I. ಬಿಟ್ಟ ಸ್ಥಳಗಳನ್ನು ತುಂಬಿರಿ.
1. ತೊಪ್ಪಲು ಪಲ್ಲೆ ಆರೋಗ್ಯಕ್ಕೆ ಹಿತ ಕರಕ.
2. ತುಳಸಿ, ಬಿಲ್ವ, ಪತ್ರೆ ಎಲೆ ಸಸ್ಯಗಳಾಗಿವೆ.
3. ಹಾಗಲಕಾಯಿ ಅಲರ್ಜಿ, ಮಧುಮೇಹ, ರಕ್ತದೊತ್ತಡ ರೋಗಕ್ಕೆ ಹಿತಕರಕ.
4. ಸಿಹಿ ಮೂಲಂಗಿಯನ್ನು ಬೀಟ್ರೂಟ್ ಎಂದು ಕರೆಯುತ್ತಾರೆ.
II. ಆಯ್ದ ಪದಗಳನ್ನು ತುಂಬಿ ಬರೆಯಿರಿ.
1. ಸುತ್ತಮುತ್ತ ಸಿಗುವ ತರಕಾರಿಗಳು ಮೆಂತೆ ಪಲ್ಲೆ.
2. ಹಸಿಯಾಗಿ ತಿನ್ನುವ ಕಾಯಿಪಲ್ಲೆ ಮೂಲಂಗಿ.
3. ಸುಣ್ಣದಲ್ಲಿ ಕ್ಯಾಲ್ಸಿಯಂ ಅಂಶವಿದೆ.
4. ವಿವಿಧ ಜೀವಸತ್ವಗಳು ಹಸಿ ತರಕಾರಿಗಳಲ್ಲಿ ಹೆಚ್ಚಾಗಿರುತ್ತದೆ.
III. ಒಂದು ವಾಕ್ಯದಲ್ಲಿ ಉತ್ತರಿಸಿ.
1. ದೇಹದ ಪೋಷಣೆಗೆ ಎಂತಹ ತರಕಾರಿ ಅವಶ್ಯವಾಗಿದೆ.?
ಉತ್ತರ :- ಹಸಿ ತರಕಾರಿ ( ಜೀವಂತ ಆಹಾರ ) ಅವಶ್ಯವಾಗಿದೆ.
2. ಹಸಿರು ತೊಪ್ಪಲು ಪಲ್ಲೆಗಳಲ್ಲಿರುವ ಪೋಷಕಾಂಶಗಳಾವುವು ?
ಉತ್ತರ :- ಹಸಿರು ತೊಪ್ಪಲು ತರಕಾರಿಗಳಲ್ಲಿ ಸುಣ್ಣ ಮತ್ತು ಕಬ್ಬಿಣಗಳ ಅಂಶಗಳುಳ್ಳ ಆಹಾರವಾಗಿದ್ದು, ಅವುಗಳಲ್ಲಿ ಅ ಅನ್ನಾಂಗಗಳು ಗಣನೀಯ ಪ್ರಮಾಣದಲ್ಲಿರುತ್ತವೆ.
0 Comments