Recent Posts

ಜೀವನ ಶೈಲಿಯ ರೋಗಗಳು - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಸಾಧಾರಣ ರಕ್ತದೊತ್ತಡದ ಮೌಲ್ಯ 120/80 ಇರುತ್ತದೆ.

2. ತೀವ್ರ ರಕ್ತದೊತ್ತಡವನ್ನು ಹೈಪರ್ಟೆನ್ಷನ್ ಎಂದು ಕರೆಯುತ್ತೇವೆ. 

3. ಜೀವನ ಶೈಲಿಯ ರೋಗಗಳನ್ನು ತಡೆಯುವ ವಿಧಾನಗಳಲ್ಲಿ ನಮ್ಮ ಜೀವನಶೈಲಿಯನ್ನು ಬದಲಾಯಿಸುವುದು ಒಂದಾಗಿದೆ. 

4. ಸ್ಟ್ರೋಕ್ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಾಗಿರುತ್ತದೆ.

ಪ್ರ.ಸಂ 2. ಕೆಳಗಿನ ಪ್ರಶ್ನೆಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಜೀವನಶೈಲಿ ರೋಗಗಳು ಎಂದರೇನು ?
ಉತ್ತರ :- ಜೀವನ ಶೈಲಿಯ ರೋಗಗಳು ಸಾಂಕ್ರಾಮಿಕ ರೋಗಗಳಲ್ಲ. ಅವು ಜನರ ನಡತೆ ಮತ್ತು ಜೀವನ ಸಾಗಿಸುವ ರೀತಿಯಿಂದ ಬರುವ ಪರಿಸ್ಥಿತಿಯಾಗಿರುತ್ತದೆ ಇದನ್ನೇ ಜೀವನಶೈಲಿ ರೋಗಗಳು ಎನ್ನುವರು.

2. ಒಬ್ಬ ವ್ಯಕ್ತಿಗೆ ನಾವು ಯಾವಾಗ ತೀವ್ರ ರಕ್ತದೊತ್ತಡ ಇದೆ ಎನ್ನುತ್ತೇವೆ ?
ಉತ್ತರ :- ಯಾವುದೇ ವ್ಯಕ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಒತ್ತಡ (140/90) ನಿರಂತರವಾಗಿಇದ್ದರೆ, ಆವ್ಯಕ್ತಿಗೆಆ ವ್ಯಕ್ತಿಗೆ ತೀವ್ರ ರಕ್ತದ ಒತ್ತಡ ಇದೆ. ಎನ್ನಬಹುದು.

3. ಹೃದ್ರೋಗಗಳ ಅರ್ಥವನ್ನು ಬರೆಯಿರಿ.
ಉತ್ತರ :- ಹೃದಯ ಮತ್ತು  ಅದರ ರಕ್ತನಾಳಗಳಗಳಿಗೆ ಸಂಬಂಧಿಸಿದ  ರೋಗಗಳ ಗುಂಪಿಗೆ ಹೃದ್ರೋಗಗಳು ಎನ್ನುವರು.

4. ಮಧುಮೇಹ ಎಂದರೇನು ?
ಉತ್ತರ :- ದೇಹವು ಗ್ಲುಕೋಸ್ನ ಮಟ್ಟವನ್ನು ನಿಯಂತ್ರಿಸಲು ಅಸಾಧ್ಯವಾದಾಗ, ರಕ್ತದಲ್ಲಿ ಅಧಿಕ ಗ್ಲುಕೋಸ್ ಉಂಟಾದಾಗ ಅಂತಹ ಸ್ಥಿತಿಯನ್ನು ಮಧುಮೇಹ ಸ್ಥಿತಿ ಎನ್ನುವರು.

5. ಮಧುಮೇಹದ ವಿವಿಧ ಪ್ರಕಾರಗಳು ?
ಉತ್ತರ :- 1) ಮಧುಮೇಹದ 1ನೇ ನಮೂನೆ      
2) ಮಧುಮೇಹದ 2ನೇ ನಮೂನೆ.

ಪ್ರ.ಸಂ 3. ಈ ಕೆಳಗಿನ ಪ್ರಶ್ನೆಗಳನ್ನು ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

1. ಜೀವನ ಶೈಲಿಯ ರೋಗಗಳ ವಿವಿಧ ಪ್ರಕಾರಗಳು ಯಾವುವು?
ಉತ್ತರ :-  ಜೀವನ ಶೈಲಿಯ ರೋಗಗಳ ವಿವಿಧ ಪ್ರಕಾರಗಳು :-                     
1) ಅಲ್ಝೈಮರರ್ಸ್ ಕಾಯಿಲೆ         2) ಉಬ್ಬಸ                         
3) ಕ್ಯಾನ್ಸರ್                                     4) ಎರಡನೇ ನಮೂನೆಯ ಮಧುಮೇಹ     
5) ಹೃದ್ರೋಗಗಳು                           6) ಮೂತ್ರಪಿಂಡದ ರೋಗಗಳು             
7) ನಿರುತ್ಸಾಹ                                 8) ಬೊಜ್ಜುತನ   

2. ರಕ್ತದೊತ್ತಡದ ಅರ್ಥವನ್ನು ಬರೆಯಿರಿ.    
ಉತ್ತರ :- ರಕ್ತವು ನಮ್ಮ ದೇಹದೊಳಗೆ ಸಂಚರಿಸುವಾಗ, ರಕ್ತನಾಳಗಳ ಗೋಡೆಗಳ ವಿರುದ್ದ ಹಾಕುವ ಒತ್ತಡವನ್ನು ರಕ್ತದ ಒತ್ತಡ ಎನ್ನುವರು.

3. ಅತಿರೋಕ್ಲೇರೋಸಿಸ್  ಎಂದರೇನು ?
ಉತ್ತರ :- ರಕ್ತನಾಳಗಳು ಸಣ್ಣವಾಗುವುದು ಅಥವಾ ಗಟ್ಟಿಯಾಗುವುದನ್ನು ಅತಿರೋಕ್ಲೇರೋಸಿಸ್  ಎನ್ನುವರು.

4. ಸ್ಟೋಕ್ ಎಂದರೇನು ?
ಉತ್ತರ :- ಮೆದುಳುಗೆ ಸಾಕಷ್ಟು ಆಮ್ಲಜನಕದಿಂದ ಕೂಡಿದ ರಕ್ತದ ಸರಬರಾಜು ಆಗದಿದ್ದಾಗ ಅಥವಾ ಮೆದುಳಿನ ರಕ್ತನಾಳಗಳು ಒಡೆದಾಗ ಅದನ್ನು ಸ್ಟ್ರೋಕ್ ಎನ್ನುವರು.

5. ಹೃದಯದ ನಾಳಗಳ ರೋಗ ಎಂದರೇನು ?
ಉತ್ತರ :- ಹೃದಯದ ರಕ್ತನಾಳಗಳ ಮೆಲಿನ ಪ್ರಭಾವದಿಂದ ಹೃದಯಕ್ಕೆ ರಕ್ತ ಮತ್ತು ಅದರಿಂದ ಸಿಗುವ ಪೌಷ್ಠಿಕಾಂಶಗಳುಕೊರತೆಯನ್ನುಂಟು ಮಾಡುವ ಸ್ಥಿತಿಗೆ ಹೃದಯದ ನಾಳಗಳ ರೋಗ ಎನ್ನುವರು.

6. ಸಿಸ್ಟೋಲ್ ಮತ್ತು ಡಯಾಸ್ಟೋಲ್ ಎಂದರೇನು ?
ಉತ್ತರ :- ಹೃದಯವು ಸಂಕುಚನೆ ಯಾದಾಗ ರಕ್ತವು ದೇಹದಲ್ಲಿ ಎಷ್ಟು ಜೋರಾಗಿ ಚಲಿಸುತ್ತದೆ ಎಂಬುದರ ಮೌಲ್ಯವೇ ಸಿಸ್ಟೋಲಿಕ್.ಮತ್ತು ಹೃದಯ ಬಡಿತದ ಮಧ್ಯೆ, ಹೃದಯವು ವಿಶ್ರಾಮದಲ್ಲಿದ್ದು ಅದರಲ್ಲಿ ರಕ್ತವು ತುಂಬುವಾಗ ರಕ್ತ ಎಷ್ಟು ಜೋರಾಗಿ ಚಲಿಸುತ್ತದೆ ಎಂಬುದರ ಮೌಲ್ಯವೇ ಡಯಾಸ್ಟೋಲಿಕ್.

7. ವಿವಿಧ ಹೃದ್ರೋಗಗಳು ಯಾವುವು ?
ಉತ್ತರ :-  1) ತೀವ್ರ ರಕ್ತದ ಒತ್ತಡ.                                         2) ಅತಿರೋಸ್ಕ್ಲೇರೋಸಿಸ್                               3) ಹೃದಯದ ರಕ್ತನಾಳಗಳ ರೋಗ                                     4) ಸ್ಟ್ರೋಕ್

ಪ್ರ.ಸಂ 4. ಈ ಕೆಳಗಿನ ಪ್ರಶ್ನೆಗಳನ್ನು ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಜೀವನ ಶೈಲಿಯ ರೋಗಗಳಿಗೆ ಕಾರಣಗಳು ಯಾವುವು ?
ಉತ್ತರ :- ಕೆಟ್ಟ ಆಹಾರ, ದೈಹಿಕ ಚಟುವಟಿಕೆಯ ಕೊರತೆ, ದೂಮಪಾನ, ಅಧಿಕ ಮಧ್ಯಪಾನ ಮತ್ತು ಕಡಿಮೆ ಪ್ರಮಾಣದ ನಿದ್ರೆ. ಕಾರ್ಯಕ್ಷೇತ್ರದಲ್ಲಿನ ಒತ್ತಡಗಳು ಇತ್ಯಾದಿ ಜೀವನ ಶೈಲಿಯ ರೋಗಗಳಿಗೆ ಕಾರಣಗಳಾಗಿವೆ.

2. ಜೀವನ ಶೈಲಿಯ ರೋಗಗಳನ್ನು ತಡೆಗಟ್ಟುವ ಕ್ರಮಗಳು ಯಾವುವು ?
ಉತ್ತರ ;- ಜೀವನ ಶೈಲಿಯ ರೋಗಗಳನ್ನು ನಮ್ಮ ಜೀವನ ಶೈಲಿಯನ್ನು ಬದಲಾಯಿಸುವುದರಿಂದ ತಡೆಗಟ್ಟಬಹುದು. ನಮ್ಮ ಕೆಟ್ಟ ಜೀವನ ಶೈಲಿಯ ಹಾನಿಕಾರಕ ಪರಿಣಾಮಗಳನ್ನು ಕೆಳಗಿನ ಕ್ರಮಗಳಿಂದ ಪ್ರತಿರೋಧಿಸಬಹುದು.
1) ದಿನನಿತ್ಯ ವ್ಯಾಯಾಮಗಳನ್ನಮು ಮಾಡುವುದು.
2) ಸಮತೋಲನ ಆಹರ ಸೇವನೆ.
3) ಅನಗತ್ಯವಾದ ಆಃಆರ ಸೇವನೆಯನ್ನು ತಪ್ಪಿಸುವುದು.
4) ಕೊಬ್ಬು ಮತ್ತು ಸತ್ವವಿಲ್ಲದ ಆಹಾರದ ಸೇವನೆಯನ್ನು ತಪ್ಪಿಸುವುದು.
5) ಆಹಾರ ಸೇವನೆಯ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿ ಸರಿಯಾದ ಸಮಯ ಪಾಲನೆ ಮಾಡುವುದು.
6) ದೇಹದ ಮತ್ತು ಮನಸ್ಸಿನ ಉಲ್ಲಾಸವನ್ನು ಹೆಚ್ಚಿಸಲು ಯೋಗಾಭ್ಯಾಸ ಮಾಡುವುದು.
7) ಧ್ಯಾನವನ್ನು ಅಭ್ಯಾಸ ಮಾಡುವುದು.
8) ತಮ್ಮ ಗೆಳೆಯರ ಜೊತೆ ಚಿಂತನೆಗಳನ್ನು ಹಂಚಿಕೊಳ್ಳುವುದು. ಇತ್ಯಾದಿ.

3. ತೀವ್ರ ರಕ್ತದ ಒತ್ತಡವನ್ನು ತಡೆಯುವ ಅಥವಾ ನಿಯಂತ್ರಿಸುವ ಕ್ರಮಗಳನ್ನು ಬರೆಯಿರಿ.
ಉತ್ತರ :- ಜೀವನ ಶೈಲಿಯಲ್ಲಿ ಬದಲಾವನೆ ಮಾಡಿಕೊಳ್ಳುವುದರಿಂದ ರಕ್ತದೊತ್ತಡವನ್ನು ತಡೆಯಬಹುದು.ಕೆಲವು ಅಂತಹ     ಬದಲಾವನೆಗಳು ಈ ಕೆಳಗಿನಂತಿವೆ.     

1) ದೇಹದ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸುವುದು, ಅಥವಾ ಹೆಚ್ಚಿನ ದೇಹದ ತೂಕವನ್ನು ಕಡಿಮೆ ಮಾಡುವುದು. 2) ಉಪ್ಪು ಮತ್ತು ಉಪ್ಪಿನ ಆಹಾರ ಹಾಗೂ ತಿಂಡಿ ತಿನಿಸುಗಳನ್ನು ಕಡಿಮೆ ಮಾಡುವುದು.
3) ದಿನನಿತ್ಯ ವ್ಯಾಯಾಮದಲ್ಲಿ ತೊಡಗುವುದು.     
4) ರಕ್ತದೊತ್ತಡವನ್ನು ತಡೆಯುವ ಆಹಾರ ಕ್ರಮವನ್ನು ಅಭ್ಯಾಸ ಮಾಡುವುದು.
5) ಇಂತಹ ಆಹಾರ ಕ್ರಮದಲ್ಲಿ ಹೆಚ್ಚು ಹಣ್ಣು ಮತ್ತು ತರಕಾರಿ ಹಾಗೂ ಕಡಿಮೆ ಕೊಬ್ಬು ಇರುವ ಹಾಲಿನ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ.

4. ಹೃದ್ರೋಗಗಳನ್ನು ಹೇಗೆ ತಡೆಯುವಿರಿ ?
ಉತ್ತರ :-  ಈ ಕೆಳಗಿನ ಅಂಶಗಳನ್ನು ಪಲಿಸುವುದರ ಮೂಲಕ ಹೃದ್ರೋಗಗಳನ್ನು ತಡೆಗಟ್ಟಬಹುದು :-  
1)ಆಹಾರದಲ್ಲಿ ದೇಹದ ತೂಕವನ್ನು ಪಾಲಿಸುವುದು.                             
2) ಆಹಾರದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡುವುದು.                     
3)ಆಹಾರದಲ್ಲಿ ಉಪ್ಪಿನ ಅಂಶ ಕಡಿಮೆ ಮಾಡುವುದು.     
4) ನಾರಿನ ಅಂಶ, ಧವಸ ಧಾನ್ಯ, ಹಣ್ಣು ಮತ್ತು ತರಕಾರಿಯನ್ನೊಳಗೊಂಡ ಆಹಾರ ಕ್ರಮ ಪಾಲಿಸುವುದು.    
5) ವಾರದಲ್ಲಿ ಐದು ಸಲ, ದಿನಕ್ಕೆ ಕನಿಷ್ಟ 30 ನಿಮಿಷದಷ್ಟು ಸಾಧಾರಣವಾದ ದೈಹಿಕ ಚಟುವಟಿಕೆಯಲ್ಲಿ     ತೊಡಗುವುದು.  

5. ಮಧುಮೇಹದ ಪರಿಣಾಮ ಮತ್ತು ಕಾರಣಗಳನ್ನು ಬರೆಯಿರಿ.
ಉತ್ತರ :- ಮಧುಮೇಹದ ಪರಿಣಾಮ :- ರಕ್ತದಲ್ಲಿ ಗ್ಲುಕೋಸ್ನ ಮಟ್ಟ ನಿರಂತರವಾಗಿ ಏರಿದರೆ, ಅದು ರಕ್ತನಾಳಗಳಿಗೆ ಮತ್ತು ನರಗಳಿಗೆ ಹಾನಿಯುಂಟು ಮಾಡುತ್ತದೆ. ಮಧುಮೇಹದ ಇಂತಹ ತೊಂದರೆಗಳೆಂದರೆ ಕಣ್ಣು, ನರ ಮತ್ತು ಮೂತ್ರಪಿಂಡಗಳನ್ನುಕೆಡಿಸುವುದು ಮತ್ತು ಹೃದ್ರೋಗ,ಮೆದುಳಿನಾಘಾತ, ಷಂಡತ್ವ ಮತ್ತು ಕಾಲುಗಳ ತೊಂದರೆಗಳಿಗೆ ಕಾರಣವಾಗಬಹುದು.      
1)ಬಾಯಾರಿಕೆ     2) ಪದೇ-ಪದೇ ಮೂತ್ರ ವಿಸರ್ಜನೆ          3) ಆಯಾಸ ಅಥವಾ ನಿರ್ಬಲತೆ     
4) ದೃಷ್ಟಿಹೀನತೆ     5) ದೇಹದ ತೂಕ ಕಡಿಮೆಗೊಳ್ಳುವುದು. ಇತ್ಯಾದಿ.  

6.ತೀವ್ರರಕ್ತದೊತ್ತಡದ ಕಾರಣಗಳು ಮತ್ತು ಲಕ್ಷಣಗಳವುವು ?
ಉತ್ತರ :- ತೀವ್ರರಕ್ತದೊತ್ತಡದ ಕಾರಣಗಳು :- ಅತೀ ಹೆಚ್ಚಿನ ರಕ್ತದ ಒತ್ತಡಕ್ಕೆ ನಿರ್ಧಿಷ್ಟವಾದ ಕಾರಣಗಳನ್ನ ಹೇಳಲು ಸಾಧ್ಯವಾಗದಿದ್ದರೂ, ಸಾಮಾನ್ಯವಾಗಿ ತಿಳಿದ ಕಾರಣಗಳೆಂದರೆ :- ಹೆಚ್ಚಿನ ದೇಹದ ತೂಕ, ಮಧ್ಯಪಾನ, ಅನುವಂಶಿಯತೆ, ಹಿಚ್ಚಿನ ಉಪ್ಪಿನ ಸೇವನೆ ಮತ್ತು ಮುಪ್ಪು, ಹಾಗೂ ದೈಹಿಕ ಚಟುವಟಿಕೆ ರಹಿತ ಜೀವನ ಶೈಲಿ.ವ್ಯಕ್ತಿಯು ಕ್ರಿಯಾಶೀಲನಿಲ್ಲದಿದ್ದರೆ, ಪೋಟಾಷಿಯಂ ಮತ್ತು ಕ್ಯಾಲ್ಸಿಯಂ ಸಾಕಷ್ಟು ಸೇವಿಸದಿದ್ದರೆ ಅಥವಾ ದೇಹವು ಇನ್ಸೂಲಿನ ಉಪಯೋಗಿಸಲು ಸಾಧ್ಯವಾಗದ ಸ್ಥಿತಿ ಬಂದರೆಯೂ ಕೂಡ ರಕ್ತದ ಒತ್ತಡ ಹೆಚ್ಚಾಗಬಹುದು.   
ಲಕ್ಷಣಗಳು :- ರಕ್ತದ ಒತ್ತಡ ಜಾಸ್ತಿಯಾದರೆ, ಅದು ರಕ್ತನಾಳಗಳುಮ, ಹೃದಯವನ್ನು ಮತ್ತು ಮೂತ್ರಪಿಂಡವನ್ನು ಕೆಡಿಸುತ್ತದೆ. ಇದರಿಂದ ಹೃದಯಾಘಾತ, ಮೆದುಳಿನ ಆಘಾತ ಮತ್ತು ಇತರ ತೊಂದರೆಗಳು ಉಂಟಾಗಬಹುದು. ಅತೀ ಹೆಚ್ಚಿನ ರಕ್ತದ ಒತ್ತಡವು ದೇಹಕ್ಕೆ ಹಾನಿಯನ್ನುಂಟು ಮಾಡುವಾಗ, ಯಾವ ಲಕ್ಷಣಗಳನ್ನುಂಟು ಮಾಡದೇ ಇರುವುದರಿಂದ ಅದನ್ನು ಮೌನ ಕೊಲೆಗಾರ ಎನ್ನುತ್ತಾರೆ.

7. ಮಧುಮೇಹದ 1 ನೇ ನಮೂನೆಯನ್ನು ವಿವರಿಸಿರಿ.   
ಉತ್ತರ:- ಮಧುಮೇಹದಲ್ಲಿ ಶೇಕಡಾ 10-15 ರಷ್ಟು ಭಾಗ 1ನೇ ನಮೂನೆಯದ್ದಾಗಿರುತ್ತದೆ. ಇದು ಯಾವ ವಯಸ್ಸಿನಲ್ಲೂ ಬರಬಹುದಾಗಿದ್ದರೂ, ಹೆಚ್ಚಾಗಿ 30 ರ ಕೆಳಗಿನ ಕೆಳಗಿನವರಲ್ಲಿ ಕಾಣಸಿಗುತ್ತದೆ. ಇಂತಹ ನಮೂನೆಯ ಮಧುಮೇಹದಲ್ಲಿ, ಮದೋಜ್ಜಿರಕ ಗ್ರಂಥಿಯಲ್ಲಿ ಇನ್ಸುಲಿನಿನ ಉತ್ಪಾದನೆ ನಿಂತು      
ಹೋಗಿರುವುದರಿಂದ, ಗ್ಲುಕೋಸ್ ಸ್ನಾಯು ಮತ್ತು ಜೀವಕೋಶದಲ್ಲಿ ಪ್ರವೇಶ ಮಾಡುವುದು ಅಸಾಧ್ಯವಾಗುತ್ತದೆ. ಇದರಿಂದ ರಕ್ತದಲ್ಲಿ ಗ್ಲುಕೋಸಿನ ಮಟ್ಟ ವೇಗದಿಂದ ಏರುತ್ತದೆ.
ಚಿಕಿತ್ಸೆ :- ದೇಹದಲ್ಲಿ ಇನ್ಸುಲಿನಿನ ಕೊರತೆಯಾದಾಗ, ದಿನದಲ್ಲಿ ಹಲವುಬಾರಿ ಸೂಜಿ ಮದ್ದಿನ ಮೂಲಕ ಬಾಹಿರವಾಗಿ ಇನ್ಸುಲಿನ್ ನೀಡುವುದು, ಇದಕ್ಕೆ ಸರಿಯಾಗಿ ಆರೋಗ್ಯಕರ ಆಹಾರ ಕ್ರಮ ಮತ್ತು ನಿರಂತರವಾಗಿ ರಕ್ತದ ಗ್ಲುಕೋಸ್ ಮಟ್ಟದ ಪರಶೀಲನೆ ಮಾಡುವುದು.

8. ಮಧುಮೇಹದ 2 ನೇ ನಮೂನೆಯನ್ನು ವಿವರಿಸಿರಿ.   
ಉತ್ತರ :- ಜನರಲ್ಲಿ ಹೆಚ್ಚಾಗಿ ಮಧುಮೇಹದ ಎರಡನೇ ನಮೂನೆ ಕಂಡು ಬರುತ್ತದೆ. ಈ ನಮೂನೆಯ ಶರ್ಕರಾ ಕಾಯಿಲೆ ಸಾಮಾನ್ಯವಾಗಿ 30ರ ಹರೆಯದ ಮೇಲಿನ ಜನರಲ್ಲಿ ಕಂಡು ಬಂದರೂ ಇದು ಅಧಿಕ ದೇಹ ತೂಕದ ಹದಿಹರೆಯರಲ್ಲಿ ಮತ್ತು ಅನುವಂಶಿಕತೆಯ ಕಾರಣ ಮಕ್ಕಳಲ್ಲಿ ಕಾನಸಿಗುತ್ತದೆ. ಇದು     ಜೀವನಶೈಲಿಯಿಂದಾಗುವ ಅಧಿಕ ತೂಕ ಮತ್ತು ದೈಹಿಕ ಚಟುವಟಿಕೆ ಜೀವನದಿಂದ ಉಂಟಾಗುತ್ತದೆ.
ಚಿಕಿತ್ಸೆ. :- ರಕ್ತದ ಗ್ಲುಕೋಸ್ ಮಟ್ಟ ಮತ್ತು ಒತ್ತಡವನ್ನು ನಿಯಂತ್ರಿಸುವಲ್ಲಿ ಆರೋಗ್ಯಕರವಾದ ಆಹಾರ ಕ್ರಮ ಪಾಲಿಸುವುದು ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಮೊದಲನೇಯ ಹೆಜ್ಜೆಯಾಗಿರುತ್ತದೆ.ಕ್ರಮೇಣವಾಗಿ, ಮಧುಮೆಹವನ್ನು ನಿಯಂತ್ರಿಸಲು, ಕೆಲವಂದು ಹಂತಗಳಲ್ಲಿ ಮಧುಮೇಹವನ್ನು ನಿಯಂತ್ರಿಸುವ ಔಷಧಿ ಮತ್ತುಇನ್ಸುಲಿನ್ ಚುಚ್ಚುಮದ್ದು ಉಪಯೋಗಿಸಬಹುದು.

You Might Like

Post a Comment

0 Comments