ್ತಿ ಸಮಾಸ

16ಕಣ್ದೆರೆ ಈ ಸಮಾಸಕ್ಕೆ ಉದಾ
ಅ] ಕ್ರಿಯಾಸಮಾಸ ಆ] ಕರ್ಮಧಾರೆಯ ಸಮಾಸ  ಇ] ಅಂಶಿ ಈ] ದ್ವಿಗು ಸಮಾಸ

17. ‘ಮಾತಂತು’ ಇದು ಈ ಸಂಧಿಗೆ ಉದಾಹರಣೆ
ಅ] ಯಣ್ ಸಂಧಿ ಆ] ಸವರ್ಣಧೀರ್ಘ ಸಂಧಿ ಇ] ಗುಣ ಈ] ಲೋಪ ಸಂಧಿ.

18. ‘ಕಡುವೆಳ್ಪು’ ಇದು ಈ ಸಂಧಿಗೆ ಉದಾಹಹರಣೆ
ಅ] ಯಣ್ ಸಂಧಿ ಆ] ಆದೇಶ ಸಂಧಿ ಇ]ಗುಣ ಈ] ವೃದ್ಧಿ ಸಂಧಿ.

19. ‘ಹೌದ್ಹೌದು’ ಇದು ಯಾವ ವ್ಯಾಕರಣಾಂಶ.
ಅ] ಜೋಡಿನುಡಿ ಆ] ದ್ವಿರುಕ್ತಿ  ಇ] ನುಡಿಗಟ್ಟು ಈ] ಅವ್ಯಯ.
 
ಉತ್ತರಗಳು
1] ಇ, 2]ಇ, 3]ಆ, 4]ಈ, 5]ಅ, 6]ಇ, 7]ಇ, 8]ಅ, 9]ಅ, 10]ಅ, 11]ಅ, 12]ಆ, 13]ಇ, 14]ಈ. 15.]ಇ 16. ]ಅ 17.]ಈ 18. ]ಆ 19.] ಆ

ವಿಶೇಷ ಬಹು ಆಯ್ಕೆ ಪ್ರಶ್ನೆಗಳು

1) ಅಂಜಿಕೆ ಇದು ಯಾವ ಕೃದಂತಕೆ ಉದಾ:
ಅ) ನಿಷೇಧ ಕೃದಂತ         ಬ) ವರ್ತಮಾನ ಕೃದಂತ
ಕ) ಕೃದಂತ ಭಾವನಾಮ   ಡ)ಕೃದಂತ ಅವ್ಯಯ

2) ತದ್ಧಿತಾಂತ ನಾಮಕ್ಕೆ ಉದಾಹರಣೆ ಕೊಡಿ.
ಅ)ಕನ್ನಡಿಗ  ಬ) ಚಿಕ್ಕದು
ಕ) ಚಿಕ್ಕವರು     ಡ) ಜಾಣ

3) ಮಾಡುತ ಪದಕ್ಕೆ  ಇದಕ್ಕೆ ಉದಾಹರಣೆಯಾಗಿದೆ.
ಅ) ಅವ್ಯಯ                   ಬ) ಕೃದಂತನಾಮಕ್ಕೆ
ಕ) ಕೃದಂತ ಅವ್ಯಯ       ಡ)ಕೃದಂತಬಾs ವಕ್ಕೆ.

4) ಹೂವಾಡಿಗ ಇದು ಯಾವ ತದ್ಧಿತಾಂತಕ್ಕೆ  ಸೇರಿದೆ
ಅ) ತದ್ಧಿತಾಂತ ನಾಮ       ಬ) ತದ್ಧಿತಾಂತ ಭಾವನಾಮ
ಕ) ತದ್ಧಿಂತ ಅವ್ಯಯ         ಡ) ತದ್ಧಿತಾಂತ

5) ಓಟ ಇದು ಯಾವ ಕೃದಾಂತಕ್ಕೆ ಸೇರಿದೆ.
ಅ) ಕೃದಂತ ಭಾವನಾಮ      ಬ) ಕೃದಂತ ಅವ್ಯಯ
ಕ) ಕೃದಂತನಾಮ                ಡ)ಅವ್ಯಯ

6) ಇವುಗಳಲ್ಲಿ ತದ್ಧಿತಾಂತ ನಾಮಕ್ಕೆ ಉದಾಹರಣೆ.
ಅ) ಕರುಡ        ಬ) ಕಾವೇರಿ
ಕ) ಬಂಗಾರ       ಡ) ಕನ್ನಡಿಗ

7) ಹಾಡುವಿಕೆ ಇದು ಯಾವ ಕೃದ್ಧಾಂತಕ್ಕೆ ಸೇರಿದೆ.
ಅ) ನಿಷೇಧ ಕೃದಂತ               ಬ) ಕೃದಂತ ಭಾವನಾಮ
ಕ) ವರ್ತಮಾನ  ಕೃದಂತ       ಡ) ಕೃದಂತ ಅವ್ಯಯ

8) ಧಾತುವಿಗೆ ಕೃತ್ ಪ್ರತ್ಯಯ ಸೇರಿದಾಗ ಆಗುವ ಪದವನ್ನು ?
ಅ) ತದ್ಧಿತಾಂತ            ಬ) ಸರ್ವನಾಮ
ಕ) ಅಂಕಿತನಾಮ         ಡ) ಕೃದಂತ

9) ಬಿಳುಪು ಎಂಬ ಪದವು  ಯಾವ ವ್ಯಾಕರಣಕ್ಕೆ ಸೇರಿದೆ.
ಅ) ತದ್ಧಿತಾಂತ ನಾಮ              ಬ) ಧಾತು
ಕ) ತದ್ಧಿತಾಂತ ಭಾವನಾಮ       ಡ) ಅವ್ಯಯ

10) ಆಟ ಇದು ಯಾವ ವ್ಯಾಕರಣಕ್ಕೆ  ಸೇರಿದೆ.
ಅ) ತದ್ಧಿತಾಂತ                  ಬ) ಕೃದಂತನಾಮ
ಕ) ಕೃದಂತ ಅವ್ಯಯ          ಡ) ಕೃದಂತ ಭವನಾಮ

11) ಹಣವಂತ ಇದು ಒಂದು.
ಅ) ತದ್ಧಿತಾಂತ ಭಾವನಾಮ        ಬ) ತದ್ಧಿತಾಂತ ನಾಮ
ಕ) ಕೃದಂತನಾಮ                       ಡ) ತದ್ಧಿತಾಂತ ಅವ್ಯಯ.

12) ಹೂವಾಡಿಗ ಇದರಲ್ಲಿರುವ ತದ್ಧಿತ ರೂಪ.
ಅ) ಇಗ       ಬ) ವಾಡಿಗ
ಕ) ಡಿಗ        ಡ) ಅಡಿಗ

13) ಕನ್ನಡಿಗ  ಈ ಪದದಲ್ಲಿರುವ ತದ್ಧಿತ ಅರ್ಥ.
ಅ) ಇಗ         ಬ) ಅಡಿಗ
ಕ) ನಡಿಗ       ಡ) ಡಿಗ

14) ತದ್ಧಿತಾಂತ ಭಾವನಾಮಕ್ಕೆ ಉದಾಹರಣೆ ಕೊಡಿ.
ಅ) ಜಾಣ್ಮೆ          ಬ) ರಾಮನಂತೆ
ಕ) ಮಾಲೆಗಾರ     ಡ) ಗುಣವಂತ

15) ಮಗುವನ್ನು ಶಾಲೆಯ ತನಕ ಬಿಟ್ಟು ಬಂದನು. ಈ ವಾಕ್ಯದಲ್ಲಿರುವ ತದ್ಧಿತಾಂತ ಅವ್ಯಯ.
ಅ) ಮಗು       ಬ) ಶಾಲೆ
ಕ) ಬಂದ      ಡ) ಶಾಲೆಯ ತನಕ

16) ಕೃದಂತ ಭಾವನಾಮಕ್ಕೆ ಉದಾಹರಣೆ ಇದು.
ಅ) ನಡೆಯಲು       ಬ) ನಡವಳಿಕೆ
ಕ) ನಡೆಯುವ        ಡ) ಚಲುವಿಕೆ

17) ತದ್ಧಿತಾಂತ ಭಾವನಾಮಕ್ಕೆ ಉದಾಹರಣೆ ಇದು.
ಅ) ಲೆಕ್ಕಿಗ          ಬ) ಅಲ್ಲಿಯತನಕ
ಕ) ದೊಡ್ಡತನ    ಡ) ಹಣವಂತ

ಉತ್ತರಗಳು
1]ಕ, 2]ಅ, 3]ಕ, 4]ಅ, 5]ಅ, 6]ಡ, 7]ಬ, 8]ಡ, 9]ಕ, 10]ಡ, 11]ಬ, 12]ಡ, 13]ಅ, 14]ಬ, 15]ಅ, 16]ಡ, 17]ಬಿ, 18]ಕ,

ಮೊದಲೆರೆಡು ಪದಗಳಿಗಿರುವ ಸಂಬದಿಸಿದಂತೆ ಮೂರನೆಯ ಪದಕ್ಕೆ ಸಂಬಂದಿಸಿದ  ಪದ ಬರೆಯಿರಿ.
1.ಗಳಿಗೆ ಗಳಿಗೆ : ದ್ವಿರುಕ್ತಿ:: ಮಾತುಕತೆ ______
2.ಅಕ್ಷರ : ಅಕ್ಕರ:: ಧರ್ಮ  _______
3.ಸಂಕುಲ : ಸಮೂಹ:: ಆರ್ತತೆ _______
4.ಕವಿ : ಕಬ್ಬ:: ಸಹಸ್ರ  _______
5.ಕತೆಯಲ್ಲಿ : ಸಪ್ತಮೀ:: ಬಚ್ಚಲಿನಿಂದ ______
6.ಜಾಣತನ : ತದ್ಧಿತಾಂತ ಭಾವನಾಮ:: ಸಿರಿವಂತೆ ………………
7.ನದಿಯವೋಲ್ : ತದ್ಧಿತಾಂತಾವ್ಯಯ:: ಕಪ್ಪು : …………………………………
8.ಬಟ್ಟಬಯಲು : ದ್ವಿರುಕ್ತಿ  :: ಸತಿಪತಿ……………………………………
ಉತ್ತರಗಳು
1] ಜೋಡಿನುಡಿ  2] ದಮ್ಮ   3] ಬಯಕೆ  4] ಸಾವಿರ 5] ತೃತೀಯಾ 6] ತದ್ಧಿತಾಂತನಾಮ  7] ತದ್ಧಿತಾಂತ ಭಾವನಾಮ    8].ಜೋಡುನುಡಿ

ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು  ವಾಕ್ಯಗಳಲ್ಲಿ  ಉತ್ತರಿಸಿ.

1. ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ.

2. ಮನೆಮಂಚಮ್ಮ  ಯಾರು?
ಮನೆಮಂಚಮ್ಮ ಗ್ರಾಮದೇವತೆ .

3. ಮನೆ ಮಂಚಮ್ಮನ  ಕತೆ ಹೇಳಿದ ಕವಿ ಯಾರು?
ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ .

4. ಶಿವಾನುಭವ¨ ಶಬ್ದಕೋಶ ಪುಸ್ತಕ ಬರೆದವರು ಯಾರು?
ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಫ.ಗು.ಹಳಕಟ್ಟಿಯವರು .

5. ವಚನಕಾರರಿಗೆ ಯಾವುದು ದೇವರಾಗಿತ್ತು?
ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು .

6. ಅಶೋಕ ಪೈ ಅವರ ವೃತ್ತಿ ಯಾವುದು?
ಅಶೋಕ ಪೈ ಅವರು ಮನೋವೈದ್ಯರು .

7. ದೇವನೂರರ ನನ್ನ ದೇವರು ಯಾರೆಂಬುದನ್ನು ಸ್ಪಷ್ಟೀಕರಿಸಿ.
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ. ಎಂದು ದೇವರ ಮಹದೇವ ಅವರು ನನನ್ನ  ದೇವರು ಯಾರು ಎಂಬುದನ್ನು ಸ್ಪಷ್ಟಿಕರಿಸುತ್ತಾರೆ.

ಹೆಚ್ಚುವರಿ ಪ್ರಶ್ನೋತ್ತರಗಳು

8. ಮನೆಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ ?
ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.

9.ವಚನಕಾರರು ತಮ್ಮ ಕಷ್ಟ ಸುಖ ,, ದುಃಖ ದುಮ್ಮಾನ, ಏಳುಬೀಳುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತಿದ್ದರು ?
ವಚನಕಾರರು ತಮ್ಮ ಕಷ್ಟ ಸುಖ , ದುಃಖ ದುಮ್ಮಾನ, ಏಳುಬೀಳುಗಳನ್ನು ತಮ್ಮ ಪ್ರತಿಜ್ನೆ  ಮುಂದೆ ಹೇಳಿಕೊಳ್ಳುತಿದ್ದರು  .

10. ನಮ್ಮೊಳಗೆ ಯಾವುದನ್ನ ಎಚ್ಚಗೊಳಿಸಬೇಕಾಗಿದೆ ?
ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
ಅಶೋಕ ಪೈ ಹೇಳಿದ ಆ ಸಂಶೋಧನಾ ಸತ್ಯವೇನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್(ಟಿ.ವಿ) ನೋಡುತ್ತಿದ್ದಾರೆ.
ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಪಕ್ಕ ದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ ತಾವು ಇರುತ್ತಾರೆ. ಆಗ ಟೆಲಿವಿಷನ್(ಟಿ
(ಟಿ.ವಿ)ನಲ್ಲಿ ಯಾವುದಾದ ಕೊಲೆ ದೃಶ್ಯ ಬಂದಾಗ ಟೆಲಿವಿಷನ್(ಟಿ.ವಿ) ನೋಡುತ್ತಿದ್ದವರು ದು:ಖದ ಭಾವಳಗಾಗುತ್ತಾರೆ. ಇದು ಪಕ್ಕದ
ಕೊಠಡಿಯಲ್ಲಿ ಇರುವರು  ಮನಸ್ಸಿಗೂ ಮುಟ್ಟಿ ಅವರ ಮನಸ್ಸು  ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ. ಅದೇ ಟೆಲಿವಿಷನ್(ಟಿ.ವಿ)ನಲ್ಲಿ ಯಾವುದಾದರೂ
ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರಲ್ಲಿ ಖುಷಿ ಭಾವನೇ  ಉಂಟಾಗುತ್ತದೆ. ಇದು ಪಕ್ಕದ ಕೊಠಠಡಿಯಲ್ಲಿ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸಂತೋಷದ ಭಾವನೆ ಉಂಟಾಗುತ್ತದೆ. ಈ ಸಂಶೋಧನಾ  ತಿರುಳೇನೆಂದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.
ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಇರುವ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವಸಂಕುಲವೆಲ್ಲ ಒಂದೇ ಎಂದು ಹೇಳುತ್ತದೆ.

2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು? ವಿವರಿಸಿ.
ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ. ಅದು ಕ್ರಿಯೆಯ ಅನುಭವದಿಂದ ಒಡಮೂಡಿ ಬರುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು ಎಂದು ಹೇಳಲಾಗಿದೆ .

ಹೆಚ್ಚುವರಿ ಪ್ರಶ್ನೋತ್ತರಗಳು

3. ಅಶೋಕ ಪೈರವರ ಸಂಶೋಧನಾ ಸತ್ಯದ ತಿರುಳೇನು ?
ಅಶೋಕ ಪೈರವರ ಸಂಶೋಧನಾ ಸತತ್ಯದ ತಿರುಳೇನೆಂದರೆ ಯಾವ ಜೀವಿಯೂ ತನ್ನಷ್ಟ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ
ಪರಿಸರದಲ್ಲಿ  ಉಸಿರಾಡುತ್ತ ಇರುವ ಎಲ್ಲಾ ಜೀವಿಗಳೆಲ್ಲವೂ  ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವ ಕುಲವೆಲ್ಲ ಒಂದೇ ಎಂದು  ಹೇಳುತ್ತದೆ.

4. ದೇವನೂರ ಮಹಾದೇವ ಅವರು ಗುರುತಿಸಿದ ವಚನಕಾರರ ಪ್ರಜ್ಞೆಯ ಬಗ್ಗೆ ತಿಳಿಸಿ.
ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು  ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರದೇ ಆದ ಇಷ್ಟ ವ ಇದ್ದಿತು. ಅದೇ ಪ್ರಜ್ಞೆ , ಅಂದರೆ “ ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ   ಕಷ್ಟ ಸುಖ , ದುಃಖ ದುಮ್ಮಾನ, ಏಳುಬೀಳುಗಳನ್ನು  ಅವರ ಉತ್ಕಟ ಇಕ್ಕಟ್ಟುಗಳನ್ನು  ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ ಕೊಟ್ಟರು.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಕವಿ ಸಿದ್ಧಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ.
ದೇವನೂರ  ಮಹಾದೇವ ಅವರಿಗೆ ಕವಿ ಸಿದ್ಧಲಿಂಗಯ್ಯ ಅವರು ಮನೆಮಂಚಮ್ಮ ಎಂಬ ಗ್ರಾಮದೇವತೆಯ ಕತೆಯನ್ನು ಹೇಳುತ್ತಾರೆ. ಆ ಕತೆ ಹೀಗಿದೆ – ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ  ಗ್ರಾಮದೇವತೆ ಮಂಚಮ್ಮಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಗುಡಿ ಕಟ್ತಾ ಇರುವಾಗ ಗುಡಿಯ ಕಟ್ಟಡ ಚಾವಣಿ ಮಟ್ಟಕ್ಕೆ  ಬಂದಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ ಮಕ್ಕಳಾ” ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರ ಜನ ತಮ್ಮ ಕೆಲಸ ನಿಲ್ಲಿಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಾರೆ. ಆಗ ಗ್ರಾಮದೇವತೆ ಮಂಚಮ್ಮ “ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು ‘ನಿನಗೊಂದು  ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದು ಹೇಳುತ್ತಾರೆ. ಪುನಃ ಆ ದೇವತೆ“ಓಹೋ  ಗುಡಿಮನೆ ಕಟ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ  ಮಕ್ಕಳಾ ?”? ಎಂದು ಕೇಳುತ್ತಾಳೆ. ಆಗ ಒಬ್ಬನು “ ತಾಯಿ” ಹೇಳುತ್ತಾಳೆ  ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು ಹೇಳುತ್ತಾಳೆ. ಅಂದಿನಿಂದ  ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ. ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ.”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ : ಈ ವಾಕ್ಯವನ್ನು  ಮಣೆಮಂಚಮ್ಮ ದೇವತೆ , ತನಗೆ ಗುಡಿ ಕಟ್ಟುತ್ತಿದ್ದ ಜನರಿಗೆ ಹೇಳುತ್ತಾಳೆ. ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ಗ್ರಾಮದೇವತೆ ಮಂಚಮ್ಮಗೆ ಗುಡಿಕಟ್ಟುವಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು  ‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ತಾಯಿ ಎಂದು ಹೇಳುತ್ತಾರೆ. ಆಗ ದೇವತೆ“ಓಹೋ,ಗುಡಿಮನೆ ಕಟ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ  ಮಕ್ಕಳಾ ?” ಎಂದು ಕೇಳಿದಾಗ ಒಬ್ಬನು “ನನಗಿಲ್ಲತಾಯಿ” ಹೇಳುತ್ತಾರೇ ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಗುಡಿಕಟ್ಟುವ ಜನನರಿಗೆ ಮನೆ ಇಲ್ಲದ ಮೇಲೆ  ಗುಡಿಮನೆ ಎಂದು ಗ್ರಾಮದೇವತೆ ಹೇಳುವ ಈ ಮಾತು ಸಮಾನತೆಯ ತತ್ವವನ್ನು ಪ್ರತಿ ಬಿಂಬಿಸುತ್ತದೆ.

2. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.”
ಆಯ್ಕೆ : ಈ ವಾಕ್ಯವನ್ನು  ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ : ಲೇಖಕರು ಬುದ್ಧನ ಕಾರುಣ್ಯ ತಮ್ಮ  ಮನದಲ್ಲಿ ಕೂತ ಬಗೆಯನ್ನು ಅಶೋಕ ಪೈರವರು ಹೇಳಿದ ಸಂಶೋಧನಾ   ಉದಾಹರಣೆ ನೀಡಿ ಅರ್ಥೈಸುವ ಸಂದರ್ಭದಲ್ಲಿ ಈ ಮಾತು ಬಂದಿದೆ. ಟಿ.ವಿ ನೋಡುವ ಭಾವನೆಗಳು ಪಕ್ಕದ ಕೊಠಡಿಯಲ್ಲಿದ್ದವರ ಮೇಲೆ ಹೇಗೆ ಪರಿಣಾಮ ಬೀರಿತೋ, ಹಾಗೆಯೇ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ  ಇರುವ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವನ  ಕುಲವೆಲ್ಲ ಒಂದೇ ಎಂದು ಅರ್ಥೈಸಿದಸಂದ¨ ವಾಗಿದೆ.
ಸ್ವಾರಸ್ಯ : ಯಾವ ಜೀವಿಯು ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ , ಜೀವಿಗ ಪರಸ್ಪರಾವಲಂಬಿಗಳು, ಇಡೀ ಜೀವಕುಲವೆಲ್ಲ ಒಂದೇ ಎಲ್ಲರೂಸಮಾನ ಎಂದು ಹೇಳಿರುವುದು ಸ್ವಾರಸ್ಯಪೂರ್ಣವಾಗಿ ಬಂದಿದೆ.

3. “ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ : ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರವರ ಆದ ಇಷ್ಟ ಇದ್ದಿತು. ಅದೇ ಪe, ಅಂದರೆ “ ವಚನಕಾರರಿಗೆಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ  ಕಷ್ಟ ಸುಖ , ದುಃದುಮ್ಮಾನ, ಏಳುಬೀಳುಗಳನ್ನು ಅವರ ಉತ್ಕಟ ಇಕ್ಕಟ್ಟುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ ಎಂದು ಪ್ರಜ್ಞೆಯ ಬಗ್ಗೆ ವಿವರಿಸುವಾಗ ಈ ಮಾತು ಬಂದಿದೆ.
ಸ್ವಾರಸ್ಯ : ವಚನಕಾರರಿಗೆ ಇಷ್ಟ ವದ ರೀತಿಯಲ್ಲಿ ಇದ್ದ ಪ್ರಜ್ಞೆಯಂತೆಪ್ರತಿಯೊಬ್ಬರಲ್ಲಿ ಪ್ರಜ್ಞೆ ಜಾಗೃತವಾಗಿ ಎಂಬುದನ್ನು  ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ.

4. “ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.”
ಆಯ್ಕೆ : ಈ ವಾಕ್ಯವನ್ನು  ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ : ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ (ತಳಮಳ  )ಗೊಂಡು ನರಳುತ್ತಿರುವ ಈ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸ ಘಾಸಿಗೊಳಿಸುವುದು.ಈಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ . ಮನಸ್ಸು  ಘಾಸಿಗೊಳಗಾಗಬಾರ ದರೆ ಎಲ್ಲರಲ್ಲೂ ಕಾರುಣ್ಯಮೂಡಬೇಕು. ಆದ್ದರಿಂದ ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರಕಾರುಣ್ಯವನ್ನು ಎಚ್ಚಗೊಳಿಸಬೇಕಾಗಿದೆ   ಎಂದು ಹೇಳಿದಸಂವಾಗಿದೆ.
ಸ್ವಾರಸ್ಯ : ಸಮ  ಸ್ತರು ಸಮಾನ ಆದ್ದರಿಂದ ಕಾರುಣ್ಯ ಮನೋಭಾವ ಎಲ್ಲರ ಮನದಲ್ಲೂ ಮೂಡಿಬರಬೇಕು ಆಗ ಸಮಾಜ ಘಾಸಿಗೊಳ್ಳುವುದಿಲ್ಲ ಎಂದು ಅಥೈಸಿರುವುದು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

ಭಾಷಾ ಚಟುವಟಿಕೆ

1. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ.
ಕಕ್ಕಾಬಿಕ್ಕಿ, ಆರಂಭಿಸು, ಪ್ರಯತ್ನಿಸು, ಘಾಸಿಗೊಳಿಸು.
 
ಕಕ್ಕಾಬಿಕ್ಕಿ: ವಿದ್ಯಾರ್ಥಿಗಳು ಹಾವನ್ನ  ನೋಡಿ ಕಕ್ಕಾಬಿಕ್ಕಿಯಾಗಿ ಓಡಿ ಹೋದರು.
 
ಆರಂಭಿಸು: ವಿಶ್ವೇಶ್ವರಯ್ಯನವರು  ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು  ಆರಂಭಿಸಿದರು.
 
ಪ್ರಯತ್ನಿಸು: ವಿದ್ಯಾರ್ಥಿಗಳು ೧೦ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸಬೇಕು.
 
ಘಾಸಿಗೊಳಿಸು: ಸೋಲು ಉಂಟಾಯಿತೆಂದು  ಮನಸ್ಸಿಗೆ ಘಾಸಿಮಾಡಿಕೊಳ್ಳಬಾರದು.

ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ. 
ಒಳಿತು, ಸಮಷ್ಟಿ, ಪುಣ್ಯ, ಬೆಳಕು  , ಧರ್ಮ
 
ಒಳಿತು ಘಿ ಕೆಡುಕು    
ಸಮಷ್ಟಿ ಘಿ ವ್ಯಷ್ಠಿ    
ಪುಣ್ಯ ಘಿ ಪಾಪ    
ಬೆಳಕು ಘಿ ಕತ್ತಲು    
ಧರ್ಮ ಘಿ ಅಧರ್ಮ
You Might Like

Post a Comment

0 Comments