I. ಬಿಟ್ಟ ಸ್ಥಳಗಳನ್ನು ತುಂಬಿರಿ.
1. ಸ್ಕ್ರೀನಿಂಗ್ ಎಂದರೆ ಆಟಗಾರನ ಚಲನೆಗೆ ಅಡ್ಡವಾಗಿ ನಿಲ್ಲುವುದು.
2. ತನಗೆ ನಿಗಧಿಪಡಿಸಿದ ವಲಯದಲ್ಲಿ ಚೆಂಡನ್ನು ಅನುಸರಿಸುತ್ತಾ ಚಲಿಸುವುದು.
3. 1997 ರಲ್ಲಿ ದೇಹಲಿಯಲ್ಲಿ ಜರುಗಿದ ಜೂನಿಯರ್ ರಾಷ್ಟ್ರೀಯ ಬಾಸ್ಕೆಟ್ಬಾಲ್ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ ಪಡೆದ ಸ್ಥಾನ ತೃತೀಯ.
II. ಬಿಟ್ಟಿರುವ ಖಾಲಿ ಜಾಗದಲ್ಲಿ ನೀಡಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ ತುಂಬಿರಿ.
1. ಯುವ ಬಾಸ್ಕೆಟ್ಬಾಲ್ ಚಾಂಪಿಯನ್ ಶಿಪ್ ಕರ್ನಾಟಕ (ಬಾಲಕಿಯರು) ಜಲಂಧರ್ನಲ್ಲಿ ತೃತೀಯ ಸ್ಥಾನ ಗಳಿಸಿತು.
2. ಜೂನಿಯರ್ ಬಾಸ್ಕೆಟ್ಬಾಲ್ ಚಾಂಪಿಯನ್ ಶಿಪ್ (ಬಾಲಕಿಯರು) 1997 ರಲ್ಲಿ ಕರ್ನಾಟಕ ತೃತೀಯ ಸ್ಥಾನ ಗಳಿಸಿತು.
3. 2002-04 ರಲ್ಲಿ ಬಾಲಕಿಯರ ರಾಷ್ಟ್ರೀಯ ಯುವ ಬಾಸ್ಕೆಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಟವು ಜಲಂಧರ್ ಎಂಬ ಸ್ಥಳದಲ್ಲಿ ನಡೆಯಿತು.
4. 2003-04 ರಾಷ್ಟ್ರೀಯ ಬಾಸ್ಕೆಟ್ಬಾಲ್ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕದ ಬಾಲಕರು ದ್ವಿತೀಯ ಸ್ಥಾನ ಗಳಿಸಿರುತ್ತದೆ.
III. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಬಾಸ್ಕೆಟ್ಬಾಲ್ ಆಟದಲ್ಲಿ ಎಷ್ಟು ವಿಧದ ತಂತ್ರಗಳಿವೆ ?
ಉತ್ತರ :- 2 ವಿಧದ ತಂತ್ರಗಳಿವೆ ಅವುಗಳೆಂದರೆ :- 1. ರಕ್ಷಣಾತ್ಮಕ ಮತ್ತು 2.ಆಕ್ರಮಣಕಾರಿ ತಂತ್ರಗಳು
2. ಪೋಸ್ಟ್ ಪ್ಲೇ ಎಂದರೇನು ?
ಉತ್ತರ :- 1) ಹೈ ಪೋಸ್ಟ್ ಪ್ಲೇ :- ನಿರ್ಬಂಧಿತ ಏರಿಯಾದ ಮೇಲ್ಭಾಗದಲ್ಲಿ ನಿಂತು ತನ್ನ ತಂಡದ ಸದಸ್ಯರಿಗೆ ಎದುರಾಳಿ ತಂಡದವರಿಂದ ತಪ್ಪಿಸಿ ಯಶಸ್ವಿಯಾಗಿ ಬಾಸ್ಕೆಟ್ ಮಾಡಲು ಸಹಕಾರಿಯಾಗುವಂತೆ ಚೆಂಡನ್ನು ನೀಡುವುದು.
2) ಲೋ ಪೋಸ್ಟ್ ಪ್ಲೇ :- ನಿರ್ಬಂಧಿತ ಏರಿಯಾದ ಕೆಳಗಡೆ ಬಾಸ್ಕೆಟ್ ಹತ್ತಿರ ನಿಂತು ಪಾಸ್ ನೀಡಿ ಆಡುವುದಕ್ಕೆ ಲೋ ಪೋಸ್ಟ್ ಪ್ಲೇ ಎನ್ನುವರು.
3. ಫಾಸ್ಟ್ ಬ್ರೇಕ್ ಎಂದರೇನು ?
ಉತ್ತರ :- ಆಕ್ರಮಣಕಾರರ ಆಕ್ರಮಣವು ವಿಫಲವಾದಾಗ ಅವರು ತಮ್ಮ ತಮ್ಮ ರಕ್ಷಣಾತ್ಮಕ ಸ್ಥಳದಲ್ಲಿ ಸೆಟ್ ಆಗುವ ಮುನ್ನ ಬಾಸ್ಕೆಟ್ಬಾಲನ್ನು ವೇಗವಾಗಿ ಮುಂದೆ ಸಾಗಿಸುವುದಕ್ಕೆ ಫಾಸ್ಟ್ ಬ್ರೇಕ್ ಎನ್ನುವರು.
4. ಬಾಲಕರ ರಾಷ್ಟ್ರೀಯ ಬಾಸ್ಕೆಟ್ಬಾಲ್ ಚಾಂಪಿಯನ್ ಶಿಪ್ 2003-04 ರಲ್ಲಿ ಎಲ್ಲಿ ನಡೆಯಿತು ?
ಉತ್ತರ :- ಕಾಂಗಾದಲ್ಲಿ ನಡೆಯಿತು.
0 Comments