Recent Posts

ನೀರಿನಲ್ಲಿ ಮುಳುಗಿದವರಿಗೆ ಪ್ರಥಮ ಚಿಕಿತ್ಸೆ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ನೀರಿನಿಂದ ವ್ಯಕ್ತಿಯನ್ನು ತಕ್ಷಣ ತೆಗೆದು ಉಸಿರಾಟಕ್ಕೆ ಅನುಕೂಲ ಮಾಡಿದರೆ ಅವನ ಪ್ರಾಣ ವನ್ನು ಉಳಿಸಬಹುದು.

2. ಮುಳುಗಿದ ವ್ಯಕ್ತಿಯ ಜ್ಞಾನ ತಪ್ಪಿ ಉಸಿರು ನಿಂತು ಹೋದ ಸ್ಥೀತಿಗೆ ಶ್ವಾಸಬಂಧನ ಎನ್ನುವರು.

3. ಚಿಕ್ಕ ಪುಟ್ಟ ಗಾಯಗಳಾದಾಗ ಔಷಧಯುಕ್ತ ಪಟ್ಟಿ (ಬ್ಯಾಂಡ್ಏಡ್ಗಳು) ಬಳಸಬಹುದು.

4. ಇಲಾಸ್ಟಿಕ್ ಕ್ರೇಪ್ ಬ್ಯಾಂಡೇಜ್ ಕೀಲುಗಳನ್ನು ಭದ್ರಗೊಳಿಸಲು ಸಹಾಯಕವಾಗಿದೆ.

5. ರೋಗಾಣು ರಹಿತ ಸುರುಳಿ ಪ್ಯಾಡನ್ನು ತೆರೆದ ಗಾಯದಿಂದಾಗುವ ರಕ್ತಸ್ರಾವ ಹಾಗೂ ಸೊಂಕನ್ನು ತಡೆಗಟ್ಟಲು ಬಳಸಬಹುದು.

ಪ್ರ.ಸಂ 2. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ಷೀಪ್ತವಾಗಿ ಉತ್ತರಿಸಿ.

1. ಶ್ವಾಸ ಬಂಧನ ಎಂದರೇನು ?
ಉತ್ತರ :- ನೀರಿನಲ್ಲಿ ಮುಳುಗಿದ ವ್ಯಕ್ತಿಯ ಜ್ಞಾನತಪ್ಪಿ ಅವನ ಉಸಿರಾಟವು ನಿಂತು ಹೋಗಿರಬಹುದು ಈ ಅವಸ್ಥೆಗೆ ಶ್ವಾಸ  ಬಂಧನ ಎನ್ನುವರು.

2. ನೀರಿನಲ್ಲಿ ಮುಳುಗಿದ ವ್ಯಕ್ತಿಗೆ ನೀಡುವ ಪ್ರಥಮ ಚಿಕಿತ್ಸೆಯನ್ನು ಬರೆಯಿರಿ.
ಉತ್ತರ :- ನೀರಿನಲ್ಲಿ ಮುಳುಗಿದ ವ್ಯಕ್ತಿಗೆ ನೀಡುವ ಪ್ರಥಮ ಚಿಕಿತ್ಸೆ :- ನೀರಿನಲ್ಲಿ ಮುಳುಗಿದ ವ್ಯಕ್ತಿಯ ಬಟ್ಟೆಗಳನ್ನು ಸಡಿಲಿಸಿ ಮುಖದಲ್ಲಿಯ ಕೆಸರು ಮತ್ತು ಕೊಳೆಯನ್ನು ಸ್ವಚ್ಛಗೊಳಿಸಿ ಅವನನ್ನು ಮುಖ ಕೆಳಗೆ ಮಾಡಿ ಮಲಗಿಸಿ ತಲೆಯನ್ನು ಒಂದು ಕಡೆ ತಿರುಗಿಸಿ ನೀವು ಅವನನ್ನು ಕಾಲುಗಳ ಮಧ್ಯದಲ್ಲಿಇಟ್ಟುಕೊಂಡು ಮೊಣಕಾಲು ಮಡಚಿ ಬಾಗುವುದು  ಮತ್ತು ಎರಡೂ ಕೈಗಳನ್ನು ಅವನ ಪಕ್ಕೆಲುಬುಗಳ ಕೆಳಗೆ ಗಟ್ಟಿಯಾಗಿ ಇಡುವುದು ಮತ್ತು ನಮ್ಮ ಕೈಗಳನ್ನು ಸರಳವಾಗಿಸಿ ನಿಲ್ಲುವುದು ಇದರಿಂದ ನಮ್ಮ ದೇಹದ ಭಾರವು ವ್ಯಕ್ತಿಯ ಎದೆಯ ಕೆಳಗೆ ಬೀಳುವುದು ಇದು ವಫೆಯ ಮೇಲೆ ಒತ್ತಡವನ್ನುಂಟು ಮಾಡುವುದು. ಎರಡು ಸೆಕೆಂಡು ಈ ಸ್ಥಾನದಲ್ಲಿಯೇ ಇದ್ದು ತಿರುಗಿ ಬಗ್ಗಿದ ಸ್ಥಾನಕ್ಕೆ ಬರುವುದು. ಇಲ್ಲಿ ಮೂರು ಸೆಕೆಂಡು ತಡೆಯುವುದು. ಆಗ ಒತ್ತಡವು ಬಿಡುಗಡೆ ಹೊಂದುವುದುಪ್ರತಿ ನಿಮಿಷಕ್ಕೂ 12 ರಂತೆ ಈ ಚಲನೆಗಳನ್ನು ಶ್ವಾಸ ಕೋಶದಲ್ಲಯ ನೀರು ಖಾಲಿಯಾಗುವವರೆಗೆ ಹಾಗೂ ಉಸಿರಾಟ ಪ್ರಾರಂಭವಾಗುವವರೆಗೆ ಮುಂದುವರೆಸುವುದು. ಆಗ ರೋಗಿ ನಿಟ್ಟುಸಿರಿನಿಂದ ಉಸಿರಾಟ ಆರಂಭಿಸುವನು ಆಗ ಸಾಧ್ಯವಾದಷ್ಟು ಬೇಗನೆ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.

3. ಇಲಾಸ್ಟಿಕ್ ಕ್ರೇಪ್ ಬ್ಯಾಂಡೇಜ್ನ ಉಪಯೋಗವೇನು ?
ಉತ್ತರ :- ಇಲಾಸ್ಟಿಕ್ ಕ್ರೇಪ್ ಬ್ಯಾಂಡೇಜ್ ಇದು ಕೀಲುಗಳನ್ನು ಭದ್ರಗೊಳಿಸಲು ಸಹಾಯಕವಾಗಿದೆ. ಈ ರೀತಿಯ ಪಟ್ಟಿಗಳು ಸ್ಥಿತಿ ಸ್ಥಾಪಕತ್ವ ಗುಣ ಹೊಂದಿದ್ದು ಒತ್ತಡ ನಿಯಂತ್ರಿಸಲು ಮತ್ತು ಅದುಮುವಿಕೆಗೆ ಸಹಾಯ ಮಾಡುತ್ತವೆ. ಲೋಹದಿಂದ ತಯಾರಿಸಿದ ಕ್ಲಿಪ್ಗಳ ಸಹಾಯದಿಂದ ಈ ಬ್ಯಾಂಡೇಜ್ಗಳನ್ನು ಭದ್ರವಾಗಿ ಕಟ್ಟಬಹುದು.   

4. ರೋಗಾಣು ರಹಿತ ಸುರುಳಿ ಪ್ಯಾಡ್ನ ಉಪಯೋಗವೇನು ?
ಉತ್ತರ :-   ವಿವಿಧ ಉದ್ದ ಮತ್ತು ಅಗಲ ಅಳತೆಗಳಲ್ಲಿ ದೊರಕುವ ಈಪಟ್ಟಿಯನ್ನು ತೆರೆದ ಗಾಯದಿಂದಾಗುವ ರಕ್ತಶ್ರಾವ ಹಾಗೂ ಸೊಂಕನ್ನು ತಡೆಗಟ್ಟಲು ಬಳಸಬಹುದು. ರೋಗಾಣುರಹಿತ ಸುರುಳಿ ಪ್ಯಾಡ್ಗಳನ್ನು ವಿವಿಧ ಗಾತ್ರದ ಗಾಯಗಳಿಗೆ ಉಪಯೋಗಿಸಬಹುದು.

You Might Like

Post a Comment

0 Comments