Recent Posts

ಕಟ್ಟುವೆವು ನಾವು - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತರಗಳು

 
 ಕಟ್ಟುವೆವು ನಾವು
                            
   ಎಂ. ಗೋಪಾಲಕೃಷ್ಣ ಅಡಿಗ


 
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. .
 
1. ಯಾವುದು ಬತ್ತಿಹೋಗುವ ಮುನ್ನ ಹೊಸನಾಡೊಂದನ್ನು ಕಟ್ಟಬೇಕು?
ಉತ್ತರ :
ಉತ್ಸಾಹ ಸಾಹಸದ ಉತ್ತುಂಗ ಅಲೆಗಳು ಈ ಕ್ಷುಬ್ಧಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ  ನಾಡೊಂದನು.
 
2. ನಮ್ಮೆದೆಯ ಕಾಮಧೇನು ಯಾವುದು?
ಉತ್ತರ :
ನಮ್ಮ ಕನಸುಗಳೇ ನಮ್ಮೆದೆಯ ಕಾಮಧೇನು.
 
3. ನಮ್ಮ ಸುತ್ತಲೂ ಇರುವ ಕಂದಕಗಳಾವುವು?
ಉತ್ತರ :
ನಮ್ಮ ಸುತ್ತಲೂ ಜಾತಿಮತಭೇದಗಳ ಕಂದಕಗಳಿವೆ.
 
4. ಕೋಟೆಗೋಡೆಗೆ ಮೆಟ್ಟಿಲುಗಳು ಯಾವುದು?
ಉತ್ತರ :
ನಮ್ಮ ಹೆಣಗಳೇ ಕೋಟೆಗೋಡೆಗೆ ಮೆಟ್ಟಿಲುಗಳು.
 
5. ಕವಿ ಯಾರಿಗೆ ವೀಳೆಯವನು ಕೊಡುವೆನೆಂದಿದ್ದಾರೆ?
ಉತ್ತರ :
ಕೆಡೆ ನುಡಿವ, ಕೆಡೆ ಬಗೆವ ಕೆಡಕು ಜನರಿಗೆ ವೀಳೆಯವನು ಕೊಡುವೆನೆಂದಿದ್ದಾರೆ.
 
6. ಹೊಸನಾಡೊಂದನ್ನು ಕಟ್ಟ ಬಯಸುವ ಕವಿ ಉತ್ಸಾಹ ಉದ್ವೇಗದಲ್ಲಿ  ಹೇಳುವ ಮಾತುಗಳಾವುವು?
ಉತ್ತರ :
ಕಟ್ಟುವೆವು ನಾವು ಹೊಸ ನಾಡೊಂದನು, – ರಸದ ಬೀಡೊಂದನು. ಹೊಸನೆತ್ತರುಕ್ಕುಕ್ಕಿ
ಆರಿಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ, ಉತ್ಸಾಹಸಾಹಸದ ಉತ್ತುಂಗ  ವೀಚಿಗಳ ಈ ಕ್ಷುಬ್ಧಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು  ನಾವು ಹೊಸ ನಾಡೊಂದನು. ಅಂದರೆ  ಉತ್ಸಾಹ, ಉದ್ವೇಗದ ವೀರ ಯುವಜನರೇ ನಾಡ ಬಾವುಟವು. ಆ ಬಾವುಟವು ಹಾರಾಟಕ್ಕೆ ಆಕಾಶವೇ ಗಡಿ. ಅದನ್ನು ಹಿಡಿಯುವ, ತಡೆಯುವ ಶಕ್ತಿ ಉಳ್ಳವರು, ಸಾಮರ್ಥ್ಯ ಉಳ್ಳವರು ಯಾರಾದರೂ ಸಹ ಬನ್ನಿರಿ, ಕೆಡೆ ನುಡಿವ, ಕೆಡೆ ಬಗೆವ ಕೆಡಕು ಜನರಿಗೆ ವೀಳೆಯವನು ಕೊಡುತ್ತಾರೆ. ನಿಮ್ಮೆಲ್ಲರನ್ನೂ ನಾಶ ಮಾಡಿ, ನಿಮ್ಮ ಸಮಾಧಿಗಳ ಮೇಲೆ ಭವ್ಯವಾದ ಸುಖದ ನಾಡೊಂದುನ್ನು ಕಟ್ಟುತ್ತೇನೆ. ಎಂದು ಕವಿ ಹೇಳಿದ್ದಾರೆ.


You Might Like

Post a Comment

0 Comments