Recent Posts

ಪ್ರಥಮ ಚಿಕಿತ್ಸೆ - 8ನೇ ತರಗತಿ ದೈಹಿಕ ಶಿಕ್ಷನ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಧಾರಾಳವಾಗಿ ನೀರನ್ನು ಕುಡಿಸುವುದರಿಂದ ವಿಷದ ತೀಕ್ಷ್ಣತೆಯನ್ನು ಕಡಿಮೆ ಮಾಡಬಹುದು.

2. ಬಟ್ಟಗೆ ಬೆಂಕಿ ಬಿದ್ದಾಗ ಗಾಬರಿಯಿಂದ ಓಡಾಡಬಾರದು.

3. ಅತಿಯಾದ ಮಧ್ಯಪಾನದಿಂದ ವ್ಯಕ್ತಿಯು ಪ್ರಜ್ಞೆ ತಪ್ಪುತ್ತಾನೆ.

4. ಮೂರ್ಛೆ ಹೋದ ವ್ಯಕ್ತಿಯನ್ನು ಅಂಗಾತ ಮಲಗಿಸಬೇಕು.

II. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ವಿಷಪೂರಿತ ವಸ್ತುಗಳಾವುವು ?
ಉತ್ತರ :- ವಿಷ ಪದಾರ್ಥಗಳು, ಚುಚ್ಚುಮದ್ದು ಮತ್ತು  ವಿಷ ಕ್ರಿಮಿಗಳಾದ ಹಾವು, ಚೇಳು, ಜೇನು, ಜೇಡ, ಹುಚ್ಚುನಾಯಿ ಕಡಿತವೂ ಸಹ ವಿಷವೇ ಆಗಿರುತ್ತದೆ.

2. ಪ್ರಜ್ಞೆ ತಪ್ಪುವುದೆಂದರೇನು ?
ಉತ್ತರ :- ದೊಡ್ಡ ಮೆದುಳು ತನ್ನ ಕಾರ್ಯವನ್ನು ನಿಲ್ಲಿಸಿದಾಗ ಉಂಟಾಗುವ ಸ್ಥಿತಿಗೆ ಪ್ರಜ್ಞೆ ತಪ್ಪುವುದು ಅಥವಾ ಮೂರ್ಛೆ ಹೋಗುವುದು ಎನ್ನುವರು.

III. ಈ ಕೆಳಗಿನವುಗಳಿಗೆ ಸರಿ ಅಥವಾ ತಪ್ಪನ್ನು ಗುರುತಿಸಿ.

1. ವ್ಯಕ್ತಿಯು ವಾಂತಿ ಮಾಡುತ್ತಿದ್ದರೆ ತಲೆಯನ್ನು ಪಕ್ಕಕ್ಕೆ ಬಾಗಿಸಬೇಕು.                 ಸರಿ

2. ಮುಖವು ನೀಲಿ ಬಣ್ಣಕ್ಕೆ ತಿರುಗಿದ್ದರೆ ಕೃತಕ ಉಸಿರಾಟ ನಡೆಸಬೇಕು.                  ಸರಿ

3. ಸುಟ್ಟ ಗಾಯದಿಂದ ಚರ್ಮದ ಮೇಲೆ ಬೊಬ್ಬೆಗಳಾಗಿದ್ದರೆ ಸೀಳಬೇಕು.                ತಪ್ಪು     

You Might Like

Post a Comment

0 Comments