ಈಸೂರ ಸ್ವಗತ
ಅ ) ಒಂದು ಪದ / ವಾಕ್ಯದಲ್ಲಿ ಉತ್ತರ ಬರೆ .
1. ಈಸೂರು ಯಾವ ಜಿಲ್ಲೆಯಲ್ಲಿದೆ ?
ಉತ್ತರ : ಈಸೂರು ಶಿವಮೊಗ್ಗ ಜಿಲ್ಲೆಯಲ್ಲಿದೆ .
2. ಗಾಂಧೀಜಿಯವರು ಆರಂಭಿಸಿದ ಚಳುವಳಿ ಯಾವುದು ?
ಉತ್ತರ : ಗಾಂಧೀಜಿಯವರು “ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ‘ ಎಂಬ ಚಳುವಳಿಯನ್ನು ಆರಂಭಿಸಿದರು
3. ಈಸೂರಿನ ಜನತೆ ಯಾರ ಅಧಿಕಾರವನ್ನು ಧಿಕ್ಕರಿಸಿದರು ?
ಉತ್ತರ : ಈಸೂರಿನ ಜನತೆ ಬ್ರಿಟಿಷ್ ಸರಕಾರದ ಅಧಿಕಾರವನ್ನು ಧಿಕ್ಕರಿಸಿದರು
4. ಈಸೂರಿನ ಜನತೆ ತಮ್ಮ ಹಳ್ಳಿಯನ್ನು ಏನೆಂದು ಘೋಷಿಸಿದರು ?
ಉತ್ತರ : ” ಈಸೂರಿನ ಜನತೆ ತಮ್ಮ ಹಳ್ಳಿಯನ್ನು ಸ್ವತಂತ್ರ ಹಳ್ಳಿ ಎಂದು ಸಾರಿದರು .
5. ಈಸೂರು ಜನರ ಘೋಷಣೆ ಏನು ?
ಉತ್ತರ : ‘ ಏಸೂರ ಕೊಟ್ಟರೂ ಈಸೂರ ಬಿಡೆವು ‘ – ಇದು ಈಸೂರು ಜನರ ಘೋಪಣೆ .
6. ಸ್ಥಳೀಯ ಸರ್ಕಾರದ ಅಮಲ್ದಾರ ಮತ್ತು ಪೊಲೀಸ್ ಅಧಿಕಾರಿಯ ಹೆಸರೇನು ?
ಉತ್ತರ : ಸಾಹುಕಾರ ಜಯಣ್ಣ ಮತ್ತು ಮಲ್ಲಪ್ಪಯ್ಯ ,
7. ಅಗಸೆ ಬಾಗಿಲಿನಲ್ಲಿ ಹಾಕಿದ್ದ ಫಲಕದಲ್ಲಿ ಏನೆಂದು ಬರೆದಿತ್ತು ?
ಉತ್ತರ : ಅಗಸೆ ಬಾಗಿಲಿನಲ್ಲಿ ಹಾಕಿದ್ದ ಫಲಕದಲ್ಲಿ “ ಬೇಜವಾಬ್ದಾರಿ ಅಧಿಕಾರಿಗಳಿಗೆ ಈಸೂರಿನಲ್ಲಿ ಪ್ರವೇಶವಿಲ್ಲ . ಪ್ರವೇಶಿಸಿದರೆ … . ? ” ಎಂದು ಬರೆದಿತ್ತು .
8. ಹೊಸ ಸರ್ಕಾರದ ಅಧಿಕಾರಿಗಳು ಬ್ರಿಟಿಷ್ ಅಧಿಕಾರಿಗಳಿಗೆ ನೀಡಿದ ಆಜ್ಞೆ ಏನು ?
ಹೊಸ ಸರ್ಕಾರದ ಅಧಿಕಾರಿಗಳು ಬ್ರಿಟಿಷ್ ಅಧಿಕಾರಿಗಳಿಗೆ “ ರಾಜೀನಾಮೆ ಕೊಟ್ಟು ಗಾಂಧಿ ಟೋಪಿ ಹಾಕಿಕೊಂಡು ಈಸೂರು ಸರ್ಕಾರದಲ್ಲಿ ಕೆಲಸ ಮಾಡಬೇಕೆಂದು ಆಜ್ಞೆ ಮಾಡಿದರು .
9. ಸ್ವಗತ ಎಂದರೇನು ?
ಉತ್ತರ : ತನಗೆ ತಾನೇ ಮಾತನಾಡಿಕೊಳ್ಳುವುದಕ್ಕೆ ಸ್ವಗತ ಎನ್ನುತ್ತಾರೆ
ಆ) ಕಾರಣ ಕೊಡು
1. ಈಸೂರು ಶಿವಮೊಗ್ಗ ಜಿಲ್ಲೆಗೆ ಹೆಸರು ತಂದಿತು.
ಉತ್ರ : ಏಕೆಂದರೆ ತಮ್ಮದೇ ಸರ್ಕಾರ ರಚಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಪ್ರೇಮಿಗಳ ಊರು ಈ ಈಸೂರು
2. ಹೊಸ ಸರ್ಕಾರದಲ್ಲಿ ಮಕ್ಕಳನ್ನು ಅಧಿಕಾರಿಗಳನ್ನಾಗಿ ಮಾಡಿದರು .
ಉತ್ತರ : ಏಕೆಂದರೆ ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ಒಳಗೊಂಡ ತಮ್ಮದೇ ಸರ್ಕಾರವನ್ನು ರಚಿಸಿ ಊರ ರಕ್ಷಣೆಗೆ ನಿಂತರು .
ಇ ) ಬಿಟ್ಟ ಸ್ಥಳವನ್ನು ಸರಿಯಾದ ಪದದಿಂದ ತುಂಬು .
1. ಅಧಿಕಾರಿಗಳು ಕಂದಾಯ ವಸೂಲಿಗೆ ……….. ಪುಸ್ತಕಗಳೊಂದಿಗೆ ಬಂದರು .
ಉತ್ತರ : ಖಾತೆ – ಕಿರ್ದಿ
2. ದೇವಸ್ಥಾನದ ಮುಂದೆ ……….. ಸಭೆ ನಡೆಸಿದರು
ಉತ್ತರ : ಗುಪ್ತ
3. ಅವರಿಗೆ ಐವತ್ತು ರೂಪಾಯಿ ……….. ವಿಧಿಸಲಾಯಿತು .
ಉತ್ತರ : ದಂಡ
ಈ ) ಸರಿ ತಪ್ಪು ಗುರುತಿಸು .
1. ಪಟೇಲ್ ಚನ್ನಬಸವಯ್ಯ ಮತ್ತು ಶಾನುಭೋಗ ರಂಗನಾಥರಾವ್ ಸ್ವತಂತ್ರ ಸರ್ಕಾರದ ಅಧಿಕಾರಿಗಳು . [ X ]
2. ಬ್ರಿಟಿಷ್ ಅಧಿಕಾರಿಗಳು ಗ್ರಾಮ ಪವೇಶಿಸದಂತೆ ಜನರು ಪ್ರತಿಭಟಿಸಿದರು . [ ✓ ]
3. ಈಸೂರಿನ ಸ್ವತಂತ್ರ ಸರ್ಕಾರದ ರಚನೆಯನ್ನು ತಿಳಿದ ಬ್ರಿಟಿಷ್ ಅಧಿಕಾರಿಗಳು ಸಂತಸಗೊಂಡರು. [ X]
ಉ ) ವಿರುದ್ಧಾರ್ಥಕ ಪದಗಳನ್ನು ಹೊಂದಿಸಿ ಬರೆ .
ಅ ಆ ಉತ್ತರ
ಆರಂಭ ಹೇಡಿ ಮುಕ್ತಾಯ
ಪ್ರವೇಶ ಗೆಲುವು ನಿರ್ಗಮನ
ಸೋಲು ನಿರ್ಗಮನ ಗೆಲುವು
ಧೀರ ಮುಕ್ತಾಯ ಹೇಡಿ
ಅ ) ಕೊಟ್ಟಿರುವ ವಾಕ್ಯಗಳನ್ನು ನಕಲು ಮಾಡು .
1. ಏಸೂರ ಕೊಟ್ಟರೂ ಈಸೂರು ಬಿಡೆವು
ಉತ್ತರ : ಏಸೂರ ಕೊಟ್ಟರೂ ಈಸೂರು ಬಿಡೆವು .
2. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ .
ಉತ್ತರ : ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ,
3. ಬೇಜವಾಬ್ದಾರಿ ಅಧಿಕಾರಿಗಳಿಗೆ ಈಸೂರಿಗೆ ಪ್ರವೇಶವಿಲ್ಲ .
ಉತ್ತರ : ಸರಿಯಾದ ಬೇಜವಾಬ್ದಾರಿ ಅಧಿಕಾರಿಗಳಿಗೆ ಈಸೂರಿಗೆ ಪ್ರವೇಶವಿಲ್ಲ .
ಆ ) ಇಲ್ಲಿ ಕೊಟ್ಟಿರುವ ವಾಕ್ಯಗಳನ್ನು ಸರಿಯಾದ ಕ್ರಮದಲ್ಲಿ ಶುದ್ಧವಾಗಿ ಬರೆ .
1. ಆಳುತ್ತಿದ್ದರು ಹಿಂದೆ ಬ್ರಿಟಿಷರು ಭಾರತವನ್ನು
ಉತ್ತರ : ಹಿಂದೆ ಬ್ರಿಟಿಷರು ಭಾರತವನ್ನು ಆಳುತ್ತಿದ್ದರು .
2. ಸ್ವಾತಂತ್ರ್ಯ ಈಸೂರಿನವರು ಪೇಮಿಗಳು
ಈಸೂರಿನವರು ಸ್ವಾತಂತ್ರ ಪೇಮಿಗಳು .
ಆ ) ಆವರಣದಲ್ಲಿ ಕೊಟ್ಟಿರುವ ಸೂಕ್ತ ಪದ ಆರಿಸಿ ಮಾದರಿಯಂತೆ ಬಹುವಚನ ಪದಗಳನ್ನು ಬರೆ.
( ಅಣ್ಣಂದಿರು, ತಮ್ಮಂದಿರು, ಚಿಕ್ಕಮ್ಮಂದಿರು, ಚಿಕ್ಕಪ್ಪಂದಿರು, ತಮ್ಮಂದಿರು, ಮಾವಂದಿರು, ಅಜ್ಜಂದಿರು)
ಮಾದರಿ : ಅಕ್ಕ – ಅಕ್ಕಂದಿರು
ಉತ್ತರ :
ಅಣ್ಣ – ಅಣ್ಣಂದಿರು ,
ತಮ್ಮ – ತಮ್ಮಂದಿರು
ಚಿಕ್ಕಮ್ಮ– ಚಿಕ್ಕಮ್ಮಂದಿರು
ಅಜ್ಜ – ಅಜ್ಜಂದಿರು
ಮಾವ – ಮಾವಂದಿರು ,
ಚಿಕ್ಕಪ್ಪ – ಚಿಕ್ಕಪ್ಪಂದಿರು
ಭಾಷಾಭ್ಯಾಸ
ಅ ) ಇಲ್ಲಿ ಕೊಟ್ಟಿರುವ ಕೆಲವು ಅನ್ಯ ದೇಶೀಯ ಶಬ್ದಗಳನ್ನು ಓದಿ ತಿಳಿ .
ಅರೇಬಿಕ್ ಪದ : ಖಾತೆ ಕಿರ್ದಿ , ಅಮಲಾರ , ಮೊಕದ್ದಮೆ , ಕಚೇರಿ , ಕುರ್ಚಿ ,
ಇಂಗ್ಲಿಷ್ : ಸ್ಕೂಟರ್ , ಬಕೆಟ್ , ನಿಕ್ಕರ್ , ಪ್ಯಾಂಟ್ , ಬ್ಯಾಂಕ್
ಹಿಂದೂಸ್ಥಾನಿ : ಟೋಪಿ , ಗಡಿಯಾರ , ಗಾಡಿ , ಗಿರಾಕಿ , ಗಾಬರಿ
ಆ ) ನುಡಿಗಟ್ಟುಗಳ ಅರ್ಥ ತಿಳಿ .
ನುಡಿಗಟ್ಟು ಅರ್ಥ ನುಡಿಗಟ್ಟು ಅರ್ಥ
ಎತ್ತಿದ ಕೈ ಪ್ರವೀಣ ಎಳ್ಳಷ್ಟು ಅತ್ಯಲ್ಪ
ಕಬ್ಬಿಣದ ಕಡಲೆ ಕಠಿಣವಾದ ವಿಷಯ ರೈಲುಬಿಡು ಸುಳ್ಳುಹೇಳು
ತಲೆಹಾಕು ಮಧ್ಯ ಪ್ರವೇಶಿಸು ಕಾಲುತೆಗೆ ಹೊರಡು
ಇ ) ವಾಕ್ಯದಲ್ಲಿನ ಬಿಟ್ಟ ಸ್ಥಳಗಳನ್ನು ಮೇಲೆ ಕೊಟ್ಟಿರುವ ನುಡಿಗಟ್ಟುಗಳಲ್ಲಿ ಸೂಕ್ತವಾದುದನ್ನು ಆರಿಸಿ ತುಂಬಿ ಬರೆ.
1. ರಾಜು ಕೆಲಸ ಮಾಡುವುದರಲ್ಲಿ ……….
ಉತ್ತರ : ಎತ್ತಿದ ಕೈ
2. ಅವರು ಮಾತನಾಡುವಾಗ ನಾನು ಅನವಶ್ಯಕವಾಗಿ ……….
ಉತ್ತರ : ತಲೆ ಹಾಕುವುದಿಲ್ಲ .
3. ಕೆಲವರು ತಮಗೆ ಗೊತ್ತಿಲ್ಲದಿದ್ದರೂ ಸುಮ್ಮನೆ ……….
ಉತ್ತರ : ರೈಲು ಬಿಡುವರು
4. ಅಮ್ಮ ಕೆಲಸ ಹೇಳಿದರೆ ನನ್ನ ತಮ್ಮ……….
ಉತ್ತರ : ಕಾಲು ತೆಗೆಯುವನು .
0 Comments