Recent Posts

ವಾಲಿಬಾಲ್ - 8ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                              

1. ಅಮೇರಿಕಾ ದೇಶದಲ್ಲಿ ವಾಲಿಬಾಲ್ ಆಟವನ್ನು ಸಂಶೋಧಿಸಲಾಯಿತು.                   

2. ವಾಲಿಬಾಲ್ ಆಟದ ಮೊಟ್ಟ ಮೊದಲಿನ ಹೆಸರು ಮಿಂಟೋನೆಟ್.                       

3. ವಾಲಿಬಾಲ್ ಆಟದ ಅಂಕಣವು 18 ಮೀ ಉದ್ದ ಮತ್ತು 9 ಮೀ ಅಗಲವಾಗಿರುತ್ತದೆ.                

4. ವಾಲಿಬಾಲ್ ಆಟದ ಜಾಳಿಗೆಯ ಮೇಲೆ ಬದಿಗೆರೆಗೆ ಅನುಗುಣವಾಗಿ ಕಟ್ಟಲ್ಪಟ್ಟಿರುವ ಉಪಕರಣಕ್ಕೆ ಆಂಟೆನಾ ಎನ್ನುತ್ತಾರೆ.             

5. ಅಧಿಕೃತವಾಗಿ ವಾಲಿಬಾಲ್ ಆಟವನ್ನು ಟೋಕಿಯೋ ಎಂಬ ಸ್ಥಳದಲ್ಲಿ ನಡೆದ ಓಲಿಂಪಿಕ್ಸ್ನಲ್ಲಿ            ಸೇರಿಸಲಾಯಿತು.

II. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ.                    

1. ವಾಲಿಬಾಲ್ ಆಟವನ್ನು ಕಂಡು ಹಿಡಿದವರು ಯಾರು ಮತ್ತು ಯಾವಾಗ ?
ಉತ್ತರ :- ವಾಲಿಬಾಲ್ ಆಟವನ್ನು ಫೆಬ್ರುವರಿ 9 1895 ರಲ್ಲಿ ವಿಲಿಯಂ ಜಿ ಮಾರ್ಗನ್ ರವರು ಕಂಡು ಹಿಡಿದರು.    

2. ವಾಲಿಬಾಲ್ ಆಟಕ್ಕೆ ಮೊದಲಿಗೆ ನಿಯಮಗಳನ್ನು ರೂಪಿಸಿದ ಸಂಸ್ಥೆ ಯಾವುದು ?
ಉತ್ತರ :- ವೈ.ಎಂ.ಸಿ.ಎ ಸಂಸ್ಥೆಯು ವಾಲಿಬಾಲ್ ಆಟಕ್ಕೆ ಮೊದಲಿಗೆ ನಿಯಮಗಳನ್ನು ರೂಪಿಸಿತು.    

3. ವಾಲಿಬಾಲ್ ಆಟದ ಅಂಕಣದಲ್ಲಿ ಮಧ್ಯಗೆರೆಯಿಂದ 3 ಮೀ ದೂರದಲ್ಲಿರುವ ಗೆರೆಗೆ ಏನೆಂದು ಕರೆಯುತ್ತಾರೆ ?
ಉತ್ತರ :- ವಾಲಿಬಾಲ್ ಆಟದ ಅಂಕಣದಲ್ಲಿ ಮಧ್ಯಗೆರೆಯಿಂದ 3 ಮೀ ದೂರದಲ್ಲಿರುವ ಗೆರೆಗೆ ಆಕ್ರಮಣ ಗೆರೆ ಎಂದು ಕರೆಯುತ್ತಾರೆ.                                           

4. ವಾಲಿಬಾಲ್ ಆಟದಲ್ಲಿ ಬಳಸುವ ಉಪಕರಣಗಳನ್ನು ಹೆಸರಿಸಿ.
ಉತ್ತರ :- ವಾಲಿಬಾಲ್ ಆಟದಲ್ಲಿ ಬಳಸುವ ಉಪಕರಣಗಳೆಂದರೆ : ಜಾಳಿಗೆ, ಆಂಟೆನಾ, ಕಂಬಗಳು ಮತ್ತು ಚೆಂಡು ಇತ್ಯಾದಿ.                                                    

5. ವಾಲಿಬಾಲ್ ಆಟದಲ್ಲಿ ಒಂದು ತಂಡದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು ?
ಉತ್ತರ :- ವಾಲಿಬಾಲ್ ಆಟದ ಒಂದು ತಂಡದಲ್ಲಿ 6 ಜನ ಆಟಗಾರರು ಇರುತ್ತಾರೆ.

III. ಈ ಕೆಳಕಂಡ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.                        

1. ವಾಲಿಬಾಲ್ ಆಟದ ಎರಡು ನಿಯಮಗಳನ್ನು ತಿಳಿಸಿ.
ಉತ್ತರ :- ವಾಲಿಬಾಲ್ ಆಟದ ನಿಯಮಗಳು :-                                     
1. ಪ್ರತಿಯೊಂದು ತಂಡದಲ್ಲಿ 6 ಜನ ಆಟಗಾರರಿರಬೇಕು ಮತ್ತು ಬದಲಿ ಆಟಗಾರರಿರುತ್ತಾರೆ.             
2. ಈ ಆಟವು ನಾಣ್ಯ ಚಿಮ್ಮುಗೆಯ ಮುಖಾಂತರ ಯಾವ ತಂಡದವರು ಸರ್ವಿಸ್ನೊಂದಿಗೆ ಪಂದ್ಯವನ್ನು ಪ್ರಾರಂಭಿಸಬೇಕೆಂದು ನಿರ್ಣಯಿಸಲಾಗುತ್ತದೆ.     
3. ಸರ್ವಿಸ್ ಮಾಡುವ ತಂಡದಿಂದ ಒಬ್ಬ ಆಟಗಾರ ಸರ್ವಿಸ್ ಮಾಡುವ ಕ್ಷೇತ್ರದಲ್ಲಿ ನಿಂತು ಚೆಂಡನ್ನು ಗಾಳಿಯಲ್ಲಿ ತೂರಿ ಎದುರಾಳಿ ಜಾಳಿಗೆಯ ಮೇಲಿನಿಂದ ಎದುರಾಳಿ ಅಂಕಣದಲ್ಲಿ ಇಳಿಯುವ ಹಾಗೆ ಹೊಡೆಯಬೇಕು ಇದನ್ನು ಸರ್ವಿಸ್ ಎನ್ನುವರು.              
4. ಒಂದು ಚೆಂಡು ಅಂದರೆ ಸರ್ವಿಸ್ ಮಾಡಿದ ಅಥವಾ ರ್ಯಾಲಿಯಲ್ಲಿರುವ ಚೆಂಡು ನಮ್ಮ ಅಂಕಣಕ್ಕೆ  ಬಂದಾಗ ಅದನ್ನು ಮೂರು ಸ್ಪರ್ಶಗಳನ್ನು ಮೀರದೇ ಸಂಯೋಜಿಸಿ ಜಾಳಿಗೆಯ ಮೇಲಿನಿಂದ ಹಿಂದಿರುಗಿಸಬೇಕು  ಇತ್ಯಾದಿ.

2. ವಾಲಿಬಾಲ್ ಆಟದ ರೋಟೇಶನ್ ವಿಧಾನದ ಚಿತ್ರ ಬಿಡಿಸಿ.

ಉತ್ತರ:


3. ವಾಲಿಬಾಲ್ ಆಟದ ಜಾಳಿಗೆಯ ಅಳತೆ ಹಾಗೂ ಜಾಳಿಗೆಯಲ್ಲಿ ಬಳಸಿರುವ ಉಪಕರಣಗಳ ಹೆಸರು ಮತ್ತು ಅಳತೆಯನ್ನು ತಿಳಿಸಿ?
ಉತ್ತರ : ವಾಲಿಬಾಲ್ ಆಟದಲ್ಲಿ ಬಳಸುವ ಜಾಳಿಗೆಯು 9.5 ಮೀ ನಿಂದ 10 ಮೀ ಉದ್ದವಿರುತ್ತದೆ. ಇದು 10 ಸೆ.ಮೀ ಚೌಕಗಳುಳ್ಳ ಜಾಲ ರಂಧ್ರಗಳಿಂದ ಕೂಡಿರುತ್ತದೆ. ಜಾಳಿಗೆಯ ಮೇಲ್ಭಾಗದಲ್ಲಿ 7 ಸೆ.ಮೀ ಅಗಲದ ಬಿಳಿ ಪಟ್ಟಿಯನ್ನು ನೆಟ್ನ ಉದ್ದಕ್ಕೂ ಹೊಲಿದಿರುತ್ತಾರೆ.                              

4. ವಾಲಿಬಾಲ್ ಆಟದಲ್ಲಿ ವಿಜಯಗಳಿಸಿದ ತಂಡ  ಎಂದು ಹೇಗೆ ನಿರ್ಧರಿಸಲಾಗುತ್ತದೆ ?
ಉತ್ತರ :- ಯಾವ ತಂಡ ತಪ್ಪು ಮಾಡುತ್ತದೆಯೋ ಅದರ ಎದುರಾಳಿ ತಂಡಕ್ಕೆ ಸರ್ವಿಸ್ ಜೊತೆಗೆ ಒಂದು ಅಂಕ ದೊರೆಯುತ್ತದೆ. ಯಾವ ತಂಡ ಮೊದಲು 25 ಅಂಕಗಳನ್ನು ( ಎರಡು ಅಂಕಗಳ ವ್ಯತ್ಯಾಸದೊಂದಿಗೆ ) ಪಡೆಯುತ್ತದೆಯೋ ಆ ತಂಡಕ್ಕೆ ಸೆಟ್ಟಿನ  ವಿಜಯಿ ಎಂದು ಪರಿಗಣಿಸಲಾಗುವುದು. ಈ ಪ್ರಕಾರದ ಐದು ಸೆಟ್ಗಳನ್ನು ಒಂದು ಪಂದ್ಯ ಒಳಗೊಂಡಿರುತ್ತದೆ. ಇದರಲ್ಲಿ ಮೂರು ಸೆಟ್ಗಳನ್ನು ಗೆದ್ದ ತಂಡವನ್ನು ಪಂದ್ಯ ವಿಜಯಿಯೆಂದು ಪರಿಗಣಿಸಲಾಗುತ್ತದೆ.  ಐದನೇ ಅಥವಾ ನಿರ್ಣಾಯಕ ಸೆಟ್ಟನ್ನು 15 ಅಂಕಗಳಿಗೆ ಆಡಲಾಗುತ್ತದೆ. 5. ವಾಲಿಬಾಲ್ ಆಟದ ಅಂಕಣದ ಚಿತ್ರ ಮತ್ತು ಗೆರೆಗಳ ಹೆಸರುಗಳನ್ನು ಅಳತೆಗಳೊಂದಿಗೆ ಬರೆಯಿರಿ.

5. ವಾಲಿಬಾಲ್ ಆಟದ ಅಂಕಣದ ಚಿತ್ರ ಮತ್ತು ಗೆರೆಗಳ ಹೆಸರುಗಳನ್ನು ಅಳತೆಗಳೊಂದಿಗೆ ಬರೆಯಿರಿ.

ಉತ್ತರ : 

 

ಪ್ರ.ಸಂ 4. 'ಅ' ಪಟ್ಟಿಯೊಂದಿಗೆ 'ಬ' ಪಟ್ಟಿಯನ್ನು ಹೊಂದಿಸಿ ಬರೆಯಿರಿ.


You Might Like

Post a Comment

0 Comments