Recent Posts

ಭೂಕೈಲಾಸ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಭೂಕೈಲಾಸ 

 

ಅಭ್ಯಾಸ

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .

೧. ಆತ್ಮಲಿಂಗವನ್ನು ಪಡೆದು ರಾವಣ ಬಂದು ನಿಂತ ಸ್ಥಳ ಹೇಗಿದೆ ?
ಉತ್ತರ:
ಚಿಲಿಪಿಲಿಗುಟ್ಟುವ ಪಕ್ಷಿಗಳ ಗುಂಪು, ತಣ್ಣನೆ ತೀಡಿ ಬರುವ ತಂಗಾಳಿ, ಪಶ್ಚಿಮ ಸಮುದ್ರ ತೀರದಲ್ಲಿ ಮುಳುಗುತ್ತಿರುವ ಸೂರ್ಯ ಕಾಣುತ್ತಿತ್ತು. ಈ ರೀತಿ ಆತ್ಮಲಿಂಗವನ್ನು ಪಡೆದು ರಾವಣ ಬಂದು ನಿಂತ ಸ್ಥಳ ಹೀಗಿತ್ತು.
 

೨. ರಾವಣ ವಟುವನ್ನು ಏಕೆ ಕರೆದನು ?
ಉತ್ತರ:
ರಾವಣ ವಟುವನ್ನು ಕರೆದು ನೋಡು ಗಣಪ, ನಾನು ಸಂಧ್ಯಾವಂದನೆ ಮಾಡಬೇಕಾಗಿದೆ ನನ್ನ ಕೈಯಲ್ಲಿರುವ ಈ ಲಿಂಗವನ್ನು ನೆಲದಲ್ಲಿ ಇಡುವಂತಿಲ್ಲ . ಸಂಧ್ಯಾವಂದನೆ ಮುಗಿಯುವವರೆಗೆ ಇದನ್ನು ಹಿಡಿದುಕೊಂಡಿರುವೆಯಾ ಎಂದು ಕರೆದನು.
 

೩. ವಟುವಿನ ತಂದೆ – ತಾಯಿಯರು ಯಾರು ?
ಉತ್ತರ:
ವಟುವಿನ ತಂದೆ ಪರಮೇಶ್ವರ , ತಾಯಿ ಶಾಂಭವಿ.
 

೪. ಆತ್ಮಲಿಂಗವನ್ನು ಹಿಡಿದುಕೊಂಡಿರಲು ವಟು ಹಾಕಿದ ನಿಬಂಧನೆ ಏನು ?
ಉತ್ತರ:
ಆತ್ಮಲಿಂಗವನ್ನು ಹಿಡಿದುಕೊಂಡಿರಲು ವಟು ಹಾಕಿದ ನಿಬಂಧನೆ ಏನೆಂದರೆ ನನ್ನ ಕೈಲಾಗದಿದ್ದರೆ ನಿನ್ನ ಕರೆಯುತ್ತೇನೆ, ಮೂರುಬಾರಿ ಕರೆದಾಗಲೂ ಬಾರದಿದ್ದರೆ ಈ ಲಿಂಗವನ್ನು ನೆಲದ ಮೇಲೆ ಇಟ್ಟುಬಿಡುತ್ತೇನೆ ಎಂದು ಹೇಳಿದ.
 

೫. ರಾವಣನಿಗೆ ಶಿವನಿಂದ ದೊರಕಿದ ಅಭಯ ವಚನವೇನು ?
ಉತ್ತರ:
ಮಾತೆ ಕೈಕಸಾದೇವಿಗೆ ಶಿವನ ಆತ್ಮಲಿಂಗವನ್ನು ಧರೆಗಿಳಿಸುತ್ತೇನೆ ಎಂದು ನೀನು ನೀಡಿದ ವಚನವೂ ಕೈಗೂಡಿದಂತಾಯ್ತು. ಚಿಂತಿಸಬೇಡ.


You Might Like

Post a Comment

0 Comments