Recent Posts

ಸಾರ್ಥಕ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತರಗಳು


ಪಠ್ಯ ಪೂರಕ

 ಸಾರ್ಥಕ

 – ದಿನಕರ ದೇಸಾಯಿ

 

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. .
 

೧. ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಎಲ್ಲಿ ಬೀಳುತ್ತದೆ?
ಉತ್ತರ :
ಗಾಳಿಯಲ್ಲಿ ಬೂದಿಯನ್ನು ತೂರಿದಾಗ  ಭತ್ತ ಬೆಳೆಯುವ ನಾಡಿನಲ್ಲಿ ಹೋಗಿ ಬೀಳುತ್ತದೆ.
 

೨. ಬೂದಿಯನ್ನು ಹೊಳೆಯಲ್ಲಿ  ಹರಿಯಬಿಟ್ಟಾಗ ಯಾರಿಗೆ ಸಿಗುತ್ತದೆ?
ಉತ್ತರ :
ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಮೀನಿನ ಬಾಯಿಗೆ ಸಿಗುತ್ತದೆ.
 

೩. ದೇಹ ಏಕೆ ವ್ಯರ್ಥವಾಗಿದೆ?
ಉತ್ತರ :
ತನ್ನ ದೇಹ ಸ್ವಾರ್ಥವ ನೆನೆದು ವ್ಯರ್ಥವಾಗಿದೆ.
 

೪. ಬೂದಿಯನ್ನು ಕೊಳದಲ್ಲಿ ಬಿಡುವುದರಿಂದ ಬದುಕು ಧನ್ಯವಾಗುವುದು ಹೇಗೆ? – ವಿವರಿಸಿ.
ಉತ್ತರ :
ನಮ್ಮ ಹೆಣದ ಬೂದಿಯನ್ನು ನೀರಿನಲ್ಲಿ ಬಿಡುವುದರಿಂದ ಅದು ಕೆಸರಿನೊಡನೆ ಕೂಡಿ ಫಲವತ್ತಾದ ಮಣ್ಣಾಗುತ್ತದೆ. ಅದರಲ್ಲಿ ಕಮಲ ಅರಳಿದಾಗ ನಾವು ಹುಟ್ಟು ಸಾವಿನಿಂದ ಮುಕ್ತರಾಗಿ ನಮ್ಮ ಬದುಕು ಧನ್ಯವಾಗುತ್ತದೆ.
 

೫. ಸಾರ್ಥಕ ಪದ್ಯದ ಯಾವ ಅಂಶಗಳನ್ನು ನೀವು ಮೆಚ್ಚುವಿರಿ?
ಉತ್ತರ :
ಮಾನವನು ತನ್ನ ಸ್ವಾರ್ಥ ಗುಣಗಳನ್ನು ತೊರೆದು ಪರೋಪಕಾರಿಯಾದಾಗ ಬದುಕು ಸಾರ್ಥಕ ಎಂಬ ಅಂಶವನ್ನು ನಾನು ಮೆಚ್ಚುತ್ತೇನೆ.


You Might Like

Post a Comment

0 Comments