Recent Posts

 ಕಾಮನಬಿಲ್ಲು - ೫ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಕಾಮನಬಿಲ್ಲು

ಕೃತಿಕಾರರ ಪರಿಚಯ : ನಿಂಗಪ್ಪ ಹನುಮಪ್ಪ ಕುಂಟಿ ( ನಿಂಗಣ್ಣ ಕುಂಟಿ ಇಟಗಿ ) ಇವರು ಕ್ರಿ.ಶ. 1943 ರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಜನಿಸಿದರು . ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹಾಗೂ ಮಕ್ಕಳ ಸಾಹಿತಿಗಳಾಗಿ ಕನ್ನಡ ಸೇವೆಯನ್ನು ಸಲ್ಲಿಸಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಕೃಷಿ ಶಿಶುಪ್ರಾಸಗಳನ್ನು ರಚಿಸಿದ್ದಾರೆ . ಇವರ ‘ ಚಂದಪ್ಪನ ಶಾಲೆ ‘ ಕವನ ಸಂಕಲನ ಪ್ರಕಟಗೊಂಡಿದೆ . ಶ್ರೀಯುತರಿಗೆ ಮಕ್ಕಳ ಸಾಹಿತ್ಯ ರಚನೆಗಾಗಿ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ .

ಅಭ್ಯಾಸ

ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ರವಿಯು ಯಾವ ದಿಕ್ಕಿಗೆ ಹೊರಟನು?
2. ಕಾಮನಬಿಲ್ಲು ಎಲ್ಲಿಂದ ಎಲ್ಲಿಯವರೆಗೆ ಆವರಿಸಿದೆ ?
3. ಕಾಮನ ಬಿಲ್ಲಿನಲ್ಲಿರುವ ಬಣ್ಣಗಳನ್ನು ಹೆಸರಿಸಿ .
4. ಕಾಮನಬಿಲ್ಲು ಯಾವಾಗ ಮರೆಯಾಯಿತು ?
5. ಕಾಮನಬಿಲ್ಲು ಯಾವಾಗ ಮೂಡುತ್ತದೆ ?
 

ಮುಖ್ಯಾಂಶಗಳು
 
ಪುಕೃತಿಯ ಸುಂದರ ಸೊಬಗು ಮನಸ್ಸಿಗೆ ಮುದ ನೀಡುತ್ತದೆ . ಸಂಜೆಯ ಸಮಯ , ತಂಪಾದ ಗಾಳಿ ಬೀಸುತ್ತಿದೆ . ರವಿ ( ಸೂರ್ಯ ) ತನ್ನ ದಿನಚರಿ ಮುಗಿಸಿ ಮನೆಗೆ ಹೋಗುತ್ತಿ ದ್ದಾನೆ . ಸೂರ್ಯನ ತಾಯಿಯ ಮನೆ ಪಡುವಣ ಎಂದರೆ ಪಶ್ಚಿಮ ದಿಕ್ಕು , ಸೂರ್ಯನ ಕಾವಿಲ್ಲ , ಸಂಜೆಯ ಹೂ ಬಿಸಿಲು ( ಹೊಂಬಿಸಿಲು ) ನೋಡಲು ಖುಷಿಯಾಗುತ್ತದೆ . ಈ ಹೂ ಬಿಸಿಲಲ್ಲಿ ಎಲ್ಲವೂ ಅಂದವಾಗಿ ಕಾಣುತ್ತದೆ . ಮೋಡವು ಆಗಸದ ಅಂಚಿನಲ್ಲಿ ಮೂಡಿ ಹನಿಮಳೆಯನ್ನು ತರುತ್ತಿದೆ . ಈ ತುಂತುರು ಹನಿಗಳು ಬೀಳುತ್ತಿದ್ದು , ಆಕಾಶದಲ್ಲಿ ಕಾಮನಬಿಲ್ಲು ಸೃಷ್ಟಿಯಾಗಿದೆ . ಕಾಮನ ಬಿಲ್ಲು ಆಕಾಶದಲ್ಲಿ ಸುಂದರವಾಗಿ ಕಾಣುತ್ತದೆ . ಈ ಬಿಲ್ಲು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಾಗಿದೆ . ಸಪ್ತ ವರ್ಣಗಳಿಂದ ಕೂಡಿದ ಇದು ಭೂಮಿಯಿಂದ ಆಕಾಶದವರೆಗೂ ಮುಟ್ಟಿದಂತೆ ತೋರುತ್ತಾ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ . ಸೂರ್ಯನು ಮುಳುಗುತ್ತಿರುವುದರಿಂದ ಕತ್ತಲು ಹರಡುತ್ತಿದೆ. ಮೋಡ ಚದುರಿ ಮಳೆ ನಿಂತು ಹೋಗಿದೆ. ಕಾಮನಬಿಲ್ಲು ಸಹ ಮರೆಯಲ್ಲಿ ಮಾಯವಾಗಿ ಕಣ್ಭಿಗೆ ಕಾಣದಾಗಿದೆ. ಕಾಮನ ಬಿಲ್ಲು ನೋಡಲು ಸುಂದರ ಆದರೆ ನಶ್ವರ.



You Might Like

Post a Comment

0 Comments