I. ಖಾಲಿ ಬಿಟ್ಟ ಸ್ಥಳವನ್ನು ತುಂಬಿರಿ.
1. ಹಾಕಿ ಕ್ರೀಡೆಯಲ್ಲಿ ಆಕ್ರಮಣ ಕಾರಿಮತ್ತು ರಕ್ಷಣಾತ್ಮಕ ಆಟಗಾರರು ಇರುತ್ತಾರೆ.
2. 18 ವರ್ಷದೊಳಗಿನ ಕಿರಿಯರ ವಿಭಾಗದಲ್ಲಿ 2002 ರಲ್ಲಿ ರಾಷ್ಟ್ರೀಯ ಪಂದ್ಯಾಟಗಳನ್ನು ಗೆದ್ದುಕೊಂಡಿದೆ.
3. 2009 ರಲ್ಲಿ ಮೊದಲ ಬಾರಿಗೆ ಹಾಕಿ ಇತಿಹಾಸದಲ್ಲಿ ಭಾರತ ಮಹಿಳಾ ಹಾಕಿ ತಂಡವು ಚಾಂಪಿಯನ್ಸ್ ಚಾಲೆಂಜ್-|| ರಲ್ಲಿ ಬೆಲ್ಜಿಯಂ ವಿರುದ್ದ ಜಯ ಗಳಿಸಿದೆ.
4. 2012 ರಲ್ಲಿ ಭಾರತದ ಪುರುಷರ ಹಾಕಿ ತಂಡವು ಲಂಡನ್ ಓಲಿಂಪಿಕ್ನಲ್ಲಿ ಭಾಗವಹಿಸಿದೆ.
II. ಈ ಕೆಳಗಿನ ನಾಲ್ಕು ಉತ್ತರಗಳಲ್ಲಿ ಸರಿಯಾದ ಒಂದು ಉತ್ತರವನ್ನು ಆರಿಸಿ ಖಾಲಿ ಸ್ಥಳದಲ್ಲಿ ಬರೆಯಿರಿ.
1. 1969 ನೇ ರಾಷ್ಟ್ರೀಯ ಪಂದ್ಯಾಟದಲ್ಲಿ ಫೈನಲ್ ಗೆ ಬಂದಿದೆ.
2. ಹಾಕಿ ರಾಷ್ಟ್ರೀಯ ಪುರುಷರ ತಂಡ ಎಂದರೆ ಭಾರತ ತಂಡ.
3. ಭಾರತದ ಪುರುಷರ ಹಾಕಿ ತಂಡವು ಓಲಂಪಿಕ್ನಲ್ಲಿ ಗಳಿಸಿದ ಬಂಗಾರದ ಪದಕಗಳು 8.
4. ಭಾರತದ ಮಹಿಳಾ ಹಾಕಿ ತಂಡವು ಸೂರಜ್ ಲತಾದೇವಿ ನಾಯಕತ್ವದಲ್ಲಿ ಮೂರು ವರ್ಷ ಬಂಗಾರದ ಪದಕಗಳನ್ನು ಗಳಿಸಿದೆ.
III. 'ಎ' ಪಟ್ಟಿಯೊಂದಿಗೆ 'ಬಿ'ಪಟ್ಟಿಯಲ್ಲಿನ ಇಸವಿಗಳನ್ನು ಹೊಂದಿಸಿ ಬರೆಯಿರಿ.
1. ಹಾಕಿ ಆಟದಲ್ಲಿನ ತಂತ್ರಗಳನ್ನು ವಿವರಿಸಿ.
ಉತ್ತರ :- 1. ಔಟ್ ನಂಬರಿಂಗ್ :- ಎಲ್ಲ ದಾಳಿಗಾರ ಆಟಗಾರರು ರಕ್ಷಣಾತ್ಮಕ ಆಟಗಾರರಿಗಿಂತ ಹೆಚ್ಚಿನ ಸಂಖ್ಯೆಯ ದಾಳಿ ಮಾಡುವುದು ಒಂದು ಉತ್ತಮ ತಂತ್ರಗಾರಿಕೆ. ಇದು ತಮ್ಮ ಮೈದಾನದಲ್ಲಿ ಚೆಂಡು ಇದ್ದ ಸಮಯದಲ್ಲಿ ದಾಳಿಗಾರರು ಏಕಕಾಲದಲ್ಲಿ ಎದುರಾಳಿ ಅಂಕಣಕ್ಕೆ ಪ್ರವೇಶಿಸುವುದು ಎಂದರ್ಥ. 2.ಪಾಸಿಂಗ್ 3. ಪುಶಿಂಗ್ 4. ಡ್ರಿಬ್ಲಿಂಗ್ 5.ಸ್ಕೂಪ್ ಇತ್ಯಾದಿ ತಂತ್ರಗಳು.
2. ಕರ್ನಾಟಕ ಮಹಿಳೆಯರ ಹಾಕಿ ತಂಡವು ಎಷ್ಟು ಸಲ ಲೇಡಿ ರತನ್ ಟಾಟಾ ಟ್ರೋಫಿಯನ್ನು ಗೆದ್ದುಕೊಂಡಿದೆ ?
ಉತ್ತರ :- ಸತತ 8 ಬಾರಿ.
3. ಹಾಕಿಯಲ್ಲಿ ಭಾರತದ ಓಲಂಪಿಕ್ ಸಾಧನೆಯನ್ನು ತಿಳಿಸಿ.
ಉತ್ತರ :- 1928 ರ ಅಮಸ್ಟರ್ಡಾಮ್ ಓಲಿಂಪಿಕ್ ನಲ್ಲಿ ಮೊದಲ ಓಲಿಂಪಿಕ್ ಪದಕವನ್ನು ಗಳಿಸಿತು. 1928-1956 ರರವರೆಗೆ ಯಾರೂ ಓಲಿಂಪಿಕ್ನಲ್ಲಿ ಭಾರತದ ಹಾಕಿ ತಂಡವನ್ನು ಸೋಲಿಸಲಾಗಲಿಲ್ಲ. ಸತತವಾಗಿ 6 ಬಂಗಾರದಪದಕ ಗಳನ್ನು ಗಳಿಸಿತ್ತು. ಒಟ್ಟು ಇಲ್ಲಿಯವರೆಗೆ 8 ಬಂಗಾರದ ಪದಕಗಳನ್ನು, ಒಂದು ಬೆಳ್ಳಿ ಪದಕ ಮತ್ತು ಎರಡು ಕಂಚಿನ ಪದಕಗಳನ್ನು ಗಳಿಸಿದೆ.
4. ರಾಷ್ಟ್ರೀಯ ಮಹಿಳೆಯರ ಹಾಕಿ ತಂಡವು ಯಾವ ವರ್ಷಗಳಲ್ಲಿ ಸತತವಾಗಿ ಬಂಗಾರದ ಪದಕವನ್ನು ಗಳಿಸಿದೆ ?
ಉತ್ತರ :-2002,2003 ಮತ್ತು 2004 ರಲ್ಲಿ ಸತತವಾಗಿ ಬಂಗಾರದ ಪದಕವನ್ನು ಗಳಿಸಿದೆ.
5. ಹಾಕಿ ವಿಶ್ವಕಪ್ನ್ನು ಎಷ್ಟು ವರ್ಷಗಳಿಗೊಮ್ಮೆ ನಡೆಸಲಾಗುವುದು ?
ಉತ್ತರ :- 4 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.
6. ಹಾಕಿಯಲ್ಲಿ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಸಾಧನೆಗಳನ್ನು ತಿಳಿಸಿ.
ಉತ್ತರ :-ಭಾರತದ ಮಹಿಳಾ ಹಾಕಿ ತಂಡವು ಭಾರತವನ್ನು ಪ್ರತಿನಿಧಿಸಿ ಸೂರಜ್ ಲತಾದೇವಿ ನಾಯಕತ್ವದಲ್ಲಿ ತಂಡವು ಸತತ ಮೂರು ವರ್ಷ ಬಂಗಾರದ ಪದಕವನ್ನು ಗಳಿಸಿದೆ. ಆದ್ದರಿಂದ 'ಬಂಗಾರದಹಾಕಿ ಹುಡುಗಿಯರು' ಎಂದು ಕರೆಯಲಾಗಿದೆ. 2002 ರ ಕಾಮನ್ವೆಲ್ತ್ ಗೇಮ್ಸ್, 2003 ರ ಆಪ್ರೋ ಏಷಿಯನ್
ಗೇಮ್ಸ್ ಮತ್ತು 2004 ರ ಹಾಕಿ ಏಷಿಯಾ ಕಪ್ನಲ್ಲಿ ಬಂಗಾರದ ಪದಕವನ್ನು ಗಳಿಸಿದೆ.
7. ಚಾಂಪಿಯನ್ಸ್ ಟ್ರೋಫಿಗೆ ತೇರ್ಗಡೆಗೊಳ್ಳುವ ತಂಡಗಳ ಬಗ್ಗೆ ಬರೆಯಿರಿ.
ಉತ್ತರ :- ಚಾಂಪಿಯನ್ಸ್ ಟ್ರೋಫಿಗೆ ತೇರ್ಗಡೆಗೊಳ್ಳುವ ತಂಡಗಳು :-
1. ಚಾಂಪಿಯನ್ಸ್ ಟ್ರೋಫಿ ನಡೆಸುವ ದೇಶ
2. ಕಳೆದ ಬಾರಿ ಈ ಪಂದ್ಯಾಟವನ್ನು ಜಯಿಸಿದ ದೇಶ.
3. ಇತ್ತೀಚೆಗೆ ನಡೆದ ವಿಶ್ವಕಪ್ ಅಥವಾ ಓಲಿಂಪಿಕ್ಸ್ನಲ್ಲಿ ಉನ್ನತ ಶ್ರೇಣಿ ಪಡೆದ ಇತರ ಮೂರು ತಂಡಗಳು.
4. ವಿಶ್ವ ಚಾಂಪಿಯನ್.
0 Comments