Recent Posts

ಛಲಮನೆ ಮೆರೆವೆಂ - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಛಲಮನೆ ಮೆರೆವೆಂ

ಕವಿ ಪರಿಚಯ : – ರನ್ನ
ರನ್ನ ಕ್ರಿ ಶ . ಸುಮಾರು ೯೪೯ ರಲ್ಲಿ ( ಹತ್ತನೆಯ ಶತಮಾನದಲ್ಲಿ ಬಾಗಲಕೋಟೆ ಜಿಲ್ಲೆಯ ಮುದುವೊಳಲು ( ಈಗಿನ ಮುಧೋಳ ) ಎಂಬ ಗ್ರಾಮದಲ್ಲಿ ಜನಿಸಿದನು , ಇವನ ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ . ಈತನು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು . ಇವನು ‘ ಸಾಹಸ ಭೀಮ ವಿಜಯಂ ( ಗದಾಯುದ್ಧ ) ‘ , ‘ ಅಜಿತತೀರ್ಥಂಕರ ಪುರಾಣತಿಲಕಂ ‘ , ‘ ಪರಶುರಾಮಚರಿತಂ ‘ , ‘ ಚಕ್ರೇಶ್ವರಚರಿತಂ ‘ ಎಂಬ ಕಾವ್ಯಗಳನ್ನು ಬರೆದಿದ್ದಾನೆ . ರನ್ನಕಂದ ‘ ಎಂಬ ನಿಘಂಟನ್ನು ಬರೆದಿರುವುದಾಗಿ ತಿಳಿದುಬರುತ್ತದೆ .
ಇವನಿಗೆ ತೈಲಪನು ‘ ಕವಿಚಕ್ರವರ್ತಿ ‘ ಎಂಬ ಬಿರುದನ್ನು ಕೊಟ್ಟನು . ಈತನು ಕನ್ನಡದ ರತ್ನತ್ರಯರಲ್ಲಿ ಒಬ್ಬನು . ‘ ಛಲಮನೆ ಮೆಜಂ ‘ ಎಂಬ ಪದ್ಯಭಾಗವನ್ನು ಪ್ರೊ . ಹಂಪ ನಾಗರಾಜಯ್ಯ ಅವರು ಸಂಪಾದಿಸಿರುವ ‘ ರನ್ಸಂಪುಟ’ದ ಮಹಾಕವಿ ರನ್ನನ ‘ ಸಾಹಸ ಭೀಮ ವಿಜಯಂ ‘ ಎಂಬ ಮಹಾಕಾವ್ಯಭಾಗದ ಐದನೆಯ ಆಶ್ವಾಸದಿಂದ ಆರಿಸಿಕೊಳ್ಳಲಾಗಿದೆ .

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

೧. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಯಾರಿಗೆ ಹೇಳುವನು ?
ಉ : ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಭೀಷ್ಮಾಚಾರ್ಯರಿಗೆ ಹೇಳುವನು .  

೨. ದಿನಪಸುತ ಎಂದರೆ ಯಾರು ?
ಉ : ದಿನಪಸುತ ಎಂದರೆ ಕರ್ಣ .

೩. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ ?
ಉ : ಅರ್ಜುನ ಮತ್ತು ಭೀಮ ಇಬ್ಬರನ್ನೂ ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ .
 
೪. ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು ಯಾರು ?
ಉ : ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು ದುರ್ಯೋಧನ

೫. ಅಂತಕಾತ್ಮಜ ಎಂದರೆ ಯಾರು ?
ಉ : ಅಂತಕಾತ್ಮಜ ಎಂದರೆ ಧರ್ಮರಾಯ .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

೧. ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ ?
 ಉ : ದುರ್ಯೋಧನನನನು ಭೀಷ್ಮಾಚಾರ್ಯರಿಗೆ “ ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಆದರೆ ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳು ಭೂಮಿಗೆ ಸಮ . ನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು ಯುದ್ಧದಲ್ಲಿ ಹೋರಾಡಿ ಸತ್ತರು . ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ ? ಆದ್ದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮರೆಯುತ್ತೇನೆ ” ಎಂದು ಹೇಳುತ್ತಾನೆ .

೨. ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಳುವುದೇಕೆ ?
 ಉ : ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿ ಮಾಡಿಕೊ ಎಂದು ಸಲಹೆ ಮಾಡಿದಾಗ ದುರ್ಯೋಧನನನು ಅದಕ್ಕೆ ಒಪ್ಪುವುದಿಲ್ಲ . ಅವನು “ ನಾನು ಭೂಮಿಗಾಗಿ ಹೋರಾಡುತ್ತಿಲ್ಲ . ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು .  ಈ ಭೂಮಿ ನನಗೆ ಪಾಳು ಭೂಮಿಗೆ ಸಮ . ಪ್ರಿಯ ಗೆಳೆಯನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವುದಿಲ್ಲ ” ಎನ್ನುತ್ತಾನೆ .

೩. ಪಾರ್ಥ – ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು ?
 ಉ : “ ನನ್ನ ಪ್ರೀತಿಯ ಗೆಳೆಯ ಕರ್ಣನನ್ನು ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನನ್ನು ಕೊಂದ ಅರ್ಜುನ – ಭೀಮರು ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೆ : ನಾನು ಸಂಧಿಮಾಡಿಕೊಳ್ಳಲು ಒಪ್ಪುವುದಿಲ್ಲ . ಮೊದಲು ಆ ಇಬ್ಬರನ್ನೂ ಕೊಲ್ಲುವೆನು . ಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ ” ಎಂಬುದು ಪಾರ್ಥ – ಭಿಮರ ಬಗೆಗೆ ದುರ್ಯೋಧನನ ಅಭಿಪ್ರಾಯವಾಗಿದೆ .

ಇ . ಕೊಟ್ಟಿರುವ ಪ್ರಶ್ನೆಗಳ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

೧. ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ .
ಉ : ಮಹಾಭಾರತ ಯುದ್ಧದಲ್ಲಿ ತನ್ನೆಲ್ಲ ಸಹೋದರರನ್ನೂ ಆಪ್ತಮಿತ್ರನಾದ ಕರ್ಣನನ್ನೂ ಕಳೆದುಕೊಂಡ ದುರ್ಯೋಧನನು ತನ್ನ ತಂದೆ ತಾಯಿಯರ ಅಪೇಕ್ಷೆಯಂತೆ ರಣರಂಗದಲ್ಲಿ ಶರಶಯ್ಕೆಯಲ್ಲಿ ಮಲಗಿದ್ದ ತಾತ ಭೀಷರ ಸಲಹೆಯನ್ನು ಪಡೆಯಲು ಬರುತ್ತಾನೆ . ಭೀಷರು ಯುದ್ಧವನ್ನು ನಿಲ್ಲಿಸಿ ಪಾಂಡವರೊಡನೆ ಸಂಧಿ ಮಾಡಿಕೊಳ್ಳುವುದು ಸೂಕ್ತವೆಂದು ದುರ್ಯೋಧನನಿಗೆ ಸಲಹೆ ನೀಡುತ್ತಾರೆ .
ಭೀಷರು ದುರ್ಯೋಧನನಿಗೆ “ ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಹಿಂದಿನಂತೆ ನಡೆಯುವ ಹಾಗೆ ಮಾಡುವೆನು
” ಎಂದು ಹೇಳುತ್ತಾರೆ . ಅವರಿಗೆ ದುರ್ಯೋಧನನು ಛಲಗಾರ ಎಂಬುದು ತಿಳಿದಿದ್ದರೂ ಹಿರಿಯರಾಗಿ ಅವನನ್ನು ಸಂಧಿಗಾಗಿ ಒಪ್ಪಿಸುವ ಒಂದು
ಪ್ರಯತ್ನ ಇಲ್ಲಿ ಕಂಡುಬರುತ್ತದೆ . ಹಾಗೆಯೇ “ ಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆ . ನೀನೂ ಕೂಡ ನಮ್ಮ
ಮಾತನ್ನು ಮೀರದೆ ನಡೆದುಕೊಳ್ಳಬೇಕು ” ಎಂದು ಹೇಳುವ ಭೀಷರ ಮಾತುಗಳಲ್ಲಿ ಅವರಿಗೆ ಪಾಂಡವರ ಮೇಲಿದ್ದ ನಂಬಿಕೆ – ವಿಶ್ವಾಸವೂ ವ್ಯಕ್ತವಾಗಿದೆ .
“ ಅಜ್ಞಾ , ನಾನು ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದಿಲ್ಲ . ನಾನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ ? ಆದರೆ ನಾನು ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳು ಭೂಮಿ ” ಎಂದು ಹೇಳುವಲ್ಲಿ ಅವನ ದಿಟ್ಟ ನಿರ್ಧಾರ ಸ್ಪಷ್ಟವಾಗಿ ಗೋಚರಿಸುತ್ತದೆ . ಅಲ್ಲದೆ “ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಬಾಳಲಾದೀತೆ ? ನನ್ನ ಪ್ರೀತಿಯ ಗೆಳೆಯನನ್ನು ನನ್ನ ಪ್ರೀತಿಯ ತಮ್ಮನನ್ನು ಕೊಂದ ಅರ್ಜುನ – ಭೀಮರು ಬದುಕಿರುವವರೆಗೆ , ನನ್ನ ದೇಹದಲ್ಲಿ ಪ್ರಾಣ ಇರುವವರೆಗೆ ನಾನು ಸಂಧಿಯನ್ನು ಒಪ್ಪುವುದಿಲ್ಲ . ಮೊದಲು ಆ ಇಬ್ಬರನ್ನೂ ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ ” ಎಂದು ಹೇಳುವಲ್ಲಿ ಆತನಿಗೆ ಕರ್ಣ ಮತ್ತು ದುಶ್ಯಾಸನನ ಮೇಲಿದ್ದ ಪ್ರೀತಿಯೂ ಭೀಮಾರ್ಜುನರ ಬಗೆಗಿದ್ದ ಕೋಪದ ತೀವ್ರತೆಯೂ ವ್ಯಕ್ತವಾಗಿದೆ . ಪ್ರಾಣ ಹೋದರೂ ಅಭಿಮಾನ ಬಿಡುವುದಿಲ್ಲ ಎಂಬ ದುರ್ಯೋಧನನ ಮಾತುಗಳು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿವೆ .

೨. ದುರ್ಯೋಧನನ ಛಲದ ಗುಣ ಅವನ ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ
ಉ : ಭೀಷ್ಮಾಚಾರ್ಯರು ತಮ್ಮ ಬಳಿಗೆ ಬಂದ ದುರ್ಯೋಧನನಿಗೆ ಪಾಂಡವರೊಡನೆ ಸಂಧಿಮಾಡಿಕೊಳ್ಳುವ ಸಲಹೆ ನೀಡುತ್ತಾರೆ . ಆದರೆ ಅಭಿಮಾನಧನನಾದ ದುರ್ಯೋಧನನು ಅದಕ್ಕೆ ಒಪ್ಪುವುದಿಲ್ಲ . ಆಗ ಅವನಾಡುವ ಮಾತುಗಳಲ್ಲಿ ಆತನ ಛಲದ ಗುಣ ವ್ಯಕ್ತವಾಗಿರುವುದನ್ನು ಕಾಣಬಹುದು . ದುರ್ಯೋಧನನು ಭೀಷರನ್ನು ಕುರಿತು “ ಅಜ್ಜ , ನಿಮಗೆ ನಮಸ್ಕರಿಸಿ ಹೋಗಲೆಂದು ಬಂದನೇ ಹೊರತು ಶತುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದೆನೆ ? ನಾನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ ? ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳು ಭೂಮಿ , ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವೆನೆ ? ” “ ನನ್ನ ಪ್ರೀತಿಯ ಗೆಳೆಯನನ್ನೂ ಪ್ರೀತಿಯ ತಮ್ಮನನ್ನೂ ಕೊಂದ ಅರ್ಜುನ – ಭೀಮರು ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಅಜ್ಜಾ , ನಾನು ಸಂಧಿಯನ್ನು ಒಪ್ಪುವುದಿಲ್ಲ . ಆ ಇಬ್ಬರನ್ನೂ ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ . ನನ್ನ ಒಡಹುಟ್ಟಿದ ನೂರುಮಂದಿ ಸಹೋದರರು ಯುದ್ಧದಲ್ಲಿ ಹೋರಾಡಿ ಸತ್ತರು . ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ ? ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ . ನಾನು ಹೋರಾಡದೆ ಬಿಡುವುದಿಲ್ಲ . ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ; ಇಲ್ಲವೆ ನಾನು ಉಳಿಯಬೇಕು . ಹಾಗೆಯೇ ಈ ಭೂಮಿ ಪಾಂಡವರದಾಗಬೇಕು ; ಇಲ್ಲವೇ ಕೌರವನದಾಗಬೇಕು ” ಎಂದು ದುರ್ಯೋಧನನು ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳುವ ಮಾತುಗಳಲ್ಲಿ ಆತನ ಛಲ , ದೃಢನಿರ್ಧಾರ ಮತ್ತು ಸ್ವಾಭಿಮಾನವನ್ನು ಕಾಣಬಹುದಾಗಿದೆ .

ಈ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

೧. “ ನೆಲಕಿಟೆವೆನೆಂದು ಬಗೆದಿರೆ ಚಲಕಿಚೆವೆಂ ”
: ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭೀಷ್ಮಾಚಾರ್ಯರು ಪಾಂಡವರನ್ನು ಒಪ್ಪಿಸುತ್ತೇನೆ . ಸಂಧಿಮಾಡಿಕೋ ‘ ಎಂದು ಹೇಳಿದಾಗ ದುರ್ಯೋಧನನು “ ಅಜ್ಜಾ , ನಾನು ಈ ಭೂಮಿಗಾಗಿ ಯುದ್ಧ ಮಾಡುವೆನೆಂದು ಭಾವಿಸಿರುವಿರಾ ? ನಾನು ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳುಬಿದ್ದ ನೆಲಕ್ಕೆ ಸಮ ” ಎನ್ನುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
 ಸ್ವಾರಸ್ಯ : ದುರ್ಯೋಧನನ ಈ ಮಾತಿನಲ್ಲಿ ನಶ್ವರವಾದ ಅರಸುತನಕ್ಕಿಂತ ಛಲದಿಂದ ಬಾಳುವುದೇ ನಿಜವಾದ ಕ್ಷತ್ರಿಯನ ಗುಣ . ಸಂಧಿಮಾಡಿಕೊಳ್ಳುವುದು ಹೇಡಿತನದ ಲಕ್ಷಣ ಎಂಬ ಧ್ವನಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .

೨. “ ಸಮರದೊಳೆನಗಜ್ಜ ಪೇಟೆಮಾವುದು ಕಜ್ಜಂ . ”  
ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭೀಷ್ಮಾಚಾರ್ಯರು ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಮೊದಲಿದ್ದಂತೆ ನಡೆಯುವ ಹಾಗೆ ಮಾಡುವೆನು . ಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆ . ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೊಳ್ಳಬೇಕು ಎಂದು ಭೀಷರು ಹೇಳಿದಾಗ ದುರ್ಯೋಧನನು ಮುಗುಳು ನಗೆ ನಕ್ಕು “ ಅಜ್ಜಾ , ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದೆನೆ ? ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : “ ಸಮರದೊಳೆನಗಜ್ಜ ಪೇಟೆಮಾವುದು ಕಜ್ಜಂ ” ಎಂದು ಹೇಳುವ ದುರ್ಯೋಧನನ ಮಾತಿನಲ್ಲಿ ‘ ಸಂಧಿ ಮಾಡಿಕೊಳ್ಳುವ ಮಾತೊಂದನ್ನು ಬಿಟ್ಟು . ಯುದ್ಧದಲ್ಲಿ ನಾನೇನು ಮಾಡಬಹುದೆಂಬುದನ್ನು ಹೇಳಿ ” ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ . ಏಕೆಂದರೆ ದುರ್ಯೋಧನನಿಗೆ ಇಷ್ಟವಾಗದ ಒಂದು ಮಾತು “ ಸಂಧಿ ” .

೩. “ ಪಾಂಡವರೊಳಿದು ಛಲಮನೆ ಮೆರೆವೆಂ . ”
ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : “ ನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು ಹೋರಾಡಿ ಸತ್ತರು . ಆದ್ದರಿಂದ ನನ್ನಲ್ಲಿ ಕೋಪ ಹುಟ್ಟಿ ಬೆಳೆಯಿತು . ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ ? ಆದ್ದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ . ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ದುರ್ಯೋಧನನ ತನಗೆ ಕೋಪ ಹೆಚ್ಚಾಗಲು ಕಾರಣವನ್ನು ನೀಡಿರುವುದಲ್ಲದೆ  ತನ್ನ ಸಹೋದರರು ಸತ್ತಿಲ್ಲ . ಅವರು ಮತ್ತೆ ಹುಟ್ಟಿಬರುವರೆಂಬ ನಂಬಿಕೆಹೊಂದಿರುವುದು ಹಾಗೂ ಛಲಕ್ಕಾಗಿ ಹೋರಾಡುವ ಆತನ ನಿಲುವು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

೪. “ ಮೇಣಾಯ್ತು ಕೌರವಂಗವನಿತಳಂ . “ 
ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಸಂಧಿಗೆ ಒಪ್ಪದ  ದುರ್ಯೋಧನನು , “ ಅಜ್ಜ , ನಾನು ಹೋರಾಡದೆ ಬಿಡುವುದಿಲ್ಲ . ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ಇಲ್ಲವೆ ನಾನು ಉಳಿಯಬೇಕು . ಆದ್ದರಿಂದ ಈ ಭೂಮಿ ಪಾಂಡವರದಾಗಬೇಕು ಇಲ್ಲವೇ ಕೌರವನದಾಗಬೇಕು ಎಂದು ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ತನ್ನ ಕೊನೆಯುಸಿರು ಇರುವ ವರೆಗೂ ಪಾಂಡವರ ವಿರುದ್ಧ ಹೋರಾಡುತ್ತೇನೆಂಬ ದುರ್ಯೋಧನನದಿಟ್ಟ ನಿರ್ಧಾರ , ಪಾಂಡವರ ಮೇಲಿನ ಕೋಪದ ತೀವ್ರತೆ ಈ ಸಂದರ್ಭದಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

ಭಾಷಾ ಚಟುವಟಿಕೆ
 
ಅ . ಕೊಟ್ಟಿರುವ ಪದ್ಯದ ಸಾಲುಗಳಿಗೆ ಪ್ರಸ್ತಾರ ಹಾಕಿ , ಗಣ ವಿಭಾಗ ಮಾಡಿ , ಛಂದಸ್ಸಿನ ಹೆಸರನ್ನು ಬರೆಯಿರಿ .
 
 
ಇ . ಕೊಟ್ಟಿರುವ ಪದಗಳನ್ನು ವಿಗ್ರಹವಾಕ್ಯ ಮಾಡಿ ಸಮಾಸದ ಹೆಸರನ್ನು ತಿಳಿಸಿ .
ಪಾರ್ಥಭೀಮರು = ಪಾರ್ಥನೂ + ಭೀಮನೂ – ದ್ವಂದ್ವ ಸಮಾಸ
ಅಂತಕಾತ್ಮಜ = ಅಂತಕನ ಆತ್ಮಜನಾದವನು ದಿನಪಸುತ ಯಾರೋ ಅವನೇ ಅಂತಕಾತ್ಮಜ ( ಧರ್ಮರಾಜ) – ಬಹುವೀಹಿ
ಸಮಾಸ = ದಿನಪನ ಸುತನಾದವನು ಯಾರೋ ಅವನೇ ದಿನಪಸುತ ( ಕರ್ಣ ) – ಬಹುವೀಹಿ ಸಮಾಸ
You Might Like

Post a Comment

0 Comments