Recent Posts

ಎತ್ತರ ಜಿಗಿತ - 8ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

I. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ.                        

1. ಎತ್ತರ ಜಿಗಿತದಲ್ಲಿ ಒಬ್ಬ ಸ್ಪರ್ಧಿಗೆ ಒಂದು ನೆಗೆತದ ಎತ್ತರವನ್ನು ಜಿಗಿಯಲು ಎಷ್ಟು ಯತ್ನಗಳನ್ನು ನೀಡಲಾಗುವುದು ?
ಉತ್ತರ :-  ಮೂರು ಯತ್ನಗಳನ್ನು ನೀಡಲಾಗುತ್ತದೆ.                                    

2. ಕ್ಸೇವುಯರ್ ಸೋಟೊ ಮೇಯರ್ರವರು ಎತ್ತರ ಜಿಗಿತದಲ್ಲಿ ಅಂತರರಾಷ್ಟ್ರೀಯ ದಾಖಲೆ ಮಾಡಿದ ವರ್ಷ ಯಾವುದು ?
ಉತ್ತರ :-  1993                                                   

3. ಹರಿಶಂಕರ್ ರಾಯ್ರವರ ರಾಷ್ರೀಯ ದಾಖಲೆಯನ್ನು ತಿಳಿಸಿ.
ಉತ್ತರ :- 2.25 ಮೀ                                               

4. ದೇಹದ ಯಾವುದೇ ಭಾಗ ಅಡ್ಡಗೋಲಿಗೆ ತಾಗಿ ತಕ್ಷಣ ಕೆಳಗೆ ಬಿದ್ದರೆ, ಆಯತ್ನವನ್ನು ಏನೆಂದು ಪರಿಗಣಿಸಲಾಗುವುದು ?
ಉತ್ತರ :- ವಿಫಲ ಯತ್ನವೆಂದು  ಪರಿಗಣಿಸಲಾಗುವುದು.

II. ಈ ಕೆಳಗಿನವುಗಳಿಗೆ ಸರಿ ಅಥವಾ ತಪ್ಪನ್ನು ಗುರುತಿಸಿ.

1. ಎತ್ತರ ಜಿಗಿತವನ್ನು ಎರಡೂ ಕಾಲಿನಿಂದ ಏಕಕಾಲದಲ್ಲಿ ಜಿಗಿಯಬಹುದು.        ಸರಿ               

2. ಪ್ರತಿ ನಿರ್ಧಿಷ್ಟ ಎತ್ತರದಲ್ಲಿ ಮೂರು ಯತ್ನಗಳನ್ನು ನೀಡಲಾಗುವುದು.       ತಪ್ಪು

3. ಎತ್ತರ ಜಿಗಿತದಲ್ಲಿ ಸ್ಪರ್ಧಿಯು ಮೂರು ಸತತ ವಿಫಲ ಯತ್ನಗಳನ್ನು ಮಾಡಿದಲ್ಲಿ ಸ್ಪರ್ಧೆಯಲ್ಲಿಯೇ ಉಳಿಯುವನು.        ತಪ್ಪು

4. ನಿಗದಿತ ಎತ್ತರವನ್ನು ಸ್ಪರ್ಧಾಳುಗಳು ಪೂರೈಸಿದ ನಂತರ ನಿಯಮಬದ್ದವಾಗಿ ಅಡ್ಡಗೋಲಿನ ಎತ್ತರವನ್ನು ಹೆಚ್ಚಿಸಬೇಕು.        ಸರಿ

III. ಈ ಕೆಳಕಂಡ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.                    

1. ಎತ್ತರ ಜಿಗಿತದ ಅಕ್ರಮಗಳು ಅಥವಾ ತಪ್ಪುಗಳನ್ನು ಪಟ್ಟಿ ಮಾಡಿ.
ಉತ್ತರ :-  ಎತ್ತರ ಜಿಗಿತದ ಅಕ್ರಮಗಳು ಅಥವಾ ತಪ್ಪುಗಳು :-                     
1. ಅಡ್ಡಗೋಲಿಗೆ ದೇಹದ ಯಾವುದೇ ಭಾಗ ತಗುಲುವುದರಿಂದ ಅಡ್ಡಗೋಲು ಕೆಳಗೆ ಬಿದ್ದರೆ ಆ ಯತ್ನವನ್ನು ವಿಫಲ ಯತ್ನವೆಂದು
ಪರಿಗಣಿಸಲಾಗುವುದು.
2. ಸ್ಪರ್ಧೆಯಲ್ಲಿ ಸ್ಪರ್ಧಾಳು ನಿಗದಿತ ಎತ್ತರದಲ್ಲಿ ಟೇಕ್ ಆಫ್ ತೆಗೆದುಕೊಳ್ಳದೇ ಅಪ್ ರೇಟ್ಸ್ಗಳನ್ನು, ಅಡ್ಡಪಟ್ಟಿಯನ್ನು, ಲ್ಯಾಂಡಿಂಗ್ ಪಿಟ್ನ್ನು ಸ್ಪರ್ಶಿಸಿದಲ್ಲಿ ಈ ಯತ್ನವನ್ನು ಒಂದು ಯತ್ನವೆಂದು  ಪರಿಗಣಿಸಲಾಗುವುದು.
3.  ಯಾವುದೇ ಜಿಗಿತಗಾರ ಜಿಗಿದ ನಂತರ ಅಡ್ಡಗೋಲಿನ ಕೆಳಗಿನಿಂದ ನುಗ್ಗಿ ಬರುವಂತಿಲ್ಲ.
4. ಸ್ಪರ್ಧೆಯು ಪ್ರಾರಂಭವಾದ ನಂತರ ಯತ್ನದ ಅಭ್ಯಾಸಗಳನ್ನಾಗಲೀ, ಓಡಿ ಬರುವುದಾಗಲೀ ಅಭ್ಯಾಸ ಮಾಡುವಂತಿಲ್ಲ.

2. ಎತ್ತರ ಜಿಗಿತದ ಸಾಮಾನ್ಯ ನಿಯಮಗಳನ್ನು ಪಟ್ಟಿ ಮಾಡಿ.
ಉತ್ತರ :-   ಎತ್ತರ ಜಿಗಿತದ ಸಾಮಾನ್ಯ ನಿಯಮಗಳು :-  
       1. ಎತ್ತರ ಜಿಗಿತದ ಜಿಗಿತಗಾರನು ಒಂದೇ ಕಾಲಿನಿಂದ ಟೇಕ್ ಆಫ್ ತೆಗೆದುಕೊಳ್ಳಬೇಕು.
       2. ಪ್ರತಿ ನಿರ್ಧಿಷ್ಟ ಎತ್ತರದಲ್ಲಿ ಮೂರು ಯತ್ನಗಳನ್ನು ನೀಡಲಾಗುವುದು.  
       3. ಪ್ರಾರಂಭದಿಂದ ಕೊನೆಯವರೆಗೆ ಹೆಚ್ಚಿಸುವ ಪ್ರತಿ ಎತ್ತರವನ್ನು ಸ್ಪರ್ಧಾಳುಗಳಿಗೆ ಪ್ರಕಟಿಸಬೇಕು.
       4. ನಿಗದಿತ ಎತ್ತರವನ್ನು ಸ್ಪರ್ಧಾಳು ಪೂರೈಸಿದ ನಂತರ ನಿಯಮಬದ್ದವಾಗಿ ಅಡ್ಡಗೋಲಿನ  ಎತ್ತರವನ್ನು ಹೆಚ್ಚಿಸಬೇಕು.
       5. ಈ ಸ್ಪರ್ಧೆಯಲ್ಲಿ ಸ್ಪರ್ಧಾಳುವಿಗೆ ಪಾಸ್ ಪಡೆಯುವ ಅವಕಾಶವಿದೆ.
       6. ನಿರಂತರವಾಗಿ ಮೂರು ಯತ್ನಗಳಲ್ಲಿ ಸ್ಪರ್ಧಿಯು ಎತ್ತರವನ್ನು ಜಿಗಿಯಲು ವಿಫಲನಾದಲ್ಲಿ ಸ್ಪರ್ಧೆಯಿಂದ ಹೊರಹೋಗುತ್ತಾನೆ.
       
3. ಎತ್ತರ ಜಿಗಿತದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಾದನೆಗಳನ್ನು ತಿಳಿಸಿ.
ಉತ್ತರ :- 


ಪ್ರ.ಸಂ 4. 'ಅ' ಪಟ್ಟಿಯಲ್ಲಿರುವ ಪದಗಳನ್ನು 'ಬ' ಪಟ್ಟಿಯಲ್ಲಿರುವ ಪದಗಳೊಂದಿಗೆ ಹೊಂದಿಸಿ ಬರೆಯಿರಿ.
ಉತ್ತರ : -
 


You Might Like

Post a Comment

0 Comments