Recent Posts

ಅಮ್ಮ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

  ಅಮ್ಮ

ಕೃತಿಕಾರರ ಪರಿಚಯ

– ಯು.ಆರ್. ಅನಂತಮೂರ್ತಿ ಕನ್ನಡ ಸಾಹಿತ್ಯದ ಪ್ರಮುಖ ಸಾಹಿತಿಗಳು, ಚಿಂತಕರು ಹಾಗೂ ವಿಮರ್ಶಕರೆಂದು ಪ್ರಖ್ಯಾತರಾದವರು ಡಾ|| ಯು.ಆರ್. ಅನಂತಮೂರ್ತಿಯವರು ಇವರ ಪೂರ್ಣ ಹೆಸರು ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ. ಇವರ ಕಾಲ ಕ್ರಿ.ಶ. 1932-2014 . ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದಲ್ಲಿ ಜನಿಸಿದರು. ಇವರ ಪ್ರಮುಖ ಕೃತಿಗಳು ಸಂಸ್ಕಾರ, ಭವ, ಅವಸ್ಥೆ, ಭಾರತೀಪುರ ಮುಂತಾದ ಕಾದಂಬರಿಗಳು, ಆವಾಹನೆ (ನಾಟಕ) ಮೌನಿ, ಪ್ರಶ್ನೆ, ಎಂದೆಂದು  ಮುಗಿಯದ   ಕಥೆ – ಕಥಾ ಸಂಕಲನಗಳು, ಮಿಥುನ, ಅಜ್ಜನ ಹೆಗಲ ಸುಕ್ಕುಗಳು ಮುಂತಾದ ಕವನಸಂಕಲನಗಳು ಹೀಗೆ ವಿವಿಧ ಸಾಹಿತ್ಯ ಪ್ರಕಾರದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಗೌರವ ಡಿ.ಲಿಟ್. ರಾಜ್ಯೋತ್ಸವ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಭೂಷಣ ಪುರಸ್ಕಾರ, 1994ರಲ್ಲಿ ‘ಭಾರತೀಯ ಜ್ಞಾನಪೀಠ ಪ್ರಶಸ್ತಿ’ ಪುರಸ್ಕಾರಗಳು ಲಭಿಸಿವೆ. 2002ರಲ್ಲಿ ತುಮಕೂರಿನಲ್ಲಿ ನಡೆದ 66ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪ್ರಸ್ತುತ ಗದ್ಯಭಾಗವನ್ನು ಯು.ಆರ್. ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ಕೆಮಾಡಿಕೊಳ್ಳಲಾಗಿದೆ.
 

ಆಶಯ ಭಾವ
‘ಮನೆಯೇ ಮೊದಲ ಪಾಠಶಾಲೆ, ಜನನಿತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರೇ ಧನ್ಯರು’. ಎನ್ನುವ ಮಾತು ಸರ್ವಕಾಲಿಕ ಸತ್ಯ ಹಾಗೂ ನೀತಿಯುಕ್ತ ನುಡಿಯಾಗಿದೆ. ಮಕ್ಕಳ ಬದುಕಿನಲ್ಲಿ ಅಮ್ಮನ ಪಾತ್ರ ಎಷ್ಟು ಮಹತ್ವದ್ದು ಎನ್ನುವುದು ಪ್ರತಿಯೊಬ್ಬರಿಗೂ ವೇದ್ಯವಾಗಿಯೇ  ಇರುತ್ತದೆ. ಮಾನವನ ಸಂಸ್ಕಾರಯುತ ಜೀವನ ಆರಂಭವಾಗುವುದೇ ತಾಯಿಯ ಮಡಿಲಿನಲ್ಲಿ. ಆಕೆಯ ನಡೆನುಡಿ ಸಜ್ಜನಿಕೆ ಮಕ್ಕಳ ಬಾಲ್ಯದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಅಮ್ಮ ಸಂಸ್ಕಾರವನ್ನು ನೀಡಿದರೆ, ಜನಿಸಿದ ಈ ತಾಯ್ನೆಲ, ಈ ಪರಿಸರವನ್ನಪ್ಪಿ ಬೆಳೆದ ಬಾಲ್ಯದ ನೆನಪುಗಳು ಮಾನವನ ಜೀವನದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತುತ್ತವೆ. ಈ ಎಲ್ಲಾ ನೆನಪುಗಳ ಬುತ್ತಿಯನ್ನು ಈ ಮೂಲಕ ಕಟ್ಟಿಕೊಡುವುದೇ ಲೇಖಕರ ಆಶಯವಾಗಿದೆ.

ಪದಗಳ ಅರ್ಥ
  ಅಂಚು - ದಡ, ತೀರ;
ಆತಂಕ - ಭಯ, ಅಡ್ಡಿ;
ಕಡ - ಸಾಲ;
ಕಾಸು - ಹಣ, ದುಡ್ಡು;  
ಕೊಂಚ  -  ಅಲ್ಪ,  ಸ್ವಲ್ಪ  ;  
ಚರಟ-ಗಸಿ,  ಕಾಫಿ  ಸೋಸಿದ  ನಂತರದ  ಉಳಿಕೆ;  ಚಿಮಣಿ ದೀಪ - ಸೀಮೆಎಣ್ಣೆ ದೀಪ ;
ಚೌಲ - ಮುಡಿತೆಗೆಸು, ತಲೆಕೂದಲನ್ನು  ತೆಗಿಸುವುದು; ಜೋನಿಬೆಲ್ಲ  -  ನೀರುಬೆಲ್ಲ;  
ದೂವರ -  ಗರಿಕೆ;  
ದೈನಿಕ  -  ದಿನನಿತ್ಯ,  ಪ್ರತಿದಿನ;  
ನಸುಕು -  ಮುಂಜಾನೆ,  ಬೆಳಗಿನ  ಸಮಯ;
 ನಿವಾರಣೆ  -  ದೂರಮಾಡು,  ಹೋಗಲಾಡಿಸು;  
ನೆವ  -  ಕಾರಣ,  ನೆಪ.  
ಪಟ್ಟಾಂಗ  -  ಹರಟೆ,  ಮಾತುಕತೆ;  
ಯಥೇಚ್ಛ  - ಬೇಕಾದಷ್ಟು,  ಮನಸ್ಸಿಗೆ  ಬಂದಷ್ಟು;  ಸಂಗತಿ  -  ವಿಷಯ;  
ಹಸನ್ಮುಖಿ  -  ನಗುಮೊಗ;
 

ಅಭ್ಯಾಸ


ಅ.  ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  
1. ಬಾಲ್ಯದಲ್ಲಿ ಲೇಖಕರು ಭಯವಾದಾಗ ಯಾವ ಮಂತ್ರವನ್ನು ಹೇಳಿಕೊಳ್ಳುತ್ತಿದ್ದರು?   
2. ಲೇಖಕರ ಮೊದಲ ವಿದ್ಯಾಗುರು ಯಾರು?
 3. ಸಣ್ಣ ಕುಳಿಯೊಳಗಿನ ಕಪ್ಪುಹುಳುವನ್ನು ಯಾವ ಹೆಸರಿನಿಂದ ಕರೆಯುತ್ತಾರೆ?  
4. ಲೇಖಕರ ಬಾಲ್ಯದ ಪುನರಾವರರ್ತನೆ  ದೈನಿಕ ಯಾವುದಾಗಿತ್ತು?  
5. ತಿಂಗಳಿಗೊಮ್ಮೆ ಕಾಫಿ ಬೀಜವನ್ನು ತಂದು ಕೊಡುತ್ತಿದ್ದವರು ಯಾರು?

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
 1. ಲೇಖಕರ ಅಕ್ಷರಾಭ್ಯಾಸ ಆರಂಭವಾದದ್ದು ಹೇಗೆ?
 2. ಮಳೆಗಾಲದ ಆರಂಭಕ್ಕೆ ಮುನ್ನ ಮಲೆನಾಡಿನಲ್ಲಿ ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು?  
3. ನಸುಕಿನಲ್ಲಿ ಲೇಖಕರಿಗೆ ಖುಷಿ ಕೊಡುತ್ತಿದ್ದ ಸಂಗತಿಗಳಾವುವು?  
4. ವಿಶೇಷ ಪದಾರ್ಥಗಳನ್ನು ಕಡವಾಗಿ ಪಡೆಯುತ್ತಿದ್ದ ಹಾಗೂ ತೀರಿಸುತ್ತಿದ್ದ ಬಗೆ ಹೇಗೆ?   

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.  
1. ಮಲೆನಾಡಿನಲ್ಲಿ ಹುಲಿಗಳಿಂದಾಗುತ್ತಿದ್ದ ತೊಂದರೆಯ ಬಗ್ಗೆ ಹೇಗೆ ವಣರ್ಿಸಲಾಗಿದೆ?  
 2. ಒರಿಜಿನಲ್ ಹಾಗೂ ಚರಟದ ಕಾಫಿಯನ್ನು ಸಿದ್ಧಗೊಳಿಸುತ್ತಿದ್ದ ಬಗೆಯನ್ನು ವಿವರಿಸಿ.  

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ  
2. ನನಗೂ ಹೆಣ್ಣು ಮಕ್ಕಳಂತೆ ಉದ್ದ ಕೂದಲಿತ್ತು
3. ಇವತ್ತು ಮೇಷ್ಟ್ರಿಗೆ ಜ್ವರ ಬರಲಿ ದೇವರೇ  
4. ನನಗೂ ಎಲ್ಲೋ ಒಂದೊಂದು ಸಾರಿ ಈ ಕಾಫಿಯ ಪುಣ್ಯ ಸಿಗುತ್ತಿತ್ತು  
5. ನನಗೆ ಚರಟದಲ್ಲಿ ಕಾಫಿಯೋ?

ಉ. ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ    
1.  ಅಧಿಕೃತವಾಗಿ ಅನಂತಮೂರ್ತಿಯವರ ಮೊದಲ ಶಿಕ್ಷಕರು __________       (ಕೃಷ್ಣಪ್ಪಯ್ಯ   ಅಮ್ಮ   ತಂದೆ   ಶೇಷಗಿರಿ)
2. ಮಳೆಗಾಲದಲ್ಲಿ ಮಲೆನಾಡಿನಲ್ಲಿ  ಯಥೇಚ್ಛವಾಗಿ ಸಿಗುತ್ತಿದ್ದ ಹಣ್ಣು _______      (ಮಾವಿನಹಣ್ಣು,   ಸೀಬೆಹಣ್ಣು,   ಹಲಸಿನ ಹಣ್ಣು,   ಬಾಳೆಹಣ್ಣು )  
3. ಪಟ್ಟಾಂಗ ಈ ಪದದ ಅರ್ಥ _________       (ಒಳ್ಳೆಯಮಾತು   ಹರಟೆ   ಪಟ್ಟಕಟ್ಟುವುದು  ಕೆಟ್ಟಮಾತು)
 4. ಕಡೆಗೋಲು ಪದವು  _________ ಸಂಧಿಗೆ ಉದಾಹರಣೆಯಾಗಿದೆ      (ಆಗಮಸಂಧಿ    ಗುಣಸಂಧಿ    ಲೋಪಸಂಧಿ   ಆದೇಶಸಂಧಿ)
 5. ಸಕ್ಕರೆ ಪದದ ತತ್ಸಮರೂಪ _________     (ಸಕ್ಕರಿ   ಸಕ್ಕಾರಿ   ಶರ್ಕರಾ   ಸರಕಾರಿ)  

ಸೈದ್ಧಾಂತಿಕ ಭಾಷಾಭ್ಯಾಸ
ವಾಕ್ಯಪ್ರಭೇದ ಮತ್ತು ಸಮಾಸಗಳ ಸ್ಥೂಲ ಪರಿಚಯಾತ್ಮಕ ವಿವರ
ವಾಕ್ಯಪ್ರಭೇದಗಳು
ವಾಕ್ಯಗಳನ್ನು ಸಾಮಾನ್ಯ, ಸಂಯೋಜಿತ ಮತ್ತು ಮಿಶ್ರವಾಕ್ಯ ಎಂಬುದಾಗಿ ಮೂರು ವಿಭಾಗ ಮಾಡಲಾಗಿದೆ.

ಸಾಮಾನ್ಯವಾಕ್ಯ :  
1. ಸುಬ್ರಹ್ಮಣ್ಯಮ್ ನಮ್ಮನ್ನು ವಿಶ್ವಾಸದಿಂದ ಸ್ವಾಗತಿಸಿದರು.         
2. ಹತ್ತನೆಯ ಶತಮಾನದವರೆಗೆ ಗಂಗರು ತಲೆಯೆತ್ತಿ ಬಾಳಿದರು.
ಈ  ಎರಡೂ  ವಾಕ್ಯಗಳು  ಒಂದೊಂದು  ಪೂರ್ಣ  ಕ್ರಿಯಾಪದದೊಡಗೂಡಿ  ಸ್ವತಂತ್ರ ವಾಕ್ಯಗಳಾಗಿವೆ.
ಹೀಗೆ - ಒಂದು ಪೂರ್ಣ ಕ್ರಿಯಾಪದದೊಡನೆ ಸ್ವತಂತ್ರ ವಾಕ್ಯವಾಗಿರುವ ವಾಕ್ಯಗಳೇ ಸಾಮಾನ್ಯವಾಕ್ಯಗಳು.

ಸಂಯೋಜಿತವಾಕ್ಯ  : 
ಪಾಂಡವರ  ಯಜ್ಞ  ತುರಗ  ಮಣಿಪುರವನ್ನು  ಪ್ರವೇಶಿಸಿತು  ;  ಆಗ ಬಭ್ರುವಾಹನನು ಅದನ್ನು ಕಟ್ಟಿ ಹಾಕಿದನು ; ಆದ್ದರಿಂದ ಬಭ್ರುವಾಹನನಿಗೂ ಅರ್ಜುನನಿಗೂ ಯುದ್ಧ ನಡೆಯಿತು. ಇಲ್ಲಿ  ಮೂರು  ಸ್ವತಂತ್ರ  ವಾಕ್ಯಗಳು  `ಆಗ,  `ಆದ್ದರಿಂದ  ಪದಗಳ  ಸಹಾಯದಿಂದ ಒಂದಕ್ಕೊಂದು ಸಂಯೋಜನೆಗೊಂಡು ಒಂದು ಪೂರ್ಣಾರ್ಥದ ವಾಕ್ಯವಾಗಿದೆ. ಹೀಗೆ - ಸ್ವತಂ ತ್ರ ವಾಕ್ಯಗಳಾಗಿ ನಿಲ್ಲಬಲ್ಲ ಎರಡು ಅಥವಾ ಹೆಚ್ಚು ಉಪವಾಕ್ಯಗಳು ಸೇರಿ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು ಸಂಯೋಜಿತ ವಾಕ್ಯ.

ಮಿಶ್ರವಾಕ್ಯ  :  ಗಾಯತ್ರಿ  ಗಾಯನಸ್ಪರ್ಧೆಯಲ್ಲಿ  ಗೆದ್ದಳಾದರೂ  ಅವಳಿಗೆ  ಬಹುಮಾನ ಸ್ವೀಕರಿಸಲು ಸಾಧ್ಯವಾಗದಿದ್ದಾಗ ಆಕೆ ತುಂಬಾ ನೊಂದುಕೊಂಡಳು.
ಇಲ್ಲಿ  `ಆಕೆ  ತುಂಬಾ  ನೊಂದುಕೊಂಡಳು  ಎಂಬ  ಪ್ರಧಾನ  ವಾಕ್ಯಕ್ಕೆ  `ಗಾಯತ್ರಿ  ಗಾಯನ ಸ್ಪರ್ಧೆಯಲ್ಲಿ ಗೆದ್ದಳು; `ಅವಳಿಗೆ ಬಹುಮಾನ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂಬ ಉಪವಾಕ್ಯಗಳು ಅಧೀನವಾಗಿ `ಮಿಶ್ರವಾಕ್ಯವಾಗಿದೆ. ಹೀಗೆ - ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅಂತಹ ವಾಕ್ಯವೇ ಮಿಶ್ರವಾಕ್ಯ.
 
ಸಮಾಸ
- ಜಯಪುರದ ಅರಮನೆ ಸುಂದರವಾಗಿದೆ.
-ರಸ್ತೆಯ ವಿಸ್ತರಣೆಗಾಗಿ  ಹೆದ್ದಾರಿಯ ಬದಿಯಲ್ಲಿರುವ ಮರಗಳನ್ನು ಕಡಿಯಲಾಗಿದೆ.
ಈ  ಏರಡು ವಾಕ್ಯಗಳಲ್ಲಿರುವ ʼಅರಮನೆ,; ಹೆದ್ದಾರಿ, ಏಂಬ ಏರಡು ಪದಗಳನ್ನುಗಮನಿಸಿದಾಗ ಅರಮನೆ  ಎಂಬ ಪದ ಅರಸನ ಮನೆ ಎಂಬ ಅರ್ಥವನ್ನೂ ಹೆದ್ದಾರಿ ಎಂಬ ಪದ  `ಹಿರಿದಾದ  ದಾರಿ  ಎಂಬ  ಅರ್ಥವನ್ನೂ  ಕೊಡುವ  ಪದಗಳೆಂದು  ತಿಳಿಯುತ್ತದೆ.  ಹೀಗೆ
- ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕನುಸಾರ ಒಟ್ಟು ಸೇರಿ ಪೂರ್ವ ಪದದ ಅಂತ್ಯದಲ್ಲಿ ವಿಭಕ್ತಿ ಪ್ರತ್ಯಯವಿದ್ದರೆ ಅದು ಲೋಪವಾಗಿ ಒಂದೇ ಪದವಾಗುವುದೇ ಸಮಾಸ
ಈ ರೀತಿ  ಸಮಾಸವಾಗುವಾಗ  ಸಂಸ್ಕೃತ  ಪದದೊಂದಿಗೆ  ಸಂಸ್ಕೃತ  ಪದವೇ  ಸೇರಬೇಕು. ಕನ್ನಡ  ಪದದೊಂದಿಗೆ  ಕನ್ನಡ  ಪದವೇ  ಸೇರಬೇಕು.  ಸಂಸ್ಕೃತ  ಪದಕ್ಕೆ  ಕನ್ನಡ,  ಕನ್ನಡ  ಪದಕ್ಕೆ ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಬಾರದು. ಒಂದು ವೇಳೆ ಇಂತಹ ಪದಗಳೊಂದಿಗೆ ಸಮಾಸವಾದರೆ ಅದನ್ನು `ಅರಿಸಮಾಸ ಎನ್ನುತ್ತಾರೆ. ಆದರೆ ಪೂರ್ವದ ಕವಿಗಳು ಪ್ರಯೋಗಿಸಿದ್ದರೆ,
ಬಿರುದಾವಳಿಗಳಾಗಿದ್ದರೆ ಮತ್ತು ಗಮಕ ಅಥವಾ ಕ್ರಿಯಾ ಸಮಾಸಗಳಾಗಿದ್ದರೆ ದೋಷವಿಲ್ಲ.  ಕನ್ನಡ ಭಾಷೆಯಲ್ಲಿ ತತ್ಪುರುಷ, ಕರ್ಮಧಾರಯ, ದ್ವಿಗು, ಅಂಶಿ, ದ್ವಂದ್ವ, ಬಹುವ್ರೀಹಿ, ಕ್ರಿಯಾ ಮತ್ತು  ಗಮಕ    ಎಂಬ  ಎಂಟು  ವಿಧದ  ಸಮಾಸಗಳು  ಬಳಕೆಯಲ್ಲಿವೆ.  ಸಮಾಸ ಪದಗಳನ್ನು ಬಿಡಿಸಿ ಬರೆಯುವ ಕ್ರಮವನ್ನು ವಿಗಹ್ರ ವಾಕ್ಯ  ಅಥವಾ ವಿಗಹ್ರಿ ಸು ವುದು  ಎನ್ನುತ್ತಾರೆ. ಉದಾ: ತೈಲದ ಬಿಂದುಗಳು = ತೈಲ ಬಿಂದುಗಳು.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1.  ವಾಕ್ಯ ಪ್ರಭೇದಗಳನ್ನು ವಿವರಿಸಿ.
2.  ಸಮಾಸ ಎಂದರೇನು?
3.  ಸಮಾಸಗಳಲ್ಲಿ ಎಷ್ಟು ವಿಧ? ಪಟ್ಟಿಮಾಡಿ.

ಕೊಟ್ಟಿರುವ ಸಾಮಾನ್ಯ ವಾಕ್ಯಗಳನ್ನು ಸಂಯೋಜಿತ ವಾಕ್ಯವಾಗಿ ಪರಿವರ್ತಿಸಿ ಬರೆಯಿರಿ.
-  ವಾಸುವಿನ ತಲೆಗೆ ಹಾಕಿದ ಎಣ್ಣೆ ಹಣೆಯ ಮೂಲಕ ಇಳಿದು ಕಣ್ಣುಗಳನ್ನು ಪ್ರವೇಶಿಸಿತು.
-  ಅವನ ಕಣ್ಣುಗಳು ಉರಿಯತೊಡಗಿದವು.
-  ಅವನು ಕಣ್ಣುಗಳನ್ನು ಬಟ್ಟೆಯಿಂದ ಉಜ್ಜತೊಡಗಿದನು.

ಪೂರಕ ಓದು

ಯು.ಆರ್. ಅನಂತಮೂರ್ತಿಯವರ ಸುರಗಿ ಆತ್ಮಕಥನವನ್ನು ಓದಿ.
 ಕುವೆಂಪುರವರ ಆತ್ಮಕಥನ ನೆನಪಿನ ದೋಣಿಯಲ್ಲಿ ಕೃತಿಯನ್ನು ಓದಿ.  

ಪಾಠದ ಸಾರಾಂಶ.


ಲೇಖಕರ ಊರಿನಲ್ಲಿ ಹುಲಿಗಳ ಕಾಟ ಬಹಳ ಇತ್ತು. ಲೇಖಕರ ತಾಯಿಗೆ ದೂರದಲ್ಲಿ ಎಲ್ಲೊ ಹುಲಿ ಕೂಗಿದರೆತಟ್ಟನೆ ತಿಳಿದು ಬಿಡುತ್ತಿತ್ತು. ಹುಲಿಗಳ ಶಬ್ದಕ್ಕೆ ತುಂಬಾ ಸೂಕ್ಷö್ಮವಾಗಿದ್ದ ಜೀವಿಗಳೆಂದರೆ ದನಗಳು. ಅವು ಹುಲಿ ಬಂದ ತಕ್ಷಣ ಗಡಗಡ ನಡುಗಲು ಶುರುಮಾಡುತ್ತಿದ್ದವು. ಕೊರಳಿನ ಘಂಟೆ ಜೋರು ಶಬ್ದ ಮಾಡುತ್ತಿದ್ದರಿಂದ ಹುಲಿ ಬಂದ ಸೂಚನೆಯು ತಿಳಿಯುತ್ತಿತ್ತು . ಲೇಖಕರ ತಾಯಿ, ಅಜ್ಜಿ, ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಮನೆಯ ಒಳಗಡೆ ಕೂತು ಹುಲಿ ಎಲ್ಲಿ ಬಂದು ಬಿಡುತ್ತದೆಯೋ ಎಂದು ಕಾಯುತ್ತಿದ್ದರು. ಇವರೆಲ್ಲರೂ ತುಂಬಾ ಭಯವಾದಾಗ “ಅರ್ಜುನಃ ಫಲ್ಗಣೋ ಪಾರ್ಥಃ ಕಿರೀಟೀ ಶ್ವೇತವಾಹನಃ” ಎಂದು ಅಜ್ಜಿ ಹೇಳಿಕೊಟ್ಟಿದ್ದ ಅರ್ಜುನನ ಮಂತ್ರವನ್ನು ಹೇಳಿದರೆ ಭಯ ನಿವಾರಣೆಯಾಗುತ್ತಿತ್ತು . ಈ ಮಂತ್ರವನ್ನು ಹೇಳುತ್ಹೇಳುತ್ತ ಎಲ್ಲರೂ ನಿದ್ದೆ ಹೋಗುತ್ತಿದ್ದೆವೆ. ಬೆಳಗ್ಗೆ ಎದು.ಕೊಟ್ಟಿಗೆಯಲ್ಲಿ ಎಲ್ಲ ದನಗಳಿವೆ ಎಂದು ಗೊತ್ತಾದಾಗ ಮನಸ್ಸಿಗೆ ಸಮಾಧಾನ. ನಿತ್ಯವು ಲೇಖಕರ ಮನೆಗೆ ಆಳುಗಳು ಬಂದಾಗ ಮಾತು ಆರಂಭವಾಗುತ್ತಿತ್ತು ಯಾವುದೋ ಹುಲಿ ಯಾವುದೋ ಮನೆಯ ದನವನ್ನು ಹಿಡೀತು. ಅವರ ಮನೆ ದನ ಹೋಯಿತು ಇವರ ಮನೆ ದನ ಹೋಯಿತು ಎಂದು ಮಾತನಾಡುವುದು ಸಾಮಾನ್ಯವಾಗಿತ್ತು. ಲೇಖಕರ ಮೊದಲ ವಿದ್ಯಾಗುರು ಅವರ ಅಮ್ಮ. ಲೇಖಕರ ತಾಯಿ ಸ್ಕೂಲ್ಗೆ ಹೋಗಿ ಅಲ್ಪಸಲ್ಪ ಓದಲು ಬರೆಯಲು ಕಲಿತ್ತಿದ್ದರು. ಲೇಖಕರ ಅಕ್ಷರಾಭ್ಯಾಸವು ಕೆರೆಕೊಪ್ಪದ ಮನೆಯಲ್ಲಿದ್ದಾಗ ಪ್ರಾರಂಭವಾಯಿತು. ಅವರ ಅಮ್ಮ ನೆಲದ ಮರಳಿನಲ್ಲಿ ಕೂರಿಸಿ ಲೇಖಕರ ಬೆರಳನ್ನು ಹಿಡಿದು ‘ಅ’ ಎಂಬ ಅಕ್ಷರವನ್ನು ಬರೆಸುತ್ತಿದ್ದರು. ಹೀಗೆ ಪ್ರತಿದಿನ ಬರೆಸುತ್ತಿದ್ದರಿಂದ ಶಾಲೆಗೆ ಹೋಗುವ ಹೊತ್ತಿಗೆ ಅನೇಕ ಅಕ್ಷರಗಳನ್ನು ಕಲಿತು ಬಿಟ್ಟಿದ್ದರು. ಹುಲಿಯ ಭಯದಿಂದ ಲೇಖಕರನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಕೃಷ್ಣಪ್ಪಯ್ಯ ಎಂಬ ಮೇಷ್ಟು  ಪಾಠವನ್ನು ಹೇಳಿಕೊಡಲು ಮನೆಗೆ ಬರುತ್ತಿದ್ದರು. ಇವರು ಬಹಳ ಶಿಸ್ತಿನ ಮೆಷ್ರ್ಟಗಿದ್ದರು . ಆದರೆ ಲೇಖಕರಿಗೆ ಓದು ಬರಹಕ್ಕಿಂತ ರಂಜದ  ಹೂವನ್ನು ತಂದು ಪೋಣಿಸಿ ದೊಡ್ಡದೊಡ್ಡ ಸರಗಳನ್ನು  ಮಾಡಿ ತನ್ನ ತಾಯಿಗೆ ಮುಡಿಯಲು ಕೊಡುವುದು ಮತ್ತು ತಾನು ಮುಡಿಯುವುದು ಲೇಖಕರಿಗೆ ಬಹಳ ಆಸಕ್ತಿ. ಆಗ ಇನ್ನೂ ಲೇಖಕರಿಗೆ ಚೌಲವಾಗಿರಲಿಲ್ಲ. ಅದ್ದರಿಂದ ಹೆಣ್ಣು ಮಕ್ಕಳಂತೆ ಉದ್ದ ಕೂದಲಿತ್ತು. ಲೇಖಕರು ರಂಜದ ಹೂವನ್ನು ಪೋಣಿಸುತ್ತ ಕುಳಿತರೆ  ಕೃಷ್ಣಪ್ಪಯ್ಯ ಮೇಸ್ತ್ರಿಗೆ ಬಹಳ ಸಿಟ್ಟು ಬರುತ್ತಿತ್ತು. ಇವರಿಂದ ಪೆಟ್ಟು ತಿಂದು ಅದೇನು ಕಲಿತೆನು ನನಗಂತೂ ಸ್ವಲ್ಪವೂ ನೆನಪಿಲ್ಲ; ಕೃಷ್ಣಪ್ಪಯ್ಯ ಮೇಷ್ಟ್ರು ಮಾತ್ರ ನೆನಪಿನಲ್ಲಿದ್ದಾರೆ. ಲೇಖಕರು ತಾಯಿಯ ಊರಾದ ಮೇಳಿಗೆಗೆ ಹೋಗಿ ಅಲ್ಲಿ ಸ್ವಲ್ಪ ದಿನ ಶಾಲೆಗೆ ಹೋಗಿ ಕಲಿತರು. ಅಲ್ಲಿದ್ದ ಶೇಷಗಿರಿ ಮೇಸ್ಟ್ರು  ನನ್ನ ಅಮ್ಮನಿಗೂ ಶಿಕ್ಷಕರಾಗಿದ್ದವರು. ಅದು ಏಕೋಪಾಧ್ಯಾಯ ಶಾಲೆ. ಶಾಲೆಯ ಹೊರಗೆ ಧೂಳು ತುಂಬಿದ ಅಂಗಳವಿತ್ತು. ಆ ಧೂಳಿನಲ್ಲಿ ದುಂಡಗಿನ ಸಣ್ಣ ಸಣ್ಣ ಕುಳಿಗಳ ಒಳಗೆ ಇರುವ ಒಂದು ಕಪ್ಪುಹುಳು ಇರುತಿತ್ತು . ಅದನ್ನು ‘ತನ್ನಾದೇವಿ‘, ‘ಗುಬ್ಬಿ’ ಎಂದೆಲ್ಲಾ ಕರೆಯುತ್ತಾರೆ. ಅದನ್ನು ಆ ಕುಳಿಗಳಿಂದ ಎಬ್ಬಿಸಿ, ‘ಕಾಶಿಗೆ ಹೋಗೋ ದಾರಿ ತೋರಿಸು, ಕಾಶಿಗೆ ಹೋಗೋ ದಾರಿ ತೋರಿಸು’ ಎಂದು ಹೇಳುತ್ತ ಬೆರಳಿನಿಂದ ಸುತ್ತು ಬರುತ್ತಿದ್ದೆವು. ಆಗ ಅದು ಹಿಂದೆ ಹಿಂದೆ ಹೋಗುತ್ತಿತ್ತು. ಮೇಸ್ಟ್ರು  ಗದರಿಸಿ ನಮ್ಮನ್ನು ಒಳ ಕರೆದು ಪಾಠ ಮಾಡಬೇಕಾಗುತ್ತಿತ್ತು. ನಮಗೆ ತರಗತಿಯೊಳಗೆ ಕುಳಿತುಕೊಳ್ಳುವುದಕ್ಕಿಂತ ಹೊರಗೆ ಹೋಗಿ ಆಡುವುದೇ ಪ್ರಿಯವಾದುದರಿಂದ ಶಾಲೆಯ ಹೊರಗೆ ಹೋಗಲು ಸದಾ ಉಪಾಯ ಮಾಡುತ್ತಿದ್ದರು. ‘ಒಂದಕ್ಕೆ ಸಾರ್’ ಎಂದು ಎದ್ದು ನಿಂತು ಕೇಳುವುದು. ಅವರು ಹೊರಗೆ ಹೋಗಲು ಅನುಮತಿ ಕೊಡುತ್ತಿದ್ದರು. ಮಲೆನಾಡಿನಲ್ಲಿ ಸತತ ಸುರಿಯುವ ಮಳೆಯು ಆರಂಭಕ್ಕೆ ಮೊದಲೇ ಮನೆಯಲ್ಲಿ ಒಣ ಸೌದೆ, ಅಕ್ಕಿ, ಬೇಳೆ, ಜೋನಿ ಬೆಲ್ಲವನ್ನು ಸಂಗ್ರಹಿಸುತ್ತಿದ್ದರು. ಇಲ್ಲಿ ಹಲಸಿನ ಹಣ್ಣು ಯಥೇಚ್ಛವಾಗಿ ಸಿಗುತ್ತಿತ್ತು. ಲೇಖಕರು ಬಚ್ಚಲ ಒಲೆಯ ಬೆಂಕಿಯೆದುರು ಕುಳಿತು  ಕೈಗಳನ್ನು ಮುಂಚಾಚಿ ಬೆಂಕಿ ಕಾಯಿಸುತ್ತಿದ್ದರು. ದೊಡ್ಡವರು ಹೇಳುವ ಕತೆಗಳನ್ನು ಬಾಯಿಬಿಟ್ಟುಕೊಂಡು ಆಲಿಸುತ್ತಿದ್ದರು. ಬೇಸಿಗೆಯಲ್ಲಿ ಲೇಖಕರ ಅಮ್ಮ ಮಳೆಗಾಲದ ದಿನಗಳಿಗೆಂದು ಹಪ್ಪಳ, ಸಂಡಿಗೆಯಂತಹ ಅನೇಕ ತಿಂಡಿಗಳನ್ನು ಒಣಗಿಸಿ ಇಡುತ್ತಿದ್ದರು. ಕೆರೆಕೊಪ್ಪದಲ್ಲಿ ಅಂಗಳದ ಆಚೆ ಮನೆಯನ್ನು ಆಕ್ರಮಿಸಲು ಹೊಂಚುತ್ತ ಇರುವ ಅರಣ್ಯವಿತ್ತು. ನಸುಕಿನಲ್ಲಿ ಎದ್ದು, ಮನೆಯೆದುರು ಅರಣ್ಯದ ಅಂಚಿನಲ್ಲಿ ಇದ್ದ ರಂಜದ ಮರವೊಂದರಿಂದ ನೆಲದ ಮೇಲೇ ಚೆಲ್ಲಿರುತ್ತಿದ್ದ ನಕ್ಷತ್ರಆಕಾರದ ರಂಜದ ಹೂಗಳನ್ನು ಆರಿಸುವುದು, ಹುಲ್ಲಲ್ಲಿ ದೂರ್ವೆಯನ್ನು ಹುಡುಕಿ ಅಜ್ಜಯ್ಯನಿಗೆ ಪೂಜೆಗೆ ಕೊಡುವುದು. ಮರದ ಮೇಲಿನ ಗೂಡಲ್ಲಿ ಮೊಟ್ಟೆ ಮರಿಯಾಯಿತೆ ಎಂದು ಬಿದಿರಿನ ಸಂದಿಯಿಂದ  ನಿತ್ಯ ನೊಡುವುದು ಲೇಖಕರಿಗೆ ಖುಷಿಯ ಸಂಗತಿಗಳು. ಲೇಖಕರು ಕೆರೆಕೊಪ್ಪದಲ್ಲಿ ಇರುವಾಗ ಅವರಿಗೆಲ್ಲ ಚರಟದ ಕಾಫಿ ಕೊಡುತ್ತಿದ್ದರು. ಮನೆಯ ಹಿರಿಯರಾದ ಅಜ್ಜಯ್ಯನಿಗೆ, ಲೇಖಕರ ತಂದೆ ಶಾನುಭೋಗರಿಗೆ ಅವರ ಸ್ನೇಹಿತರಾದ ಊರಿನ ಪಟೇಲರಿಗೆ ಮಾತ್ರ ‘ಓರಿಜಿನಲ್  ಕಾಫಿ ಪುಡಿಯ ಕಾಫಿಯನ್ನು ಕೊಡುತ್ತಿದ್ದರು. ಕಾಫಿ ಬೀಜವನ್ನು ಆಗಲೇ ಹುರಿದು, ಆಗಲೇ ಪುಡಿಮಾಡಿ, ಆಗಲೇ ಕುದಿಯುವ ನೀರಿಗೆ ಬೆರೆಸಿ, ಮುಚ್ಚಿಟ್ಟು ಅದರ ಗಸಿ ಇಳಿಯುವಷ್ಟು ಕಾದು ಅದಕ್ಕಾಗಿಯೇ ಇದ್ದ ಬಟ್ಟೆಗೆ ಸುರಿದು ಹಿಂಡಿ, ಡಿಕಾಕ್ಷನ್ ಇಳಿಯುವಾಗ ಕಳೆದುಕೊಂಡ ಉಷ್ಣಾಂಶವನ್ನು ಬಿಸಿಬಿಸಿ ಎಮ್ಮೆ ಹಾಲು ಬೆರೆಸಿ ಹದ ಮಾಡಿ ಕಾಫಿ ಮಾಡುವುದು ಸಾಮಾನ್ಯವಾಗಿತ್ತು. ನಿತ್ಯ ಈ ಕಾಫಿಯ ಘಮಘಮದ ವಾಸನೆಯನ್ನು ಕೊಂಚವಾದರೂ ಉಳಿಸಿಕೊಂಡ ಅದರ ಚರಟ ಕುದಿಸಿ ಮಾಡಿದ ಕಾಫಿಯ ಸೇವನೆ ನಮಗೆ. ಲೇಖಕರು ಕಾಪಿ ಬೀಜವನ್ನು ಹಾಗೂ ವಿಶೇಷ ಪದಾರ್ಥಗಳೆಲ್ಲ ಕಡವಾಗಿ ಬ್ಯಾರಿಯೊಬ್ಬರ ಕಡೆಯಿಂದ ಪಡೆದುಕೊಳ್ಳತ್ತಿದ್ದರು. ದೀಪಾವಳಿಯಿಂದ ಇನ್ನೊಂದು ದೀಪಾವಳಿಗೆ, ಯುಗಾದಿಯಿಂದ ಇನ್ನೊಂದು ಯುಗಾದಿಗೆ, ಗೌರಿ ಹಬ್ಬದಿಂದ ಇನ್ನೊಂದು ಗೌರಿ ಹಬ್ಬದವರೆಗೆ ಈ ಕಡದ ಅವಧಿ. ಲೇಖಕರು ಬೆಳದಅಡಕೆಯನ್ನೋ , ಭತ್ತವನ್ನೋ ಬದಲಿಗೆ ಕೊಟ್ಟು ಕಡವನ್ನು ತೀರಿಸುತ್ತಿದ್ದರು. ಲೇಖಕರ ಮನೆಯಲ್ಲಿ ಕಷ್ಟದ ದಿನಗಳು ಬಂದಾಗ ಎಲ್ಲಾರಿಗೂ ಓರಿಜಿನಲ್ ಕಾಫಿಯನ್ನು ಮಾಡುವುದು ಕಷ್ಟವಾಗುತ್ತಿತ್ತು . ಆಗ ಮನೆ ಮಂದಿಯೆಲ್ಲ ಚರಟದ ಕಾಫಿಯನ್ನೇ  ಕುಡಿಯಬೇಕಾಗಿತ್ತು. ಅಜ್ಜಮನೆಗೆ ಹಿರಿಯರಾದ್ದರಿಂದ ‘ನನಗೆ ಚರಟದಲ್ಲಿ ಕಾಫಿಯೋ?’ ಅಂತ ಕೇಳಿದ್ದರು. ಅಮ್ಮನಿಗೆ ನಾನು ಹೀಗೆ ಅಜ್ಜಯ್ಯನ ಜೊತೆ ಪಟ್ಟಾಂಗ ಮಾಡುತ್ತ ಅಲೆಯುವುದು ಇಷ್ಟವಾಗುತ್ತಿರಲಿಲ್ಲ. ನಿಮ್ಮ ಜೊತೆಗೆ ಬಿದ್ದು ನನ್ನ ಮಗನು ಅಕ್ಷರವನ್ನು ತಿದ್ದುತ್ತಿಲ್ಲವೆಂದು ಅಜ್ಜಯ್ಯನ ಎದುರೇ ಲೇಖಕರ ತಾಯಿ ಬೈಯುತ್ತಿದ್ದರು.

ಅಭ್ಯಾಸ


ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಬಾಲ್ಯದಲ್ಲಿ ಲೇಖಕರು ಭಯವಾದಾಗ ಯಾವ ಮಂತ್ರವನ್ನು ಹೇಳಿಕೊಳ್ಳುತ್ತಿದ್ದರು?
ಉತ್ತರ :
ಬಾಲ್ಯದಲ್ಲಿ ಲೇಖಕರು ಭಯವಾದಾಗ “ಅರ್ಜುನಃ ಫಲ್ಗಣೋ ಪಾರ್ಥಃ ಕಿರೀಟೀ ಶ್ವೇತವಾಹನಃ” ಮಂತ್ರವನ್ನು ಹೇಳಿಕೊಳ್ಳುತ್ತಿದ್ದರು.

2. ಲೇಖಕರ ಮೊದಲ ವಿದ್ಯಾಗುರು ಯಾರು?
ಉತ್ತರ :
ಲೇಖಕರ ಮೊದಲ ವಿದ್ಯಾಗುರು ಅವರ ‘ಅಮ್ಮ’

3. ಸಣ್ಣ ಕುಳಿಯೊಳಗಿನ ಕಪ್ಪುಹುಳುವನ್ನು ಯಾವ ಹೆಸರಿನಿಂದ ಕರೆಯುತ್ತಾರೆ?
ಉತ್ತರ :
ಸಣ್ಣ ಕುಳಿಯೊಳಗಿನ ಕಪ್ಪುಹುಳುವನ್ನು ‘ತನ್ನಾದೇವಿ’ ‘ಗುಬ್ಬಿ’ ಎಂದು ಕರೆಯುತ್ತಿದ್ದರು.

4. ಲೇಖಕರ ಬಾಲ್ಯದ ಪುನರಾವರ್ತಿತ ದೈನಿಕ ಯಾವುದಾಗಿತ್ತು?
ಉತ್ತರ :
ರಂಜದ ಹೂವನ್ನು ಬಾಳೆಯನಾರಿನಲ್ಲಿ ಪೋಣಿಸುತ್ತಾ ಕೃಷ್ಣಪ್ಪಯ್ಯ ಮೇಷ್ಟ್ರಿಗಾಗಿ  ಆತಂಕದಲ್ಲಿ ಕಾಯುತ್ತಾ ‘ಇವತ್ತು ಮೇಷ್ಟ್ರಿಗೆ  ಜ್ವರ ಬರಲಿ ದೇವರೇ’ ಎಂದು ಮನಸ್ಸಿನಲ್ಲಿಯೇ ದೇವರನ್ನು ಪ್ರಾರ್ಥಿಸುವುದು ಲೇಖಕರ ಬಾಲ್ಯದ ಪುನರಾವರ್ತಿತ ದೈನಿಕವಾಗಿತ್ತು.

5. ತಿಂಗಳಿಗೊಮ್ಮೆ ಕಾಫಿ ಬೀಜವನ್ನು ತಂದು ಕೊಡುತ್ತಿದ್ದವರು ಯಾರು?
ಉತ್ತರ :
ಬ್ಯಾರಿಯೊಬ್ಬರು ತಿಂಗಳಿಗೊಮ್ಮೆ ಕಾಫಿ ಬೀಜವನ್ನು ತಂದು  ಕೊಡುತ್ತಿದ್ದರು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಲೇಖಕರ ಅಕ್ಷರಾಭ್ಯಾಸ ಆರಂಭವಾದದ್ದು ಹೇಗೆ?
ಉತ್ತರ :
ಲೇಖಕರ ಮೊದಲ ವಿದ್ಯಾಗುರು ಅವರ ಅಮ್ಮ. ಲೇಖಕರ ತಾಯಿ ಸ್ಕೂಲ್ಗೆ ಹೋಗಿ ಅಲ್ಪಸಲ್ಪ ಓದಲು ಬರೆಯಲು ಕಲಿತ್ತಿದ್ದರು. ಲೇಖಕರ ಅಕ್ಷರಾಭ್ಯಾಸವು ಕೆರೆಕೊಪ್ಪದ ಮನೆಯಲ್ಲಿದ್ದಾಗ ಪ್ರಾರಂಭವಾಯಿತು. ಅವರು
ಅಮ್ಮ “ಸರಸ್ವತೀ ನಮಸ್ತುಭ್ಯಂ   ವರದೇ ಕಾಮರೂಪಿಣೀ, ವಿದ್ಯಾರಂಭA ಕರಿಷ್ಯಾಮಿ | ಸಿದ್ಧಿರ್ಭವತು ಮೇ ಸದಾ” ಎಂದು ಹೇಳುತ್ತಾ ನೆಲದ ಮರಳಿನಲ್ಲಿ ಕೂರಿಸಿ ಲೇಖಕರ ಬೆರಳನ್ನು ಹಿಡಿದು ‘ಅ’ ಎಂಬ ಅಕ್ಷರವನ್ನು ಬರೆಸುತ್ತಿದ್ದರು. ಹೀಗೆ ಪ್ರತಿದಿನ ಬರೆಸುತ್ತಿದ್ದರಿಂದ ಶಾಲೆಗೆ ಹೋಗುವ ಹೊತ್ತಿಗೆ ಅನೇಕ ಅಕ್ಷರಗಳನ್ನು ಕಲಿತು ಬಿಟ್ಟಿದ್ದರು.

2. ಮಳೆಗಾಲದ ಆರಂಭಕ್ಕೆ ಮುನ್ನ ಮಲೆನಾಡಿನಲ್ಲಿ ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು?
ಉತ್ತರ :
ಮಳೆಗಾಲದ ಆರಂಭಕ್ಕೆ ಮೊದಲೇ ಮನೆಯ ಕೆಲಸಕ್ಕೆ ನಮ್ಮ ಸಂಬಂದಿಕರು , ಅಪ್ಪನ ಸ್ನೇಹಿತರು ಒಣ ಸೌದೆ, ಅಕ್ಕಿ, ಬೇಳೆ, ಜೋನಿ ಬೆಲ್ಲವನ್ನು ಸಂಗ್ರಹಿಸಲು ನೆರವಾಗುತ್ತಿದ್ದರು. ಆಗೆಲ್ಲ ಕಾಡು ಹಲಸಿನ ಹಣ್ಣು ಯಥೇಚ್ಛವಾಗಿ ಸಿಗುತಿತ್ತು .

3. ನಸುಕಿನಲ್ಲಿ ಲೇಖಕರಿಗೆ ಖುಷಿ ಕೊಡುತ್ತಿದ್ದ ಸಂಗತಿಗಳಾವುವು?
ಉತ್ತರ
: ಕೆರೆಕೊಪ್ಪದಲ್ಲಿ ಅಂಗಳದ ಆಚೆ ಮನೆಯನ್ನು ಆಕ್ರಮಿಸಲು ಹೊಂಚುತ್ತ ಇರುವ ಅರಣ್ಯವಿತ್ತು. ನಸುಕಿನಲ್ಲಿ ಎದ್ದು, ಮನೆಯೆದುರು ಅರಣ್ಯದ ಅಂಚಿನಲ್ಲಿ ಇದ್ದ ರಂಜದ ಮರವೊಂದರಿಂದ  ನೆಲದ ಮೇಲೆ ಚೆಲ್ಲಿರುತ್ತಿದ್ದ ನಕ್ಷತ್ರ ಆಕಾರದ ರಂಜದ ಹೂಗಳನ್ನು ಆರಿಸುವುದು, ಹುಲ್ಲಲ್ಲಿ ದೂರ್ವೆಯನ್ನು ಹುಡುಕಿ ಅಜ್ಜಯ್ಯನಿಗೆ ಪೂಜೆಗೆ ಕೊಡುವುದು. ಮರದ ಮೇಲಿನ ಗೂಡಲ್ಲಿ ಮೊಟ್ಟೆ ಮರಿಯಾಯಿತೇ  ಎಂದು ಬಿದಿರಿನ ಸಂದಿಯಿಂದ  ನಿತ್ಯ ನೊಡುವುದು ಲೇಖಕರಿಗೆ ಖುಷಿಯ ಸಂಗತಿಗಳು.

4. ವಿಶೇಷ ಪದಾರ್ಥಗಳನ್ನು ಕಡವಾಗಿ ಪಡೆಯುತ್ತಿದ್ದ ಹಾಗೂ ತೀರಿಸುತ್ತಿದ್ದ ಬಗೆ ಹೇಗೆ?
ಉತ್ತರ :
ಬ್ಯಾರಿಯವರಿಂದ ಕಾಫಿ ಬೀಜವನ್ನು, ವಿಶೇಷ ಪದಾರ್ಥಗಳನ್ನು ತಿಂಗಳಿಗೊಮ್ಮೆ ಕಡವಾಗಿ ಪಡೆಯುತ್ತಿದ್ದರು. ಅದಕ್ಕೆ ಬದಲಾಗಿ ಅಡಕೆಯನ್ನು ಅಥವಾ ಭತ್ತವನ್ನೊ ಕೊಟ್ಟು ತೀರಿಸುತ್ತಿದ್ದರು. ಇದರ ಲೆಕ್ಕಚಾರವನ್ನು ದೀಪಾವಳಿಯಿಂದ ಇನ್ನೊಂದು ದೀಪಾವಳಿಗೆ, ಯುಗಾದಿಯಿಂದ ಇನ್ನೊಂದು ಯುಗಾದಿಗೆ, ಗೌರಿ ಹಬ್ಬದಿಂದ ಇನ್ನೊಂದು ಗೌರಿ ಹಬ್ಬದವರೆಗೆ ಇಟ್ಟುಕೊಳ್ಳುತ್ತಿದ್ದರು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.

1. ಮಲೆನಾಡಿನಲ್ಲಿ ಹುಲಿಗಳಿಂದಾಗುತ್ತಿದ್ದ ತೊಂದರೆಯ ಬಗ್ಗೆ ಹೇಗೆ ವರ್ಣಿಸಲಾಗಿದೆ?
ಉತ್ತರ :
ಲೇಖಕರ ಊರಿನಲ್ಲಿ ಹುಲಿಗಳ ಕಾಟ ಬಹಳ ಇತ್ತು. ಲೇಖಕರ ತಾಯಿಗೆ ದೂರದಲ್ಲಿ ಎಲ್ಲೊ ಹುಲಿ ಕೂಗಿದರೆ ತಟ್ಟನೆ ತಿಳಿದು ಬಿಡುತ್ತಿತ್ತು. ಹುಲಿಗಳ ಶಬ್ದಕ್ಕೆ ತುಂಬಾ ಸೂಕ್ಷ್ಮವಾಗಿದ್ದ  ಜೀವಿಗಳೆಂದರೆ ದನಗಳು. ಅವು ಹುಲಿ ಬಂದ ತಕ್ಷಣ ಗಡಗಡ ನಡುಗಲು ಶುರುಮಾಡುತ್ತಿದ್ದವು. ಕೊರಳಿನ ಘಂಟೆ ಜೋರು ಶಬ್ದಮಾಡುತ್ತಿದ್ದರಿಂದ ಹುಲಿ ಬಂದ ಸೂಚನೆಯು ತಿಳಿಯುತ್ತಿತ್ತು. ಲೇಖಕರ ತಾಯಿ, ಅಜ್ಜಿ, ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಮನೆಯ ಒಳಗಡೆ ಕೂತು ಹುಲಿ ಎಲ್ಲಿ ಬಂದು ಬಿಡುತ್ತದೆಯೋ ಎಂದು ಕಾಯುತ್ತಿದ್ದರು. ಇವರೆಲ್ಲರೂ ತುಂಬಾ ಭಯವಾದಾಗ “ಅರ್ಜುನಃ ಫಲ್ಗಣೋ ಪಾರ್ಥಃ ಕಿರೀಟೀ ಶ್ವೇತವಾಹನಃ” ಎಂದು ಅಜ್ಜಿ ಹೇಳಿಕೊಟ್ಟಿದ್ದ ಅರ್ಜುನನ ಮಂತ್ರವನ್ನು ಹೇಳಿದರೆ ಭಯ ನಿವಾರಣೆಯಾಗುತ್ತಿತ್ತು . ಈ ಮಂತ್ರವನ್ನು ಹೇಳುತ್ತ ಹೇಳುತ್ತ ಎಲ್ಲರೂ ನಿದ್ದೆ ಹೋಗುತ್ತಿದ್ದೆವೆ. ಬೆಳಗ್ಗೆ ಎದ್ದು ಕೊಟ್ಟಿಗೆಯಲ್ಲಿಎಲ್ಲ ದನಗಳಿವೆ ಎಂದು ಗೊತ್ತಾದಾಗ ಮನಸ್ಸಿಗೆ ಸಮಾಧಾನ. ನಿತ್ಯವು ಲೇಖಕರ ಮನೆಗೆ ಆಳುಗಳು ಬಂದಾಗ ಮಾತು ಆರಂಭವಾಗುತ್ತಿತ್ತು ಯಾವುದೋ ಹುಲಿ ಯಾವುದೋ ಮನೆಯ ದನವನ್ನು ಹಿಡೀತು. ಅವರ ಮನೆ ದನ ಹೋಯಿತು ಇವರ ಮನೆ ದನ ಹೋಯಿತು  ಎಂದು ಮಾತನಾಡುವುದು ಸಾಮಾನ್ಯವಾಗಿತ್ತು.

2. ‘ಒರಿಜಿನಲ್’ ಹಾಗೂ ಚರಟದ ಕಾಫಿಯನ್ನು ಸಿದ್ಧಗೊಳಿಸುತ್ತಿದ್ದ ಬಗೆಯನ್ನು ವಿವರಿಸಿ.
ಉತ್ತರ :
ಲೇಖಕರು ಕೆರೆಕೊಪ್ಪದಲ್ಲಿ ಇರುವಾಗ ಅವರಿಗೆಲ್ಲ ಚರಟದ ಕಾಫಿ ಕೊಡುತ್ತಿದ್ದರು. ಮನೆಯ ಹಿರಿಯರಾದ ಅಜ್ಜಯ್ಯನಿಗೆ, ಲೇಖಕರ ತಂದೆ ಶಾನುಭೋಗರಿಗೆ ಅವರ ಸ್ನೇಹಿತರಾದ ಊರಿನ ಪಟೇಲರಿಗೆ ಮಾತ್ರ ‘ಓರಿಜಿನಲ್’ ಕಾಫಿ ಪುಡಿಯ  ಕಾಫಿಯನ್ನು  ಕೊಡುತ್ತಿದ್ದರು. ಕಾಫಿ ಬೀಜವನ್ನು ಆಗಲೇ ಹುರಿದು, ಆಗಲೇ ಪುಡಿಮಾಡಿ, ಆಗಲೇ ಕುದಿಯುವ ನೀರಿಗೆ ಬೆರೆಸಿ, ಮುಚ್ಚಿಟ್ಟು ಅದರ ಗಸಿ ಇಳಿಯುವಷ್ಟು ಕಾದು
ಅದಕ್ಕಾಗಿಯೇ ಇದ್ದ ಬಟ್ಟೆಗೆ ಸುರಿದು ಹಿಂಡಿ, ಡಿಕಾಕ್ಷನ್ ಇಳಿಯುವಾಗ ಕಳೆದುಕೊಂಡ ಉಷ್ಣಾಂಶವನ್ನ ಬಿಸಿಬಿಸಿ ಎಮ್ಮೆ ಹಾಲು ಬೆರೆಸಿ ಹದ ಮಾಡಿ ಕಾಫಿ ಮಾಡುವುದು ಸಾಮಾನ್ಯವಾಗಿತ್ತು. ನಿತ್ಯ ಈ ಕಾಫಿಯ ಘಮಘಮದ ವಾಸನೆಯನ್ನು ಕೊಂಚವಾದರೂ ಉಳಿಸಿಕೊಂಡ ಅದರ ಚರಟ ಕುದಿಸಿ ಮಾಡಿದ ಕಾಫಿಯ ಸೇವನೆ ನಮೆಗೆ

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ”
ಆಯ್ಕೆ :
ಈವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರ ಅಕ್ಷರಾಭ್ಯಾಸವು ಕೆರೆಕೊಪ್ಪದ  ಮನೆಯಲ್ಲಿದ್ದಾಗ ಪ್ರಾರಂಭವಾಯಿತು. ಅವರ ಅಮ್ಮ “ಸರಸ್ವತೀ ನಮಸ್ತುಭ್ಯ  ವರದೇ ಕಾಮರೂಪಿಣೀ, ವಿದ್ಯಾರಂಭ ಕರಿಷ್ಯಾಮಿ | ಸಿದ್ಧಿರ್ಭವತು ಮೇ ಸದಾ” ಎಂದು ಹೇಳುತ್ತಾ ನೆಲದ ಮರಳಿನಲ್ಲಿ ಕೂರಿಸಿ ಲೇಖಕರ ಬೆರಳನ್ನ  ಹಿಡಿದು ‘ಅ’ ಎಂಬ ಅಕ್ಷರವನ್ನು ಬರೆಸುತ್ತಿದ್ದರು.ಆ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಲೇಖಕರ ತಾಯಿ ತನ್ನ ಮಗನ ವಿದ್ಯಾಭ್ಯಾಸಕ್ಕೆ ಸರಸ್ವತಿ ದೇವಿಯನ್ನು ವಂದಿಸುವುದರ ಮೂಲಕಭಕ್ತಿ ಭಾವವನ್ನು ವ್ಯಕ್ತಪಡಿಸುವುದು ಸ್ವಾರಸ್ಯಕರವಾಗಿದೆ.

2. “ನನಗೂ ಹೆಣ್ಣು ಮಕ್ಕಳಂತೆ ಉದ್ದ ಕೂದಲಿತ್ತು”
ಆಯ್ಕೆ :
ಈವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರಿಗೆ ಓದು ಬರಹಕ್ಕಿಂತ ರಂಜದ ಹೂವನ್ನು ತಂದು ಪೋಣಿಸಿ ದೊಡ್ಡದೊಡ್ಡ ಸರಗಳನ್ನು ಮಾಡಿ ತನ್ನ ತಾಯಿಗೆ ಮುಡಿಯಲು ಕೊಡುವುದು ಮತ್ತು ತಾನು ಮುಡಿಯುವುದು ಲೇಖಕರಿಗೆ ಬಹಳ ಆಸಕ್ತಿ. ಆಗ ಇನ್ನೂಅ ಲೇಖಕರಿಗೆ ಚೌಲವಾಗಿರಲಿಲ್ಲ. ಅದ್ದರಿಂದ ಹೆಣ್ಣು ಮಕ್ಕಳಂತೆ ಉದ್ದ ಕೂದಲಿತ್ತು. ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಬಾಲ್ಯದಲ್ಲಿ ಮಕ್ಕಳಿಗೆ ಪಾಠಕ್ಕಿಂತ ಇತರ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೆಚ್ಚು ಎಂಬುದು ಈ ವಾಕ್ಯದ ಸ್ವಾರಸ್ಯವಾಗಿದೆ.

3. “ಇವತ್ತು ಮೇಷ್ಟಿçಗೆ ಜ್ವರ ಬರಲಿ ದೇವರೇ”
ಆಯ್ಕೆ :
ಈವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರು ತನ್ನ ತಾಯಿ ಹಾಡನ್ನು ಹೇಳುವುದನ್ನು ಆಲಿಸುತ್ತ, ರಂಜದ ಹೂವನ್ನು ಬಾಳೆಯ ನಾರಿನಲ್ಲಿ ಪೋಣಿಸುತ್ತ, ಕೃಷ್ಣಪ್ಪಯ್ಯ ಮೇಷ್ಟ್ರಿಗಾಗಿ ಆತಂಕದಲ್ಲಿ ಕಾಯುತ್ತ `ಇವತ್ತು ಮೇಸ್ತ್ರಿಗೆ ಜ್ವರ ಬರಲಿ ದೇವರೇ’ ಎಂದು ಮನಸ್ಸಲ್ಲೇ ಪ್ರಾರ್ಥಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಬಾಲ್ಯದಲ್ಲಿ ಮಕ್ಕಳಿಗೆ ಶಿಕ್ಷಕರ ಮೇಲೆ ಎಷ್ಟು ಭಯ ಇರುತ್ತದೆ. ಮತ್ತು ಓದುವುದಕ್ಕಿಂತ ಆಟದಲ್ಲಿ ಆಸಕ್ತಿ ಜಾಸ್ತಿ ಇರುತ್ತದೆ ಎಂಬುದು ಸ್ವಾರಸ್ಯಕರವಾಗಿದೆ .

4. “ನನಗೂ ಎಲ್ಲೋ ಒಂದೊಂದು ಸಾರಿ ಈ ಕಾಫಿಯ ಪುಣ್ಯ ಸಿಗುತ್ತಿತ್ತು”
ಆಯ್ಕೆ : ಈವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರು ಕೆರೆಕೊಪ್ಪದಲ್ಲಿ ಇರುವಾಗ ಅವರಿಗೆಲ್ಲ ಚರಟದ ಕಾಫಿ ಕೊಡುತ್ತಿದ್ದರು. ಮನೆಯ ಹಿರಿಯರಾದ ಅಜ್ಜಯ್ಯನಿಗೆ, ಲೇಖಕರ ತಂದೆ ಶಾನುಭೋಗರಿಗೆ ಅವರ ಸ್ನೇಹಿತರಾದ ಊರಿನ ಪಟೇಲರಿಗೆ ಮಾತ್ರ ‘ಓರಿಜಿನಲ್’ ಕಾಫಿ ಪುಡಿಯ ಕಾಫಿಯನ್ನು ಕೊಡುತ್ತಿದ್ದರು. ಆ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಬಡತನದ ಕಾರಣ ಮನೆ ಮಂದಿಗೆ ಯವಾಗಲೂ ಗಸಿ ಅಥವಾ ಚರಟದ ಕಾಫಿ ಸಿಗುತ್ತಿತ್ತು.
ಒರಿಜಿನಲ್ ಕಾಫಿ ಪುಡಿಯ  ಕಾಫಿ ಕುಡಿಯಲು ಪುಣ್ಯ ಮಾಡಿರಬೇಕು ಎಂಬ ಮಾತು ಸ್ವಾರಸ್ಯಕರವಾಗಿದೆ .

5. “ನನಗೆ ಚರಟದಲ್ಲಿ ಕಾಫಿಯೋ?”
ಆಯ್ಕೆ : ಈ ವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರ ಅಮ್ಮ ಸ್ವಲ್ಪ ಕಾಫಿಪುಡಿಯಲ್ಲಿ  ಒಂದು ಲೋಟ ಕಾಫಿ ಮಾಡಿ ಅಪ್ಪನಿಗೆ ಕೊಟ್ಟು ಆ ಕಾಫಿ ಮಾಡಿದ ಚರಟದಲ್ಲಿ ಲೇಖಕರಿಗೆ, ಅವರಜ್ಜನಿಗೆ ಕೊಡುತ್ತಿದ್ದರು. ಅಜ್ಜ ಮನೆಗೆ ಹಿರಿಯರಾದ್ದರಿಂದ ‘ನನಗೆ ಚರಟದಲ್ಲಿ ಕಾಫೀಯೊ ?’ ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಸದಾ ಒರಿಜಿನಲ್ ಕಾಫಿ ಪುಡಿಯಿಂದ ಮಾಡಿದ ಕಾಫಿಯನ್ನೇ ಕುಡಿಯುತ್ತಿದ್ದ ಅಜ್ಜಯ್ಯನವರಿಗೆ ಗಸಿಯ ಕಾಫಿ ಕೊಟ್ಟಾಗ ಕೋಪ ಬಂದಿರುವುದು ಸಹಜವಾಗಿದೆ.

ಉ. ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ

1. ಅಧಿಕೃತವಾಗಿ ಅನಂತಮೂರ್ತಿಯವರ ಮೊದಲ ಶಿಕ್ಷಕರು __________ (ಕೃಷ್ಣಪ್ಪಯ್ಯ ಅಮ್ಮ ತಂದೆ ಶೇಷಗಿರಿ)
ಉತ್ತರ : ಕೃಷ್ಣಪ್ಪಯ್ಯ

2. ಮಳೆಗಾಲದಲ್ಲಿ ಮಲೆನಾಡಿನಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಹಣ್ಣು _______ (ಮಾವಿನಹಣ್ಣು, ಸೀಬೆಹಣ್ಣು, ಹಲಸಿನ ಹಣ್ಣು, ಬಾಳೆಹಣ್ಣು )
ಉತ್ತರ : ಹಲಸಿನ ಹಣ್ಣು,

3. ‘ಪಟ್ಟಾಂಗ’ ಈ ಪದದ ಅರ್ಥ _________ (ಒಳ್ಳೆಯ ಮಾತು  ಹರಟೆ ಪಟ್ಟಕಟ್ಟುವುದು ಕೆಟ್ಟಮಾತು)
ಉತ್ತರ : ಹರಟೆ

4. ‘ಕಡೆಗೋಲು’ ಪದವು _________ ಸಂಧಿಗೆ ಉದಾಹರಣೆಯಾಗಿದೆ (ಆಗಮಸಂಧಿ ಗುಣಸಂಧಿ ಲೋಪಸಂಧಿ ಆದೇಶಸಂಧಿ)
ಉತ್ತರ : ಆದೇಶಸಂದಿ

5. ‘ಸಕ್ಕರೆ’ ಪದದತತ್ಸಮ ರೂಪ _________ (ಸಕ್ಕರಿ ಸಕ್ಕಾರಿ ಶರ್ಕರಾ ಸರಕಾರಿ)
ಉತ್ತರ : ಶರ್ಕರಾ

ಅಭ್ಯಾಸ ಚಟುವಟಿಕೆ


ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

1. ವಾಕ್ಯ ಪ್ರಭೇದಗಳನ್ನು ವಿವರಿಸಿ.
ಉತ್ತರ :
ಸಾಮಾನ್ಯ, ಸಂಯೋಜಿತ ಮತ್ತು ಮಿಶ್ರವಾಕ್ಯ ಎಂಬುದಾಗಿ ಮೂರು ವಿಭಾಗ ಮಾಡಲಾಗಿದೆ.ಒಂದು ಪೂರ್ಣ ಕ್ರಿಯಾಪದದೊಡನೆ ಸ್ವತಂತ್ರ ವಾಕ್ಯವಾಗಿರುವ ವಾಕ್ಯಗಳೇ ಸಾಮಾನ್ಯವಾಕ್ಯಗಳು ಸ್ವತಂತ್ರವಾಗಿ ವಾಕ್ಯಗಳಾಗಿ ನಿಲ್ಲಬಲ್ಲ ಎರಡು ಅಥವಾ ಹೆಚ್ಚು ಉಪವಾಕ್ಯಗಳು ಸೇರಿ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು ಸಂಯೋಜಿತ ವಾಕ್ಯ. ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅಂತಹ ವಾಕ್ಯವೇ ಮಿಶ್ರವಾಕ್ಯ.

2. ಸಮಾಸ ಎಂದರೇನು?
ಉತ್ತರ :
ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕನುಸಾರ ಒಟ್ಟು ಸೇರಿ ಪೂರ್ವ ಪದದ ಅಂತ್ಯದಲ್ಲಿ ವಿಭಕ್ತಿ ಪ್ರತ್ಯಯವಿದ್ದರೆ ಅದು ಲೋಪವಾಗಿ ಒಂದೇ ಪದವಾಗುವುದೇ ಸಮಾಸ.

3. ಸಮಾಸಗಳಲ್ಲಿ ಎಷ್ಟು ವಿಧ? ಪಟ್ಟಿಮಾಡಿ.
ಉತ್ತರ : ತತ್ಪುರುಷ, ಕರ್ಮಧಾರಯ, ದ್ವಿಗು, ಅಂಶಿ, ದ್ವಂದ್ವ, ಬಹುವ್ರೀಹಿ, ಕ್ರಿಯಾ ಮತ್ತು ಗಮಕ ಸಮಾಸ ಎಂಬ ಎಂಟು ವಿಧದ ಸಮಾಸಗಳಿವೆ.


You Might Like

Post a Comment

0 Comments