ತಿರುಕನ ಕನಸು
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1 . ತಿರುಕನು ಎಲ್ಲಿ ಕನಸನ್ನು ಕಂಡನು ?
ಉತ್ತರ : ತಿರುಕನು ಮುರುಕು ಧರ್ಮಶಾಲೆಯಲ್ಲಿ ಒರಗಿರುವಾಗ ( ಮಲಗಿರುವಾಗ ) ಬಂದ ಕನಸನ್ನು ಕಂಡನು .
2 . ಆನೆಯು ಯಾರ ಕೊರಳಿಗೆ ಮಾಲೆಯನ್ನ ಹಾಕಿತು ?
ಉತ್ತರ : ಆನೆಯು ತಿರುಕನ ಕೊರಳಿಗೆ ಮಾಲೆಯನ್ನು ಹಾಕಿತು .
3 . ತಿರುಕನಿಗೆ ಪಟ್ಟವನ್ನು ಕಟ್ಟಿದವರು ಯಾರು ?
ಉತ್ತರ : ತಿರುಕನಿಗೆ * ಅರಮನೆಯ ಅಧಿಕಾರಗಳು ಪಟ್ಟವನ್ನು ಕಟ್ಟಿದರು .
4 . ರಾಜ ಲೋಲನಾಗಿ ಮಂತ್ರಿಗೆ ಏನೆಂದು ನುಡಿದನು ?
ಉತ್ತರ : ರಾಜ ( ಲೋಲನಾಗಿ ) ಸಂತೋಷದಿಂದ ಮಂತ್ರಿಗೆ ತನ್ನ
ಮಕ್ಕಳಿಗೆ ಮದುವೆ ಮಾಡಲು ಸಂಬಂಧವನ್ನು ನೋಡಲು ಹೇಳಿದನು .
5 . ‘ ತಿರುಕನ ಕನಸು ‘ ಈ ಪದ್ಯವನ್ನು ಬರೆದ ಕವಿ ಯಾರು ?
ಉತ್ತರ : ‘ ತಿರುಕನ ಕನಸು ‘ ಪದ್ಯವನ್ನು ಮುಪ್ಪಿನ ಷಡಕ್ಷರಿಯವರು ಬರೆದಿದ್ದಾರೆ .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮುಾರು ವಾಕ್ಯಗಳಲ್ಲಿ ಉತ್ತರಿಸಿ .
1 . ಕರಿಯ ಕೈಗೆ ಕುಸುಮ ಮಾಲೆಯನ್ನು ಕೊಡಲು ಕಾರಣವೇನು ?
ಉತ್ತರ : ಆ ಪಟ್ಟಣದ ರಾಜನು ಸತ್ತಾಗ ಅವನಿಗೆ ಮಕ್ಕಳಿಲ್ಲದ್ದರಿಂದಕ ಪಟ್ಟದಾನೆಯ ಸೊಂಡಿಲುನಿರ್ಧಾರಕ್ಕೆ ಬರುತ್ತಾರೆ . ಕೊರಳಿಗೆ ಹಾಕುವುದೋ ಕರಿಯ ( ಆನೆಯ )
2 . ತಿರುಕ ಪೊಡವಿಯಾಣ್ಮನಾದುದು ಹೇಗೆ ?
ಉತ್ತರ :ಪಟ್ಟದಾನೆಯು ತನ್ನ ಸೊಂಡಿಲಿಗೆ ತೊಡರಿಸಿದ ಮಾಲೆಯನ್ನು ತೆಗೆದುಕೊಂಡು ಎಲ್ಲಾ ಕಡೆಯೂ ಸುತ್ತಿ ,ಕೊನೆಗೆ ತಿರುಕನ ಕೊರಳಿಗೆ ಹಾಕುತ್ತದೆ . ನಿರ್ಣಯದಂತೆ ಅರಮನೆಯವರು ತಿರುಕನನ್ನು ರಾಜ್ಯದ ರಾಜನನ್ನಾಗಿ ಮಾಡುತ್ತಾರೆ . ಹೀಗೆ ತಿರುಕನು ಪೊಡವಿಯಾಣ್ಮನಾದನು .
3 . ಕನಸು ಕಾಣುತ್ತಿದ್ದ ತಿರುಕನು ಹೆದರಿ ಏಕೆ ಕಣ್ಣು ತೆರೆದನು ?
ಉತ್ತರ : ಸುಖದ ಸುಪ್ಪತ್ತಿಗೆಯಲ್ಲಿರುವಾಗ ಎಂದರೆ ಎಲ್ಲಾ ರೀತಿಯ ಸುಖ ಸಂತೋಷವನ್ನು ಹೊಂದಿರುತ್ತಾನೆ . ರಾಣಿಯರು , ಮಕ್ಕಳು ಅವರ ಜೊತೆಗಾರರಾದ ಮದುಮಕ್ಕಳು ಹೀಗೆ ಸಂತೋಷ ಸಂಭ್ರಮದಲ್ಲಿರುವಾಗಲೇ ಶತ್ರು ಸೈನ್ಯದವರ ,ಮಕ್ಕಳು ಅ ಬಂದು ಆಕ್ರಮಣ ಮಾಡುತ್ತಾರೆ .ಆಗ ತಿರುಕನು ಕಣ್ಣು ತೆರೆಯುತ್ತಾನೆ .
ಇ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ.
1 . ತಿರುಕನು ರಾಜನಾದದ್ದುಹೇಗೆ ?
ಉತ್ತರ : ತಿರುಕನು ಎಂದಿನಂತೆ ಹಾಳುಬಿದ್ದ , ಮುರಿದ ಬಿದ್ದ ಧರ್ಮಶಾಲೆಯ ಗೋಡೆಯ ಬದಿಗೆ ಮಲಗಿರುತ್ತಾನೆ ಆ ಊರಿನ ರಾಜ ಸತ್ತು ಹೋಗಿ ಅವನಿಗೆ ಮಕ್ಕಳಿಲ್ಲದಿರುವುದರಿಂದ ಪಟ್ಟದಾನೆಯ ಸೊಂಡಿಲಿಗೆ ಕುಸುಮಮಾಲೆಯನ್ನು ಕೊಟ್ಟು ಕಳುಹಿಸುತ್ತಾರೆ . ಅದು ಇವನ ಕೊರಳಿಗೆ ಕುಸುಮಮಾಲೆಯನ್ನು ಹಾಕುತ್ತದೆ . ಅದರ ಪ್ರಕಾರ ಅವನಿಗೆ ರಾಜ್ಯ ಪಟ್ಟವನ್ನು ಕಟ್ಟಿ ರಾಜನನ್ನಾಗಿ ಮಾಡುತ್ತಾರೆ . ಹೀಗೆ ತಿರುಕನು ರಾಜನಾಗುತ್ತಾನೆ .
2 . ತಿರುಕನು ಕನಸಿನಲ್ಲಿ ರಾಜ್ಯವನ್ನು ಆಳಿದ ರೀತಿಯನ್ನು ವಿವರಿಸಿ .
ಉತ್ತರ : ತಿರುಕನು ಕನಸಿನಲ್ಲಿಯೇ ತಾನು ರಾಜನಾದುದಕ್ಕೆ ಹೆಮ್ಮೆಪಟ್ಟುಕೊಳ್ಳುತ್ತಾನೆ . ರಾಜನಾದ ಮೇಲೆ ಇತರ ರಾಜರು ಇವನಿಗೆ ತಮ್ಮ ಕನ್ನೆಯರನ್ನು ಕೊಟ್ಟು ಮದುವೆ ಮಾಡುತ್ತಾರೆ . ರಾಜ್ಯವನ್ನು ಚೆನ್ನಾಗಿ ಆಳುತ್ತಾ , ತನ್ನ ಪತ್ನಿಯರೊಂದಿಗೆ ಸುಖವಾಗಿರುತ್ತಾನೆ . ರಾಜ್ಯಭಾರ ಮಾಡುತ್ತಾ ಕುಳಿತುಕೊಂಡಿರುವಾಗ ಇವನ ಮಕ್ಕಳು ಬಂದು ತೊಡೆಯೇರಿ ಕುಳಿತು ಆಟವಾಡುತ್ತಿದ್ದರು .ಈ ರೀತಿ ಚೆನ್ನಾಗಿ ರಾಜ್ಯವನ್ನಾಳುತ್ತಿದ್ದನು .
ಈ ) ಈ ಪದ್ಯಭಾಗವನ್ನು ಪೂರ್ಣಗೊಳಿಸಿ ,
ನಡೆದು ಯಾರ ಕೊರಳಿನಲ್ಲಿ
ತೊಡರಿಸುವುದೊ ಅವರ ಪಟ್ಟ
ಕೊಡೆಯರನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು
ಉ . ಮಾದರಿಯಂತೆ ಕಟ್ಟಿರುವ ಪದಗಳನ್ನು ಬಿಡಿಸಿ ಬರೆಯಿರಿ .
ಮಾದರಿ : ತಿರುಕನೋರ್ವನೂರಮುಂದೆ ತಿರುಕನು + ಒರ್ವನು + ಊರ + ಮುಂದೆ
1. ಒರಗಿರಲೊಂದು = ಒರಗಿ + ಇರುತ್ತಲಿ + ಒಂದು ,
2. ವರಕುಮಾರರಿಲ್ಲದಿರಲು = ವರ ಕುಮಾರರು + ಇಲ್ಲದೆ + ಇರಲು
3. ಮೊಡವಿಯಾನಾದನೆಂದು=ಮೊಡವಿಯ+ ಅಣ್ಯನು +ಆದೆನು + ಎಂದು
4. ನಿಮ್ಮಸುಖದೊಳಿರಲವಂಗೆ = ನಿಪ್ಪ ಸುಖದೊ +ಇರಲು+ ಅವಂಗೆ
0 Comments