Recent Posts

ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                                               
                                    ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ             
                                                                                                                -ರಮೇಶಗೌಡ  ಎಂ.ಕೆ.

ಕವಿ/ಲೇಖಕರ ಪರಿಚಯ
?  ರಮೇಶಗೌಡ. ಎಂ.ಕೆ. ಅವರು 1975 ರಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ಜನಿಸಿದರು.  
?  ಇವರು ಅಮೃತಕ್ಕೆ ಹಾರಿದ ಗರುಡ, ರೂಪ ಬಯಲು, ಗಾನಯೋಗಿ ಡಾ|| ಪಂ. ಪುಟ್ಟರಾಜ ಕವಿ ಗವಾಯಿಗಳು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಶ್ರೀಯುತರಿಗೆ ರತ್ನಾಕರವಣರ್ಿ ಮುದ್ದಣ್ಣ ದತ್ತಿ ಪ್ರಶಸ್ತಿ ಮತ್ತು ವರ್ಷದ ಉತ್ತಮ ಕೃತಿ ಪ್ರಶಸ್ತಿಗಳು ಲಭಿಸಿವೆ.                                                                         

                                                          ಅಭ್ಯಾಸ
1.ಪದಗಳ ಅರ್ಥ :  

ಅಂಧ - ಕುರುಡ; ಕಣ್ಣು ಕಾಣದವ.                 ಅಂತಃಕರಣ - ಮನಸ್ಸು; ದಯೆ.
ಅನಂತ - ಕೊನೆಯಿಲ್ಲದ                                  ಅನಿಕೇತನ - ಮನೆ ಇಲ್ಲದವ ಅಂದರೆ ವಿಶ್ವಮಾನವ.
ಅಭಿಲಾಷ ೆ - ಆಸೆ; ಬಯಕೆ.                            ಅಮರ - ದೇವತೆ; ಶಾಶ್ವತವಾಗು.
ಆರ್ತ - ಕಷ್ಟಕ್ಕೆ ಸಿಕ್ಕ; ದುಃಖಿತ.                         ಉದರ - ಹೊಟ್ಟೆ
 ಗ್ರಹಿಸಿ - ತಿಳಿದುಕೊಂಡು                                  ಜಂಗಮ - ಚಲಿಸುವ; ವೀರಶೈವ ಧರ್ಮದ ವಿರಕ್ತ.
ನಿಷ್ಣಾತ - ಪಾರಂಗತ; ನಿಪುಣ.                          ಪರಿ - ಅರಿ; ಕಣ್ಣಿನ ರೋಗ;
ಕತ್ತರಿಸು. ಬಾಷ್ಪ  - ಕಣ್ಣೀರು; ಕಂಬನಿ.             ಬೇನೆ - ರೋಗ; ನೋವು.
ಮಾಧುರ್ಯ - ಸಿಹಿ; ಹಿತ.                                 ಮುಡುಪು - ಮೀಸಲು
ವಿಚಲಿತ - ಚಂಚಲ                                          ವಿಷಣ್ಣ - ಖಿನ್ನವಾದ; ಬಾಡಿದ.
ವೇದನೆ - ನೋವು                                             ಶಯನಗೈದು - ಮಲಗುವುದು.
ಸುವರ್ಣ - ಬಂಗಾರ; ಚಿನ್ನ.
ಸಿಂಹಾವಲೋಕನ - ಹಿಂದಿನ ಘಟನೆಗಳನ್ನು ಮತ್ತೊಮ್ಮೆ ವಿವರವಾಗಿ ಅವಲೋಕಿಸುವುದು ; ಹಿನ್ನೋಟ.

2.ಪ್ರಶ್ನೆಗಳು :
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ  

1. ಪುಟ್ಟರಾಜರ ತಂದೆ ತಾಯಿಗಳ ಹೆಸರೇನು?

ತಂದೆ ರೇವಣ್ಣಯ್ಯ, ತಾಯಿ ಸಿದ್ಧಮ್ಮ

2. ಶ್ರೇಷ್ಠ ಗುರುವಿನಲ್ಲಿ ಎಂತಹ ಶಕ್ತಿ ಇರುತ್ತದೆ?
ಶಿಷ್ಯರ ಮನಸ್ಸನ್ನು ಓದುವ ಶಕ್ತಿ ಇರುತ್ತದೆ.

3. ತಾಯಿ ಸಿದ್ಧಮ್ಮ ಪಂಚಾಕ್ಷರಿ ಗವಾಯಿಗಳಲ್ಲಿ ಏನೆಂದು ಬೇಡಿಕೊಂಡಳು?
ಪಾದಕ್ಕೆರಗಿ ಸೆರಗೊಡ್ಡಿ ಮಗನನ್ನು ಮನೆಗೆ ಕಳುಹಿಸಿ ಕೊಡುವಂತೆ ಬೇಡಿಕೊಂಡಳು.

4. ಪುಟ್ಟರಾಜರು ಯಾವ ಯಾವ ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದರು?
ಕನ್ನಡ  , ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದರು.

5. ಪುಟ್ಟರಾಜರು ಖಾದಿ ಬಟ್ಟೆ ತೊಡಲು ನಿರ್ಧರಿಸಿದ್ದು ಏಕೆ?

ಸ್ವದೇಶಿ ಆಂದೋಲನಕ್ಕೆ ಕೈ ಜೋಡಿಸುವುದಕ್ಕಾಗಿ.

6. ಬಾಲಕ ಪುಟ್ಟಯ್ಯನಿಗೆ ಏನನ್ನು ನುಡಿಸುವ ಆಸೆ?

ಬಾಲಕ ಪುಟ್ಟಯ್ಯನಿಗೆ ಹಾರ್ಮೋನಿಯಂ ನುಡಿಸುವ ಆಸೆ.

7. ಪುಟ್ಟರಾಜರು ಯಾವ ಲಿಪಿ ಕಲಿತು ಅದರಲ್ಲಿ ಪಾರಂಗತರಾದರು?
ಬ್ರೈಲ್ ಲಿಪಿ ಕಲಿತು ಅದರಲ್ಲಿ ಪಾರಂಗತರಾದರು.

8. ಪುಟ್ಟರಾಜರ ಜನ್ಮಸ್ಥಳ ಯಾವುದು?
ಪುಟ್ಟರಾಜರ ಜನ್ಮಸ್ಥಳ ಹಾವೇರಿ ಜಿಲ್ಲೆಯ ದೇವರ ಹೊಸಪೇಟೆ.

9. ಪುಟ್ಟರಾಜರು ಯಾವಾಗ ಜನಿಸಿದರು?
ಪುಟ್ಟರಾಜರು 1914 ರ ಮಾರ್ಚ್ 3 ರಂದು ಜನಿಸಿದರು.

10. ಪುಟ್ಟರಜರ ಗುರುಗಳ ಹೆಸರೇನು?
\ಪುಟ್ಟರಾಜರ ಗುರುಗಳ ಹೆಸರು ಪಂಚಾಕ್ಷರ ಗವಾಯಿಗಳು.

11. ಪುಟ್ಟರಾಜರ ಮಾವನ ಹೆಸರೇನು?
ಪುಟ್ಟರಾಜರ ಮಾವನ ಹೆಸರು ಚಂದ್ರಶೇಖರಯ್ಯ.

12. ಪುಟ್ಟರಾಜ ಗವಾಯಿಗಳು ಯಾವಾಗ ನಿಧನರಾದರು?

ಪುಟ್ಟರಾಜ ಗವಾಯಿಗಳು 17-09-2010 ರಲ್ಲಿ ನಿಧನರಾದರು.

 ಅ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
 
1. ಬಾಲಕ ಪುಟ್ಟಯ್ಯ ಕಣ್ಣುಗಳನ್ನು ಕಳೆದುಕೊಂಡದ್ದು ಹೇಗೆ?
ಹುಟ್ಟಿದ  ಆರು  ತಿಂಗಳಿಗೆ  ಕಣ್ಣಿನ  ರೋಗ  ಬಂದಿತ್ತು.  ಬರೀ  ನಾಟಿ  ವೈದ್ಯ  ಇತ್ತು,  ಅವರು  ಕಣ್ಣುಗುಡ್ಡೆಗೆ  ನಾಯಿಯ  ಮೈಯ್ಯಲ್ಲಿರುವ ಹುಳು  ಮುಟ್ಟಿಸಬೇಕು  ಎಂದು  ಹೇಳಿದರು.  ಆಗ  ಮುಟ್ಟಿಸುವಾಗ  ಹುಳು  ಕೈ  ಜಾರಿ  ಕಣ್ಣು  ಒಳಗೆ    ಬಿದ್ದು  ಬಿಟ್ಟವು.  ಆಗ  ಪುಟ್ಟಯ್ಯ ಕಣ್ಣುಗಳನ್ನು ಕಳೆದುಕೊಂಡರು. 
 
2. ಬಾಲಕ ಪುಟ್ಟಯ್ಯ ಪಂಚಾಕ್ಷರಿ ಗವಾಯಿಗಳ ಶಿಷ್ಯನಾದದು ಹೇಗೆ?
 ಸಂಗೀತ ಲೋಕದ ಜಗದ್ಗುರು ಪಂಡಿತ ಪಂಚಾಕ್ಷರ ಗವಾಯಿಗಳ  ಸಂಚಾರಿ ಸಂಗೀತ ಪಾಠಶಾಲೆ  ಒಮ್ಮೆ ಗವಿಮಠದಲ್ಲಿ ಕ್ಯಾಂಪ್ (ವಾಸ)  ಮಾಡಿತ್ತು.  ಅಲ್ಲಿಗೆ  ಮಾವನವರೊಂದಿಗೆ  ಪುಟ್ಟಯ್ಯನು  ಬಂದು  ಗುರುಗಳಾದ    ಪಂಚಾಕ್ಷರ  ಗವಾಯಿಗಳ  ಶಿಷ್ಯತ್ವ   ಸ್ವೀಕರಿಸಿ, ಪ್ರೀತಿಯ ಶಿಷ್ಯರೆಲ್ಲರಲ್ಲಿ ಈತನೂ ಒಬ್ಬನಾದನು.

3. ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ಪಡೆದ ಬಾಲಕ ಪುಟ್ಟಯ್ಯ ಯಾವ ಮನಸ್ಥಿತಿ ಹೊಂದಿದ್ದನು?
ನಾನೊಬ್ಬ ಅಂಧ ಬಾಲಕ, ನನ್ನಿಂದೇನಾಗಲು ಸಾಧ್ಯ? ಜಗತ್ತನ್ನು ನೋಡದ ನನಗೆ ಜಗತ್ತಿಗೆ ಏನು ಕೊಡಲು ಸಾಧ್ಯ? ಇದ್ದಷ್ಟು ದಿನ ಗುರು ಸೇವೆ ಮಾಡುತ್ತ ಊಟ ಸಿಕ್ಕಲ್ಲಿ ಹೊಟ್ಟೆಹೊರೆದು, ನೆಲ ಸಿಕ್ಕಲ್ಲಿ ಶಯನಗೈದು ಈ ಬದುಕನ್ನು ಮುಗಿಸಿದರಾಯಿತು.

4. ಪುಟ್ಟರಾಜ ಗವಾಯಿಗಳು ಯಾವ ಯಾವ ವಿದ್ಯೆಗಳಲ್ಲಿ ನಿಷ್ಣಾತರಾದರು?
ಪುಟ್ಟರಾಜ  ಗವಾಯಿಗಳು  ಪಾಣಿನಿಯ  ಅಷ್ಟಾಧ್ಯಾಯಿ,  ಶರ್ಮವರ್ಮನ  ಕಾತಂತ್ರ,  ಕೇಶಿರಾಜನ  ಶಬ್ದಮಣಿದರ್ಪಣ,  ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ ಜೊತೆಗೆ ತರ್ಕಶಾಸ್ತ್ರ, ನ್ಯಾಯಶಾಸ್ತ್ರ, ಶಬ್ಧಾನುಶಾಸ್ತ್ರ, ಛಂದಶ್ಯಾಸ್ತ್ರ  ಹಾಗೂ ಕನ್ನಡ ವ್ಯಾಕರಣಗಳಲ್ಲಿ ನಿಷ್ಣಾತರಾದರು.

5. ತಾಯಿ ಸಿದ್ಧಮ್ಮ ಪುಟ್ಟರಾಜನನ್ನು ಏನೆಂದು ಆಶೀರ್ವದಿಸಿದಳು?

ನಿನ್ನಂಥ ಶ್ರೇಷ್ಠ ಪುತ್ರರತ್ನವೊಂದನ್ನು ಹೆತ್ತ ಭಾಗ್ಯ ನನ್ನದಾಗಲಿ. ಹೆಂಡತಿ, ಮಕ್ಕಳು ಸಂಸಾರವೆಂಬ ಬಂಧನದಲ್ಲಿ ಬಂಧಿಯಾಗುವುದು ನಿನಗಿಷ್ಟವಿಲ್ಲದಿದ್ದರೆ  ನನ್ನ  ಜೊತೆ  ಬರುವುದು  ಬೇಡ  ಮಗನೆ.  ಗುರು  ಪಂಚಾಕ್ಷರರು  ತೋರುವ  ಮಾರ್ಗದಲ್ಲಿ  ನೀನು  ನಡೆದು ಅಮರನಾಗು ಕಂದ ಎಂದು ಮಗನನ್ನು ಅಂತಃಕ     ರಣ ತುಂಬಿ ಹರಸಿದರು.

6.ಪುಟ್ಟರಾಜರ ವೇಷಭೂಷಣಗಳು  ಹೇಗಿದ್ದವು?
ಶುಭ್ರವಾದ  ಬಿಳಿಯ  ಉದ್ದನೆಯ  ಅಂಗಿ,  ಪಂಚೆ,  ತಲೆಯ  ಮೇಲೊಂದು  ಅಂದವಾಗಿ  ಶಿಸ್ತಿನಿಂದ  ಸುತ್ತಿದ  ಕಾವಿ  ಬಣ್ಣದ  ಪೇಠ, ಹಣೆಯಲ್ಲಿ  ಸದಾ  ಎದ್ದುಕಾಣುವ  ವಿಭೂತಿ,  ಹುಬ್ಬುಗಳೆರಡರ  ನಡುವೆ  ಗಂಧದ  ಬೊಟ್ಟು,  ಕೊರಳಲ್ಲಿ  ರುದ್ರಾಕ್ಷಿಮಾಲೆ,  ಕೊಂಚವೇ ಬಾಗಿದ ಕತ್ತು, ಕೈಯಲ್ಲೊಂದು ಊರುಗೋಲು, ಇವು ಪುಟ್ಟರಾಜರ ವೇಷಭೂಷಣಗಳು.

7. ಪುಟ್ಟರಾಜರಿಗೆ ದೊರೆತ ಗೌರವ ಪ್ರಶಸ್ತಿಗಳಾವುವು?
ಕನ್ನಡ, ಸಂಸ್ಕೃತ, ಹಿಂದಿ  ಭಾಷೆಗಳಲ್ಲಿ 35ಕ್ಕೂ ಅಧಿಕ ಕೃತಿಗಳನ್ನು ರಚಿಸಿ ತ್ರಿಭಾಷಾ ಕವಿಯಾದರು. ಅವರ ಸಾಧನೆಗೆ ನಾಡೋಜ, ಬಸವಶ್ರೀ, ಪದ್ಮಭೂಷಣ , ಗೌರವ ಡಾಕ್ಟರೇಟ್ ಮುಂತಾದ ಗೌರವ ಪ್ರಶಸ್ತಿಗಳು ಸಾಲುಗಟ್ಟಿ ಬಂದವು.

8. ವಿಶೇಷ ಚೇತನರಿಗೆ ನೀವು ಯಾವ ಮಾತುಗಳಿಂದ ಧೈರ್ಯ ತುಂಬುವಿರಿ?
ದೈಹಿಕ  ನ್ಯೂನತೆಗಳು  ಎಂದೂ  ಅಡ್ಡಿಯಾಗಲಾರವು,  ಅದರೊಂದಿಗೆ  ಅಸಾಧ್ಯವಾದುದನ್ನು  ಸಾಧಿಸಬೇಕೆಂಬ  ಛಲವೂ  ಸೇರಿಕೊಂಡರೆ ಗುರಿಯೂ  ಹತ್ತಿರವಾಗುತ್ತದೆ.  ಯಾವುದೇ  ಅಂಗವೈಕಲ್ಯವಿದ್ದರು  ಸಕಾರಾತ್ಮಕ  ಚಿಂತನೆ  ಮಾಡುವುದರ  ಮೂಲಕ  ಗುರಿಯನ್ನು ಸಾಧಿಸಬೇಕು.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ

1. ಅಂಗಹೀನತೆ ಸಾಧನೆಗೆ ಅಡ್ಡಿಯಾಗದು ಎಂಬ ಮಾತು ಪುಟ್ಟರಾಜರ ಜೀವನದಲ್ಲಿ ನೀಜವಾಗಿದೆ ಹೇಗೆ ಸಮರ್ಥಿಸಿರಿ? 
ಪುಟ್ಟರಾಜರ ವಿಷಯದಲ್ಲಿ ನಿಜವಾಗಿದೆ. ಇದಕ್ಕೆ ಸಾಕ್ಷಿ ಅವರ ಸಾಧನೆ. ಸ್ವರಮಂಡಲ ಸಾರ     ಂಗಿ, ಸಾರೋಟ, ಪಿಟೀಲು, ಹಾರ್ಮೋನಿಯಂ, ತಬಲ ವಾದ್ಯಗ    ಳನ್ನು ನುಡಿಸುವುದರಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ಸಿದ್ದಿಯನ್ನು ಗಳಿಸಿದರು. ಬ್ರೈಲ್ ಲಿಪಿಯನ್ನು ಕಲಿತರು. ಕನ್ನಡ , ಹಿಂದಿ, ಸಂಸ್ಕೃತದ ಪರಿಚಯವನ್ನು ಮಾಡಿಕೊಂಡರು. 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ಹಲವಾರು ನಾಟಕಗಳು ಇವೆ. ಸಾರ್ವಜನಿಕ ಪತ್ರಿಕೆಗೆ ಮಾರ್ಗದರ್ಶಕರು ಆಗಿದ್ದರು. ಶ್ರೀ ಕುಮಾರೇಶ್ವರ ಎಂಬ ನಾಟ್ಯ ಸಂಘವನ್ನು ಸ್ಥಾಪಿಸಿದ್ದರು. ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಿದರು ಸಹಸ್ರಾರು ಬಡಮಕ್ಕಳ ಜ್ಞಾನದಾಹವನ್ನು ಹಿಂಗಿಸಿದರು. ಇವರ ಸಾಧನೆಗೆ ಸಾಕ್ಷಿ ಇವರಿಗೆ ದೊರೆತ ಪುರಸ್ಕಾರಗಳು ಇವರ ಯಾವುದೇ ಸಾಧನೆಗೂ ಇವರ ಅಂಗವಿಕಲತೆ ಅಡ್ಡಿಯನ್ನುಂಟು ಮಾಡಿಲಿಲ್ಲ.

2. ಬಾಲಕ ಪುಟ್ಟಯ್ಯ ಹಾರ್ಮೋನಿಯಂ ನುಡಿಸಿದ ಪ್ರಸಂಗ ವಿವರಿಸಿ:
ಬಾಲಕ ಪುಟ್ಟಯ್ಯನಿಗೆ ಹಾರ್ಮೋನಿಯಂ ನುಡಿಸುವ ಆಸೆ. ಒಮ್ಮೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮಾವನ ಹಾರ್ಮೋನಿಯಂ ಹಿಡಿದು ತಲ್ಲೀನವಾಗಿ ನುಡಿಸಲಾರಂಭಿಸಿದ ಹಾರ್ಮೋನಿಯಂನಿಂದ ಹೊರಟ ನಾದ ಮನೆಯನ್ನು ತುಂಬಿ ಮನೆಯ ಮುಂದೆ ಹಾಯ್ದು ಹೊಗುತ್ತಿದ್ದ ಜನರೆಲ್ಲರ ಮನವನ್ನು ತುಂಬಿತು. ನಾದ ಮಾಧುರ್ಯಕ್ಕೆ ಮನಸೋತ ಜನರು ಮನೆಯ ಒಳಗೆ ಬಂದು ಕುಳಿತುಕೊಂಡರು. ಹೊಲಕ್ಕೆ ಹೋಗಿದ್ದ ಬಾಲಕನ ಮಾವ ಮನೆಯ ಹೊರಗೆ, ಒಳಗೆ ಜನರ ಗುಂಪು ಕಂಡು ಆಶ್ಚರ್ಯಚಕಿತರಾದರು. ಮನೆಯ ಒಳಗೆ ಹಾರ್ಮೋನಿಯಂ ನುಡಿಸುತ್ತಿರುವವರು ಯೋಗಿಗಳೆ ಇರಬಹುದೆಂದು ಭಾವಿಸಿ, ಒಳಗೆ ಬಂದರು. ತಲ್ಲೀನರಾಗಿ ಹಾರ್ಮೋನಿಯಂ ನುಡಿಸುತ್ತಿದ್ದ ಪುಟ್ಟ ಬಾಲಕನನ್ನು ಕಂಡು ನಿಬ್ಬೆರಗಾದರು.

3. ಪುಟ್ಟಯ್ಯ ಸಮಾಜಕ್ಕೆ ಮುಡುಪಾದ ಪ್ರಸಂಗವನ್ನು ವಿವರಿಸಿ: 
ಪಂಚಾಕ್ಷರ ಗವಾಯಿಗಳ ಸಂಚಾರಿ ಪಾಠಶಾಲೆಯು ಹೊಳೆ ಆಲೂರಿನಲ್ಲಿ ಕ್ಯಾಂಪ್ ಹಾಕಿದ್ದ ಸಂದರ್ಭದಲ್ಲಿ ತಾಯಿಯಾದ ಸಿದ್ದಮ್ಮನವರು ಬೆಳೆದು ದೊಡ್ಡವನಾದ ಪುಟ್ಟರಾಜರನ್ನು ಕಾಣಲು ಬಂದರು. ಸಂಗೀತದ ಸಕಲ ವಿದ್ಯೆಗಳಲ್ಲಿ ಪಾರಂಗತನಾದ ಮುದ್ದು ಮಗನನ್ನು ನೋಡಿದ ತಾಯಿಗೆ ಅಂತಃಕರ್ಣ ತುಂಬಿ ಬಂತು ಪಂಚಾಕ್ಷರಿ ಗವಾಯಿಗಳ ಪಾದಕ್ಕೆರಗಿ ಸೆರಗೊಡ್ಡಿ ಮಗನನ್ನು ಕಳಹಿಸಿಕೊಡುಂತೆ ಬೇಡಿಕೊಂಡರು. ಗವಾಯಿಗಳು ಅವನು ಬಂದರೆ ಕರೆದುಕೊಂಡು ಹೋಗು ಎಂದು ವಾತ್ಸಲ್ಯಪೂರ್ಣವಾಗಿ ಹೇಳಿದರು. ಸಿದ್ದಮ್ಮನವರು ಪುಟ್ಟಯ್ಯನೆಡೆ ಬಂದು ಮನೆಗೆ ಬರುವಂತೆ ಕೇಳಿಕೊಂಡರು. ಆದರೆ ಪುಟ್ಟಯ್ಯನ ಮನಸ್ಸು ದೃಢವಾಗಿತ್ತು. ತಾಯಿಗೆ ಮೃದುವಾದ ಮಾತುಗಳಿಂದಲೇ ತನ್ನಿಚ್ಛೆಯನ್ನು ಹೇಳಿದರು. ನನಗೆ ನನ್ನ ಸರ್ವಸ್ವವೂ ಗುರುಗಳು ಸಮಾಜದ ಹಣದಿಂದ ನನಗೆ ವಿದ್ಯೆ ಕೊಟ್ಟಿದ್ದಾರೆ. ಸಮಾಜದ ಋಣವನ್ನು ತಿರಿಸದೆ ಅದು ಹೆ     ಗೆ ನಿನ್ನ ಜೊತೆ ಬರಲಿ ಎಂದು ತಾಯಿಯನ್ನು ಕೇಳಿದರು. ನಾನು ಎಲ್ಲ ಬಂಧನಗಳನ್ನು ತೊರೆದು ಹಾಕಿರುವೆ, ಗುರು ಪಂಚಾಕ್ಷಕರೇ ನನ್ನ ಸರ್ವಸ್ವ, ಅವರ ಆಜ್ಞಾದಾರಕ ನಾನು, ನಿನ್ನ ಮಗನೆಂಬ ಭಾವವನ್ನು ತೊರೆದು ಹಾಕಿ ನನ್ನನ್ನು ಸಮಾಜಕ್ಕೆ ಅಪರ್ಿಸು ತಾಯಿ ಎಂದು ಹೇಳಿದರು.

4. ವಿಶೇಷ ಚೇತನರ ವಿಷಯದಲ್ಲಿ ನಮ್ಮ ಹೊಣೆಗಾರಿಕೆಗಳೇನು? 
ಅಸಾಧ್ಯವಾದುದನ್ನು ಸಾಧಿಸಬೇಕೆಂಬ ಛಲವಿದ್ದರೆ ಯಾವ ವಿಶೇಷ ಚೇತನ ಅಡ್ಡಪಡಿಸಲಾರದು. ಇದಕ್ಕೆ ಬಹುಮುಖ್ಯ ಉದಾಹರಣೆ ಅಂಗವಿಕಲರ ಒಲಂಪಿಕ್ಸ್ ಉತ್ತಮ ಉದಾಹರಣೆ. ಮಾಲತಿ ಹೊಳ್ಳರವರು ಅಂಗವಿಕಲರಾಗಿದ್ದರೂ ಕ್ರೀಡಾಕ್ಷೇತ್ರದಲ್ಲಿ ಅತ್ಯತ್ತಮ ಸಾಧನೆಯನ್ನು ಮಾಡಿದರು. ಭರತನಾಟ್ಯದಲ್ಲಿ ಸುಧಾಚಂದ್ರನ್. ಹೀಗೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಇವರೆಲ್ಲರ ಸಾಧನೆ ಸಾಮಾನ್ಯ ಜನರಿಗೆ ಆದರ್ಶವಾಗಿದೆ. ವಿಕಲಾಂಗರ ವಿಷಯದಲ್ಲಿ ಸಾಮಾನ್ಯರ ಹೊಣೆಗಾರಿಕೆ ಎಂದರೆ ಅವರಲ್ಲಿ ಮೊದಲಿಗೆ ಆತ್ಮಾಭಿಮಾನವನ್ನು ತುಂಬಬೇಕು. ಯಾವುದೇ ಕಾರಣಕ್ಕು ಅವರನ್ನು ಬೇರೆ ದೃಷ್ಟಿಯಿಂದ ಕಾಣಬಾರದು. ಸಕಾರಾತ್ಮಕ ಚಿಂತನೆಗೆ ಅವಕಾಶ ಮಾಡಿಕೊಡಬೇಕು. ಪೂಣರ್ಾಂಗರಂತೆ ಬದುಕಲು ಪ್ರೇರಣೆಯನ್ನು ನೀಡಬೇಕು.  

ಈ) ಸಂದರ್ಭದೊಡನೆ ವಿವರಿಸಿ
 
1. ಅರಿ ಹರಿಯುವುದರ ಬದಲು, ಗುಡ್ಡಿನ ಹರಿದು ಕಣ್ಣು ಹೋಗಿಬಿಟ್ಟವು
ಈ  ವಾಕ್ಯವನ್ನು  ರಮೇಶಗೌಡ  ಎಂ.ಕೆ.  ರವರು  ಬರೆದಿರುವ  ಗಾನಯೋಗಿ  ಪಂಡಿತ  ಪುಟ್ಟರಾಜ  ಗವಾಯಿ  ಎಂಬ  ಗದ್ಯಭಾಗದಿಂದ ಆರಿಸಲಾಗಿದೆ. ಈ  ವಾಕ್ಯವನ್ನು  ಪುಟ್ಟರಾಜ  ಹುಟ್ಟಿದ  ಆರು  ತಿಂಗಳಿಗೆ  ಕಣ್ಣು  ಕಳೆದುಕೊಂಡ  ಸಂದರ್ಭದಲ್ಲಿ  ಹೇಳಿದ್ದಾರೆ.  ಹಿಂದೆ  ಬರೀ  ನಾಟೀ ವೈದ್ಯವಿತ್ತು.  ಅವರು  ಕಣ್ಣು  ಗುಡ್ಡಿಗೆ  ತೊನಸಿ  (ನಾಯಿಯ  ಮೈಯಲ್ಲಿರುವ  ಹುಳು)  ಮುಟ್ಟಿಸಬೇಕು  ಅಂತ  ಹೇಳಿದರು.  ಆಗ  ಮುಟ್ಟಸುವಾಗ  ತೊನಸಿ  ಕೈಜಾರಿ  ಕಣ್ಣು  ಒಳಗೆ  ಬಿದ್ದುಬಿಟ್ಟವು.  ಅದು  ಅರಿ  ಹರಿಯುವುದು  ಬದಲು  ಗುಡ್ಡಿನ  ಹರಿದು  ಕಣ್ಣು ಹೋಗಿಬಿಟ್ಟಿತು. ಎಂದು ವ್ಯಕ್ತಪಡಿಸುತ್ತಾರೆ.

2. ಅವರ ಬಾಹ್ಯ ಕಣ್ಣು ಅರಳಿಸಿದರು ಅಂತರಂಗದ ಕಣ್ಣು ಅರಳಿತ್ತು.
ಈ  ವಾಕ್ಯವನ್ನು  ರಮೇಶಗೌಡ  ಎಂ.ಕೆ.  ರವರು  ಬರೆದಿರುವ  ಗಾನಯೋಗಿ  ಪಂಡಿತ  ಪುಟ್ಟರಾಜ  ಗವಾಯಿ  ಎಂಬ  ಗದ್ಯಭಾಗದಿಂದ ಆರಿಸಲಾಗಿದೆ. ಈ  ವಾಕ್ಯವನ್ನು  ಎಂಟು  ವರ್ಷದ  ಬಾಲಕ  ಪುಟ್ಟಯ್ಯನನ್ನು  ಕುರಿತು  ಹೇಳುವಾಗ  ಹೇಳಿದ್ದಾರೆ.  ಪುಟ್ಟಯ್ಯ  ತನ್ನ  ಎಲ್ಲ ಸಹಪಾಠಿಗಳಿಗಿಂತ ಬಲುಬೇಗ ಗುರುಗಳು ಹೇಳಿದ್ದನ್ನು ಗ್ರಹಿಸಿ ಕಲಿತುಕೊಂಡರು. ಗುರುಶಿಷ್ಯರಿಬ್ಬರು  ಅಂಧರು. ಅವರ ಬಾಹ್ಯ ಕಣ್ಣು ಅಳಿಸಿದ್ದರೂ ಅಂತರಂಗದ ಕಣ್ಣು ಅರಳಿತ್ತು ಎಂದು ಲೇಖಕರು ಹೇಳಿದ್ದಾರೆ.

3. ''ಮಗು ಇಂದಿನಿಂದ ಈ ಹಾರ್ಮೋನಿಯಂ ನನ್ನದಲ್ಲ''  
ಈ ವಾಕ್ಯವನ್ನು ರಮೇಶಗೌಡ ಎಂ.ಕೆ. ರವರು ಬರೆದಿರುವ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಪುಟ್ಟರಾಜರ ಸೋದರಮಾವ ಹೇಳಿದ್ದಾರೆ.
ಪುಟ್ಟರಾಜರು ಹಾರ್ಮೋಯಂ ಬಾರಿಸಿದಾಗ ಅದರ ಧ್ವನಿ ಕೇಳಿ ಊರಿನ ಜನ ಮನೆಯ ಒಳಹೊರಗೆ ಬಂದು ಕೇಳುತ್ತಾರೆ. ಸೋದರ ಮಾವ ಬಂದದ್ದು ನೋಡಿ, ಪುಟ್ಟರಾಜ ತಪ್ಪಾಯಿತು ಮಾವ ಇನ್ನು ಮುಂದೆ ಹಾರ್ಮೋನಿಯಂ ಮುಟ್ಟುವದಿಲ್ಲ ಎಂದು ಹೇಳಿದಾಗ ಸೋದರಮಾವ ಮೇಲಿನ ಮಾತು ಹೇಳುತ್ತಾರೆ.

4. ''ಅವನು ಬಂದರೆ ಕರೆದುಕೊಂಡು ಹೋಗು ತಾಯಿ'' 
ಈ  ವಾಕ್ಯವನ್ನು  ರಮೇಶಗೌಡ  ಎಂ.ಕೆ.  ರವರು  ಬರೆದಿರುವ  ಗಾನಯೋಗಿ  ಪಂಡಿತ  ಪುಟ್ಟರಾಜ  ಗವಾಯಿ  ಎಂಬ  ಗದ್ಯಭಾಗದಿಂದ ಆರಿಸಲಾಗಿದೆ. ಈ  ಮಾತನ್ನು  ಪಂಚಾಕ್ಷರಿ  ಗವಾಯಿ  ಪುಟ್ಟರಾಜರ  ತಾಯಿಗೆ  ಹೇಳುತ್ತಾರೆ.  ಪಂಚಾಕ್ಷರಿ  ಗವಾಯಿಯ  ಸಂಚಾರಿ  ಶಾಲೆ  ಹೊಳೆ- ಆಲೂರಿನಲ್ಲಿ ಕ್ಯಾಂಪ್ ಹಾಕಿದಾಗ, ಪುಟ್ಟರಾಜರ ತಾಯಿ ಮಗನನ್ನು ಮನಗೆ ಬರುವುದಕ್ಕೆ ಹೇಳಿದಾಗ ಪಂಚಾಕ್ಷರಿ ಗವಾಯಿ ಮೇಲಿನ ಮಾತನ್ನು ಹೇಳುತ್ತಾರೆ.

5. ''ಸಮಾಜದ ಹಣದಿಂದ ನನಗೆ ವಿದ್ಯೆ ಕೊಟ್ಟಿದ್ದಾರೆ''

ಈ  ವಾಕ್ಯವನ್ನು  ರಮೇಶಗೌಡ  ಎಂ.ಕೆ.  ರವರು  ಬರೆದಿರುವ  ಗಾನಯೋಗಿ  ಪಂಡಿತ  ಪುಟ್ಟರಾಜ  ಗವಾಯಿ  ಎಂಬ  ಗದ್ಯಭಾಗದಿಂದ ಆರಿಸಲಾಗಿದೆ.
ಈ ಮಾತನ್ನು ಪುಟ್ಟರಾಜರು ತನ್ನ ತಾಯಿಗೆ ಹೇಳಿದ್ದಾರೆ. ತಾಯಿ ಮಗನನ್ನು ಮನೆಗೆ ಬರುವಂತೆ ಕೇಳಿಕೊಂಡಾಗ, ನಿನ್ನ ಮಗನೆಂಬ ಭಾವವನ್ನು ತೊರೆದು ಹಾಕಿ ನನ್ನನ್ನು ಸಮಾಜಕ್ಕೆ ಅರ್ಪಿಸು ತಾಯಿ ಎಂದು ತಾಯಿಯ ಪಾದವನ್ನು ಹಿಡಿದು ಮೇಲಿನ ಮಾತನ್ನು ಹೇಳುತ್ತಾರೆ.  

ಉ) ಅ ಪಟ್ಟಿಯೊಂದಿಗೆ ಬ ಪಟ್ಟಿಯನ್ನು ಹೊಂದಿಸಿ ಬರೆಯಿರಿ.          
ಅ ಪಟ್ಟಿ                      ಬ ಪಟ್ಟಿ
1.  ಪಾಣಿನಿ               -----  ಅಷ್ಟಾಧ್ಯಾಯಿ
2.  ಶರ್ವವರ್ಮ           -----   ಕಾತಂತ್ರ
3.  ಕೇಶಿರಾಜ             -----   ಶಬ್ದಮಣಿ ದರ್ಪಣ  
4.  ನಿಜಗುಣ ಶವಯೋಗಿಗಳು   ----  ಕೈವಲ್ಯ ಪದ್ಧತಿ  

 
 
You Might Like

Post a Comment

0 Comments