Recent Posts

ಸಾಂಕ್ರಾಮಿಕ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಮಲೇರಿಯಾ ಬರದಂತೆ ಮುಂಜಾಗ್ರತೆಗಾಗಿ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ತೂರದ ಜಾಲರಿ ಹಾಕಿಸಬೇಕು.

2. ಕಾಲರಾ ನಿಯಂತ್ರಣಕ್ಕೆ ಕ್ರೇಸಾಲ್ ದ್ರಾವಣ ಕ್ರಿಮಿನಾಶಕ ಸಿಂಪಡಿಸಬೇಕು.

3. ಕ್ಷಯ ರೋಗವು ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರಾಕ್ಯೂಲೋಸಿಸ್ ನಿಂದ ಉಂಟಾಗುತ್ತದೆ.

4. ಇನ್ಪ್ಲೂಯೆಂಜಾ ಫ್ಲೂ ನ ಸಂಕ್ಷೀಪ್ತ ಹೆಸರು.

ಪ್ರ.ಸಂ 2. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.                         

1.ಮಲೇರಿಯಾ ರೋಗ ಯಾವ ಸೊಳ್ಳೆಯಿಂದ ಹರಡುತ್ತದೆ. ?
ಉತ್ತರ :-  ಅನಾಫೆಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗವು ಹರಡುತ್ತದೆ.

2.ಕಾಲರಾ ರೋಗವು ಯವ ರೋಗಾಣುವಿನಿಂದ ಹರಡುತ್ತದೆ ?
ಉತ್ತರ :- ವಿಟ್ರಿಯೋ ಕಲರೇ ಎಂಬ ರೋಗಾಣುವಿನಿಂದ ಹರಡುತ್ತದೆ.

3.ಕಾಲರಾ ರೋಗಿಯ ಬಟ್ಟೆಗಳನ್ನು ಯಾವ ದ್ರಾವಣದಲ್ಲಿ ಹಾಕಬೇಕು ?
ಉತ್ತರ :- ಕ್ರೇಸಾಲ್ ದ್ರಾವನದಲ್ಲಿ ಹಕಬೇಕು.

4.ಕ್ಷಯ ಯಾವ ಅಂಗಕ್ಕೆ ಸಂಬಂದಿಸಿದ ರೋಗ ?
ಉತ್ತರ :- ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗವಾಗಿದೆ.

5. ವಿಷಮ ಶೀತ ಜ್ವರ ಹರಡಲು ಕಾರಣವೇನು ?
ಉತ್ತರ :- ನೀರು, ಹಾಲು ಮತ್ತು ಕಲುಷಿತ ಆಹಾರಗಳು , ನೊಣಗಳು ಈ ರೋಗಕ್ಕೆ ಕಾರಣಗಳು.

ಪ್ರ.ಸಂ 3. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಸಾಂಕ್ರಾಮಿಕ ರೋಗ ಹೇಗೆ ಹರಡುತ್ತದೆ.
ಉತ್ತರ :- ಸಾಂಕ್ರಾಮಿಕ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುವ ರೋಗವಾಗಿದೆ. ಇದು ರೋಗಾಣುವಿನಿಂದ ಉಂಟಾಗುವ ರೋಗ. ಇದು ಮಾನವನಿಂದ ಮಾನವನಿಗೆ ಅಥವಾ ಪ್ರಾಣಿಯಿಂದ ಮಾನವನಿಗೆ ಹರಡುವ ರೋಗ. ಸೊಂಕು ತಗಲಿದ ವಸ್ತು ಅಥವಾ ವ್ಯಕ್ತಿಗಳ ಸಂಪರ್ಕದಿಂದ ಸಾಂಕ್ರಾಮಿಕ ರೋಗ ಹರಡಿಕೊಳ್ಳುತ್ತದೆ.  

2. ಮಲೇರಿಯಾ ರೋಗದ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳನ್ನುತಿಳಿಸಿ.
ಉತ್ತರ :- * ಸೊಳ್ಳೆಗಳು ನಿಂತ ನೀರು, ಕೊಚ್ಚೆ ಗುಂಡಿ, ಚರಂಡಿ, ಬಚ್ಚಲು ಗುಂಡಿ, ಗದ್ದೆ ಮುಂತಾದ ನೀರಿರುವ ಸ್ಥಳಗಳಲ್ಲಿ ಸೊಳ್ಳೆಗಳು ಬೆಳೆಯುವುದರಿಂದ ಆ ಪ್ರದೇಶಗಳಲ್ಲಿ ಸೊಳ್ಳೆಗಳ ನಿರ್ಮೂಲನಕ್ಕೆ ಕ್ರಿಮಿನಾಶಕಸಿಂಪಡಿಸಬೇಕು.
* ಕ್ರಿಮಿನಾಶಕಗಳಾದ ಡಿ.ಡಿ.ಟಿ, ಬಿ.ಎಚ್.ಸಿ, ಮ್ಯಾಥೋಲಿನ್ ಮುಂತಾದವುಗಳನ್ನು ಮನೆಗಳ ಸುತ್ತಮುತ್ತ  ಸಿಂಪಡಿಸಬೇಕು.          
* ರಾತ್ರಿ ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಂಡು ಮಲಗಬೇಕು.         
* ಕಿಟಕಿ ಬಾಗಿಲುಗಳಿಗೆ ಸೊಳ್ಳೆ ತೂರದ ಜಾಲರಿ ಹಾಕಿಸಬೇಕು.      

3.ಕ್ಷಯ ರೋಗ ಬರಲು ಕಾರಣಗಳೇನು ?
ಉತ್ತರ :- * ಕಲುಷಿತ ವಾತಾವರಣದಿಂದ ಬರುತ್ತದೆ. ಮಾನವರು ಮತ್ತು ಪ್ರಾಣಿಗಳಿಂದ ಹರಡುತ್ತದೆ. ಇದು 'ಮೈಕ್ರೋಬ್ಯಾಕ್ಟೇರಿಯಂ ಟ್ಯೂಬರಾಕ್ಯುಲೋಸಿಸ್ ' ನಿಂದ ಉಂಟಾಗುತ್ತದೆ. ರೋಗಾಣು ರೋಗಿಯ ಕೆಮ್ಮಿನ, ಸೀನಿನ ಮೂಲಕ ತೀವ್ರವಾಗಿ ಹರಡುತ್ತದೆ.

4.ಇನ್ ಪ್ಲೂಯೆಂಜಾ ಹರಡುವಿಕೆಯ ವಿಧಾನಗಳನ್ನು ತಿಳಿಸಿ.
ಉತ್ತರ :- * ಗಾಳಿಯ ಮೂಲಕ ರೋಗಿಯೇ ರೋಗಾಣುಗಳನ್ನು ಹರಡುತ್ತಾನೆ ಹಾಗೂ ರೋಗಿಯ ನೇರ ಸಂಪರ್ಕದಿಂದಲೂ ರೋಗ ಹರಡುತ್ತದೆ.          

* ಇನ್ ಪ್ಲೂಯೆಂಜಾ ವೈರಸ್ನಿಂದ ರೋಗವು ಹರಡುತ್ತದೆ.

You Might Like

Post a Comment

0 Comments