I. ಬಿಟ್ಟ ಸ್ಥಳಗಳನ್ನು ತುಂಬಿರಿ.
1. ಯೋಗದ ಪಿತಾಮಹ ಪತಂಜಲಿ ಮುನಿ.
2. ಅಷ್ಟಾಂಗ ಯೋಗದಲ್ಲಿ 8 ಮೆಟ್ಟಿಲುಗಳಿವೆ.
3. ಪ್ರಾಣಾಯಾಮ ಮಾಡುವುದರಿಂದ ನಾಡಿಗಳು ಶುದ್ದಿಗೊಂಡು ಮಾನಸಿಕ ಸ್ಥಿರತೆ ಹೆಚ್ಚುತ್ತದೆ.
4. ಉಸಿರನ್ನು ಒಳಗೆ ಎಳೆದುಕೊಳ್ಳುವುದಕ್ಕೆ ಪೂರಕ ಎನ್ನುತ್ತಾರೆ.
II. ಬಿಟ್ಟಿರುವ ಖಾಲಿ ಜಾಗದಲ್ಲಿ ನೀಡಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ ತುಂಬಿರಿ.
1. ಅಷ್ಟಾಂಗ ಯೋಗ ಬರುವುದು ರಾಜಯೋಗದಲ್ಲಿ.
2. ಯಮಪಂಚಕದಲ್ಲಿ ಸತ್ಯ ಒಂದಾಗಿದೆ.
3. ಯೋಗ ಅಭ್ಯಾಸದಿಂದ ನಮಗಾಗುವ ಪ್ರಯೋಜನ ಏಕಾಗ್ರತೆ ಹೆಚ್ಚುತ್ತದೆ.
4. ಹಲ್ಲುಗಳ ಸಹಾಯದಿಂದ ಮಾಡುವ ಪ್ರಾಣಾಯಾಮ ಸದಂತ.
III. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಯೋಗದ ಮುಖ್ಯ ಗುರಿ ಯಾವುದು ?
ಉತ್ತರ :- ಮನಸ್ಸನ್ನು ಶಾಂತಗೊಳಿಸಿ, ವರ್ತಮಾನದಲ್ಲಿ ದೇಹ ಹಾಗೂ ಮನಸ್ಸನ್ನು ಏಕಾಗ್ರತೆಗೊಳಿಸುವುದೇ ಯೋಗದ ಗುರಿ.
2. 'ನಿಯಮ' ಎಂದರೇನು ?
ಉತ್ತರ :- ಯಾವುದೇ ಒಬ್ಬ ವ್ಯಕ್ತಿಯ ವೈಯಕ್ತಿಕ ಆರೋಗ್ಯ ಮತ್ತು ನಡವಳಿಕೆಗೆ ಸಂಬಂಧಪಟ್ಟ ನೀತಿ ನಿಬಂಧನೆಗಳನ್ನು ನಿಯಮ ಎನ್ನುವರು.
3. 'ಕಪಾಲಭಾತಿ' ಇದರ ಶಾಬ್ದಿಕ ಅರ್ಥ ಬರೆಯಿರಿ.
ಉತ್ತರ :- ಕಪಾಲ ಎಂದರೆ- ಮಸ್ತಕ, ಭಾತಿ ಎಂದರೆ ಹೊಳೆಯುವುದು ಎಂದರ್ಥ.
4. ಪ್ರಾಣಾಯಾಮದ ಯಾವುದಾದರೂ ಎರಡು ಪ್ರಕಾರಗಳನ್ನು ತಿಳಿಸಿ.
ಉತ್ತರ :- 1. ಅನುಲೋಮ-ವಿಲೋಮ ಪ್ರಾಣಾಯಾಮ
2. ಚಂದ್ರಾನುಲೋಮ- ವಿಲೋಮ ಪ್ರಾಣಾಯಾಮ
3. ಸೂರ್ಯಾನುಲೋಮ- ವಿಲೋಮ ಪ್ರಾಣಾಯಾಮ.
4. ಚಂದ್ರ ಭೇದನ
5. ಸೂರ್ಯ ಭೇದನ.
6. ನಾಡಿ ಶೋಧನ ಅಥವಾ ನಾಡಿ ಶುದ್ದಿ ಪ್ರಾಣಾಯಾಮ.
IV. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಅಷ್ಟಾಂಗ ಮಾರ್ಗದ ಎಂಟು ಮೆಟ್ಟಿಲುಗಳನ್ನು ತಿಳಿಸಿರಿ.
ಉತ್ತರ :- 1.ಯಮ 2.ನಿಯಮ
3. ಆಸನ 4.ಪ್ರಾಣಾಯಾಮ
5. ಪ್ರತ್ಯಾಹಾರ 6. ಧಾರಣ
7. ಧ್ಯಾನ 8. ಸಮಾಧಿ
2. ಯಮಪಂಚಕಗಳೆಷ್ಟು ? ಯಾವುವು ?
ಉತ್ತರ :- ಯಮಪಂಚಕಗಳು ಐದು ಅವುಗಳೆಂದರೆ :-
1. ಅಹಿಂಸೆ 2. ಸತ್ಯ 3. ಅಸ್ತೇಯ 4. ಬ್ರಹ್ಮಚರ್ಯ 5. ಅಪರಿಗ್ರಹ
3. ಪ್ರಾಣಾಯಾಮ ಎಂದರೇನು ?
ಉತ್ತರ :-ಪ್ರಾಣ ಎಂದರೆ ಜೀವ,ಉಸಿರು, ಚೈತನ್ಯ ಎಂದೂ - ಆಯಾಮ ಎಂದರೆ ನಿಗ್ರಹಿಸು ಎಂದರ್ಥ.ದೇಹ ಮತ್ತು ಮನಸ್ಸುಗಳ ನಡುವಿನ ಕೊಂಡಿಯಂತಿರುವ ಉಸಿರಾಟವನ್ನು ಕ್ರಮಬದ್ದಗೊಳಿಸುವ ಹಂತವೇ ಪ್ರಾಣಾಯಾಮ ಎನ್ನುವರು.
0 Comments