ವಸಂತ ಮುಖ ತೋರಲಿಲ್ಲ
೧.ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ ?
ಉತ್ತರ: ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ.
೨.ಅಮ್ಮ ಎಲ್ಲಿ ಮಲಗಿದ್ದಾಳೆ?
ಉತ್ತರ: ಅಮ್ಮ ಗುಡಿಸಿಲಿನಲ್ಲಿ ಮಲಗಿದ್ದಾಳೆ.
೩. ಯಾರಿಗೆ ವಸಂತ ಮುಖ ತೋರಲಿಲ್ಲ?
ಉತ್ತರ: ಕಮ್ಮಾರ, ನೇಕಾರ, ಕುಂಬಾರ, ಕೇರಿಯ ಮಾರ ಮತ್ತು ಪುಟ್ಟಿಗೆ ವಸಂತ ಮುಖ ತೋರಲಿಲ್ಲ.
೪.ಪುಟ್ಟಿಯ ಪ್ರಶ್ನೆಗಳೇನು?
ಉತ್ತರ: ಗುಡಿಸಿಲೊಳಗೆ ಬರಲು ವಸಂತ ಹೆದರಿದನೆ? ಹರಿದ ಚಿಂದಿ ಬಟ್ಟೆಗಳನ್ನು ಕಂಡು ಅವನು ಮರುಗಿದನೆ? ಇವು ಪುಟ್ಟಿಯ ಪ್ರಶ್ನೆಗಳಾಗಿವೆ.
೫.ಈ ಕವನದಲ್ಲಿ ಪ್ರಕೃತಿಯ ಸಂಭ್ರಮ ಹೇಗೆ ವ್ಯಕ್ತವಾಗಿವೆ?
ಉತ್ತರ: ಮಾವಿನ ಮರಗಳು ಮೈತುಂಬಿ ನಿಂತಿವೆ. ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರಾಡುತ್ತಿವೆ. ಕೊಗಿಲೆಗಳು ಮನತುಂಬಿ ಇಂಪಾಗಿ ಹಾಡುತ್ತಿವೆ. ಕಡಲು ಉಕ್ಕಿ ಹರಿಯುತ್ತಿವೆ. ಮಲ್ಲಿಗೆ ಹೂವು ಮುಗುಳುನಗೆ ಬೀರಿವೆ. ಹೊಳೆಯುವ ರಂಗೋಲಿಯಲ್ಲಿ ಬಾಲರವಿ ಥಳಥಳಿಸುತ್ತಿದ್ದಾನೆ. ಈ ರೀತಿ " ವಸಂತ ಮುಖ ತೋರಲಿಲ್ಲ" ಕವನದಲ್ಲಿ ಪ್ರಕೃತಿಯ ಸಂಭ್ರಮ ವ್ಯಕ್ತವಾಗಿದೆ.
0 Comments