Recent Posts

ಬ್ಯಾಡ್ಮಿಂಟನ್ - 9ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳಗಳನ್ನು ತುಂಬಿರಿ.

1. ಬ್ಯಾಡ್ಮಿಂಟನ್ ಆಟದಲ್ಲಿ ರಾಕೆಟನ್ನು ಬಳಸುತ್ತಾರೆ.

2. ಪ್ರಕಾಶ್ ಪಡುಕೋಣೆ ಪಡೆದ ಪ್ರಸಿದ್ದ ಅಂತರರಾಷ್ಟ್ರೀಯ ಪ್ರಶಸ್ತಿ ಅರ್ಜುನ್ ಪ್ರಶಸ್ತಿ.

3. ಶಟಲ್ ಕಾಕ್ನ್ನು ಶಕ್ತಿಯುತವಾಗಿ ಹೊಡೆದು ಅಂಕ ಪಡೆಯುವ ಕೌಶಲ್ಯಕ್ಕೆ ಸ್ಮ್ಯಾಶ್ ಎನ್ನುವರು.

4. ಭಾರತದ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ನ ಪ್ರಸಿದ್ದ ಆಟಗಾರ್ತಿ ಸೈನಾ ನೆಹವಾಲ್.

II. ಬಿಟ್ಟಿರುವ ಖಾಲಿ ಜಾಗದಲ್ಲಿ ನೀಡಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ ತುಂಬಿರಿ.

1. 'ಆಲ್ ಇಂಗ್ಲಂಡ್ ಬ್ಯಾಡ್ಮಿಂಟನ್' ರಾಷ್ಟ್ರೀಯ ಪ್ರಶಸ್ತಿಯನ್ನು ಕರ್ನಾಟಕದ ಪ್ರಕಾಶ್ ಪಡುಕೋಣೆ ರವರು ಪಡೆದಿದ್ದಾರೆ.

2. ಜಾರ್ಜ್ ಥಾಮಸ್ರವರಿಗೆ 1980 ರಲ್ಲಿ ಅರ್ಜುನ್ ಪ್ರಶಸ್ತಿ ಬಂದಿದೆ.

3. ಎದುರಾಳಿ ಆಟಗಾರರು ಹಿಂದೆ ಇರುವಾಗ,ಎದುರಾಳಿ ಅಂಕಣದ ನೆಟ್ ಸಮೀಪದಲ್ಲಿನ ಖಾಲಿ ಜಾಗಕ್ಕೆ ಕಾಕ್ನ್ನು ತಕ್ಷಣ ಬೀಳಿಸುವಂತೆ ದಾಟಿಸುವುದನ್ನು ಡ್ರಾಪಿಂಗ್ ಎನ್ನುವರು.

III. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.


1. ಬ್ಯಾಡ್ಮಿಂಟನ್ ಆಟದಲ್ಲಿ 'ಶಾರ್ಟ್ ಸವೀಸ್' ಎಂದರೇನು ?
ಉತ್ತರ :-'ಶಾರ್ಟ್ ಸವೀಸ್' ಎಂದರೆ ನೆಟ್ನ ನೇರದಲ್ಲಿ ಅಂಕಣದ ಮುಂದಿನ ಅಥವಾ ಮಧ್ಯದ ಭಾಗಕ್ಕೆ ಸರ್ವೀಸ್ ಮಾಡುವುದಾಗಿದೆ.

2. ಬ್ಯಾಡ್ಮಿಂಟನ್ ಆಟದಲ್ಲಿ'ಬ್ಯಾಕ್ ಹ್ಯಾಂಡ್ ರಿಸೀವಿಂಗ್'ಎಂದರೇನು ?
ಉತ್ತರ :-  ಎದುರಾಳಿ ಕಡೆಯಿಂದ ಬಂದ ಕಾಕ್ ಆಟಗಾರನ ಎಡಬದಿಗೆ ಬಂದಾಗ ಬಲಗೈಯಿಂದ ಆಟವಾಡುವ ಆಟಗಾರ ತನ್ನ ಬಲಗೈಯನ್ನು ಎಡಗಡೆಗೆ ಚಾಚಿ ಅಂದರೆ ಹಸ್ತದಿಂದ ಹಿಂದಿನ ಭಾಗ ನೆಟ್ಟಿನ ಕಡೆ ಇರುವಂತೆ ಕೈಯನ್ನು ತಿರುಗಿಸಿ ಕಾಕ್ನ್ನು ಕಳುಹಿಸುವ ವಿಧಾನವೇ ಬ್ಯಾಕ್ ಹ್ಯಾಂಡ್ ರಿಸೀವಿಂಗ್ ಆಗಿದೆ.

3. ಬ್ಯಾಡ್ಮಿಂಟನ್ ಆಟದಲ್ಲಿ 'ಸ್ಮ್ಯಾಷಿಂಗ್' ಎಂದರೇನು ?
ಉತ್ತರ :-ತಲೆಯ ಮೇಲೆ ಎತ್ತರದಿಂದ ತನ್ನ ಬಲಭಾಗಕ್ಕೆ ಬಂದ ಕಾಕ್ನ್ನು ಬಿರುಸಿನಿಂದ ಎದುರಾಳಿ ಅಂಕಣಕ್ಕೆ ನೆಟ್ನ ಮೇಲೆ ಹೋಗುವಂತೆ ಹೊಡೆಯುವುದು. ಎಡಗೈ ಆಟಗಾರರಿದ್ದರೆ ಎಡಗಡೆ ಬರುವ ಕಾಕ್ನ್ನು ತನ್ನ ಗರಿಷ್ಠ ಶಕ್ತಿಯನ್ನು ಉಪಯೋಗಿಸಿ ಹೊಡೆಯುವುದನ್ನು ಸ್ಮ್ಯಾಷಿಂಗ್ ಎನ್ನುವರು.

4. ಬ್ಯಾಡ್ಮಿಂಟನ್ ಆಟದಲಿ 'ಡ್ರಾಪಿಂಗ್' ಎಂದರೇನು ?
ಉತ್ತರ :- ಎದುರಾಳಿ ಆಟಗಾರರು ಹಿಂದೆ ಇರುವಾಗ ಎದುರಾಳಿ ಅಂಕಣದಲ್ಲಿ ನೆಟ್ನ ಸಮೀಪದಲ್ಲಿ ಖಾಲಿ ಇರುವ ಜಾಗಕ್ಕೆ ಕಾಕ್ ತಕ್ಷಣ ಬೀಳುವ ರೀತಿಯಲ್ಲಿ ಕಾಕಿನ ಮೇಲೆ ಹೆಚ್ಚು ಒತ್ತಡವನ್ನು ಹಾಕಿ ಡ್ರಾಪ್ ಮಾಡುವುದಾಗಿದೆ.  
 

You Might Like

Post a Comment

0 Comments