Recent Posts

ಪ್ರಥಮ ಚಿಕಿತ್ಸೆ - 9ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

I. ಒಂದು ವಾಕ್ಯದಲ್ಲಿ ಉತ್ತರಿಸಿ.

1. ಹಾವು ವಿಷಕಾರಿ ಎಂದು ಹೇಗೆ ಗುರುತಿಸುವಿರಿ ?
ಉತ್ತರ :- ಎರಡಕ್ಕಿಂತ ಹೆಚ್ಚು ಹಲ್ಲುಗಳಿದ್ದರೆ ಅದು ವಿಷಕಾರಿ ಹಾವು ಅಲ್ಲ ಮತ್ತು ಎರಡು ಹಲ್ಲುಗಳ ಗುರುತು ಕಂಡು ಬಂದರೆ ಅದು ವಿಷಕಾರಿ ಹಲ್ಲು ಎಂದು ಗುರುತಿಸಲಾಗುತ್ತದೆ.

2. ಯಾವ ಸಂದರ್ಭದಲ್ಲಿ ತ್ರೀಕೋನಾಕಾರದ ಪಟ್ಟಿ ಬಳಸಬೇಕು ?
ಉತ್ತರ :- ಮಣಿಕಟ್ಟಿಗೆ ಗಾಯವಾದ ಸಂದರ್ಭದಲ್ಲಿ  ತ್ರೀಕೋನಾಕಾರದ ಪಟ್ಟಿ ಬಳಸಬೇಕು.

3. ಪ್ರಥಮೋಪಚಾರ ಏಕೆ ಮಾಡಬೇಕು ?
ಉತ್ತರ :- ವ್ಯಕ್ತಿಗೆ ಪ್ರಾಣಾಪಾಯದಿಂದ ಪಾರು ಮಾಡಲು ಪ್ರಥಮೋಪಚಾರ  ಮಾಡಬೇಕು.

4. ಚಿಟ್ಟೆ ಪಟ್ಟಿಯನ್ನು ಯಾವ ಸಂದರ್ಭದಲ್ಲಿ ಬಳಸುತ್ತಾರೆ ?
ಉತ್ತರ ;- ತಗುಲಿದ ಸೋಕನ್ನು ನಿವಾರಿಸಲು ಮತ್ತು ಗಾಯ ವಾಸಿಯಾಗಿಸಲು ಚಿಟ್ಟೆ ಪಟ್ಟಿಯನ್ನು ಬಳಸುತ್ತಾರೆ.

II. ಎರಡು -ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ನೀರಿನಲ್ಲಿ ಮುಳುಗಿದವರ ಉಪಚಾರ ಹೇಗೆ ಮಾಡುವಿರಿ ?
ಉತ್ತರ :-ವ್ಯಕ್ತಿ ನೀರಿನಲ್ಲಿ ಮುಳುಗಿದ ತಕ್ಷಣ ವ್ಯಕ್ತಿಯನ್ನು ಈಜು ಬಲ್ಲವರು ಕೂಡಲೇ ನೀರಿನಿಂದ ಹೊರಗೆ ತರಬೇಕು. ನೀರಲ್ಲಿ ಬಿದ್ದವರ ಬಟ್ಟೆ, ಕೂದಲು ಹಿಡಿದು ಎಳೆದು ತರಬೇಕು. ಬಿದ್ದವ ಗಾಬರಿಗೊಂಡು ತೆಗೆಯಲು ಬಂದವರನ್ನೇ ಅಪ್ಪಿಕೊಂಡು ಕೈಕಾಲು ನೀರಲ್ಲಿ ಚಲನೆಯಾಗದಂತೆ ಮಾಡಬಹುದು.ಅದಕ್ಕೆ ಜಾಗೃತಿಯಿಂದ ಮೇಲೆ ಎತ್ತಿರಿ. ಈಜು ಬರದವರು ಸಮೀಪದಲ್ಲಿಯ ವಸ್ತುಗಳನ್ನು ಬಳಸಿ, ಬಟ್ಟೆ ಬಳಸಿ ( ಕೋಲು, ಹಗ್ಗ, ಬಟ್ಟೆ)
ಅವನಿಗೆ ಆಧಾರ ಮಾಡಿ ಎಳೆದು ತನ್ನಿರಿ.  ಅವನನ್ನು ಮೇಲೆ ತಂದು ಬೋರಲಗಿ ಮಲಗಿಸಿ, ಪುಪ್ಪಸದಲ್ಲಿ ಸೇರಿದ ನೀರನ್ನು ಮೆಲ್ಲಗೆ ಹೊಟ್ಟೆ ಮೇಲೆ
ಭಾರ ಹಾಕಿ ಹೊರಹಾಕಬೇಕು. ಕೃತಕ ಶ್ವಾಶೋಚ್ಛಾಸ ಮಾಡಿಸಬೇಕು. ಉಸಿರಾಡಿಸುವ ಕ್ರಿಯೆ ಮಾಡಿಸಿ ಗಾಬರಿಯಾಗದಂತೆ ನೋಡಿಕೊಳ್ಳಬೇಕು ನಂತರ ವಿಶ್ರಾಂತಿ ನೀಡಬೇಕು.

2. ಪ್ರಾಣಿಗಳ ಕಡಿತಕ್ಕೋಳಗಾದವರಿಗೆ ಹೇಗೆ ಉಪಚಾರ ಮಾಡುವಿರಿ ?
ಉತ್ತರ :-ಮೊದಲು ಯಾವ ನಾಯಿ ಅಂದರೆ ಹುಚ್ಚು ಹಿಡಿದ ನಾಯಿಯೋ, ಸಾಮಾನ್ಯ ಬೀದಿ ನಾಯಿಯೋ ಅಥವಾ ಸಾಕು ನಾಯಿಯೋ ಅದನ್ನು ತಿಳಿದುಕೊಳ್ಳಬೇಕು. ಯಾವುದೇ ಪ್ರಾಣಿ (ನಾಯಿ) ಕಚ್ಚಿದಲ್ಲಿ ಆ ಗಾಯಕ್ಕೆ ಸೊಂಕು ತಗುಲದಂತೆ ಹತ್ತಿರವೇ ಇದ್ದ ಟಿಂಚರ್, ಆಯೋಡಿನ್, ಡೆಟಾಲ್ ಅಥವಾ ಹೈಡ್ರೋಜನ್ ಫೆರಾಕ್ಸೈಡ್ ದ್ರಾವಣದಿಂದ ಶುಚಿಗೊಳಿಸಿ, ಅದಕ್ಕೆ ರಕ್ತಸ್ರಾವ ತಡೆದು ಮೇಲೆ ಸಾಮಾನ್ಯ ಸುರುಳಿ ಬ್ಯಾಂಡೇಜ್ ಸುತ್ತಿ  ಪ್ರಥಮೋಪಚಾರ  ಮಾಡಬೇಕು. ಅದಕ್ಕೆ ( ಸುಣ್ಣ, ಮಣ್ಣು ಹಚ್ಚಬಾರದು ) ಸೊಂಕಾಗದಂತೆ ದೇಹದಲ್ಲಿ ರೋಗಕಾರಕ ಬ್ಯಾಕ್ಟೇರಿಯಾಗಳು ಸೇರದಂತೆ ಕ್ರಮ ಕೈಗೊಳ್ಳಬೇಕು.  ಇದು ಒಂದು ಸಾಮಾನ್ಯ ಕ್ರಿಯೆ ಮುಗಿದ ತಕ್ಷಣ  ವೈದ್ಯರನ್ನು ಸಂಪರ್ಕಿಸಿ ಮುಂದಿನ ಅವಸ್ಯ ಚಿಕಿತ್ಸೆ ಮಾಡಿಸಬೇಕು. ಅವರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು.

3. ವಿವಿಧ ಸಂದರ್ಭಗಳಲ್ಲಿ ಬಳಸಬಹುದಾದ ಪಟ್ಟಿಗಳನ್ನು ಹೆಸರಿಸಿ.
ಉತ್ತರ :-1. ಬೆರಳು ತುದಿ ಬ್ಯಾಂಡೇಜ್        2. ಚಿಕ್ಕ ಎಲುಬುಗಳ ಸಂಧಿ ಬ್ಯಾಂಡೇಜ್        3. ಚಿಟ್ಟೆ ಪಟ್ಟಿ
              4. ಒತ್ತಡದ ಬ್ಯಾಂಡೇಜ್              5. ರೋಗಾಣು ರಹಿತ ಸುರಳಿ ಪ್ಯಾಡ್ಗಳು
              6. ತ್ರೀಕೋನಕರದ ಬ್ಯಾಂಡೇಜ್   7. ಕೀಲುಗಳನ್ನು ಭದ್ರಗೊಳಿಸುವ ಪಟ್ಟಿಗಳು.  

III. ಹೊಂದಿಸಿ ಬರೆಯಿರಿ:

You Might Like

Post a Comment

0 Comments