Recent Posts

ಬಾಸ್ಕೆಟ್ಬಾಲ್ - 8ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                            

1.  ಬಾಸ್ಕೆಟ್ಬಾಲ್ ಅಂಕಣವು ಆಯತ ಆಕಾರದಲ್ಲಿರುತ್ತದೆ.                           

2.1936 ರಲ್ಲಿ ಬಾಸ್ಕೆಟ್ಬಾಲ್ ಕ್ರೀಡೆಯನ್ನು ಓಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಸೇರಿಸಲಾಯಿತು.       

3. ಪುರುಷರ ಬಾಸ್ಕೆಟ್ಬಾಲ್ ಆಟಕ್ಕೆ ಬಳಸುವ ಚೆಂಡಿನ ಸುತ್ತಳತೆ 74.9 ರಿಂದ 78 ಸೇ.ಮೀ ಇರಬೇಕು.   

4. ಬಾಸ್ಕೆಟ್ಬಾಲ್ ಆಟದ ಒಟ್ಟು ಕಾಲಾವಕಾಶವನ್ನು 10 ನಿಮಿಷಗಳ ನಾಲ್ಕು ಅವಧಿಗಳನ್ನಾಗಿ    ವಿಂಗಡಿಸಲಾಗಿದೆ.                

5. ಫ್ರೀ ಥ್ರೋ ಸಂದರ್ಭದಲ್ಲಿ  ಒಂದು ಅಂಕವನ್ನು ನೀಡಲಾಗುವುದು.

II. ಖಾಲಿ ಬಿಟ್ಟಿರುವ ಸ್ಥಳದಲ್ಲಿ ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.            

1. ಬಾಸ್ಕೆಟ್ಬಾಲ್ ಕ್ರೀಡೆಯನ್ನು ಕಂಡು ಹಿಡಿದವರು ಡಾ|| ಜೇಮ್ಸ್ ನೈಸ್ಮಿತ್.                   

2. ಬಾಸ್ಕೆಟ್ಬಾಲ್ ಆಟದ ಒಟ್ಟು ಸಮಯ 40 ನಿಮಿಷ.                            

3. ಮಹಿಳೆಯರ ಬಾಸ್ಕೆಟ್ಬಾಲ್ ಆಟಕ್ಕೆ ಬಳಸುವ ಚೆಂಡಿನ ತೂಕ 510 ಗ್ರಾಂ ನಿಂದ 576 ಗ್ರಾಂ ಇರುತ್ತದೆ.
 
III ಪ್ರ.ಸಂ 3. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ.                

1. ಬಾಸ್ಕೆಟ್ಬಾಲ್ ಕ್ರೀಡೆಯನ್ನು ಯಾವಾಗ ಮತ್ತು ಯಾರು ಕಂಡು ಹಿಡಿದರು ?
ಉತ್ತರ :-  1891 ಡಿಸೆಂಬರ್ನಲ್ಲಿ ಡಾ|| ಜೇಮ್ಸ್ ನೈಸ್ಮಿತ್ರವರು ಕಂಡು ಹಿಡಿದರು.                    

2. ಯಾವ ಪ್ರಕಾರದ ಬುಟ್ಟಿಯನ್ನು ಬಾಸ್ಕೆಟ್ಬಾಲ್ ಆಟದ ಪ್ರಾರಂಭದಲ್ಲಿ ಬಳಸಲಾಗಿತ್ತು ?
ಉತ್ತರ :-  ಪೀಚ್ ಹಣ್ಣಿನ ಬುಟ್ಟಿಯನ್ನು ಬಾಸ್ಕೆಟ್ಬಾಲ್ ಆಟದ ಪ್ರಾರಂಭದಲ್ಲಿ ಬಳಸಲಾಗಿತ್ತು.            

3. ನ್ಯಾಷನಲ್ ಬಾಸ್ಕೆಟ್ಬಾಲ್ ಅಸೋಸಿಯೇಶನ್ ಪ್ರಾರಂಭವಾದದ್ದು ಯಾವಾಗ ?
ಉತ್ತರ :-  1946 ರಲ್ಲಿ.                                     

4. ಹಿಂಭಾಗದ ಹಲಗೆಯ ಅಳತೆಯನ್ನು ಬರೆಯಿರಿ ?
ಉತ್ತರ :- ಅಡ್ಡವಾಗಿ 1.80 ಮೀ ಮತ್ತು ಲಂಬವಾಗಿ 1,05 ಮೀ ಹಿಂಭಾಗದ ಹಲಗೆಯ ಅಳತೆ ಇರುತ್ತದೆ.

IV. ಈ ಕೆಳಕಂಡ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.                

1. ಬಾಸ್ಕೆಟ್ಬಾಲ್ ಆಟದ ಆವಿಷ್ಕಾರಕ್ಕೆ ಕಾರಣಗಳೇನು ?
ಉತ್ತರ :- ತೀವೃವಾದ ಚಳಿಗಾಲದಲ್ಲಿ ಫುಟ್ಬಾಲ್ ಕ್ರೀಡೆಯಂತಿರುವ ಒಳಾಂಗಣ ಕ್ರೀಡೆಯನ್ನು ರೂಪಿಸಿ ವೈ.ಎಂ.ಸಿ.ಎ. ತರಬೇತಿ ಶಾಲೆಯ ವಿದ್ಯಾರ್ಥಿಗಳ ದೈಹಿಕ ಕ್ಷಮತೆ (ಸಾಮಥ್ರ್ಯ)ಯನ್ನು ಕಾಪಾಡುವ ಉದ್ದೇಶದ ಕಾರಣದಿಂದಾಗಿ ಬಾಸ್ಕೆಟ್ಬಾಲ್ ಆಟದ ಆವಿಷ್ಕಾರ ಮಾಡಲಾಯಿತು.                 

2. ಪ್ರಥಮ ಬಾರಿ ಅಧಿಕೃತ ಬಾಸ್ಕೆಟ್ಬಾಲ್ ಪಂದ್ಯಾವಳಿಯ ಬಗ್ಗೆ ಟಿಪ್ಪಣಿ ಬರೆಯಿರಿ ?
ಉತ್ತರ :-  ಪ್ರಥಮ ಬಾರಿ ಅಧಿಕೃತವಾಗಿ ಪಂದ್ಯಾವಳಿಯನ್ನು 1892 ರಲ್ಲಿ ವೈ.ಎಂ.ಸಿ.ಎ.ಯ ವ್ಯಾಯಾಮ ಮಂದಿರದಲ್ಲಿ  ಆಡಲಾಯಿತು. 9 ಆಟಗಾರರನ್ನು ಒಳಗೊಂಡ ಎರಡು ತಂಡಗಳ ಮಧ್ಯದಲ್ಲಿ ಅಂದಿನ ನಿಯಮಗಳನ್ನು ಅನುಸರಿಸಿ ನಡೆದ ಆ ಪಂದ್ಯಾಟವು 1-0 ಅಂಕಗಳೊಂದಿಗೆ ಕೊನೆಗೊಂಡಿತ್ತು. ಅಂಕಗಳಿಸಬೇಕಾದರೆ 25 ಅಡಿ ದೂರದಿಂದ ಚೆಂಡನ್ನು ಬುಟ್ಟಿಯೊಳಗೆ ಹಾಕಬೇಕಾಗಿತ್ತು. ಅಂದಿನ ಅಂಕಣವು ಪ್ರಸ್ತುತ ಅಂಕಣದ ಅರ್ಧದಷ್ಟು ಮಾತ್ರವಿತ್ತು.  

3. ಬಾಸ್ಕೆಟ್ಬಾಲ್ ಆಟದಲ್ಲಿನ ನಿಯಮ ಉಲ್ಲಂಘನೆಗಳು ಯಾವುವು ?
ಉತ್ತರ :-  ನಿಯಮ ಉಲ್ಲಂಘನೆಗಳು :-                                 
1. ಎರಡೂ ಕೈಗಳಿಂದ ಚೆಂಡನ್ನು ಏಕಕಾಲದಲ್ಲಿ ಪುಟಿಸುವುದು.                         
2. ಚೆಂಡನ್ನು ಕೈಗಳಲ್ಲಿ ಹಿಡಿದು ಒಂದಕ್ಕಿಂತ ಹೆಚ್ಚು ಹೆಜ್ಜೆಗಳನ್ನು ಇಡುವುದು.                 
3. ಪುಟಿಸಿದ ನಂತರ ಚೆಂಡನ್ನು ಹಿಡಿದು ಮತ್ತೇ  ಪುಟಿಸುವುದು.                         
4. ಉದೇಶಪೂರ್ವಕವಾಗಿ ಕಾಲನ್ನು ಬಳಸಿ ಚೆಂಡನ್ನು ನಿಯಂತ್ರಿಸುವುದು.                     
5. ಪುಟಿಸುವಾಗ ಚೆಂಡನ್ನು ಮಧ್ಯಕ್ಕಿಂತ ಕೆಳಭಾಗದಲ್ಲಿ ಹಿಡಿಯುವುದು.                     
6.3 ಸೆಕೆಂಡುಗಳ ನಿಯಮ ಉಲ್ಲಂಘನೆ.                                  
7.5 ಸೆಕೆಂಡುಗಳ ನಿಯಮ ಉಲ್ಲಂಘನೆ.                                  
8.8 ಸೆಕೆಂಡುಗಳ ನಿಯಮ ಉಲ್ಲಂಘನೆ.                                 
9.24 ಸೆಕೆಂಡುಗಳ ನಿಯಮ ಉಲ್ಲಂಘನೆ ಇತ್ಯಾದಿ.                            

4  ಬಾಸ್ಕೆಟ್ಬಾಲ್ ಆಟದಲ್ಲಿ ಅಗತ್ಯವಿರುವ ಕ್ರೀಡಾಧಿಕಾರಿಗಳ ಬಗ್ಗೆ ಬರೆಯಿರಿ.
ಉತ್ತರ :-  ಕನಿಷ್ಟ 5 ಕ್ರೀಡಾ ಅಧಿಕಾರಿಗಳು ಅಗತ್ಯ, 1. ರೆಫ್ರಿ, 2. ಅಂಪೈರ್, 3. ಸ್ಕೋರರ್, 4. ಟೈಮ್ ಕೀಪರ್ 5. ಶಾಟ್ ಕ್ಲಾಕ್ ಆಪರೇಟರ್, ಹಲವು ಸಂದರ್ಭಗಳಲ್ಲಿ 8 ಕ್ರೀಡಾಧಿಕಾರಿಗಳು ನಿರ್ವಹಿಸುತ್ತಾರೆ. 1. ರೆಫ್ರಿ, 2. ಲೈನ್ ಅಪ್ ರೆಫ್ರಿ, 3. ಇಬ್ಬರು ಅಂಪೈರ್ಗಳು, 4. ಶಾಟ್-ಕ್ಲಾಕ್ ಆಪರೇಟರ್ಸ್, 5. ಇಬ್ಬರು ಸ್ಕೋರರ್, 6. ಸಮಯ ಪಾಲಕರು

V. 'ಅ' ಪಟ್ಟಿಯಲ್ಲಿರುವ ಅಂಶಗಳನ್ನು 'ಬ' ಪಟ್ಟಿಯಲ್ಲಿರುವ ಅಂಶಗಳೊಂದಿಗೆ ಹೊಂದಿಸಿ ಬರೆಯಿರಿ.  

You Might Like

Post a Comment

0 Comments