Recent Posts

ತೂಗಿ ತೂಗಿ ಮರಗಳೇ - Class 8th Second Language Kannada Textbook Solutions

ತೂಗಿ ತೂಗಿ ಮರಗಳೇ

ಕವಿ/ಲೇಖಕರ ಪರಿಚಯ 
 
* ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಇವರು 1936 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು.
ಕಾವ್ಯನಾಮ:- 'ನೈಶಿಲ ಭಟ್ಟ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ.
* ಇವರು ಸಮಗ್ರ ಕಾವ್ಯ ಸಂಪುಟ-2, ನಿನ್ನೆಗೆ ನನ್ನ ಹಾಡು, ವೃತ್ತ ಸುಳಿ, ಹೊಳೆ ಸಾಲಿನ ಮರ, ಬಾರೋ ವಸಂತ, ಭಾವಸಂಗಮ ದೀಪಿಕಾ- ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
* ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಆಕಾಡೆಮಿ, ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
*.ಪ್ರಸ್ತುತ ಕವನವನ್ನು ಅವರ 'ಸಮಗ್ರ ಕಾವ್ಯ ಸಂಪುಟ-2' ಕೃತಿಯಿಂದ ಆಯ್ದುಕೊಳ್ಳಲಾಗಿದೆ.

                                          ಪದಗಳ ಅರ್ಥ 
 
ಇಳೆ - ಭೂಮಿ: ಧರೆ; ಪೃಥ್ವಿ 
ತಪಸ್ವಿ- ಮುನಿ 
ಓಲೆ – ಪತ್ರ 
ಕರ - ಕೈ; ಹಸ್ತ ಗಾನ ಹಾಡು; ಸಂಗೀತ, 
ಇಳಿ - ಕೆಳಕ್ಕೆ ಬರು; ಬೀಳು. ಶರೀರ, ಹೊಟ್ಟೆ, ಔದಾರ್ಯ ಉದಾರತೆ: ಧಾರಾಳ ಗುಣ, 
ಕರುಣೆ – ದಯ ಕಮ ಕತ್ತಲು 
ತಳೆ (8) - ಧರಿಸ ನಾಲೆ ಕಾಲುವೆ ತೋಡು. 
ಮಧುರ - ಇಂಪಾದ- ಮಿಡಿ; ಸ್ಪಂದಿಸು. 
ನೆಲೆ – ಆಶ್ರಯ – ಅನುಗ್ರಹ 
ಸ್ನಾನವು - ಧ್ಯಾನವು 
 
* ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1.ಕವಿ ಯಾವುದನ್ನು ಇಳೆಗೆ ಇಳಿದ ವರಗಳೆಂದು ಕರೆದಿದ್ದಾರೆ?

ಉತ್ತರ:- ಕವಿ ಮರಗಳನ್ನು ಇಳೆಗೆ ಇಳಿದ ವರಗಳೆಂದು ಕರೆದಿದ್ದಾರೆ. 

2.ಮರಗಳು ಯಾರಿಗೆ ನೆಲೆ ನೀಡಿವೆ?
ಉತ್ತರ:- ಮರಗಳು ಸೋತು ಬಂದ ಹಕ್ಕಿ ಹಿಂಡಿಗೆ ನೆಲೆ ನೀಡಿವೆ 

3.ಕವಿ ಮರಗಳಿಗೆ ಎಂತಹ ಮನಸ್ಸಿದೆ ಎಂದಿದ್ದಾರೆ?
ಉತ್ತರ:- ಕವಿ ಮರಗಳಿಗೆ ಋಷಿಸಮಾನ ಮನಸ್ಸಿದೆ ಎಂದಿದ್ದಾರೆ.

 4. ಮರಗಳು ಔದಾರ್ಯದ ರೂಪದಲ್ಲಿ ನಮಗೇನು ನೀಡುತ್ತವೆ?
ಉತ್ತರ:- ಮರಗಳು ಔದಾರ್ಯದ ರೂಪದಲ್ಲಿ ನಮಗೆ ಹೂವು ಹೆಣ್ಣು ನೀಡುತ್ತವೆ. 

5. ಮರ ಯಾವ ಮೌಲ್ಯಗಳನ್ನು ಸಂಕೇತಿಸುತ್ತದೆ?
ಉತ್ತರ:- ಮರ ಸತ್ಯ, ತ್ಯಾಗ, ಅಹಿಂಸೆಯ ಮೌಲ್ಯಗಳನ್ನು ಸಂಕೇತಿಸುತ್ತದೆ.

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1.ಮರಗಳು ಪ್ರಕೃತಿ ಬರೆದ ಓಲೆ ಎಂಬುದನ್ನು ಕವಿ ಹೇಗೆ ವರ್ಣಿಸಿದ್ದಾರೆ?
ಉತ್ತರ:- ಮರವು ಸದಾ ದುಡಿಯುತ್ತಾ, ಪ್ರೀತಿಯಿಂದ ಬಂದವರಿಗೆ ಆಶ್ರಯ ನೀಡುತ್ತಾ, ಹಸಿರಿನ ಪಾಲೆಯಂತೆ ಕಂಗೊಳಿಸುತ್ತಾ ಮನುಷ್ಯನಿಗೆ ಆಸರೆಯಾಗುತ್ತಿರುವುದನ್ನು ಕಂಡು ಪ್ರಕೃತಿಯ ಪ್ರೀತಿ, ನೀತಿಯೆಂಬ ಹಾಡನ್ನು ಓಲೆಯಲ್ಲಿ ಬರೆದಿದೆ ಎಂದು ಕವಿ ವರ್ಣಿಸಿದ್ದಾರೆ.

2. ಸಸಿಯೊ೦ದು ಮರವಾಗಿ ಬೆಳೆಯುವ ರೀತಿಯನ್ನು ಕವಿ ಹೇಗೆ ವರ್ಣಿಸಿದ್ದಾರೆ?
ಉತ್ತರ:- ಸಸಿ ಮಣ್ಣಿನ ಕತ್ತಲೆಯ ಸೀಳಿ ಹೊರಗೆ ಚಿಗುರೊಡೆಯುವಾಗಲೇ ಮೈತುಂಬ ಚಿಗುರನ್ನು ತುಂಬಿಕೊಂಡು ಕೊಂದೆ ಕೊಂಬೆಗಳನ್ನು ಚಾಚುತ್ತಾ, ಎಲ್ಲರನ್ನೂ ಬನ್ನಿ ಬನ್ನಿ ಎಂದು ಸ್ವಾಗತಿಸುವಂತೆ ಮರವಾಗಿ ಬೆಳೆಯುತ್ತವೆ ಎಂದು ಕವಿ ವರ್ಣಿಸಿದ್ದಾರೆ.

3. ಮರಗಳು ಸತ್ಯ, ತ್ಯಾಗ, ಅಂಹಿಸೆಯ ಪ್ರತೀಕವಾಗಿ ಹೇಗೆ?
ಉತ್ತರ:- ಮರಗಳು ಮಾನವರಿಗೆ ಪ್ರಯೋಜನ ನೀಡಿದರೂ, ಸ್ವಾರ್ಥ ಹೊಂದಿದ ಮನುಷ್ಯರು ಅವುಗಳನ್ನೇ ಕಡಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟವರಿಗೂ ಕರುಣೆಯಿಂದ ಕಡಿದವರಿಗೆ ನೆರಳು, ಹೂವು, ಹಣ್ಣುಗಳನ್ನು ಕೊಡುವುದರಿಂದ ಮರಗಳು ಸತ್ಯ ತ್ಯಾಗ, ಅಹಿಂಸೆಯ ಪ್ರತೀಕವಾಗಿದೆ.
 
 * ಕೆಳಗಿನ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಪ್ರಕೃತಿಯಲ್ಲಿ ಮರಗಳು ನೀಡುವ ಸಂದೇಶವನ್ನು ಕವಿ ಯಾವ ರೀತಿ ವರ್ಣಿಸಿದ್ದಾರೆ?

ಉತ್ತರ:- ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತೇವೆ. ಮಾನವನ ಪಾಲಿಗೆ ಮರಗಳು ವರಗಳಾಗಿವೆ. ನಮಗೆ ಶುದ್ಧಗಾಳಿ, ನೆರಳು, ಹಣ್ಣು ತಂಪು ನೀಡುತ್ತವೆ ನಿಜ. ಅದರ ಜೊತೆಗೆ ಮರವೊಂದು ನಮ್ಮ ಬದುಕಿಗೆ ನೀತಿ ಪಾಠವಾಗಿರುವುದನ್ನು ಕವಿ ಗುರುತಿಸಿದ್ದಾರೆ. ಮರಗಳಿಗೆ ಋಷಿ ಸಮಾನವಾದ ಮನಸ್ಸಿದೆ. ಅವು ಸತ್ಯ ತ್ಯಾಗ, ಅಹಿಂಸೆಯ ನಿಲುವು ಎಂಬುದನ್ನು ಕವಿ ಬಣ್ಣಿಸಿದ್ದಾರೆ. ಮರದ ಬದುಕಿನಂತೆ ನಮ್ಮ ಬದುಕು ರೂಪಿತಗೊಳ್ಳಬೇಕು ಎಂಬುದು ಕವಿಯ ಸಂದೇಶವಾಗಿದೆ. 
 
*  ಸಂದರ್ಭದೊಂದಿಗೆ ವಿವರಿಸಿರಿ.

1 ಪ್ರಕೃತಿ ಬರೆದ ಓಲೆಯೇ
ಆಯ್ಕೆ:-
ಈ ವಾಕ್ಯವನ್ನು "ಎನ. ಎಸ್. ಲಕ್ಷ್ಮೀನಾರಾಯಣಭಟ್ಟ" ಅವರು ಬರೆದಿರುವ 'ಸಮಗ್ರಕಾವ್ಯಸಂಪುಟ-2'ಎಂಬ ಕೃತಿಯಿಂದ ಆಯ್ದ"ತೂಗಿ ತೂಗಿ ಮರಗಳೇ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ ಮರವು ಸದಾ ದುಡಿಯುತ್ತಾ, ಪ್ರೀತಿಯಿಂದ ಬಂದವರಿಗೆ ಆಶ್ರಯ ನೀಡುತ್ತಾ, ಹಸಿರಿನ ಮಾಲೆಯಂತೆ ಕಂಗೊಳಿಸುತ್ತಾ ಮನುಷ್ಯನಿಗೆ ಆಸರೆಯಾಗುತ್ತಿರುವುದನ್ನು ಕಂಡು ಪ್ರಕೃತಿಯ ಈ ನೀತಿಯೇ ಪ್ರಕೃತಿ ಬರೆದ ಓಲೆ ಎಂದು ತಿಳಿಸುವಾಗ ಈ ಮೇಲಿನ ಮಾತು ಬಂದಿದೆ.

2. ಹೂವು ಹೆಣ್ಣು ಸುರಿವಿಲ
ಆಯ್ಕೆ:- ಈ ವಾಕ್ಯವನ್ನು "ಎನ. ಎಸ್. ಲಕ್ಷ್ಮೀನಾರಾಯಣಭಟ್ಟ" ಅವರು ಬರೆದಿರುವ 'ಸಮಗ್ರಕಾವ್ಯಸಂಪುಟ-2'ಎಂಬ ಕೃತಿಯಿಂದ ಆಯ್ದ"ತೂಗಿ ತೂಗಿ ಮರಗಳೇ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ. ಮರವು ಮಣ್ಣಿನಿಂದ ಹುಟ್ಟಿ ಬೆಳೆದು ಮೈತುಂಬ ಚಿಗುರನ್ನು ತುಂಬಿಕೊಂಡು ಕೊಂಬೆ ಕೊಂಬೆಗಳನ್ನು ಚಾಚುತ್ತಾ, ಎಲ್ಲರನ್ನೂ ಬನ್ನಿ ಬನ್ನಿ ಎಂದು ಸ್ವಾಗತಿಸುತ್ತಾ ಹೂವು ಹಣ್ಣು ಸುರಿಸುತ್ತವೆ. ಎಂದು ತಿಳಿಸುವಾಗ ಈ ಮೇಲಿನ ಮಾತು ಬಂದಿದೆ.

3. ಸತ್ಯ ತ್ಯಾಗ ಅಹಿಂಸೆಯೇ ನಿತ್ಯವಾದ ನಿಲುವೇ!
ಆಯ್ಕೆ:
- ಈ ವಾಕ್ಯವನ್ನು "ಎನ. ಎಸ್. ಲಕ್ಷ್ಮೀನಾರಾಯಣಭಟ್ಟ" ಅವರು ಬರೆದಿರುವ 'ಸಮಗ್ರಕಾವ್ಯಸಂಪುಟ-2'ಎಂಬ ಕೃತಿಯಿಂದ ಆಯ್ದ"ತೂಗಿ ತೂಗಿ ಮರಗಳೇ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಕವಿ ಹೇಳಿದ್ದಾರೆ ಮರಗಳು ಮಾನವರಿಗೆ ಪ್ರಯೋಜನ ನೀಡಿದರೂ, ಸ್ವಾರ್ಥ ಹೊಂದಿದ ಮನುಷ್ಯರು ಅವುಗಳನ್ನೇ ಕಡಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟವರಿಗೂ ಕರುಣೆಯಿಂದ ಕಡಿದವರಿಗೆ ನೆರಳು, ಹೂವು, ಹಣ್ಣುಗಳನ್ನು ಕೊಡುವುದರಿಂದ ಮರಗಳು ಸತ್ಯ ತ್ಯಾಗ, ಅಹಿಂಸೆಯ ಪ್ರತೀಕವಾಗಿದೆ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

               ಭಾಷಾಭ್ಯಾಸ :

ಅ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

1. ಇಳೆ : ಭೂಮಿ # ಓಲೆ : ಪತ್ರ  
2. ಸತ್ಯ : ಅಸತ್ಯ :: ಅಹಿಂಸೆ : ಹಿಂಸೆ 
3. ಸ್ವರ : ಸರ : ಹಕ್ಕಿ : ಪಕ್ಷಿ 
4. ಮರ : ಮರಗಳು :: ಸ್ವರಗಳು : ಸ್ಥರ

2) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.
ಪರ X ಶಾಪ. 
ಸ್ವರ  X ಅಪಸ್ವರ
ಪ್ರೀತಿ  X ದ್ವೇಷ, 
ನೆಲ X ಆಕಾಶ

ಈ ಕೆಳಗಿನ ಪದಗಳಿಗೆ ತತ್ಸಮ-ತದ್ಭವಗಳನ್ನು ಬರೆಯಿರಿ.
ಖುಷಿ - ಸಿ, 
ನಿತ್ಯ - ನಿಚ್ಚ 
ಪಕ್ಷಿ - ಹಕ್ಕಿ 
ಸ್ವರ - ಸರ

You Might Like

Post a Comment

0 Comments