Recent Posts

ಬ್ಯಾಡ್ಮಿಂಟನ್ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                 

1. ಥಾಮಸ್ ಕಪ್ ಸ್ಪರ್ಧೆಗಳಲ್ಲಿಯ ಅಂತಿಮ ಹಂತದಲ್ಲಿ 12 ತಂಡಗಳು ಭಾಗವಹಿಸುತ್ತವೆ.         

2. ಈವರೆಗೆ ಥಾಮಸ್ ಕಪ್ನ 26 ಟೂರ್ನಿಗಳು ನಡೆದಿವೆ.

3. 2012ರ ಉಬೇರ ಕಪ್ ಚೀನಾದ ಉಹಾನ್ ನಲ್ಲಿ ನಡೆಯಿತು. 

4. ಅಖಿಲ ಇಂಗ್ಲೆಂಡ್ ಮುಕ್ತ ಚಾಂಪಿಯನ್ಶಿಪ್ನ್ನು 'ದಿ ಒಪನ್ ಇಂಗ್ಲೀಷ ಚಾಂಪಿಯನ್ಶಿಪ್' ಎಂದು ಕರೆಯಲಾಗುತ್ತಿತ್ತು.

5.  ಜಾಗತಿಕ ಚಾಂಪಿಯನ್ಶಿಪ್ನ್ನು IBF ಎಂದು ಕರೆಯಲಾಗುತ್ತಿತ್ತು.  

ಪ್ರ.ಸಂ 2. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಪ್ರಕಾಶ ಪಡುಕೋಣೆಯವರನ್ನು ಏನೆಂದು ಗುರುತಿಸಲಾಗುತ್ತದೆ.
ಉತ್ತರ :- 'ನಮ್ರವ್ಯಾಘ್ರ'

2. ಅನು ಶ್ರೀಧರ್ರವರು ಯಾವುದಕ್ಕೆ ಹೆಸರುವಾಸಿಯಾಗಿದ್ದಾರೆ.
ಉತ್ತರ :-  ಶಟಲ್ ಅಪ್ಪಳಿಸುವವರು ಎಂದು ಹೆಸರುವಾಸಿಯಾಗಿದ್ದಾರೆ.

3. ಅರವಿಂದ ಭಟ್ರವರು ಯಾವ ಶ್ರೇಯಾಂಕಿತರು ?
ಉತ್ತರ :- ಜಗತ್ತಿನ 46ನೇ ಶ್ರೇಯಾಂಕಿತರು.

4. ಪುಲ್ಲೇಲಾ ಗೋಪಿಚಂದ್ರ ಜನ್ಮಸ್ಥಳ ಮತ್ತು ದಿನಾಂಕವನ್ನು ತಿಳಿಸಿ.
ಉತ್ತರ :-

5. ಸೈನಾ ನೆಹವಾಲ್ರವರಿಗೆ ಯಾವ ಪ್ರಶಸ್ತಿ ದೊರಕಿದೆ ?
ಉತ್ತರ :- ಬ್ಯಾಡ್ಮಿಂಟನ್ ಫೆಡರೇಶನ್ ಸೂಪರ್ ಸಿರೀಜ್, ಅರ್ಜುನ್ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಗಳು ದೊರಕಿವೆ.   

6. ಜ್ವಾಲಾ ಗುತ್ತಾ 2008ರಲ್ಲಿ ಯಾವ ಪ್ರಶಸ್ತಿಗಳನ್ನು ಗೆದ್ದುಕೊಂಡರು ?
ಉತ್ತರ :-  ನೇಪಾಳ ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು ಡಚ್ ಮುಕ್ತ ಗ್ರಾನ್ ಪ್ರೀ ಪ್ರಶಸ್ತಿಗಳನ್ನು ಮಹಿಳೆಯರ ಜೋಡಿ ವಿಭಾಗದಲ್ಲಿ ಗೆದ್ದುಕೊಂಡರು.

7. ಅಪರ್ಣಾಪೋಪಟ್ ಯಾವ ಪ್ರಶಸ್ತಿಯನ್ನು ಗೆದ್ದು ಮಹಿಳೆಯರ ವಿಭಾಗದಲ್ಲಿ ದಾಖಲೆ ಮಾಡಿದ್ದಾರೆ ?
ಉತ್ತರ :-  ಸೀನಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಸತತ 9 ಸಲ ಗೆದ್ದುಕೊಂಡು ಮಹಿಳೆಯರ ವಿಭಾಗದಲ್ಲಿ ದಾಖಲೆ
ನಿರ್ಮಿಸಿದರು.

8. ಥಾಮಸ್ ಕಪ್ನ್ನು ಏನೆಂದು ಕರೆಯಲಾಗುತ್ತದೆ ?
ಉತ್ತರ :-  ಇದನ್ನು ಸಾಮಾನ್ಯವಾಗಿ ಜಾಗತಿಕ ಪುರುಷರ ತಂಡ ಚಾಂಪಿಯನ್ಶಿಪ್ ಎಂದೂ ಕರೆಯಲಾಗುತ್ತದೆ.

9. ಉಬೇರ ಕಪ್ನ್ನು ಏನೆಂದು ಕರೆಯಲಾಗುತ್ತದೆ ?  
ಉತ್ತರ :-  ಇದನ್ನು ಸಾಮಾನ್ಯವಾಗಿ ಜಾಗತಿಕ ಮಹಿಳೆಯರ ತಂಡ ಚಾಂಪಿಯನ್ಶಿಪ್ ಎಂದೂ ಕರೆಯಲಾಗುತ್ತದೆ.
 

You Might Like

Post a Comment

0 Comments