Recent Posts

ಬೆಳಗು ಜಾವ - Class 9th Second Language Kannada Textbook Solutions

ಪದ್ಯ  ೯ 
ಬೆಳಗು ಜಾವ

ಕವಿ/ಲೇಖಕರ ಪರಿಚಯ :

* ದ. ರಾ. ಬೇಂದ್ರೆಪೂರ್ಣ ಹೆಸರುಅಂಬಿಕಾತನಯದತ್ತ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ.  ಇವರು 1896 ಜನವರಿ 31 ರಲ್ಲಿ   ಧಾರವಾಡದಲ್ಲಿ ಜನಿಸಿದರು.
* ಇವರು ವಿನಯ, ಗರಿ, ಸಖೀಗೀತ, ಗಂಗಾವತರಣ, ನಾದಲೀಲೆ, ಅರಳು-ಮರಳು, ನಾಕುತಂತಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ಶ್ರೀಯುತರಿಗೆ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ದೊರೆತಿವೆ.
* ಪ್ರಸ್ತುತ ಕವಿತೆಯನ್ನು 'ವಿನಯ' ಕವನ ಸಂಕಲನದಿಂದ ಆರಿಸಲಾಗಿದೆ.

      ಪದಗಳ ಅರ್ಥ
ಉಪ- ಮುಂಬೆಳಗು: ಮುಂಜಾವು,
ಚಿಂತನ - ಯೋಗ್ಯ, ಯೋಚನೆ
ಕದ - ಬಾಗಿಲು
ಜಗ - ಜಗತ್ತು; ಪ್ರಪಂಚ: ವಿಶ್ವ: ಲೋಕ,
ತಮ - ಕತ್ತಲು
ನಕ್ಷತ್ರ ಜಾರಿ - ರಾತ್ರಿ ಕಳೆದು
ಪಾನಕೇಳಿ - ಪಾನೀಯ ಕುಡಿಯುವುದಕ್ಕೆ ಎದ್ದೇಳಿ
ನಿಶೆ- ರಾತ್ರಿ, ಮಂಪರು.
ಮಾರ - ಮನ್ಮಥ
ಬಾನು - ಆಕಾಶ
ಮರಳಿ – ಮತ್ತೆ; ಹಿಂದಿರುಗಿ
ಮಿಗಿಲು - ಹೆಚ್ಚು
ಮೂಡಲು – ಪೂರ್ವದಿಕ್ಕು -
ರಸ -  ಅನುಭವದ ಸವಿ: ಸಾರ
ಹರೆಯ - ಹದಿವಯಸ್ಸು: ಯೌವ್ವನ; ಪ್ರಾಯ. ಹೊಗರು - ಕಾಂತಿ
ಹೋದವರು - ಮರಣ ಹೊಂದಿದವರು
ಹುಸಿನಿದ್ದೆ - ಅಲಸ್ಯದ ವಿಶ್ರಾಂತಿ: ಸುಳ್ಳು ನಿದ್ರೆ  ಹೊತ್ತು - ಸಮಯ: ಗಳಿಗೆ: ವೇಳೆ.

    ಪ್ರಶ್ನೆಗಳು

●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ನಕ್ಷತ್ರ ಜಾರಿ, ತಮವೆಲ್ಲ ಸೋರಿದುದು ಯಾವಾಗ?

ಉತ್ತರ:- ಆಕಾಶದ ಬೆಳಗಿನ ಬಣ್ಣ ಹೆಚ್ಚಾದಂತೆ ನಕ್ಷತ್ರ ಜಾರಿ ತಮವೆಲ್ಲ ಸೋರಿದೆ.

2. ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವನು ಯಾರು?
ಉತ್ತರ:- ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವನು ಮಾರ,

3 ಕವಿಗೆ ಜಗವು ಸವಿಯಾಗಿ ಯಾವಾಗ ಕಂಡಿತು?
ಉತ್ತರ:- ರಾತ್ರಿಯ ಮಂಪರು ಕಳೆದು ಮುಂಜಾವಿನ ಎಳೆ ಬಿಸಿಲಿನ ನಗೆಯ ರೀತಿಗೆ ಸೋತಿರಲು ಜಗವು ಸವಿಯಾಗಿ ಕಂಡಿತು.

4. ಕವಿ ಮಕ್ಕಳಿಗೆ ಹುಸಿನಿದ್ದೆ ಸಾಕು ಮೇಲೇಳಿ ಎಂದು ಏಕೆ ಕರೆ ನೀಡುತ್ತಾರೆ?
ಉತ್ತರ:- ಜಗದ ಅನುಭವದ ಸವಿಯನ್ನು ಅನುಭವಿಸಲು ಮೇಲೇಳಿ ಎಂದು ಕವಿ ಮಕ್ಕಳಿಗೆ ಕರೆ ನೀಡುತ್ತಾರೆ. 

5. ಜೀವನದ ನದಿಗಿರುವ ಆತಂಕಗಳೇನು?
ಉತ್ತರ:- ಜೀವನವೆಂಬ ನದಿಗೆ ನೂರಾರು ಸೆಳೆವುಗಳಿವೆ ಯಾವ ಕ್ಷಣದಲ್ಲದರೂ ಸಾವು ಬರಬಹುದು.

6, ಮುಪ್ಪು ಯಾವುದರಲ್ಲಿ ಮುಳುಗಿರುತ್ತದೆ?
ಉತ್ತರ:- ಮುಪ್ಪು ಚಿಂತೆಯಲ್ಲಿ ಮುಳುಗಿರುತ್ತದೆ.

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಬೆಳಕೆಂಬ ಬೇಟೆಗಾರ ಬಂದಾಗ ಪ್ರಕೃತಿಯಲ್ಲಿ ಯಾವ ಬದಲಾವಣೆಗಳಾಗುತ್ತವೆ?

ಉತ್ತರ:- ಬೆಳಕೆಂಬ ಬೇಟೆಗಾರನಾದ ಸೂರ್ಯ ಉದಯಿಸಿದಾಗ, ರಾತ್ರಿಯ ನಕ್ಷತ್ರಗಳೆಲ್ಲಾ ಸರಿದು ಆಕಾಶದಲ್ಲಿ ಹೊಂಬಣ್ಣ ಬರುತ್ತದೆ. ಗುಡಿಗೋಪುರಗಳ ಮೇಲೆ ಬಲೆ ಬೀಸಿದಂತೆ ಹೊಂಬಣ್ಣದ ಬಿಸಿಲು ಹರಡಿರುತ್ತದೆ. ಪ್ರಕೃತಿಯ ಉಲ್ಲಾಸಮಯ
ವಾತಾವರಣ ಹೊನ್ನಿನಂತೆ ಕಾಣುತ್ತದೆ.

2. ಜೀವನದ ಸವಿಯನ್ನು ಸವಿಯಲು ತಡಮಾಡಬಾರದು, ಏಕೆ?
ಉತ್ತರ:- ಏಕೆಂದರೆ, ನಮ್ಮ ಜೀವನವೆಂಬ ನದಿಗೆ ನೂರಾರು ಸೆಳೆವುಗಳಿವೆ. ಯಾವ ಕ್ಷಣದಲ್ಲಾದರೂ ಸಾವು ಬರಬಹುದು. ಒಮ್ಮೆ ಮರಣ ಹೊಂದಿದವರು ಮತ್ತೆ ಬದುಕಿ ಬರಲಾರರು. ಆದುದರಿಂದ ತಡಮಾಡದೆ ಜೀವನದ ಸವಿಯನ್ನು ಸವಿಯಲು ಎದ್ದು ಕಾರ್ಯಪ್ರವೃತ್ತರಾಗಬೇಕು.

3. 'ಬೆಳಗು ಜಾವ' ಕವಿತೆಯಲ್ಲಿ ಕವಿ ನೀಡಿರುವ ಸಂದೇಶವೇನು?
ಉತ್ತರ:- ಪ್ರಾತಃಕಾಲದಲ್ಲಿ ನಿದ್ದೆ ಮಾಡುವ ತಾಮಸಿಗಳಾಗದೆ, ಚೈತನ್ಯವುಳ್ಳ ಸಾತ್ವಿಕರಾಗಿ, ಕಾರ್ಯತತ್ಪರರಾಗಿ ಬದುಕಬೇಕು. ಯೌವನದ ಸುಗ್ಗಿ ಜೀವಮಾನದಲ್ಲಿ ಒಮ್ಮೆ ಮಾತ್ರ ಬರುವಂತದ್ದು. ಆದುದರಿಂದ ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ಕವಿ ನೀಡಿದ್ದಾರೆ.

●    ಕೆಳಗಿನ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1.'ಬೆಳಗು ಜಾವ' ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

ಉತ್ತರ:- ಕವಿ 'ಬೆಳಗು ಜಾವ' ಪದ್ಯದಲ್ಲಿ ಚಿಕ್ಕವರು, ದೊಡ್ಡವರು ಎಲ್ಲರನ್ನು ಎಚ್ಚರಗೊಳಿಸುತ್ತಿದ್ದಾರೆ. ಬೆಳಕು ಹರಿಯುತ್ತಿದ್ದಂತೆಯೇ ಪ್ರಕೃತಿಯ ಉಲ್ಲಾಸಮಯ ವಾತಾವರಣ ತೆರೆದುಕೊಳ್ಳುತ್ತದೆ. ಅಂತಹ ಸುಂದರ ಕ್ಷಣದ ಸವಿಯನ್ನು ಸವಿಯಲು ನಿದ್ದೆ ಆಲಸ್ಯಗಳನ್ನು ಎಲ್ಲರೂ ತೊರೆಯಬೇಕು. ರಾತ್ರಿಯ ನಕ್ಷತ್ರಗಳೆಲ್ಲಾ ಸರಿದು ಆಕಾಶದಲ್ಲಿ ಹೊಂಬಣ್ಣ ಏರುತ್ತದೆ. ಗುಡಿಗೋಪುರಗಳ ಮೇಲೆ ಬಲೆ ಬೀಸಿದಂತೆ ಹೊಂಬಣ್ಣದ ಬಿಸಿಲು ಹರಡಿದೆ. ಇಂತಹ ಪ್ರಾತಕಾಲದ ಎಳನಗೆಯ ಬಗೆಗೆ ಜಗತ್ತೇ ಸೋತಿರುವಾಗ ಮನುಷ್ಯರಾದ ನಾವು ಸಮಯವನ್ನು ವ್ಯರ್ಥವಾಗಿ ಕಳೆಯದೆ, ಆನಂದದ ಕ್ಷಣಗಳನ್ನು ಹಾಳುಮಾಡಿಕೊಳ್ಳಬಾರದು. ಬೆಳಗು ಜಾವದ ಸವಿಯನ್ನು ಆನಂದಿಸಬೇಕು. ಈ ಜಗತ್ತಿನಲ್ಲಿ ತುಂಬಿದ ಬಾಳು ನಮ್ಮದಾಗಿರಲು ಅದರ ಸಂಪೂರ್ಣ ಪ್ರಯೋಜನವನ್ನು ನಾವು ಪಡೆಯಬೇಕು. ನಮ್ಮ ಜೀವನವು ಕ್ಷಣಿಕವಾಗಿದ್ದು ಅದರ ಸೆಳೆವಿನಲ್ಲಿ ಸಿಲುಕಿ ಏನಾಗಿತ್ತದೆಯೋ ತಿಳಿಯಲಾರೆವು, ಮರಣ ಯಾವಾಗ ಹುಡುಕಿ ಬರುವುದೋ ಅರಿಯವು. ಒಮ್ಮೆ ಈ ಲೋಕ ಬಿಟ್ಟು ಹೋದ ಮೇಲೆ ಬೇಕೆಂದರೂ ಮರಳಿ ಬರಲಾರವು. ಆದ್ದರಿಂದ ಇರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಯೌವನ ಕಾಲದ ಸುಗ್ಗಿ ಒಮ್ಮೆ ಕಳೆದರೆ ಮತ್ತೆ ಸಿಗಲಾರದು. ಮುಪ್ಪು ಚಿಂತೆಯಲ್ಲಿ ಮುಳುಗಿ ಹೋಗುತ್ತದೆ. ಆದುದರಿಂದ ಎಲ್ಲರೂ ಏಳಿರಿ ಜಗತ್ತಿನ ಮತ್ತು ಜೀವನದ ಸವಿಯನ್ನು ಹಾಗೂ ಆನಂದವನ್ನು ಸವಿಯಿರಿ ಎಂದು ಕವಿ ಹೇಳಿದ್ದಾರೆ.

●    ಸಂದರ್ಭದೊಡನೆ ವಿವರಿಸಿ.

1. ಈ ತುಂಬಿ ಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು.
ಆಯ್ಕೆ:-
ಈ ವಾಕ್ಯವನ್ನು "ದ. ರಾ. ಬೇಂದ್ರೆ" ಅವರು ಬರೆದಿರುವ'ವಿನಯ 'ಎಂಬ ಕೃತಿಯಿಂದ ಆಯ್ದ"ಬೆಳಗು ಜಾವ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳುತ್ತಾರೆ.
ಸ್ವಾರಸ್ಯ:- ಕವಿ ಬೆಳಗು ಜಾವದ ಸುಂದರ ವರ್ಣನೆಯನ್ನು ಮಾಡುತ್ತಾ, ರಾತ್ರಿ ಕಳೆದು ಪ್ರಾತಕಾಲದ ಎಳೆನಗೆಯ ರೀತಿಗೆ ಜಗವೇ ಸೋತಿರುವಾಗ ಮನುಷ್ಯರಾದ ನಾವು ಸಮಯವನ್ನು ವ್ಯರ್ಥಮಾಡದೇ ಜೀವನವನ್ನು ಆನಂದಿಸಿ ಎಂದು ಹೇಳುವಾಗ ಈ ಮೇಲಿನ ಮಾತು ವ್ಯಕ್ತವಾಗಿದೆ.

2. ಚೇನ್ನೊಣದ ಹೆದೆಗೆ ಹೂಬಾಣ ಹೂಡಿ ಝಂ ಎಂದು ಬಿಟ್ಟ ಮಾರ.
ಆಯ್ಕೆ:
- ಈ ವಾಕ್ಯವನ್ನು "ದ. ರಾ. ಬೇಂದ್ರೆ" ಅವರು ಬರೆದಿರುವ 'ವಿನಯ ' ಎಂಬ ಕೃತಿಯಿಂದ ಆಯ್ದ"ಬೆಳಗು ಜಾವ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳುತ್ತಾರೆ.
ಸ್ವಾರಸ್ಯ:-  ಕವಿ ಬೆಳಗು ಜಾವದ ಸುಂದರ ವರ್ಣನೆಯನ್ನು ಮಾಡುತ್ತಾ, ನಕ್ಷತ್ರಗಳೆಲ್ಲಾ ಜಾರಿದಂತೆ ಆಕಾಶದಲ್ಲಿ ಹೊಂಬಣ್ಣ ಏರುತ್ತದೆ. ಗುಡಿಗೋಪುರಗಳ ಮೇಲೆ ಬಲೆ ಬೀಸಿದಂತೆ ಹೊಂಬಣ್ಣದ ಬಿಸಿಲು ಹರಡಿದೆ ಎಂದು ವರ್ಣಿಸುವಾಗ ಈ ಮೇಲಿನ ಮಾತು ಬ೦ದಿದೆ. 

3. ಜೀವನದ ನದಿಗೆ ಸೆಳೆವಿಹುದು.
ಆಯ್ಕೆ:-
ಈ ವಾಕ್ಯವನ್ನು "ದ. ರಾ. ಬೇಂದ್ರೆ" ಅವರು ಬರೆದಿರುವ 'ವಿನಯ ' ಎಂಬ ಕೃತಿಯಿಂದ ಆಯ್ದ"ಬೆಳಗು ಜಾವ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳುತ್ತಾರೆ.
ಸ್ವಾರಸ್ಯ:- ಕವಿ ಬೆಳಗು ಜಾವದ ಸುಂದರ ವರ್ಣನೆಯನ್ನು ಮಾಡುತ್ತಾ, ನಮ್ಮ ಜೀವನವು ಕ್ಷಣಿಕವಾಗಿದ್ದು ಅದರ ಸೆಳವಿನಲ್ಲಿ ಸಿಲುಕಿ ಏನಾಗಿತ್ತದೆಯೋ ತಿಳಿಯಲಾರೆವು, ಆದುದರಿಂದ ಎಲ್ಲರೂ ಏಳಿರಿ ಜಗತ್ತಿನ ಮತ್ತು ಜೀವನದ ಸವಿಯನ್ನು ಹಾಗೂ ಆನಂದವನ್ನು ಸವಿಯಿರಿ ಎಂದು ಹೇಳುವಾಗ ಈ ಮೇಲಿನ ಮಾತು ವ್ಯಕ್ತವಾಗಿದೆ.

4. ಮುಳುಗಿರಲಿ, ಮುಪ್ಪು ಚಿಂತನದಿ ತಾನು ಹರೆಯಕ್ಕೆ ಬೇರೆ ಹೊತ್ತೆ
ಆಯ್ಕೆ:
- ಈ ವಾಕ್ಯವನ್ನು "ದ. ರಾ. ಬೇಂದ್ರೆ" ಅವರು ಬರೆದಿರುವ 'ವಿನಯ ' ಎಂಬ ಕೃತಿಯಿಂದ ಆಯ್ದ"ಬೆಳಗು ಜಾವ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳುತ್ತಾರೆ.
ಸ್ವಾರಸ್ಯ:- ಕವಿ ಬೆಳಗು ಜಾವದ ಸುಂದರ ವರ್ಣನೆಯನ್ನು ಮಾಡುತ್ತಾ, ಮರಣ ಯಾವಾಗ ಹುಡುಕಿ ಬರುವುದೋ ಅರಿಯವು. ಒಮ್ಮೆ ಈ ಲೋಕ ಬಿಟ್ಟು ಹೋದ ಮೇಲೆ ಬೇಕೆಂದರೂ ಮರಳಿ ಬರಲಾರೆವು. ಆದ್ದರಿಂದ ಇರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳುವಾಗ ಈ ಮೇಲಿನ ಮಾತು ವ್ಯಕ್ತವಾಗಿದೆ.

   ಭಾಷಾಭ್ಯಾಸ

ಆ) ಕೆಳಗಿನ ಪದಗಳಿಗೆ ತತ್ಸಮ - ತದ್ಭವ ರೂಪ ಬರೆಯಿರಿ.

ಬಣ್ಣ – ವರ್ಣ
ಕ್ಷಣ - ಚಣ
ಹರೆಯ - ಪ್ರಾಯ

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ,
ಏಳು X ಬೀಳು
ಬೆಳಕು X ಕತ್ತಲು
ಸರಸ X ವಿರಸ 
ಮುಪ್ಪುX ಯೌವನ

ಈ ಕೆಳಗಿನ ಪದಗಳಿಗೆ ಸ್ತ್ರೀಲಿಂಗ ರೂಪ ಬರೆಯಿರಿ.
ಯುವಕ - ಯುವತಿ
ಮಹಾರಾಜ - ಮಹಾರಾಣಿ
ಸಚಿವ - ಸಚಿವೆ
ಅಣ್ಣ - ಅಕ್ಕ 
ಗೆಳೆಯ – ಗೆಳೆತಿ
You Might Like

Post a Comment

0 Comments