ಕಪ್ಪೆಯ ಹಾಡು
ಅ ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು .
1. ಕಪ್ಪೆಯ ಗೆಳೆಯ ಯಾರು ?
ಉತ್ತರ : ರೈತನು ಕಪ್ಪೆಯ ಗೆಳೆಯನಾಗಿದ್ದಾನೆ .
2. ರೈತ ಯಾವುದಕ್ಕಾಗಿ ಕಾಯುತ್ತಿರುವನು ?
ಉತ್ತರ : ರೈತನು ಕಪ್ಪೆಯ ಕೊರಳ ಹಾಡಿಗಾಗಿ ಕಾಯುತ್ತಿರುವನು .
3. ಕಪ್ಪೆಯ ಬಣ್ಣ ಯಾವುದು ?
ಉತ್ತರ : ಕಪ್ಪೆಯ ಬಣ್ಣ ಮಣ್ಣಿನ ಬಣ್ಣ
4. ಕಪ್ಪೆಯ ಕಣ್ಣು ಹೇಗಿದೆ ?
ಉತ್ತರ : ಕಪ್ಪೆಯ ಕಣ್ಣು ನೀಲಿಯಾಗಿದೆ .
5. ಕಪ್ಪೆ ಯಾವ ಸಮಯದಲ್ಲಿ ಕಾಣಸಿಗುತ್ತದೆ .
ಉತ್ತರ : ಕಪ್ಪೆಯು ಸಂಜೆಯ ಹೊತ್ತಿನಲ್ಲಿ ಕಾಣಸಿಗುತ್ತದೆ .
6. ಬೇಸಿಗೆಯಲ್ಲಿ ಕಪ್ಪೆ ಎಲ್ಲಿ ವಾಸ ಮಾಡುತ್ತದೆ ?
ಉತ್ತರ : ಬೇಸಿಗೆಯಲ್ಲಿ ಕಪ್ಪೆ ನೆಲದ ಒಳಗೆ ವಾಸಿಸುತ್ತದೆ .
ಆ ) ಈ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸು .
1. ಕಪ್ಪೆ ಹೇಗಿರುತ್ತದೆ ಎಂದು ಕವಿ ಹೇಳಿದ್ದಾನೆ ?
ಉತ್ತರ : ಇಲ್ಲಿ ಕವಿ ಕಪ್ಪೆಯು ಮಣ್ಣಿನ ಬಣ್ಣದ್ದಾಗಿದೆ ಮತ್ತು ನೀಲಿ ಕಣ್ಣುಗಳನ್ನು ಹೊಂದಿದೆ ಹಾಗೂ ಕಪ್ಪೆಯು ಸಣ್ಣ ಜೀವಿ ಎಂದು ಹೇಳಿದ್ದಾನೆ .
2. ತುಂಟ ಹುಡುಗ ಬಂದಾಗ ಕಪ್ಪೆ ಏಕೆ ದೂರ ಜಿಗಿಯುತ್ತದೆ ?
ಉತ್ತರ : ತುಂಟ ಹುಡುಗ ಕಪ್ಪೆಯನ್ನು ಕಂಡಾಗ ಕಲ್ಲು ಎಸೆಯುವನು . ಆದ್ದರಿಂದ ಕಪ್ಪೆ ದೂರ ಜಿಗಿಯುತ್ತದೆ
ಇ ) ಬಿಟ್ಟ ಸ್ಥಳ ಪದ ತುಂಬು .
1. ಮಣ್ಣ ಬಣ್ಣ ನೀಲಿ ಕಣ್ಣ
2. ಬಿತ್ತಿ ಬೆಳವ ಹಳ್ಳಿ ರೈತ
3. ಅವನು ಬರಲು ಮಾರು ದೂರ
4. ಅದೋ ನೋಡು ಕೇರೆ ರಾಯ
5. ಸಂಜೆ ಹೊತ್ತು ಕೆರೆಯ ಸುತ್ತ
ಅ ) ಇಲ್ಲಿ ನೀಡಿರುವ ಶಬ್ದಗಳಿಗೆ ನೀಡಿರುವ ಇತರೆ ಶಬ್ದಗಳನ್ನು ಮಾದರಿಯಂತೆ ಬರೆ
ಮಾದರಿ : ಶಾಲೆ – ಶಿಕ್ಷಕ – ಮ ಕ್ಕಳು – ಪುಸ್ತಕ – ಪೆನ್ನು
1. ಮನೆ : ತಂದೆ – ತಾಯಿ – ಮಗು
2. ಕಾಡು : ಆನೆ – ಜಿಂಕೆ – ನವಿಲು –
3. ಕಾರು : ಬಸ್ಸು – ಸ್ಕೂಟರ್ – ರಿಕ್ಷಾ
4. ಅಂಗಡಿ : ಮಾಲೀಕ – ಆಳು – ಗಿರಾಕಿ
ಆ ) ಇಲ್ಲಿ ನೀಡಿರುವ ವಸ್ತುಗಳ ಬಗ್ಗೆ ಎರಡೆರಡು ವಾಕ್ಯಗಳನ್ನು ಬರೆ ,
1. ಚೀಲ : ರೈತರು ಹೊಲದಲ್ಲಿ ಬೆಳೆದ ಕಾಳುಗಳನ್ನು ಚೀಲದಲ್ಲಿ ತುಂಬುತ್ತಾರೆ .
ಪ್ರವೀಣನು ತರಕಾರಿಯನ್ನು ತರಲು ಚೀಲ ತೆಗೆದುಕೊಂಡು ಹೋದನು .
2. ಹೂ: ತೋಟದಲ್ಲಿ , ಬೆಳೆದ ಹೂಗಳನ್ನು ಮಾರುಕಟ್ಟೆಗೆ ತರುವರು
ಮಾರುಕಟ್ಟೆಯಲ್ಲಿಯ ಹೂಗಳನ್ನು ಕೊಂಡು ಹೆಂಗಸರು ತಮ್ಮ ತಲೆಗೆ ಮುಡಿದುಕೊಳ್ಳುವರು .
3. ಶಾಲೆ : ನಮ್ಮ ಶಾಲೆಯಲ್ಲಿ ಗುರುಗಳು ಚೆನ್ನಾಗಿ ಪಾಠ ಮಾಡುತ್ತಾರೆ .
ನಾವು ಶಾಲೆಗೆ ಸಮವಸ್ತ್ರವನ್ನು ಧರಿಸಿಕೊಂಡು ಹೋಗುತ್ತೇವೆ .
ಭಾಷಾಭ್ಯಾಸ
ಅ ) ಈ ವಾಕ್ಯದಲ್ಲಿ ಬರುವ ಲಿಂಗ ಸೂಚಕ ಪದಗಳನ್ನು ಗಮನಿಸಿ ಬಿಟ್ಟಿರುವ ಸ್ಥಳವನ್ನು ತುಂಬು .
ಮಾದರಿ : ಹುಡುಗ ಕಲ್ಲು ಎಸೆಯುವನು ಹುಡುಗಿ ಕಲ್ಲು ಎಸೆಯುವಳು .
1. ಗೆಳೆಯ ಆಡಲು ಕಾಯುತ್ತಿರುವನು
ಉತ್ತರ : ಗೆಳತಿ ಆಡಲು ಕಾಯುತ್ತಿರುವಳು
2. ತುಂಟ ಕಲ್ಲು ಎಸೆವನು .
ಉತ್ತರ : ತುಂಟಿ ಕಲ್ಲು ಎಸೆವಳು .
3. ಅವನು ಊರಿಗೆ ಬಂದನು .
ಉತ್ತರ : ಅವಳು ಊರಿಗೆ ಬಂದಳು .
4. ಅಪ್ಪ ಕೆಲಸಕ್ಕೆ ಹೋದನು .
ಉತ್ತರ : ಅಮ್ಮ ಕೆಲಸಕ್ಕೆ ಹೋದಳು
ಭಾಷಾ ಚಟುವಟಿಕೆ
ಅ ) ಈ ಶಬ್ದಗಳಿಗೆ ಮಾದರಿಯಂತೆ ಪ್ರಾಸಪದ ಬರೆಯಿರಿ .
ಮಾದರಿ : ಬಾರಿ – ಹಾರಿ , ಸೇರಿ – ಮಾರಿ
1. ನಾನು – ನೀನು ಅವನು – ಸೀನು
2. ದೂರ – ಹತ್ತಿರ ಸಮರ – ಮಧುರ
ಆ ) ಬಿಡಿಸಿ ಬರೆದಿರುವುದನ್ನು ಜೋಡಿಸಿ ಬರೆ .
ಮಾದರಿ : ಕಾಯುತ + ಇರುವೆನು = ಕಾಯುತಿರುವೆನು .
1. ಬರುತ + ಇರುವೆನು = ಬರುತಿರುವೆನು .
2. ನೋಡುತ + ಇರುವೆನು = ನೋಡುತಿರುವೆನು .
3. ವಾಸಿಸುತ + ಇರುವೆನು = ವಾಸಿಸುತಿರುವೆನು .
0 Comments