ಗೊಂಬೆ ಕಲಿಸುವ ನೀತಿ
ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಜೀವನದಲ್ಲಿ ಸೋತವರಿಗೆ ಗೊಂಬೆಯು ಕೊಡುವ ಧೈರ್ಯವೇನು?
ಜೀವನದಲ್ಲಿ ಎಷ್ಟೇ ಏಳು-ಬೀಳುಗಳು ಬಂದರೂ ಸೋಲದೆ, ತಲೆ ಬಾಗದೆ ನಗುನಗುತಾ ಇರಬೇಕು ಎಂದು ಗೊಂಬೆಯು ಜೀವನದಲ್ಲಿ ಸೋತವರಿಗೆ ಧೈರ್ಯ ಕೊಡುತ್ತದೆ.
೨. ಗೊಂಬೆಯು ಹೇಗೆ ತೂಗುತ್ತಿರುತ್ತದೆ?
ಕಷ್ಟವೇ ಇರಲಿ, ಸುಖವೇ ಇರಲಿ ಅಳುಕದೆ ಆಡಿ ತೂಗುತ್ತಿರುತ್ತದೆ.
೩.ಗೊಂಬೆಯು ಹೇಳುವ ನೀತಿಯ ಸಾರಾಂಶವೇನು?
ಜೀವನದಲ್ಲಿ ಎಷ್ಟೇ ಎಡರು-ತೊಡರುಗಳು, ಬಡತನ- ಸಿರಿತನ ಬಂದರೂ, ಅಳುಕದೆ ಅಂಜದೆ ತನ್ನ ಕಷ್ಟಗಳನ್ನು ನುಂಗಿ ಇತರರಿಗೆ ಒಳ್ಳೆಯದಾಗುವಂತೆ ಗೊಂಬೆ ತೋರಿಸಿಕೊಡುತ್ತದೆ.
೪. ಗೊಂಬೆಯು ನಿಶ್ಚಲವಾಗುವುದು ಯಾವಾಗ?
ಆಡಿಸುವಾತ ಅಂದರೆ ಜೀವ ತುಂಬಿದ ದೇವರ ಕೈ ಸೋತಾಗ ಗೊಂಬೆಯು ನಿಶ್ಚಲವಾಗುವುದು.
೫.ತಾವು ಕಷ್ಟಪಟ್ಟರೂ ಲೋಕಕ್ಕೆ ಉಪಕಾರ ಮಾಡುವ ಮೂರು ಸಂಗತಿಗಳು ಯಾವುವು?
ಮೈಯನು ಹಿಂಡಿ ಸಿಹಿ ಕೊಡುವ ಕಬ್ಬು, ತೇಯುತ್ತಿದ್ದರೂ ಪರಿಮಳ ನೀಡುವ ಗಂಧ ಮತ್ತು ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪ. ಇವು ತಾವು ಕಷ್ಟಪಟ್ಟರೂ ಲೋಕಕ್ಕೆ ಉಪಕಾರ ಮಾಡುತ್ತದೆ.
0 Comments