Recent Posts

ಹ್ಯಾಂಡ್ಬಾಲ್ - 8ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಹ್ಯಾಂಡ್ಬಾಲ್ ಪಂದ್ಯಾವಳಿ ಥ್ರೋ ಅಪ್ ಮುಖಾಂತರ ಪ್ರಾರಂಭವಾಗುತ್ತದೆ.

2. ಪೆನಾಲ್ಟಿಯನ್ನು 7 ಮೀ ದೂರದ ಗೆರೆಯಿಂದ ವಿಧಿಸಲಾಗುವುದು.

3. ಗೋಲು ಗೆರೆಯ ಅಗಲವು 8 ಸೆ.ಮೀ ಇರುತ್ತದೆ.

4. ಐ.ಹೆಚ್.ಎಫ್ ಎಂದರೆ ಇಂಟರ್ನ್ಯಾಷನಲ್ ಹ್ಯಾಂಡ್ಬಾಲ್ ಫೆಡರೇಶನ್.

II. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ.

1. ಪ್ರಥಮ ಬಾರಿ ಹ್ಯಾಂಡ್ಬಾಲ್ ಆಟದ ಲಿಖಿತ ನಿಯಮಗಳನ್ನು ಯಾವಾಗ ಮತ್ತು ಯಾರು ಪ್ರಕಾಶನಗೊಳಿಸಿದರು ?
ಉತ್ತರ :- 1906 ರಲ್ಲಿ ಡೇನ್ ಹೋಲ್ಗರ್ ನೀಲ್ಸನ್ ರವರು  ಪ್ರಥಮ ಬಾರಿ ಹ್ಯಾಂಡ್ಬಾಲ್ ಆಟದ ಲಿಖಿತ ನಿಯಮಗಳನ್ನು  ಪ್ರಕಾಶನಗೊಳಿಸಿದರು .

2. ಆಧುನಿಕ ಹ್ಯಾಂಡ್ಬಾಲ್ ಆಟದ ನಿಯಮಗಳನ್ನು ರೂಪಿಸಿದವರು ಯಾರು ?
ಉತ್ತರ :-  ಆಧುನಿಕ ಹ್ಯಾಂಡ್ಬಾಲ್ ಆಟದ ನಿಯಮಗಳನ್ನು ರೂಪಿಸಿದವರು ಜರ್ಮನಿಯ ಮ್ಯಾಕ್ಸ್ ಹೇಸರ್, ಕಾರ್ಲ್ ಸ್ಕೆಲಿನ್ಜ್ ಮತ್ತು ಈರಿಚ್ ಕೋನಿಗ್ ರವರು.

3. ಅಂತರ ರಾಷ್ಟ್ರೀಯ ಅಮೇಚೂರ್ ಹ್ಯಾಂಡ್ಬಾಲ್ ಫೆಡರೇಶನ್ ಸ್ಥಾಪಿಸಿದ್ದು ಯಾವಾಗ ?
ಉತ್ತರ :-   1928 ರಲ್ಲಿ ಸ್ಥಾಪಿಸಲಾಗಿದೆ.

4. 2009 ರ ಐ.ಹೆಚ್.ಎಫ್ ವರದಿಯ ಪ್ರಕಾರ ಎಷ್ಟು ರಾಷ್ಟ್ರಗಳ ಹ್ಯಾಂಡ್ಬಾಲ್ ಫೆಡರೇಶನ್ಗಳು ಅದರ ಸದಸ್ಯತ್ವ ಹೊಂದಿವೆ.
ಉತ್ತರ :- 166 ಸದಸ್ಯ ಫೆಡರೇಷನ್ಗಳು.

III. ಈ ಕೆಳಕಂಡ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಹ್ಯಾಂಡ್ಬಾಲ್ ಕ್ರೀಡೆಯನ್ನು ಓಲಿಂಪಿಕ್ನಲ್ಲಿ ಸೇರಿಸಿಕೊಂಡಿರುವ ಬಗೆ ಹೇಗೆ ?
ಉತ್ತರ :- 1936ರ ಬರ್ಲಿನ್ ಓಲಿಂಪಿಕ್ ಕ್ರೀಡಾಕೂಟದಲ್ಲಿ ಪ್ರದರ್ಶನಕ್ಕೆಂದು ಹ್ಯಾಂಡ್ಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು. ಆರ್ಮನಿ ತಂಡದವರು ಈ ಪಂದ್ಯಾಟದಲ್ಲಿ ಗಮನಾರ್ಹ ಸಾಧನೆಯನ್ನು ತೋರ್ಪಡಿಸಿದರಾದರೂ ಮುಂದಿನ ಓಲಿಂಪಿಕ್ ಕ್ರೀಡಾಕೂಟಗಳಲ್ಲಿ ಹ್ಯಾಂಡ್ಬಾಲ್ ಕ್ರೀಡೆಗಳನ್ನು ಸೇರ್ಪಡೆಗೊಳಿಸಿರಲಿಲ್ಲ.1972ರ ಮೂನಿಚ್ ಓಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರಿಗಾಗಿ ಪ್ರಥಮ ಬಾರಿಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ಈ ಕ್ರೀಡೆಯನ್ನು 1976ರ ಮಾಂಟ್ರಿಯಾಲ್ ಓಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳೆಯರಿಗಾಗಿ ಅಧಿಕೃತವಾಗಿ ಸೇರಿಸಲಾಯಿತು.

2. ವಿಶ್ವ ಹ್ಯಾಂಡ್ಬಾಲ್ ಪಂದ್ಯಾವಳಿಯ ಸಂಘಟನೆ ಕುರಿತು ಟಿಪ್ಪಣಿ ಬರೆಯಿರಿ.
ಉತ್ತರ :- ಪ್ರಾರಂಭದಲ್ಲಿ ಪ್ರತಿ ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಪುರುಷರಿಗಾಗಿ ವಿಶ್ವ ಹ್ಯಾಂಡ್ಬಾಲ್ ಪಂದ್ಯಾವಳಿಯನ್ನು ಸಂಘಟಿಸಲಾಗುತ್ತಿತ್ತು. ಈಗ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಪಂದ್ಯಾವಳಿಗಳನ್ನು ಪುರುಷರಿಗಾಗಿ ಹಾಗೂ ಮಹಿಳೆಯರಿಗಾಗಿ ಆಯೋಜಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಹ್ಯಾಂಡ್ಬಾಲ್ ಫೆಡರೇಶನ್ರವರು ಕಿರಿಯ ಬಾಲಕ/ ಬಾಲಕಿಯರಿಗಾಗಿಯೂ  ವಿಶ್ವ ಹ್ಯಾಂಡ್ಬಾಲ್ ಪಂದ್ಯಾವಳಿಗಳನ್ನು ಸಂಘಟಿಸುತ್ತಾ ಬಂದಿರುತ್ತಾರೆ. ಜುಲೈ 2009ರ ಐ.ಹೆಚ್.ಎಫ್ ವರದಿಯ ಪ್ರಕಾರ 166 ಸದಸ್ಯ ಫೆಡರೇಶನ್ಗಳಿಂದ ಸುಮಾರು 7,95,000 ತಂಡಗಳು ಮತ್ತು 19 ಮಿಲಿಯನ್ ಆಟಗಾರರಿದ್ದಾರೆ.

3. ಹ್ಯಾಂಡ್ಬಾಲ್ ಚೆಂಡಿನ ಕುರಿತು ಟಿಪ್ಪಣಿ ಬರೆಯಿರಿ.
ಉತ್ತರ :- ಹ್ಯಾಂಡ್ಬಾಲ್ ಆಟದಲ್ಲಿ ಬಳಸುವ ಚೆಂಡುಗಳು ಫುಟ್ಬಾಲ್ಗಿಂತಲೂ ಚಿಕ್ಕದಾಗಿದ್ದು ಒಂದೇ ಕೈಯಲ್ಲಿ ಹಿಡಿಯಲು ಸುಲಭ ಸಾಧ್ಯವಾಗುತ್ತದೆ. ಈ ಚೆಂಡುಗಳಿಗೆ 32 ಪಟ್ಟಿಗಳ ಹೊದಿಕೆ ಇರುತ್ತದೆ. ಪುರುಷ ಮತ್ತು ಮಹಿಳೆಯರಿಗಾಗಿ ವಿವಿಧ ಗಾತ್ರದ ಚೆಂಡುಗಳನ್ನು ಉಪಯೋಗಿಸುತ್ತಾರೆ. ಅವುಗಳ ವಿವರ ಈ ಕೆಳಗಿನಂತಿರುತ್ತದೆ.

 

4. ಹ್ಯಾಂಡ್ ಬಾಲ್ ಆಟದ ವೇಳೆ ಶಿಕ್ಷೆ ವಿಧಿಸುವ ಕ್ರಮ ಹೇಗೆ ?

ಉತ್ತರ :- ರಕ್ಷಣಾ ಆಟಗಾರನೇನಾದರೂ ಆಕ್ರಮಣ ಆಟಗಾರರಿಗೆ ಅಂಕಗಳಿಸಲು ಅಡ್ಡಿಯನ್ನು ಒಡ್ಡಿದಲ್ಲಿ ಆಕ್ರಮಣ ತಂಡದವರಿಗೆ ಅಂಕಗಳಿಸಲು ನೇರ ಅವಕಾಶವನ್ನು ಪೆನಾಲ್ಟಿ ಮೂಲಕ ಕಲ್ಪಿಸಲಾಗುವುದು. ಇತರೆ ಸಂದರ್ಭದಲ್ಲಿ ಯಾವುದೇ ತಂಡದ ಆಟಗಾರ ಒರಟು ಆಟದ ಪ್ರದರ್ಶನ ತೋರ್ಪಡಿಸಿದಲ್ಲಿ ಎದುರಾಳಿಗಳಿಗೆ ಚೆಂಡನ್ನು ಆಡಲು ಮುಕ್ತ ಅವಕಾಶವನ್ನು ಫ್ರೀ ಥ್ರೋ ನೀಡಲಾಗುವುದು. ಇಂತಹ ಪ್ರದರ್ಶನ ಮುಂದುವರಿಸಿದಲ್ಲಿ ಅಥವಾ ಒರಟುತನದ ತೀವೃತೆ ಹೆಚ್ಚಿಸಿದಲ್ಲಿ ಎದುರಾಳಿ ಆಟಗಾರರಿಗೆ ಶಿಕ್ಷೆಯನ್ನು ಅನುಕ್ರಮವಾಗಿ ಹೆಚ್ಚಿಸಲಾಗುವುದು. ಅದರಲ್ಲಿ ಹಳದಿ ಕಾರ್ಡು: ಎರಡು ನಿಮಿಷದ ಅಮಾನತ್ತು ಮತ್ತು ಕೆಂಪು ಕಾರ್ಡನ್ನು ನೀಡಿ ಶಿಕ್ಷೆಯನ್ನು ವಿಧಿಸಲಾಗುತ್ತದೆ.

IV. 'ಅ' ಪಟ್ಟಿಯಲ್ಲಿರುವ ಅಂಶಗಳನ್ನು 'ಬ' ಪಟ್ಟಿಯಲ್ಲಿರುವ ಅಂಶಗಳೊಂದಿಗೆ ಹೊಂದಿಸಿ ಬರೆಯಿರಿ 


You Might Like

Post a Comment

0 Comments