Recent Posts

ಹ್ಯಾಂಡ್ಬಾಲ್ - 9ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಖಾಲಿ ಬಿಟ್ಟ ಸ್ಥಳವನ್ನು ತುಂಬಿರಿ.

1. ಶ್ರೀಮತಿ ಕೌಸಲ್ಯ ಕುಮಾರಿಯವರು ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

2. ಶ್ರೀ ಅಮಲ್ರಾಜ್ರವರು ಏಕಲವ್ಯ ಪ್ರಶಸ್ತಿ ಪಡೆದಿದ್ದಾರೆ.

3. ಶ್ರೀ ರಾಜಾರೆಡ್ಡಿಯವರು ಏಷಿಯನ್ ಹ್ಯಾಂಡ್ಬಾಲ್ ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದರು.

4. ಅಂತರರಾಷ್ಟ್ರೀಯ ರೆಫರಿಯಾಗಿ ಏಷಿಯನ್ ಕ್ರೀಡೆಗಳಲ್ಲಿ ಭಾಗವಹಿಸಿದ ಕರ್ನಾಟಕದ ಶ್ರೀ ಎನ್.ಕೆ.ಪ್ರಸಾದ್ ರವರು ಭಾಗವಹಿಸಿದ್ದರು.  

II. ಬಿಟ್ಟಿರುವ ಖಾಲಿ ಜಾಗದಲ್ಲಿ ನೀಡಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ ತುಂಬಿರಿ.

1. ಶ್ರೀ ಸದಾನಂದ್ ಸಾಮುಯಲ್ ರಾಜ್ಯ (ದಸರಾ) ಪ್ರಶಸ್ತಿ ಪುರಸ್ಕೃತರು.

2. ಆಂಧ್ರಪ್ರದೇಶದ ಸಿಕಂದರಾಬಾದ್ನಲ್ಲಿ 1974 ರಲ್ಲಿ ರಾಷ್ಟ್ರೀಯ ಚಾಂಪಿಯನ್ಶಿಪ್ ಪಂದ್ಯಾವಳಿ ನಡೆಯಿತು.

3. ಶ್ರೀ ಎನ್.ಕೆ.ಪ್ರಸಾದ್ರವರು ಅಂತರ ರಾಷ್ಟ್ರೀಯ ರೆಫರಿಯಾಗಿ ಭಾಗವಹಿಸಿದ್ದು ದಕ್ಷಿಣ ಕೋರಿಯಾದ ಸಿಯೋಲ್ ನಲ್ಲಿ.

III. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1. ಹ್ಯಾಂಡ್ಬಲ್ ಆಟದ ರಕ್ಷಣಾತ್ಮಕ ತಂತ್ರಗಳನ್ನು ತಿಳಿಸಿ.
ಉತ್ತರ :-   1. ಎಲ್ಲಾ ರಕ್ಷಣಾ ಆಟಗಾರರು ಚೆಂಡನ್ನು ತರುವ ದಾಳಿಗಾರರನ್ನು ತಡೆಗಟ್ಟುವುದು.  
2.ಕೆಲವು ರಕ್ಷಣಾ ಆಟಗಾರರು ಅಂದರೆ ಮಧ್ಯದಿಂದ ಅಥವಾ ಪಕ್ಕದಲ್ಲಿರುವವರು ಮಾತ್ರ ದಾಳಿಗಾರರನ್ನುತಡೆಗಟ್ಟಲು ಪ್ರಯತ್ನಿಸುವುದು.
3.ತಮ್ಮ ವಲಯವನ್ನು ಬಿಡದೆ, ಅದೇ ಸ್ಥಾನದಿಂದ ಎದುರಾಳಿಗಳನ್ನು ತಡೆಗಟ್ಟುವುದು  ಇತ್ಯಾದಿ.

2. ಕರ್ನಾಟಕ ಮಹಿಳೆಯರ ಹ್ಯಾಂಡ್ಬಾಲ್ ತಂಡದ ಸಾಧನೆಯನ್ನು ತಿಳಿಸಿ.
ಉತ್ತರ :-   1. ಕರ್ನಾಟಕ ಮಹಿಳೆಯರ ಹ್ಯಾಂಡ್ಬಾಲ್ ತಂಡವು 2ನೇ, 3ನೇ ಮತ್ತು 6ನೇ ಫೆಡರೇಷನ್ ಕಪ್ನಲ್ಲಿ ವಿಜೇತರಾಗಿದ್ದಾರೆ.
 2. 6 ಮತ್ತು 11ನೇ 'ಸೀನಿಯರ್ಸ್ ನ್ಯಾಷನಲ್ ಹ್ಯಾಂಡ್ಬಾಲ್ ಚಾಂಪಿಯನ್ ಶಿಪ್'ನಲ್ಲಿ ದ್ವಿತೀಯ ಸ್ಥಾನ
ಪಡೆದಿದಿ.

3. ರಾಷ್ಟ್ರೀಯ ಸೀನಿಯರ್ಸ್ ಪಂದ್ಯಾಟದಲ್ಲಿ ಕರ್ನಾಟಕ ಪುರುಷರ ಹ್ಯಾಂಡ್ಬಾಲ್ ತಂಡವುಯಾವ ಪದಕವನ್ನು ಪಡೆಯಲಾಯಿತು.
ಉತ್ತರ :-ಕರ್ನಾಟಕ ಪುರುಷರ ಹ್ಯಾಂಡ್ಬಾಲ್ ತಂಡವುಜೈಪುರ್ದಲ್ಲಿ ನಡೆದ 17ನೇ ಸೀನಿಯರ್ಸ್ ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ಪ್ರಥಮ ಬಾರಿಗೆ ಸೆಮಿಫೈನಲ್ ತಲುಪಿ, 4ನೇ ಸ್ಥಾನವನ್ನು ಕಾಪಾಡಿಕೊಂಡಿರುತ್ತದೆ.

4. 11ನೇ ಅತೀ ಕಿರಿಯರ ರಾಷ್ಟ್ರೀಯ ಚಾಂಪಿಯನ್ ಶಿಪ್ಪಂದ್ಯಗಳು ಯಾವಾಗ ? ಎಲ್ಲಿ ನಡೆಯಿತು ?
ಉತ್ತರ :- 2010 ರಲ್ಲಿ ಚೆನ್ನೈ ನಲ್ಲಿ ನಡೆಯಿತು.

5. ರಾಜ್ಯ ಪ್ರಶಸ್ತಿ ಪುರಸ್ಕೃತರುಗಳ ಪಟ್ಟಿ ಮಾಡಿ.
ಉತ್ತರ :- 1.ಶ್ರೀ ಸದಾನಂದ್ ಸಾಮುಯಲ್ 2. ಶ್ರೀಮತಿ ಕೌಸಲ್ಯ ಕುಮಾರಿ 3. ಶ್ರೀ ರವಿಕುಮಾರ್ 4.ಶ್ರಿ ಪ್ರೇಮ್ನಾಥ್

6.  ಹ್ಯಾಂಡ್ಬಾಲ್ನಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಆಟಗಾರರ ಹೆಸರನ್ನು ತಿಳಿಸಿ.
ಉತ್ತರ :- 1. ಶ್ರೀ ರಾಜಾರೆಡ್ಡಿ     2. ಶ್ರೀ ಅಮಲ್ರಾಜ್

You Might Like

Post a Comment

0 Comments