ಪದ್ಯ೧೫
ವಚನಗಳು
ಕವಿ/ಲೇಖಕರ ಪರಿಚಯ
* ಜೇಡರ ದಾಸಿಮಯ್ಯ ಇವರು ಕ್ರಿ ಶ 1040 ರಲ್ಲಿ ಯಾದಗಿರಿ ಸಮೀಪದ ಮುದೇನೂರು ಎಂಬಲ್ಲಿ ಜನಿಸಿದರು.
* ಇವರು ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳ ಅಂಕಿತ 'ರಾಮನಾಥ'
• ಪ್ರಸ್ತುತ ವಚನಗಳನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರು ಪ್ರಕಟಿಸಿರುವ 'ಸಂಕೀರ್ಣ ವಚನ ಸಂಪುಟ-2' ಎಂಬ ಕೃತಿಯಿಂದ ಆರಿಸಿದೆ.
* ಇವರು ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳ ಅಂಕಿತ 'ರಾಮನಾಥ'
• ಪ್ರಸ್ತುತ ವಚನಗಳನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರು ಪ್ರಕಟಿಸಿರುವ 'ಸಂಕೀರ್ಣ ವಚನ ಸಂಪುಟ-2' ಎಂಬ ಕೃತಿಯಿಂದ ಆರಿಸಿದೆ.
ಪದಗಳ ಅರ್ಥ
ಅಗ್ನಿ, - ಬೆಂಕಿ
ದರ್ಪ - ಅಹಂಕಾರ: ಹಮ್ಮು
ಮಂದಾಗ್ನಿ - ಹೆಚ್ಚು ಉರಿಯಿಲ್ಲದ ಬೆಂಕಿ.
ಮೃಡ - ಶಿವ
ಸಲ್ನುಡಿ - ಒಳ್ಳೆಯ ಮಾತು; ತಿರುಳುಳ್ಳ ನುಡಿ.
ಅರಘಳಿಗೆ - ಸ್ವಲ್ಪ ಹೊತ್ತು
ಒಲ್ಲೆ - ಬೇಡ
ಕಡೆಗೀಲು - ಕಡಾನೀ: ಕಠಾಣಿ.
ಗಡಣ - ಸಮೂಹ: ಗುಂಪು.
ನಚ್ಚು – ನ೦ಬು
ಬೆರಸು - ಒಂದು ಗೂಡಿಸು
ಮಾಬುದೇ - ಬಿಡುವುದೇ
ಸಿರಿ – ಐಶ್ವರ್ಯ: ಸಂಪತ್ತು
ಹೊಡೆಗೆಡೆ - ಮಗುಚಿ ಬೀಳು
ಪ್ರಶ್ನೆಗಳು
● ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
1. ಜೇಡರ ದಾಸಿಮಯ್ಯ ಅವರ ಅಂಕಿತನಾಮವೇನು?
ಉತ್ತರ:- ಜೇಡರ ದಾಸಿಮಯ್ಯ ಅವರ ಅಂಕಿತನಾಮ ರಾಮನಾಥ
2. ಬಂಡಿಗೆ ಆಧಾರ ಯಾವುದು?
ಉತ್ತರ:- ಬಂಡಿಗೆ ಆಧಾರ ಕಡೆಗೀಲು
3. ಒಡಲೆಂಬ ಬಂಡಿಗೆ ಯಾವುದು ಕಡೆಗೀಲು?
ಉತ್ತರ:- ಒಡಲೆಂಬ ಬಂಡಿಗೆ ಮೃಡಭಕ್ತರ ನುಡಿಗಡಣವೆ ಕಡೆಗೀಲು
4. ಯಾರ ಭಕ್ತಿಯನ್ನು ನಿಜವೆಂದು ನಂಬಬಾರದು?
ಉತ್ತರ:- ಬರುಸಠಗನ ಭಕ್ತಿಯನ್ನು ನಿಜವೆಂದು ನಂಬಬಾರದು.
● ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
1. ಭಗವಂತನು ಮಾನವನ ಶರೀರದೊಳಗೆ ಆತ್ಮವನ್ನು ಯಾವ ರೀತಿ ಬೆರೆಸಿದ್ದಾನೆ?
ಉತ್ತರ:- ಭಗವಂತನು ಮರದಲ್ಲಿ ಮಂದಾಗ್ನಿಯನ್ನು ಉರಿಯದಂತಿರಿಸಿದ್ದಾನೆ.ಅದೇ ರೀತಿ ನೊರೆ ಹಾಲಿನೊಳಗೆ ತುಪ್ಪವಿದ್ದರೂ ಅದರ ಕಂಪು ಇಲ್ಲದಂತೆ ಇರಿಸಿದ್ದಾನೆ. ನಮ್ಮ ಶರೀರದಲ್ಲಿ ಆತ್ಮ ನೆಲೆಸಿದ್ದರೂ ಅದು ಕಾಣದಂತೆ ಇರಿಸಿದ್ದಾನೆ. ದೇವರು ಸೃಷ್ಟಿಸಿರುವ ಎಲ್ಲಾ ವೈಚಿತ್ಯಗಳನ್ನು ಕಂಡು ದಾಸಿಮಯ್ಯ ಅವರು ಬೆರಗಾಗಿದ್ದಾರೆ.
2. ಕಡುದರ್ಪವೇರಿದ ಒಡಲು ಎಂದರೇನು? ಅದನ್ನು ಯಾವುದಕ್ಕೆ ಹೋಲಿಸಲಾಗಿದೆ?
ಉತ್ತರ:- ಕಡುದರ್ಪವೇರಿದ ಒಡಲು ಎಂದರೆ ಅಹಂಕಾರದಿಂದ ಕೂಡಿದ ದೇಹ ಎಂದರ್ಥ. ಅಂತೆಯೇ ಕಡುದರ್ಪವೇರಿದ ನಮ್ಮ ಶರೀರವೆಂಬ ಬ೦ಡಿಗೆ ಶಿವಭಕ್ತರ ಹಿತನುಡಿಗಳೇ ಕಡೆಗೀಲು ಇದ್ದಂತೆ. ಇಂತಹ ಕಡುದರ್ಪವೇರಿದ ಒಡಲನ್ನು ಕಡೆಗೀಲಿಗೆ ಹೋಲಿಸಲಾಗಿದೆ. ನಮ್ಮ ಶರೀರವೆಂಬ ಬಂಡಿ ಆಚೆ ಹೋಗದಂತೆ, ದಾರಿತಪ್ಪದಂತೆ ಕಡೆಗೀಲು ಹಿಡಿದಿಡುತ್ತದೆ ಎಂದು ದಾಸಿಮಯ್ಯನವರು ಹೇಳುತ್ತಾರೆ.
3. ಜೇಡರ ದಾಸಿಮಯ್ಯನು ಭಗವಂತನ ಯಾವ ಭೇದಕ್ಕೆ ಬೆರಗಾಗಿದ್ದಾನೆ?
ಉತ್ತರ:- ಮರದಲ್ಲಿ ಮಂದಾಗ್ನಿಯನ್ನು ಇರಿಸಿದ್ದರೂ ಅದು ಉರಿಯದಂತೆ ಇಟ್ಟಿರುವೆ, ಅದೇ ರೀತಿ ನೊರೆ ಹಾಲಿನೊಳಗೆ ತುಪ್ಪವಿದ್ದರೂ ಅದರ ಕಂಪು ಇಲ್ಲದಂತೆ ಇಟ್ಟಿರುವೆ. ನಮ್ಮ ಶರೀರದಲ್ಲಿ ಆತ್ಮ ನೆಲೆಸಿದ್ದರೂ ಅದು ಕಾಣದಂತೆ ಇಟ್ಟಿರುವೆ. ನೀ ಬೆರೆಸುವ ಭೇದಕ್ಕೆ ಬೆರಗಾದೆನಯ್ಯ ರಾಮನಾಥ ಎಂದು ದಾಸಿಮಯ್ಯನವರು ಹೇಳುತ್ತಾರೆ.
● ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ,
1. ಜೇಡರ ದಾಸಿಮಯ್ಯನವರು ಮೊದಲ ಎರಡು ವಚನಗಳಲ್ಲಿ ಶರಣರ ಸೂಳ್ಳುಡಿಯ ಮಹತ್ವವನ್ನು ಯಾವರೀತಿ ವರ್ಣಿಸಿದ್ದಾರೆ?
ಉತ್ತರ:- ಆನೆಯನ್ನು ಕೊಟ್ಟರೂ ಬೇಡ, ಸಿರಿ ಸಂಪತ್ತುಗಳನ್ನು ನೀಡಿದರೂ ಬೇಡ, ವಿಸ್ತಾರವಾದ ರಾಜ್ಯವನ್ನು ನನಗೆ ನೀಡಿದರೂ ಅವು ಯಾವುದೂ ಬೇಡವೆಂದು ದಾಸಿಮಯ್ಯನವರು ನಿರಾಕರಿಸುತ್ತಾರೆ. ಒಂದು ಬಾರಿ ನಿಮ್ಮ ಶಿವಶರಣರ ಅನುಭವದ ಮಾತನ್ನು ಒಂದರ್ಧ ಘಳಿಗೆ ಕೇಳುವಂತೆ ಮಾಡಿದರೆ ಸಾಕು, ಶಿವನೇ ಸಿಕ್ಕಂತೆ ಸಂತೋಷ ಪಡುತ್ತೇನೆ. ಬಂಡಿಯ ಚಕ್ರಕ್ಕೆ ಕಡಾಣಿಯೇ ಆಧಾರ, ಅಂತೆಯೇ ಕಡುದರ್ಪವೇರಿದ ನಮ್ಮ ಶರೀರವೇಂಬ ಬಂಡಿಗೆ ಶಿವಭಕ್ತರ ಹಿತನುಡಿಗಳೇ ಕಡೆಗೀಲು ಇದ್ದಂತೆ, ನಮ್ಮ ಶರೀರವೆಂಬ ಬಂಡಿ ಆಚೆ ಹೋಗದಂತೆ, ದಾರಿ ತಪ್ಪದಂತೆ, ಹಿಡಿದಿಡುತ್ತದೆ ಎಂದು ದಾಸಿಮಯ್ಯನವರು ಹೇಳುತ್ತಾರೆ.
2. ಜೇಡರ ದಾಸಿಮಯ್ಯ ಡಾಂಭಿಕ ಭಕ್ತಿಯನ್ನು ಯಾವ ರೀತಿ ಖಂಡಿಸಿದ್ದಾರೆ?
ಉತ್ತರ:- ಡಾಂಭಿಕನ ತೋರಿಕೆಯ ಭಕ್ತಿಯನ್ನು ನಿಜವೆಂದು ನಂಬಬಾರದು. ಮರದಲ್ಲಿ ಭಕ್ತಿ, ದಯೆ, ಶಾಂತಿ, ಅಹಿಂಸೆಯ ವಾತಾವರಣದಲ್ಲಿಯೇ ಬೆಳೆದ ಬೆಕ್ಕು ಇಲಿಯನ್ನು ಕಂಡ ಕೂಡಲೇ ಹಾರಿ ನೆಗೆದು ಅದನ್ನು ಹಿಡಿಯಲು ಪ್ರಯತ್ನಿಸುವಂತೆ, ಡಾಂಭಿಕ ಭಕ್ತಿಯೂ ಸಹ ಸಮಯ ಬಂದಾಗ ತನ್ನ ನಿಜ ಸ್ವರೂಪವನ್ನು ತೋರುತ್ತದೆ. ಆದುದರಿಂದ ಇಂತವರ ಕುರಿತು ಎಚ್ಚರದಿಂದ ಇರಬೇಕೆಂದು ದಾಸಿಮಯ್ಯನವರು ಹೇಳುತ್ತಾರೆ.
3. 12 ನೇ ಶತಮಾನದ ವಚನ ಸಾಹಿತ್ಯದ ವೈಶಿಷ್ಟ್ಯತೆ ಏನು?
ಉತ್ತರ:- ಹನ್ನೆರಡನೆಯ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಒಂದು ಪರ್ವಕಾಲ, ವಚನ ಸಾಹಿತ್ಯವು ಸಾಮಾಜಿಕ, ಧಾರ್ಮಿಕ, ನೈತಿಕ, ಸಾಹಿತ್ಯಕ ಪರಿವರ್ತನೆಗೆ ಪ್ರಯತ್ನಿಸಿದ ಕಾಲಘಟ್ಟವಾಗಿತ್ತು. ಮಾನವೀಯತೆ, ಜಾತಿ ಭೇದಗಳನ್ನು ಮೀರಿ ದೀನದಲಿತರ ಸ್ವಾತಂತ್ರ್ಯ ಮತ್ತು ಹಕ್ಕಿಗಾಗಿ ಹೋರಾಟದ ಕಾಲವಾಗಿತ್ತು. ಲಿಂಗ ತಾರತಮ್ಯವನ್ನು ಮೀರಿ ಸ್ತ್ರೀ ಹಾಗೂ ಮರುಷರಿಬ್ಬರಿಗೂ ಸಮಾನ ಅಧಿಕಾರ, ಅವಕಾಶಗಳನ್ನು ನೀಡಲಾಯಿತು. ಮಾನವೀಯತೆ, ಉದಾರತೆ, ಪ್ರಾಮಾಣಿಕತೆ, ವಿಶ್ವಪ್ರೇಮ, ಜಾತ್ಯಾತೀತತೆಯನ್ನು ವಚನ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಕಾಯಕ ನಿಷ್ಠೆ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಮೌಲ್ಯಗಳನ್ನು ವಚನ ಸಾಹಿತ್ಯವು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ.
● ಸಂದರ್ಭದೊಂದಿಗೆ ಈ ವಾಕ್ಯಗಳ ಅರ್ಥವನ್ನು ಸೃಷ್ಟಿಕರಿಸಿರಿ.
1. ಮೃಡಭಕ್ತರ ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ,
ಆಯ್ಕೆ:- ಈ ವಾಕ್ಯವನ್ನು "ಜೇಡರ ದಾಸಿಮಯ್ಯ" ಅವರು ಬರೆದಿರುವ'ಸಂಕೀರ್ಣ ವಚನ ಸಂಪುಟ 2 ' ಎಂಬ ಕೃತಿಯಿಂದ ಆಯ್ದ"ವಚನಗಳು" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳುತ್ತಾರೆ.
ಸ್ವಾರಸ್ಯ:- ಬಂಡಿಯ ಚಕ್ರಕ್ಕೆ ಕಡಾಣಿಯೇ ಆಧಾರ. ಅಂತೆಯೇ ಕಡುದರ್ಪವೇರಿದ ನಮ್ಮ
ಶರೀರವೇಂಬ ಬಂಡಿಗೆ ಶಿವಭಕ್ತರ ಹಿತನುಡಿಗಳೇ ಕಡೆಗೀಲು ಇದ್ದಂತೆ. ಎಂದು ಹೇಳುವಾಗ ಈ ಮಾತು ವ್ಯಕ್ತವಾಗಿದೆ.
2. ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು.
ಆಯ್ಕೆ:- ಈ ವಾಕ್ಯವನ್ನು "ಜೇಡರ ದಾಸಿಮಯ್ಯ" ಅವರು ಬರೆದಿರುವ'ಸಂಕೀರ್ಣ ವಚನ ಸಂಪುಟ 2 ' ಎಂಬ ಕೃತಿಯಿಂದ ಆಯ್ದ"ವಚನಗಳು" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ :- ಈ ಮಾತನ್ನು ಕವಿ ಹೇಳುತ್ತಾರೆ.
ಸ್ವಾರಸ್ಯ:- ಡಾಂಭಿಕನ ತೋರಿಕೆಯ ಭಕ್ತಿಯನ್ನು ನಿಜವೆಂದು ನಂಬಬಾರದು. ಡಾಂಭಿಕ ಭಕ್ತಿಯೂ ಸಹ ಸಮಯ ಬಂದಾಗ ತನ್ನ ನಿಜ ಸ್ವರೂಪವನ್ನು ತೋರುತ್ತದೆ. ಆದುದರಿಂದ ಇಂತವರ ಕುರಿತು ಎಚ್ಚರದಿಂದ ಇರಬೇಕೆಂದು ಹೇಳುವಾಗ ಈ ಮಾತು ಬ೦ದಿದೆ.
3. ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ.
ಆಯ್ಕೆ:- ಈ ವಾಕ್ಯವನ್ನು "ಜೇಡರ ದಾಸಿಮಯ್ಯ" ಅವರು ಬರೆದಿರುವ'ಸಂಕೀರ್ಣ ವಚನ ಸಂಪುಟ 2 ' ಎಂಬ ಕೃತಿಯಿಂದ ಆಯ್ದ"ವಚನಗಳು" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳುತ್ತಾರೆ.
ಸ್ವಾರಸ್ಯ:- ಮರದಲ್ಲಿ ಮಂದಾಗ್ನಿಯನ್ನು ಇರಿಸಿದ್ದರೂ ಅದು ಉರಿಯದಂತೆ ಇಟ್ಟಿರುವೆ. ಅದೇ ರೀತಿ ನೊರೆ ಹಾಲಿನೊಳಗೆ ತುಪ್ಪವಿದ್ದರೂ ಅದರ ಕಂಪು ಇಲ್ಲದಂತೆ ಇಟ್ಟಿರುವೆ. ನಮ್ಮ ಶರೀರದಲ್ಲಿ ಆತ್ಮ ನೆಲೆಸಿದ್ದರೂ ಅದು ಕಾಣದಂತೆ ಇರಿಟ್ಟಿರುವೆ. ನೀ ಬೆರೆಸುವ ಭೇದಕ್ಕೆ ಬೆರಗಾದೆನಯ್ಯ ರಾಮನಾಥ ಎಂದು ಹೇಳುವಾಗ ಈ ಮಾತು ಬಂದಿದೆ.
ಭಾಷಾಭ್ಯಾಸ
ಆ) ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
1. ಕಲ, ಕರ, ಆನೆ, ಗಜ, = ಕರ
2. ದರ್ಪ, ಸೊಕ್ಕು ಹಮ್ಮು, ವಿನಯ = ವಿನಯ
ಆ) ಕೆಳಗೆ ನೀಡಿರುವ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.
ಹಿರಿದು X ಕಿರಿದು, ಆಧಾರ X ನಿರಾಧಾರ
ಶಕ್ತ Xಅಶಕ್ತ ಭಕ್ತ X ಡಾಂಭಿಕ
ಈ) ಕೆಳಗಿನ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.
ಮಾದರಿ:
ಹಿರಿದಪ್ಪ - ಹಿರಿದು + ಅಪ್ಪ
ಸಿರಿಯನಿತ್ತಡೆ = ಸಿರಿಯನ್ನು + ಇತ್ತಡೆ
ಕಡೆಗಿಲು = ಕಡೆ + ಕೀಲು
ಮಂದಾಗ್ನಿ = ಮ೦ದ + ಅಗ್ನಿ
ಉ) ಕೆಳಗಿನ ಪದಗಳಿಗೆ ತತ್ಸಮ-ತದ್ಭವಗಳನ್ನು ಬರೆಯಿರಿ.
ಸಿರಿ - ಶ್ರೀ
ಭಕ್ತ - ಬಕುತ,
ಅಗ್ನಿ - ಅಗ್ಗಿ.
0 Comments