Recent Posts

ನೀರಿನ ಮಹತ್ವ ಮತ್ತು ಮಾಲಿನ್ಯ - Class 9th Second Language Kannada Textbook Solutions

 ನೀರಿನ ಮಹತ್ವ ಮತ್ತು ಮಾಲಿನ್ಯ

●    ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1.ಜೀವಗಳ ಜೀವನಾಧಾರ ಯಾವುದು?

ಉತ್ತರ:- ಜೀವಗಳ ಜೀವನಾಧಾರ ನೀರು.

2 ನಾಗರಿಕತೆಗಳು ಎಲ್ಲಿ ಪ್ರವರ್ಧಮಾನಕ್ಕೆ ಬಂದವು?
ಉತ್ತರ:- ಎಲ್ಲ ನಾಗರೀಕತೆಗಳು ನದಿಯ ದಂಡೆಯಲ್ಲಿಯೇ ಪ್ರವರ್ಧಮಾನಕ್ಕೆ ಬಂದವು.

3. ಭೂಮಿಯ ಮೇಲೆ ನೀರಿನ ಪ್ರಮಾಣವೆಷ್ಟು?
ಉತ್ತರ:- ಭೂಮಿಯ ಮೇಲೆ ನೀರಿನ ಪ್ರಮಾಣ 79% ರಷ್ಟು ಇದೆ. 

4. ನೀರಿನ ಮೂಲಗಳನ್ನು ಪಟ್ಟಿ ಮಾಡಿ,
ಉತ್ತರ:- ನೀರಿನ ಮೂಲಗಳೆಂದರೆ ಕೆರೆ, ಕಾಲುವೆ ಮತ್ತು ಬಾವಿಗಳು. 

5. ನೀರು ಹೇಗೆ ಮಲಿನವಾಗುತ್ತದೆ?
ಉತ್ತರ:- ಸಂಸ್ಕರಿಸದ ಹಾಗೂ ಶುದ್ದೀಕರಿಸದ ಕಸವು ನೀರಿಗೆ ಸೇರುವುದು. ನಗರ ಪಟ್ಟಣಗಳಿಂದ ಹೊರಬರುವ ಚರಂಡಿ ಮತ್ತು ಶೌಚಾಲಯಗಳ ಹೊಲಸು ನೀರು ಸೇರುವುದು. ರಾಸಾಯನಿಕ, ಕಬ್ಬಿಣದ ಉಕ್ಕು ಕಾರ್ಖಾನೆ ಹಾಗೂ ಚರ್ಮ ಕೈಗಾರಿಕೆಗಳಿಂದ ಹೊರಬರುವ ವಿಷಯುಕ್ತ ಪದಾರ್ಥಗಳು ನೀರಿನ ಮೂಲಗಳನ್ನು ಸೇರುವುದು. ರಸಗೊಬ್ಬರಗಳ ಕಾರ್ಖಾನೆ ಹಾಗೂ ಅವುಗಳ ಬಳಕೆಯಿಂದಾಗಿ ನೈಟ್ರೇಟ್, ಪಾಸ್ಟೇಟ್ಗಳು ಭೂಮಿಗೆ ಬಿದ್ದು ಹರಿಯುವ ಮಳೆಯೊಂದಿಗೆ ಬೆರೆತು ನದಿ, ಕಾಲುವೆ, ಕೆರೆಗಳಿಗೆ ಸೇರುತ್ತವೆ. ಸಮುದ್ರದಲ್ಲಿ ಹಡಗು ಮತ್ತು ಅನಿಲ ದುರಂತಗಳಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳು ನೀರನ್ನು ಸೇರಿ ಮಲಿನಗೊಳಿಸುತ್ತವೆ.

6. ಮಲಿನ ನೀರನ್ನು ಬಳಸಿದಾಗ ಉಂಟಾಗುವ ದುಷ್ಪರಿಣಾಮಗಳನ್ನು ತಿಳಿಸಿ,
ಉತ್ತರ:- ಮೂತ್ರಪಿಂಡದ ವೈಫಲ್ಯ, ಚರ್ಮ ಕಾಯಿಲೆ, ಮೂಳೆಗೆ ಸಂಬಂಧಿಸಿದ ರೋಗಗಳು, ರಾಸಾಯನಿಕ ಗೊಬ್ಬರದಂಶಗಳು ನೀರಿಗೆ ಸೇರಿದರೆ ನೀರಿನ ಮೇಲ್ಪದರದಲ್ಲಿ ಪಾಚಿ ಬೆಳೆದು ಸೂರ ಕಿರಣಗಳು ನೀರಿನ ಮೇಲೆ ಬೀಳುವುದಿಲ್ಲ ಹಾಗೂ ಅವು ನೀರಿನಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತವೆ, ಇದುಂದ ಆಮ್ಲಜನಕದ ಕೊರತೆಯಿಂದಾಗಿ ಜಲಚರಗಳು ನಾಶವಾಗುತ್ತವೆ. ಕೊಳಚೆ ಪ್ರದೇಶದ ನೀರು ಬಳಸಿ ಬೆಳೆಯುವ ತರಕಾರಿ, ಹಣ್ಣು ವಿಷಯುಕ್ತವಾಗುತ್ತವೆ. ಕೈಗಾರಿಕಾ ಕಶ್ಚಲಗಳಲ್ಲಿರುವ ಸೀಸ, ಕ್ಯಾಡ್ಮಿಯಂ, ಡಿ.ಡಿ.ಟಿ. ಇವುಗಳು ಮೀನು ಹಾಗೂ ಇನ್ನಿತರ ಜಲಚರಗಳಲ್ಲಿ ಸೇರಿ ನಾಶವಾಗುತ್ತವೆ ಹಾಗೂ ಅವುಗಳನ್ನು ಬಳಸುವ ಮಾನವನಿಗೆ ತೊಂದರೆಯುಂಟಾಗುತ್ತದೆ. 

7. ನಿಮ್ಮ ಗ್ರಾಮ / ಪ್ರದೇಶದಲ್ಲಿ ಆಗುತ್ತಿರುವ ಜಲಮಾಲಿನ್ಯ ಕುರಿತು ಬರೆಯಿರಿ.
ಉತ್ತರ:- ಕೆರೆಯಲ್ಲಿ ದನಕರುಗಳನ್ನು ಸ್ನಾನ ಮಾಡಿಸುವುದು, ಬಟ್ಟೆ ತೊಳೆಯುವುದು, ಸಂಸ್ಕರಿಸದ ಹಾಗೂ ಶುದ್ದೀಕರಿಸದ ಕಸವು ಕೆರೆ ನೀರಿಗೆ ಸೇರುವುದು. ನಗರ, ಊರಿನಿಂದ ಹೊರಬರುವ ಚರಂಡಿ ಮತ್ತು ಶೌಚಾಲಯಗಳ ಹೊಲಸು ನೀರು ಕೆರೆ ಸೇರುವುದು. ರಸಗೊಬ್ಬರಗಳ ಕಾರ್ಖಾನೆ ಹಾಗೂ ಅವುಗಳ ಬಳಕೆಯಿಂದಾಗಿ ನೈಟ್ರೇಟ್, ಪಾಸ್ಟೇಟ್ಗಳು ಭೂಮಿಗೆ ಬಿದ್ದು ಹರಿಯುವ ಮಳೆಯೊಂದಿಗೆ ಬೆರೆತು ನದಿ, ಕಾಲುವೆ, ಕೆರೆಗಳಿಗೆ ಸೇರುತ್ತವೆ. 

8. ಜಲ ಮಾಲಿನ್ಯ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳೇನು?
ಉತ್ತರ:- ಇಷ್ಟು ತೀವ್ರತೊಂದರೆ ಉಂಟುಮಾಡುವ ಜಲಮಾಲಿನ್ಯವನ್ನು ತಡೆಯಲು ಈ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಖಾನೆಗಳಿಂದ ಬರುವ ಕಲ್ಮಶಗಳನ್ನು ಶುದ್ದೀಕರಿಸಿ ಬಿಡಬೇಕು. ನಗರ ಪಟ್ಟಣಗಳಿಂದ ಹೊರಬರುವ ಕೊಳಚೆ ನೀರನ್ನು ಶುದ್ದೀಕರಣ ಮಾಡಿ ಮರು ಬಳಸಬೇಕು. ಮಳೆ ನೀರು ಸಂಗ್ರಹ ಮತ್ತು ಇಂಗುವಿಕೆಗೆ ಕ್ರಮ ಕೈಗೊಳ್ಳಬೇಕು. ನೀರನ್ನು ಮಿತವಾಗಿ ಬಳಸಬೇಕು. ನೀರಿನ ಮೂಲಗಳನ್ನು ಉಳಿಸಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಗಿಡ, ಮರ, ಬೆಳೆಸಬೇಕು. ಹೀಗೆ ನಾವು ನೀರನ್ನು ಸಂರಕ್ಷಿಸದಿದ್ದರೆ ಈಗ ಪೆಟ್ರೋಲ್, ಡೀಸಲ್ ಕೊಳ್ಳುವ ಹಾಗೆ ಬಂಕ್ಗಳಲ್ಲಿ ನೀರನ್ನು ಕೊಳ್ಳಬೇಕಾಗಬಹುದು. ಪ್ರತಿ ವರ್ಷ ಮಾರ್ಚ್ 22 ರಂದು 'ವಿಶ್ವ ಜಲ ದಿನಾಚರಣೆ' ಆಚರಿಸಿ ನೀರಿನ ಮಹತ್ವ ಎಲ್ಲರಿಗೂ ತಿಳಿಯುವಂತೆ ಮಾಡಬೇಕು,

“ನೀರು ಉಳಿಸಿ, ಜೀವವನ್ನು ರಕ್ಷಿಸಿ"

 9. ನೀರನ್ನು ನೀವು ಹೇಗೆ ಉಳಿತಾಯ ಮಾಡುವಿರಿ?
ಉತ್ತರ:- ನೀರಿನ ಲಭ್ಯತೆ, ಮಿತಬಳಕೆ, ನೀರಿನ ಆಕರಗಳನ್ನು ಸಂರಕ್ಷಿಸುವುದು. ನೀರಿನ ಅಪವ್ಯಯವನ್ನು ತಪ್ಪಿಸುವುದು ಕಲುಷಿತ ನೀರನ್ನು ಶುದ್ದೀಕರಿಸಿ ಮನರ್ಬಳಕೆ ಮಾಡುವುದು ಬಹಳ ಮುಖ್ಯ. ಮಳೆ ನೀರು ಇಂಗಲು ಅಲ್ಲಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವುದು. ಮನೆ ಸ್ವಚ್ಛತೆಗೆ ಬಳಸಿದ ನೀರನ್ನು ಸುತ್ತಲಿನ ಗಿಡಗಂಟಿಗಳಿಗೆ ಬಿಡುವುದು, ಬಳಸಿದ ನಂತರ ನಲ್ಲಿಗಳನ್ನು ಬಂದ್ ಮಾಡುವುದು ಪ್ರತಿ ವರ್ಷ ಮಾರ್ಚ್ 22 ರಂದು 'ವಿಶ್ವ ಜಲ ದಿನಾಚರಣೆ' ಆಚರಿಸಿ ನೀರಿನ ಮಹತ್ವ ಎಲ್ಲರಿಗೂ ತಿಳಿಯುವಂತೆ ಮಾಡವುದು, ಇನ್ನೂ ಮುಂತಾದ ರೂಪದಲ್ಲಿ ನೀರನ್ನು ಉಳಿತಾಯ ಮಾಡಬಹುದು. “ನೀರು ಉಳಿಸಿ, ಜೀವವನ್ನು ರಕ್ಷಿಸಿ"

You Might Like

Post a Comment

0 Comments