Recent Posts

ಜಾವೆಲಿನ್ ಎಸೆತ - 9ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳಗಳನ್ನು ತುಂಬಿರಿ.

1. ಪ್ರಾಚೀನ ಕಾಲದಲ್ಲಿ ಹಗುರ ಕೋಲಿನ ತುದಿಗೆ ಚೂಪಾದ ಕಲ್ಲನ್ನು ಸಿಕ್ಕಿಸಿ ಉಪಯೋಗಿಸುತ್ತಿದ್ದರು.

2. ಆಧುನಿಕ ಓಲಂಪಿಕ್ ಕ್ರೀಡೆಯಲ್ಲಿ 1908 ರಲ್ಲಿ ಪುರುಷರ ಜಾವೆಲಿನ್ ಎಸೆತ ಸೇರ್ಪಡೆಯಾಯಿತು.

3. ಜಾವೆಲಿನ್ ಮೂರು ಭಾಗಗಳನ್ನು ಹೊಂದಿರುತ್ತದೆ.

4. ಜಾವೆಲಿನ್ ಓಟದ ಮಾರ್ಗವು 4 ಮೀ ಅಗಲವಿರುತ್ತದೆ.

II. ಬಿಟ್ಟಿರುವ ಖಾಲಿ ಜಾಗದಲ್ಲಿ ನೀಡಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ ತುಂಬಿರಿ.

1. ಪ್ರಾಚೀನ ಕಾಲದಲ್ಲಿ ಜಾವೆಲಿನ್ನ್ನು ಉಪಯೋಗಿಸುತ್ತಿದ್ದುದು ಬೇಟೆಗಾಗಿ.

2. ರಾಜ್ಯ ಕ್ರೀಡಾಪಟು ಕಾಶೀನಾಥ ನಾಯ್ಕರವರು 19 ನೇ ಕಮನ್ವೆಲ್ತ್ ಗೇಮ್ಸ್ನಲ್ಲಿ ಜಾವೆಲಿನ್ ಎಸೆತದ ದೂರವು 74.29 ಮೀ.

3. ಅಂತಾರಾಷ್ಟ್ರೀಯ ಕ್ರೀಡಾಪಟು ಆ್ಯಂಡ್ರೂಸ್ ತೋರ್ಕ್ಲಿಡ್ಸನ್ರವರ ವೈಯಕ್ತಿಕ ಉತ್ತಮ ಜಾವೆಲಿನ್ ಎಸೆತದ ದೂರವು 91.59 ಮೀ. +

4. ರಾಷ್ಟ್ರೀಯ ಕ್ರೀಡಾಪಟು ಸಬಿರ್ ಅಲಿಯವರಿಗೆ ಅರ್ಜುನ್ ಪ್ರಶಸ್ತಿ ನೀಡಿದ ವರ್ಷ 1981.    

III. ಹೊಂದಿಸಿ ಬರೆಯಿರಿ.
 

IV. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಜಾವೆಲಿನ್ ಸ್ಪರ್ಧೆ ಮಹಿಳೆಯರಿಗೆ ಓಲಂಪಿಕ್ನಲ್ಲಿ ಸೇರ್ಪಡೆಯಾದ ವರ್ಷವನ್ನು ತಿಳಿಸಿ.
ಉತ್ತರ :- 1932

2. ಜಾವೆಲಿನ್ ಸ್ಪರ್ಧೆಯ ನಿಯಮಗಳನ್ನು ಬರೆಯಿರಿ.
ಉತ್ತರ :-1. ಜಾವೆಲಿನ್ ಎಸೆತವನ್ನು ಓಡುವ ಮಾರ್ಗದಿಂದ ಎಸೆಯಬೇಕು.
2. ಆವೆಲಿನ್ನ್ನು ಕಡ್ಡಾಯವಾಗಿ ಅದರ ಹಗ್ಗದ ಹಿಡಿಯಲ್ಲಿ ಅಂಗೈ ಮೇಲ್ಮುಖವಾಗಿರುವಂತೆ ಹಿಡಿಯಬೇಕು.
3. ಜಾವೆಲಿನ್ನ್ನು ಭುಜದ ಮೇಲೆ ಹಿಡಿದು ಎಸೆಯಬೇಕು. ಮೊಣಕೈ ಮುಂದೆ ಚಾಚಿರುವಂತಿರಬೇಕು.  
4. ಜಾವೆಲಿನ್ ಎಸೆದಾಗ ಅದರ ಲೋಹದ ತುದಿಯು ಮೊದಲು ನೆಲವನ್ನು ತಾಗಬೇಕು. ನಂತರ ಉಳಿದ ಭಾಗ ನೆಲಕ್ಕೆ ತಾಗಬಹುದು.
5. ಜಾವೆಲಿನ್ ನೆಲಕ್ಕೆ ತಾಗುವವರೆಗೆ ಎಸೆತಗಾರ ತನ್ನ ಬೆನ್ನನ್ನು ಎಸೆತದ ದಿಕ್ಕಿಗೆ ತೋರಿಸುವಂತಿಲ್ಲ.
6. ಜಾವೆಲಿನ್ ತುದಿಯ ಗುರುತು ಸೆಕ್ಟರಿನ ಗೆರೆಗಳ ಒಳಗೆ ಬೀಳಬೇಕು.
7. ಎಸೆದ ಜಾವೆಲಿನ್ ನೆಲಕ್ಕೆ ತಾಗುವವರೆಗೆ ಓಡುವ ಮರ್ಗವನ್ನು ಬಿಡುವಂತಿಲ್ಲ.
8. ಜಾವೆಲಿನ್ ಎಸೆತದ ನಂತರ ಹೊರಗೆ ಹೋಗುವಾಗ ಬಿಳಿಯ ಅಡ್ಡ ಗೆರೆಯನ್ನು ಮುಟ್ಟದೆ ಆ ಗೆರೆಯ ಹಿಂಭಾಗದಲ್ಲಿ ವೃತ್ತದ ಹೊರಗೆ ಕಾಲಿಟ್ಟು ಬರಬೇಕು.
9.ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲಿ ಮೂರು ಪ್ರಯತ್ನಗಳನ್ನು ಕೊಟ್ಟು ಅದರಲ್ಲಿ ಉತ್ತಮ
ಪ್ರದರ್ಶನ ತೋರಿದ ಎಂಟು ಎಸೆತಗಾರರನ್ನು ಆಯ್ಕೆ ಮಾಡಿಕೊಂಡು  ಮತ್ತೇ ಮೂರು ಅವಕಾಶಗಳನ್ನು ನೀಡಲಾಗುವುದು.

3. ಪುರುಷರ ಜಾವೆಲಿನ್ನ ಕನಿಷ್ಟ ಉದ್ದವನ್ನು ತಿಳಿಸಿ.
ಉತ್ತರ :- 2.30 ಮೀ

4. ಕರ್ನಾಟಕ ರಾಜ್ಯದ ಮಹಿಳಾ ಜಾವೆಲಿನ್ ದಾಖಲೆಯು ಯಾರ ಹೆಸರಿನಲ್ಲಿದೆ ?
ಉತ್ತರ :-ಹೇಮಲತಾ ಎಂ.ಎನ್ ರ ಹೆಸರಿನಲ್ಲಿದೆ.

5. ಜಾವೆಲಿನ್ ಸ್ಪರ್ಧೆಯ ಅಕ್ರಮಗಳನ್ನು ಬರೆಯಿರಿ.
ಉತ್ತರ :- 1. ಜಾವೆಲಿನ್ ಎಸೆತದ ಓಡುವ ಮಾರ್ಗದ ಹೊರಗಡೆಯಿಂದ ಓಡಿ ಬರುವಂತಿಲ್ಲ.
2. ಜಾವೆಲಿನ್ ಕ್ರಮಬದ್ದವಲ್ಲದ ಸೈಲಿಯಲ್ಲಿ ಎಸೆದಾಗ.
3. ಜಾವೆಲಿನ್ ತುದಿಯು ಸೆಕ್ಟರಿನ ಗೆರೆಯ ಮೇಲೆ ಅಥವಾ ಹೊರಗೆ ಗುರುತು ಮಡಿದರೆ.
4. ಓಡುವ ಮಾರ್ಗ ಮತ್ತು ವೃತ್ತ ಪರಿಧಿಯ ಗೆರೆಯನ್ನು ದೇಹದ ಯಾವುದೇ ಭಾಗದಿಂದ ಎಸೆಯಲು ಪ್ರಾರಂಭಿಸಿದ ಮೇಲೆ ಮುಟ್ಟಿದರೆ.
5. ಜಾವೆಲಿನ್ ಎಸೆದ ನಂತರ ಉಪಕರಣ ನೆಲಕ್ಕೆ ತಾಗುವ ಮುಂಚೆ ಓಡುವ ಮಾರ್ಗವನ್ನು ಬಿಟ್ಟಾಗ. 

You Might Like

Post a Comment

0 Comments