I. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಮಾನಸಿಕ ಆರೋಗ್ಯವೆಂದರೇನು ?
ಉತ್ತರ :- ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾನಸಿಕ ಆರೋಗ್ಯವೆಂದರೆ ವ್ಯಕ್ತಿಯು ಕ್ಷೇಮಕರವಾಗಿದ್ದು ತನ್ನ ಸಾಮಥ್ರ್ಯಗಳನ್ನು ಅರಿತುಕೊಂಡು ಜೀವನದ ಸಾಮಾನ್ಯ ಒತ್ತಡಗಳನ್ನು ನಿಭಾಯಿಸಿ, ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಾ ತನ್ನ ಸಮಾಜಕ್ಕೆ ದೇಣಿಗೆಯನ್ನು ನೀಡುವ ಸ್ಥಿತಿಯನ್ನು ಹೊಂದಿರುವುದಾಗಿದೆ.
2. ಭಾವನೆಗಳು ಎಂದರೇನು ?
ಉತ್ತರ :- ಮನಸ್ಸಿನ ಮತ್ತು ಆತ್ಮದ ಚಟುವಟಿಕೆಯನ್ನು ಭಾವನೆಗಳು ಎನ್ನುವರು.
3. ನಕಾರಾತ್ಮಕ ಭಾವನೆಗಳನ್ನು ಪಟ್ಟಿ ಮಾಡಿ.
ಉತ್ತರ :- ನಕಾರಾತ್ಮಕ ಭಾವನೆಗಳು : ಭಯ, ತಿರಸ್ಕಾರ, ಅವಮಾನ, ಸಿಟ್ಟು,ಅಸೂಯೆ, ದು:ಖ ಇತ್ಯಾದಿಗಳು.
II. ಈ ಕೆಳಕಂಡ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿ.
1. ಮಾನಸಿಕ ಆರೋಗ್ಯ ಶಾಸ್ತ್ರದ ಮೂರು ಮುಖ್ಯ ಉದ್ದೇಶಗಳನ್ನು ತಿಳಿಸಿ.
ಉತ್ತರ :- 1. ನಿರಂತರವಾಗಿ ಬದಲಾಗುತ್ತಿರುವ ಪರಿಸರಕ್ಕೆ ತಕ್ಕಂತೆ ತನ್ನನ್ನು ಮಾರ್ಪಡಿಸಿಕೊಳ್ಳುವುದು ಹಾಗೂ ತನ್ನ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ಮಾಡಿಕೊಂಡು ಎಲ್ಲರ ಜೊತೆ ಹೊಂದಾಣಿಕೆಯ ಜೀವನ ಸಾಗಿಸುವಂತೆ ಮಾಡುವುದು ಮಾನಸಿಕ ಆರೋಗ್ಯ ಶಾಸ್ತ್ರದ ಉದ್ದೇಶವಾಗಿದೆ.
2. ವ್ಯಕ್ತಿಯ ಮಾನಸಿಕ ರೋಗಗಳನ್ನು ಹೋಗಲಾಡಿಸುವುದು ಮತ್ತು ತಡೆಗಟ್ಟುವುದು ಮಾನಸಿಕ ಆರೋಗ್ಯ ಶಾಸ್ತ್ರದ ಉದ್ದೇಶವಾಗಿದೆ.
2. ಮಾನಸಿಕ ಆರೋಗ್ಯವಂತನ ಲಕ್ಷಣಗಳನ್ನು ತಿಳಿಸಿ.
ಉತ್ತರ :- ಮಾನಸಿಕ ಆರೋಗ್ಯವಂತನ ಲಕ್ಷಣಗಳು :-
1. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲ ಎಂಬ ಆತ್ಮವಿಶ್ವಾಸ ಇರುತ್ತದೆ.
2. ಬದಲಾದ ಸನ್ನಿವೇಶಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಮಥ್ರ್ಯ ಇರುತ್ತದೆ.
3. ಭಾವನೆಗಳ ಮೇಲೆ ನಿಯಂತ್ರಣ ಹೋದಿರುತ್ತಾನೆ.
4. ಸಮಯ ಪ್ರಜ್ಞೆ ಹೆಚ್ಚಿರುತ್ತದೆ.
5. ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕಲು ಸಹಕಾಯಗುತ್ತದೆ.
3. ಸಕಾರಾತ್ಮಕ ಭಾವನೆಗಳ ಲಾಭಗಳನ್ನು ತಿಳಿಸಿ.
ಉತ್ತರ :- ಸಕಾರಾತ್ಮಕ ಭಾವನೆಗಳ ಲಾಭಗಳು :-
1. ಸಕಾರಾತ್ಮಕ ಭಾವನೆಗಳು ವ್ಯಕ್ತಿಯ ಬೆಳವಣಿಗೆಗೆ ಮತ್ತು ಅಭಿವೃದ್ದಿಗೆ ಸಹಕಾರಿಯಾಗುತ್ತದೆ.
2. ಇವು ಸಮಾಜದಲ್ಲಿ ಇತರರೊಡನೆ ಉತ್ತಮ ಸಂಬಂಧ ಬೆಳೆಸಲು ಸಹಕರಿಸುತ್ತವೆ.
3. ಸಮಾಜದಲ್ಲಿ ಉತ್ತಮ ಗುಣದ ನಡತೆಯನ್ನು ತೋರಿಸಲು ಸಕಾರಾತ್ಮಕ ಭಾವನೆಗಳು ಪೂರಕವಾಗಿವೆ. ವ್ಯಕ್ತಿಯೊಬ್ಬನ
ಸಾಧನೆ ಮತ್ತು ಸಾಧಿಸಿದ ಗುರಿಗಳು ಆತನ ಸಕಾರಾತ್ಮಕ ಭಾವನೆಗಳ ಫಲವಾಗುತ್ತದೆ ಇತ್ಯಾದಿ.
0 Comments