I. ಬಿಟ್ಟ ಸ್ಥಳಗಳನ್ನು ತುಂಬಿರಿ.
1. ಉತ್ತಮ ಆರೋಗ್ಯಕರ ಪರಿಸರ ಹೊಂದುವುದರಿಂದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಗುಣಮಟ್ಟ ಉತ್ತಮಗೊಳ್ಳುವುದು.
2. ವಾಯುವಿಹಾರ ಮಾಡುವುದರಿಂದ ದೇಹಕ್ಕೆ ಅಗತ್ಯವಾದ ಆಮ್ಲಜನಕ ದೊರಕುತ್ತದೆ.
3. ಏರೋಬಿಕ್ಸ್ ಚಟುವಟಿಕೆಯನ್ನು ನಿಯಮಿತವಾಗಿ ಮಾಡುವುದರಿಂದ ಹೃನ್ನಾಳ ದಕ್ಷತೆ ಅಭಿವೃದ್ದಿಯಾಗುತ್ತದೆ.
4. ಪ್ರತಿನಿತ್ಯ ಈಜಿನಲ್ಲಿ ತೊಡಗುವುದರಿಂದ ಆಕರ್ಷಕ ನಿಲುವು ಹೊಂದಬಹುದು.
II. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ನಿಯಮಿತ ವಾಯುವಿಹಾರದಲ್ಲಿ ಪಾಲ್ಗೊಳ್ಳುವುದರಿಂದ ಉಂಟಾಗುವ ಎರಡು ಮುಖ್ಯ ಲಾಭಗಳು ಯಾವುವು ?
ಉತ್ತರ :- 1. ದೇಹಕ್ಕೆ ಅಗತ್ಯವಾದ ಆಮ್ಲಜನಕ ವಿಫುಲವಾಗಿ ದೊರಕುತ್ತದೆ.
2. ಮಾನಸಿಕ ನೆಮ್ಮದಿ ದೊರಕುತ್ತದೆ. ದೈನಂದಿನ ಬಿಡುವು ರಹಿತ ಜೀವನದಿಂದ ಉಂಟಾಗುವ ಒತ್ತಡವು ಕಡಿಮೆಯಾಗುತ್ತದೆ.
3. ಚರ್ಮದ ಆರೋಗ್ಯಕ್ಕೆ ಅಗತ್ಯವಿರುವ ವಿಟಮಿನ್ 'ಡಿ' ದೊರಕುತ್ತದೆ.
4. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ.
5. ಒಟ್ಟಾರೆ ವಾಯುವಿಹಾರದಲ್ಲಿ ನಿಯಮಿತವಾಗಿ ತೊಡಗಿಕೊಳ್ಳುವ ವ್ಯಕ್ತಿಯ ಆರೋಗ್ಯವು ಉತ್ತಮಗೊಳ್ಳುತ್ತದೆ.
2. ನಿಯಮಿತ ವ್ಯಾಯಾಮ ಶಾಲೆಯ ಉಪಯೋಗದಿಂದ ಉಂಟಾಗುವ ಯಾವುದಾದರೂ ಎರಡು ಲಾಭಗಳನ್ನು ಬರೆಯಿರಿ.
ಉತ್ತರ :- 1. ದೈಹಿಕ ದಾಢ್ರ್ಯತೆಯ ಘಟಕಗಳಾದ ವೇಗ, ಕಷ್ಟಸಹಿಷ್ಣುತೆ, ಚಪಲತೆ, ಮೈಮಣಿತತೆ,ಬಲ ಮುಂತದವುಗಳನ್ನು ಅಭಿವೃದ್ದಿಪಡಿಸಬಹುದು.
2.ವ್ಯಾಯಾಮ ಶಾಲೆಯಲ್ಲಿನಿಯಮಿತ ವ್ಯಾಯಾಮದಲ್ಲಿ ತೊಡಗುವುದರಿಂದ ದೈಹಿಕ ದಾಢ್ರ್ಯತೆ ಅಭಿವೃದ್ದಿಪಡಿಸಬಹುದು
3.ದೇಹದ ಎಲ್ಲಾ ಭಾಗಗಳಿಗೆ ವೈಜ್ಞಾನಿಕವಾಗಿ, ಕ್ರಮಬದ್ದ ರೀತಿಯಲ್ಲಿ ವ್ಯಾಯಮ ಮಾಡಬಹುದು.
4. ಉತ್ತಮ ನಿಲುವನ್ನು ಹೊಂದಲು ಸಹಾಯಕವಾಗಿದೆ.
5. ದುಶ್ಚಟಗಳಿಂದ ದೂರವಿರಲು ಸಹಾಯ ಮಾಡುತ್ತದೆ.
6. ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುವುದರ ಮೂಲಕ ಉನ್ನತ ಮಟ್ಟದ ಆರೋಗ್ಯವನ್ನು ಹೊಂದಲು ಸಹಾಯವಾಗುತ್ತದೆ.
7. ಪಟ್ಟಾರೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
8. ಮಕ್ಕಳ ದೈಹಿಕ, ಮಾನಸಿಕ,ಸಾಮಾಜಿಕ ಗುಣಗಳ ಬೆಳವಣಿಗೆಗೆ ಸಹಾಯಕಾರಿಯಾಗಿದೆ.
3. ಏರೋಬಿಕ್ಸ್ ಕೇಂದ್ರಗಳು ಎಂದರೇನು ?
ಉತ್ತರ :-ಏರೋಬಿಕ್ಸ್ ಮಾದರಿಯ ವ್ಯಾಯಾಮಗಳನ್ನು ಮಾಡುವ ಸ್ಥಳಗಳಿಗೆ ಏರೋಬಿಕ್ಸ್ ಕೇಂದ್ರಗಳು ಎನ್ನುವರು.
4. ಈಜು ಎಂದರೇನು ?
ಉತ್ತರ :- ನೀರಿನಲ್ಲಿ ತೇಲುವ ಕೌಶಲ್ಯಕ್ಕೆ ಈಜು ಎನ್ನುವರು.
0 Comments