Recent Posts

ನಡಿಗೆ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ಶ್ನೋತ್ತರಗಳು

 

ಪ್ರ.ಸಂ1. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ನಡಿಗೆ ಶೈಲಿಯನ್ನು ವಿವರಿಸಿ.
ಉತ್ತರ :- ನಡಿಗೆ ಎಂದರೆ ನೆಲದ ಸಂಪರ್ಕವನ್ನು ಕಳೆದುಕೊಳ್ಳದಂತೆ ಹೆಜ್ಜೆಯನ್ನಿಟ್ಟು ಮುಂದೆ ಸಾಗುವುದು. ಸ್ಪರ್ಧಿಯು ಪ್ರತಿಯೊಂದು ಹಜ್ಜೆಯನ್ನು ಮುಂದಕ್ಕೆ ಇಡುವಾಗ ಹಿಂದಿನ ಕಾಲನ್ನು ತೆಗೆದು ಮುಂದಕ್ಕೆ ಇಡುವ ಸಂದರ್ಭದಲ್ಲಿ ಮುಂದಿನ ಕಾಲು ನೇರವಾಗಿರಬೇಕು. ಮತ್ತು ಮುಂದಿನ ಕಾಲನ್ನು ನೆಲಕ್ಕೆ ಊರಿದ ನಂತರ ಹಿಂದಿನ ಕಾಲನ್ನು ಮುಂದಿಡಲು ತೆಗೆಯಬೇಕು. ಈ ರೀತಿ ನೆಲದ ಸಂಪರ್ಕ ಕಳೆದುಕೊಳ್ಳದಂತೆ ಹೆಜ್ಜೆಯನ್ನಿಟ್ಟು ಮುಂದೆ ಸಾಗಬೇಕು.

2. ನಡಿಗೆ ಸ್ಪಧೆಯ ನಿಯಮಗಳನ್ನು ತಿಳಿಸಿ.
ಉತ್ತರ :-1. ಹಿಂದಿನ ಕಾಲನ್ನು ತೆಗೆದು ಮುಂದಿಡುವುದಕ್ಕಿಂತ ಮೊದಲು ಮುಂದಿನ ಕಾಲು ಒಂದು ಕ್ಷಣವಾದರೂ,
 ನೆಲದ ಸಂಪರ್ಕ ಹೊಂದಿರಬೇಕು. ಶರೀರ ನೆಟ್ಟಗಿರಬೇಕು.
2. ನಡಿಗೆಯ ಶೈಲಿ ಅಥವಾ ನಡೆಯುವ ಕ್ರಮ ಬದಲಾಗಬಾರದು.  
3. ಸ್ಪರ್ಧಿಯ ಕಾಲು ನೇರವಾಗಿರಬೇಕು.

3.ನಡಿಗೆ ಸ್ಪರ್ಧೆಯಲ್ಲಿನ ಯಾವುದಾದರೂ ಒಂದು ಅಕ್ರಮವನ್ನು ತಿಳಿಸಿ.
ಉತ್ತರ :-  ನಡಿಗೆ ಸ್ಪರ್ಧೆಯಲ್ಲಿನ ಅಕ್ರಮ :-                
1. ನಡೆಯುವ ನಡಿಗೆಯ ಶೈಲಿ ಅಥವಾ ನಡೆಯುವ ಕ್ರಮವನ್ನು ಉಲ್ಲಂಘಿಸಿದಾಗ ಅದು ಅಕ್ರಮ.
2. ನಡಿಗೆ ಸ್ಪಧಿಯು ಗಾಳಿಯಲ್ಲಿ ತೇಲುವುದು /ಓಡುವುದು/ನೆಲದ ಸಂಪರ್ಕ ಇಲ್ಲದಿರುವುದು ಅಥವಾ
ಕಾಲನ್ನು ನೇರಗೊಳಿಸದಿಲ್ಲದಿರುವುದನ್ನು ನಡಿಗೆ ತೀಪೂಗಾರನು ಸ್ಪರ್ಧಿಗಳ ನಡಿಗೆ ಶೈಲಿಯ ಉಲ್ಲಂಘನೆಯನ್ನು
ಕಣ್ಣಿನಿಂದ ಗಮನಿಸಿ ನೋಡಿ ಅವಲೋಕಿಸಿದ ನಂತರ ಆ ಸ್ಪರ್ಧಿಗೆ ಎಚ್ಚರಿಕೆಯನ್ನು ನೀಡಬೇಕು. ಒಬ್ಬ ಸ್ಪರ್ಧಿಯು
3 ಎಚ್ಚರಿಕೆಗಳನ್ನು ಬೇರೆ ಬೇರೆ ತೀರ್ಪುಗಾರರಿಂದ ಪಡೆದಿದ್ದರೆ ಅಂತಹ ಸ್ಪರ್ಧಿಯನ್ನು ಅನರ್ಹಗೊಳಿಸಲಾಗುವುದು.
3.ನಡಿಗೆಯ ಸ್ಪರ್ಧಿ ಮತ್ತೊಬ್ಬ ಸ್ಪರ್ಧಿಯ ಮುಂದೆ ಹೋಗಲು ಅಡ್ಡಿಪಡಿಸುವುದು ಅಥವಾ ಮೊನಕೈಯಿಂದ ತಿವಿಯುವುದು ಮಾಡಿ ಸ್ಪರ್ಧಿಯು ಮುಂದೆ ಹೋಗದಂತೆ ತಡೆಯಲು ಪ್ರಯತ್ನ ಮಾಡಿದರೆ ಅಂತಹ ಸ್ಪರ್ಧಿಯು ಆ ಸ್ಪರ್ಧೆಯಿಂದ ಅನರ್ಹನಾಗುತ್ತಾನೆ.

4. ನಡಿಗೆ ಸ್ಪರ್ಧೆಯನ್ನು ಪ್ರಾರಂಭಿಸುವ ವಿಧಾನವನ್ನು ತಿಳಿಸಿ.
ಉತ್ತರ :- ಸ್ಪರ್ಧೆಯನ್ನು ಪಿಸ್ತೂಲಿನಿಂದ ಗುಂಡು ಹಾರಿಸುವುದರೊಂದಿಗೆ ಬಂಚ್ ಪ್ರಾರಂಭ ಮಾಡಲಾಗುವುದು. ಸ್ಪರ್ಧೆಯ ಪ್ರಾರಂಭದ ಆಜ್ಞೆಯು ಇತರ ದೂರದ ಓಟದ ಸ್ಪರ್ಧೆಗಳಿಗಿರುವಂತೆ 'ಆನ್ ಯುವರ್ ಮಾರ್ಕ್' ನಂತರ ಗುಂಡು ಹಾರಿಸುವುದರೊಂದಿಗೆ ನಡಿಗೆ ಸ್ಪರ್ಧೆ ಪ್ರಾರಂಭವಾಗುತ್ತದೆ.

5. ಜರೆಡ್ ತ್ಯಾಲೆಂಟ್ ಅವರು ಜನಿಸಿದ ದಿನ ಮತ್ತು ಸ್ಥಳವನ್ನು ತಿಳಿಸಿ.
ಉತ್ತರ :-ಜರೆಡ್ ತ್ಯಾಲೆಂಟ್ ಅವರು 17-10-1984 ರಂದು ಆಸ್ಟ್ರೇಲಿಯಾದ ಬಲ್ಲಾರ್ತಟ್ ಎಂಬಲ್ಲಿ ಜನಿಸಿದರು.

6. ಜರೆಡ್ ತ್ಯಾಲೆಂಟ್ ಒಂದೇ ಓಲಿಂಪಿಕ್ನಲ್ಲಿ ಮೇಲಾಟಗಳ ಸ್ಪರ್ಧೆಯಲ್ಲಿ ಎರಡು ಪದಕವನ್ನು ಎಷ್ಟು ವರ್ಷಗಳ
ನಂತರ ಗಳಿಸಿದರು ?
ಉತ್ತರ :- 102 ವರ್ಷಗಳ ನಂತರ ಜರೆಡ್ ತ್ಯಾಲೆಂಟ್ ಒಂದೇ ಓಲಿಂಪಿಕ್ನಲ್ಲಿ ಮೇಲಾಟಗಳ ಸ್ಪರ್ಧೆಯಲ್ಲಿ ಎರಡು ಪದಕವನ್ನು ಗಳಿಸಿದರು.

ಪ್ರ.ಸಂ 2. ಹೊಂದಿಸಿ ಬರೆಯಿರಿ.

1. ಸಿರಿ ಚಂದ್ರಾಮ್          - ಅರ್ಜುನ್ ಪ್ರಶಸ್ತಿ
2. ಗುರುಮಿತ ಸಿಂಗ್         - ಲಂಡನ್ ಓಲಿಂಪಿಕ್ಗೆ ಆಯ್ಕೆ
3. ಜೆನ್ ಸೆವಿಲೆ                 - 20 ಕಿ.ಮೀ ನಡಿಗೆ
 

You Might Like

Post a Comment

0 Comments