Recent Posts

ಧೀರ ಸೇನಾನಿ - ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                          
 

   ಧೀರ ಸೇನಾನಿ
ಕೃತಿಕಾರರ ಪರಿಚಯಡಾ . ಬಸವರಾಜ ಹದಿಯವರು 01-061955ರಂದು ಬಾಗಲಕೋಟೆ ಜಿಲ್ಲೆಯ ಬೇವೂರಿನಲ್ಲಿ ಜನಿಸಿದರು . ತಂದೆ ಚನ್ನಪ್ಪ , ತಾಯಿ ಚನ್ನವ್ವ , ಲೇಖಕರು 1997 ರಲ್ಲಿ ಮುಳಗುಂದದ ಬಾಲಲೀಲಾ ಮಹಾಂತ ತ ಶಿವಯೋಗಿಗಳ ಕುರಿತ ಮಹಾಪುಬಂಧಕ್ಕೆ ಡಾಕ್ಟರೇಟ್ ಪ ಪದವಿ ಪಡೆದಿದ್ದಾರೆ . ಶ್ರೀ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ ಮಹಾವಿದ್ಯಾಲಯದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ . ಬೇವೂರಿನ ಅಪರೂಪದವರು . ಅಕ್ಕನ ಬಳಗ ಮುಂತಾದವು ಅವರ ಕೃತಿಗಳು . ಪ್ರಸ್ತುತ ಪಾಠವನ್ನು ಅವರ “ ವೀರ ಸೇನಾನಿ ಜನರಲ್ ಜಿ.ಜಿ. ಬೇವೂರ ‘ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ .
 
ಪದಗಳ ಅರ್ಥ
 ಅಲಂಕೃತ = ಅಲಂಕಾರ ಮಾಡಿದ , ಸಿಂಗರಿಸಿದ ಉತ್ತುಂಗ = ಶೇಪ್ ಕಾವಲಿರಿಸು = ರಕ್ಷಿಸು . ಕೃತಿ = ಕೆಲಸ ಗಾಡಿ = ಚಿಕ್ಕಡಿ , ಬಂಡಿ ಗಾಥೆ = ಕತೆ , ಘಟನೆ ಗ್ರಾಮದ ಓಣಿ = ಹಳ್ಳಿಯ ಬೀದಿ ಜನ್ಮತಾಳು = ಹುಟ್ಟು ಜನಿಸು ದುರ್ಗಮ = ಹೋಗಲು ಅಸಾಧ್ಯ ಫೀಲ್ಡ್ = ಭೂಭಾಗ ಫೀಲ್ಡ್ ಮಾರ್ಷಲ್ = ಭೂಸೇನೆಯಲ್ಲಿ ವಿಶೇಷ options.com ans.com ಪರಿಣತಿಯನ್ನು ಪಡೆದವರಿಗೆ ಕೊಡುವ ಅತ್ಯುನ್ನತ ಪದವಿ . = ಮಹಾದಂಡನಾಯಕರು = ಸೇನಾ ವರಿಷ್ಮ , ಸೈನ್ಯದ ಅತಿ ಹಿರಿಯ ಅಧಿಕಾರಿ ಮಾರ್ಪಲ್ = ಪರಿಣತ ನೇತೃತ್ವ = ಮುಂದಾಳತ್ವ , ಹಿರಿತನ ಲೇಸು = ಒಪ್ಪಿತ , ಒಳ್ಳೆಯದು ಸಜನಿಕೆ = ಒಳ್ಳೆಯತನ
5ನೇ ಧೀರ ಸೇನಾನಿ ತರಗತಿ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ
 
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .
 
1.    ಬೇವೂರರು ಯಾವಾಗ ಜನಿಸಿದರು ?
ಬೇವೂರರು ದಿನಾಂಕ 11-08-1916ರಂದು ಬಾಗಲಕೋಟೆ ಜಿಲ್ಲೆಯ ಬೇವೂರ್ ಗ್ರಾಮದಲ್ಲಿ ಜನಿಸಿದರು .
 
2.    ಬೇವೂರರ ತಂದೆ ತಾಯಿಯರ ಹೆಸರೇನು ?
ಬೇವೂರರ ತಂದೆಯ ಹೆಸರು ಗುರುನಾಥ್ರಾವ್ ಹಾಗೂ ತಾಯಿ ರುಕ್ಕಿಣಿ ಬಾಯಿ .
 
3.    ಗೋಪಾಲರಾಯರ ಸ್ವಂತ ಊರ ಯಾವುದು?
ಗೋಪಾಲರಾಯರ ಸ್ವಂತ ಊರು ಬೇವೂರು
 
4.    ಬೇವೂರರನ್ನು ಬಿಗಿದಪ್ಪಿ ಪ್ರಶಂಸಿಸಿದವರು ಯಾರು ?
ಬೇವೂರರನ್ನು ಬಿಗಿದಪ್ಪಿ ಪ್ರಶಂ ಸಿಸಿದವರು ಮಹಾ ದಂಡನಾಯಕರಾಗಿದ್ದ ಮಾರ್ಪಲ್ ಮಾಣಿಕ್ ಪಾರವರು .
 
5.    ಭಾರತ ಸರಕಾರವು ಬೇವೂರರನ್ನು ಎರಡು ವರ್ಷದ – ಅವಧಿಗೆ ಯಾವ ಕಾರ್ಯಕ್ಕೆ ನೇಮಿಸಿತು ?
ಭಾರತ ಸರ್ಕಾರವು ಬೇವೂರರನ್ನು ಎರಡು ವರ್ಷದ ಅವಧಿಗೆ ಡೆನ್ಮಾರ್ಕಿನ ರಾಯಭಾರಿಯನ್ನಾಗಿ ನೇಮಿಸಿತು .
 
ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರವನ್ನು ಬರೆಯಿರಿ .
 
1.    ಗೋಪಾಲರಾಯರು ಎಲ್ಲಿ ಸೈನಿಕ ಶಿಕ್ಷಣ ಪಡೆದರು ?
ಗೋಪಾಲರಾಯರು ರಾಯಲ್ ಇಂಡಿಯನ್ ಮಿಲಿಟರಿ
ಕಾಲೇಜಿನಲ್ಲಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕ ಶಿಕ್ಷಣವನ್ನು ಪಡೆದರು .
 
2.    ಬೇವರೂರರ ನೇತೃತ್ವದ ಸೈನಿಕ ತುಕಡಿಯ ಸಾಹಸ ವನ್ನು ವಿವರಿಸಿರಿ ?
ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಬಾಂಗ್ಲಾ ದೇಶಕ್ಕೆ ಭಾರತದ ಸೇನೆ ಸಹಕರಿಸಿತು . ಆಗ ಬೇವೂರರು ಮುಖ್ಯಸ್ತರಾಗಿ ರಾಜಸ್ಥಾನ ಮತ್ತು ಕಚ್ಚಿದ ದು ಪಾಕಿಸ್ತಾನದ ಕಡೆಗೆ ನುಗ್ಗಿದರು . ಸೇನಾ ತುಕಡಿಯ ದು ಪ್ರದೇಶಗಳಲ್ಲಿ ಸಾವಿರಾರು ಚದರ ಪಾಕ್ ನೆಲವನ್ನು ಆಕ್ರಮಿಸಿಕೊಂಡರು . ಬೇವೂರರ ನೇತೃತ್ವದ ಸೈನಿಕ ತುಕಡಿಯುವು ಇದಕ್ಕಾಗಿ ಫೀಲ್ಡ್ ಮಾರ್ಪಲ್ ಮಾಣಿಕ್ ಅಭಿಮಾನದಿಂದ 9 ಊರವರು ಇವರನ್ನು ಪಶಂಸಿಸಿದರು .
 
3.    ಬೇವೂರರ ಸಜ್ಜನಿಕೆಯನ್ನು ಉದಾಹರಣೆಯೊಂದಿಗೆ ತಿಳಿಸಿರಿ .
 ಬೇವೂರರು ಸಜ್ಜನರು . ಒಮ್ಮೆ ಅವರ ಊರಿನ ಆದರ್ಶ ವಿದ್ಯಾವರ್ಧಕ ಸಂಘಕ್ಕೆ ಹೋದಾಗ ಅವರಿಗಾಗಿ ಬಂದೂಕು ಧಾರಿಗಳಾದ ಪೋಲಿಸರನ್ನು ಕಾವಲಿರಿಸಿದ್ದರು . ಅದನ್ನು ನಿರಾಕರಿಸಿ , ತಮಗಾಗಿ ಬಂದ ಜೀಪಿನಲ್ಲಿ ಕುಳಿತುಕೊಳ್ಳದೆ ರೈತನ ಗಾಡಿಯಲ್ಲಿ ಹೋದರು . ಈ ಘಟನೆ ಅವರ ಸಜ್ಜನಿಕೆಯನ್ನು ತೋರಿಸುತ್ತದೆ .
 
4.    ನಿವೃತ್ತಿ ನಂತರವೂ ಬೇವೂರರ ಸೇವೆ ಭಾರತ ಸರಕಾರಕ್ಕೆ ಅವಶ್ಯಕವೆನಿಸಿದ ಸಂದರ್ಭ ಯಾವುದು ?
ನಿವೃತ್ತಿಯ ನಂತರವೂ ಬೇವೂರರ ಸೇವೆಯು ಭಾರತ ಸರ್ಕಾರಕ್ಕೆ ಅವಶ್ಯವಾಯಿತು . ಅವರ ಆಡಳಿತ ವೈಖರಿಯನ್ನು ಗುರುತಿಸಿ ಭಾರತ ಸರ್ಕಾರವು ಅವರನ್ನು ಡೆನ್ಮಾರ್ಕಿನ ರಾಯಭಾರಿಯನ್ನಾಗಿ ಎರಡು ವರ್ಷ ಅವಧಿಗೆ ನೇಮಿಸಿತು .
 
ಇ ) ಬಿಟ್ಟ ಸ್ಥಳಗಳನ್ನು ತುಂಬಿರಿ .
1.    ಗೋಪಾಲರಾಯರ ತಂದೆ ಸರ್ . ಗುನಾಥ್ ರಾವ್ ತಾಯಿ ರುಕಿಣಿಬಾಯಿ
2.    ಗೋಪಾಲರಾಯರು ತಮ್ಮ ದಲ್ಲಿಯೇ ಗೌರವ ಖಡ ಮತ್ತು ಚಿನ್ನದ ಪದಕ ಜೀವನ ಪಡೆದಿದ್ದರು .
3.    “ ಯುವಜನರು ನಾಳೆಯ ದೇಶ ರಕ್ಷಕ ರಾಗಬೇಕು ” ಎಂಬುದು ಅವರ ಬಯಕೆಯಾಗಿತ್ತು .
4.    ಡಾಜ ಕಟ್ಟಿಸಿದ ಯುದ್ಧ ಸ್ಮಾರಕ ಭವನಕ್ಕೆ ಜಿ.ಜಿ. ಬೇವೂರರ ಹೆಸರಿಟ್ಟಿದ್ದಾರೆ .
 5 .ನಾನೊಬ್ಬ  ಸೈನಿಕ ನನಗೇಕೆ ರಕ್ಷಣೆ ? ಇದು ನನ್ನನ ಊರು . ಇವರೆಲ್ಲ ನನ್ನ ಜನ ” ಎಂದರು .
 
ವ್ಯಾಕರಣ ಮಾಹಿತಿ
 
 ಅ ) ಸಮಾನಾರ್ಥಕ ಪದಗಳು
ಒಂದು ವ್ಯಕ್ತಿ , ಪ್ರಾಣಿ , ವಸ್ತು , ಇತ್ಯಾದಿಗಳಿಗೆ ಅದೇ ಅರ್ಥವನ್ನು ಸೂಚಿಸುವ ಹಲವಾರು ಇತರ ಪದಗಳು ಇರುತ್ತವೆ . ಹೀಗೆ ಒಂದು ಶಬ್ದಕ್ಕೆ ಸಮಾನವಾದ ಅರ್ಥವನ್ನು ಕೊಡುವ ಮತ್ತೊಂದು ಶಬ್ದಕ್ಕೆ ಸಮಾನಾರ್ಥಕಪದ ಎನ್ನವರು .
ಉದಾ : ಕಾಯಕ = ಕೆಲಸ , ಉದ್ಯೋಗ , ಕಸಬು , ಊಳಿಗ , ದುಡಿಮೆ ತಂಡ = ಪಕ್ಷ , ಒಣ , ಗುಂಪು , ಪಡೆ ,ದಳ , ಸಮೂಹ ಪದ = ಕಮಲ , ತಾವರೆ , ಅರವಿಂದ , ವನಜ , ಸರೋಜ . ಭಾಷೆ = ಮಾತು , ನುಡಿ , ವಚನ , ಆಣೆ , ಪ್ರತಿಜ್ಞೆ ನಂಬಿಗೆಯ ನುಡಿ ,
 
ಆ ) ನಾನಾರ್ಥಪದಗಳು
 ಒಂದು ಶಬ್ದವು ಇತರ ಹಲವಾರು ಅರ್ಥಗಳನ್ನು ಸೂಚಿಸುವಂತಿದ್ದರೆ ಅದನ್ನು ನಾನಾರ್ಥಕ ಪದ ಎನ್ನುವರು .
ಉದಾ : ದಂಡ = ಶಿಕ್ಷೆ , ಕೋಲು , ಸೈನ್ಯ ಉದ ದಳ = ಸೈನ್ಯ , ಎಲೆ , ಗುಂಪು ಅಂಗ = ಭಾಗ , ದೇಹ = ಮಡಿ = ಸಾಯಿ , ಶುದ್ಧವಾದದ್ದು
 
ಭಾಷಾಭ್ಯಾಸ
 
ಅ ) ಸಮಾನಾರ್ಥಕ ಪದಗಳು
 
1.    ಒಂದು ಸಮಾನಾರ್ಥಕ ಪದ ಎಂದರೇನು ?
ಒಂದು ಶಬ್ದಕ್ಕೆ ಸಮಾನವಾದ ಅರ್ಥವನ್ನು ಕೊಡುವ ಮತ್ತೊಂದು ಶಬ್ದಕ್ಕೆ ಸಮಾನಾರ್ಥಕ ಪದ ಎನ್ನುವರು .
 
2.    ನಾನಾರ್ಥಕ ಪದ ಎಂದರೇನು ?
ಒಂದು ಶಬ್ದವು ಇತರ ಹಲವಾರು ಅರ್ಥಗಳನ್ನು ಸೂಚಿಸುವಂತಿದ್ದರೆ ಅದನ್ನು ನಾನಾರ್ಥಕ ಪದ ಎನ್ನುವರು .
 
3.    ಈ ಪದಗಳಿಗೆ ನಾನಾರ್ಥಗಳನ್ನು
ಮಾದರಿ : ಅಡಿ = ತಳ , ಪಾದ , ಅಳತೆ ಅರಿ , ಕಾಡು , ಮಡಿ , ನುರಿ ರೆಯಿರಿ . ಅರಿ = ಶತ್ತು , ತಿಳಿ ,
ಕಾಡು = ವನ , ಕಾಟ ( ತೊಂದರೆ ) ಕೊಡು ಮಡಿ = ಶುಭ್ರ , ಸ್ವಚ್ಛ , ಸಮು ನುಡಿ = ಹೇಳು , ಮಾತು = ಇ )
 
ಶುಭನುಡಿ
1.    ದೇಶಕ್ಕಾಗಿ ದುಡಿಯೋಣ , ದೇಶಕ್ಕಾಗಿ ಬಾಳೋಣ .
2.    ದೇಶ , ಭಾಷೆ , ಸಂಸ್ಕೃತಿಗಳ ಬಗ್ಗೆ ಸದಾ ಅಭಿಮಾನವಿರಲಿ .
3.    ನಮ್ಮ ದೇಶ ಭಾರತ , ಹೇಳಿರೆಲ್ಲ ಹಿಗ್ಗುತ
 
ಪ್ರವೇಶ 
ನಮ್ಮ ದೇಶ ತ್ಯಾಗ , ಬಲಿದಾನಗಳಿಗೆ ಹೆಸರುವಾಸಿ ಯಾಗಿದೆ . ಇಲ್ಲಿ ಪುರಾಣ ಕಾಲದಲ್ಲಿ ಮೊದಲ್ಗೊಂಡು ಕಾರ್ಗಿಲ್ ಹೋರಾಟದವರೆಗೂ ಅನೇಕಾನೇಕ ಯುದ್ಧಗಳು ನಿರಂತರವಾಗಿ ನಡೆದಿವೆ . ಜಾಗತಿಕ ಮಹಾಯುದ್ಧಗಳಲ್ಲೂ ಭಾರತೀಯರು ಸಾಹಸವ ಮೆರೆದಿದ್ದಾರೆ . ದೇಶದ ರಕ್ಷಣೆಯ ಮಾತು ಬಂದಾಗ ಜೀವದ ಹಂಗು ತೊರೆದು ಹೋರಾಡಿದ ಅದೆಷ್ಟೋ ಮಹನೀಯರು ನಮ್ಮ ಕಣ್ಣಮುಂದೆ ಹಾದು ಹೋಗುತ್ತಾರೆ . ಅಂತಹವರು ನಮ್ಮ ಪ್ರಾತಃಸ್ಮರಣೀಯರು .  ಮುಖ್ಯಾಂಶಗಳು ಭಾರತದಲ್ಲಿ ಅನೇಕ ಜನ ಮೇಧಾವಿಗಳು , ವೀರ ಯೋಧರು , ವಿಜ್ಞಾನಿಗಳು , ಸಾಧಕರು ಜನ್ಮ ತಾಳಿದ್ದಾರೆ . ಅಂತಹ ಸಾಧಕರ ಸಾಲಿನಲ್ಲಿ ಧೀರಸೇನಾನಿ ಮಹಾದಂಡನಾಯಕ ಜನರಲ್ ಜಿ.ಜಿ. ಬೇವೂರರು ಒಬ್ಬರು .ಕರ್ನಾಟಕ ಬಾಗಲಕೋಟೆ ಜಿಲ್ಲೆಯ ಬೇವೂರ ಗ್ರಾಮದವರಾದ ಸರ್ . ಗುರುನಾಥ್ರಾವ್ ಹಾಗೂ ರುಕ್ಕಿಣಿಬಾಯಿಯವರ ಪುತ್ರ ಗೋಪಾಲರಾವ್ ಇವರು ದಿನಾಂಕ 11-08-1916ರಂದು ಜನಿಸಿದರು . ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಮತ್ತುಇಂಡಿಯನ್ ಮಿಲಿಟರಿಅಕಾಡೆಮಿಯಲ್ಲಿ ಸೈನಿಕ ಶಿಕ್ಷಣ ಪಡೆದರು . ಶಿಸ್ತು , ಕಠಿಣ ಶ್ರಮಗಳಿಂದ ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ “ ಗೌರವ ಖಡ ” ಮತ್ತು ಚಿನ್ನದ ಪದಕಗಳನ್ನು ಪಡೆದುಕೊಂಡ ಕೀರ್ತಿ ಅವರದು . 1937 ರಲ್ಲಿ ಬೇವೂರರು ಭಾರತೀಯ ಸೇನಾಪಡೆ ಸೇರಿದರು . ಜನರಲ್ ಜಿ.ಜಿ. ಬೇವೂರರ ಕರ್ತವ್ಯನಿಷ್ಠೆ ದಕ್ಷ – ಆಡಳಿತ ಕಂಡು ಭಾರತ ಸರ್ಕಾರವು ಅವರಿಗೆ “ ಪದ್ಮಭೂಷಣ ” ಪ್ರಶಸ್ತಿ ಹಾಗೂ ಪರಮ ವಿಶಿಷ್ಟ ಸೇವಾ ಪದಕವನ್ನು ಕೊಟ್ಟು ಗೌರವಿಸಿತು . ಮುಂದೆ ಕಟ್ಟಿಸಿದ ಯುದ್ಧ ಸ್ಮಾರಕ ಜನರಲ್ , ಜಿ.ಜಿ. ಬೇವೂರರ ಹೆಸರಿಡಲಾಯಿತು . ಜನರಲ್ ಜಿ.ಜಿ. ಬೇವೂರರೊಳಗಿನ ನಿಜವಾದ ಯೋಧನನ್ನು ದೇಶ ಗುರ್ತಿಸಿದ್ದು ಬಾಂಗ್ಲಾ ಯುದ್ಧದಲ್ಲಿ . ಆ ಯುದ್ಧದಲ್ಲಿ ಪಾಕ್ ಸೈನಿಕರು ಮಾನವ ಹಕ್ಕುಗಳನ್ನು ಉಲಂಘಿಸಿದರು . ಬಾಂಗ್ಲಾ ದೇಶಕ್ಕೆ ಭಾರತದ ಸೇನೆ ಸಹಕರಿಸಿತು . ಬೇವೂರರು ರಾಜಸ್ಥಾನ ಮತ್ತು ಕಚ್ಚದ ದುರ್ಗಮ ಪ್ರದೇಶದಲ್ಲಿ ಸಾವಿರಾರು ಚದರ ಮೈಲಿ ನೆಲವನ್ನು ಆಕ್ರಮಿಸಿದರು . ಇವರು ಈ ಸಂದರ್ಭದಲ್ಲಿ ಮಹಾದಂಡ ನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಮಾಣಿಕ್ ಪಾರವರು ಬೇವೂರರನ್ನು ಅಭಿಮಾನದಿಂದ ಬಿಗಿದಪ್ಪಿ ಪ್ರಶಂಸಿಸಿದರು . ಬೇವೂರರ ಸಾಹಸ ದೇಶದಲ್ಲಿ ಮನೆಮಾತಾಯಿತು . ಅವರು ತೋರಿದ ಶೌರ್ಯ ಸಾಹಸಕ್ಕೆ ರಾಷ್ಟ್ರಮಟ್ಟದ ಗೌರವವೂ ದೊರೆ ` ತು . ಕಾಲೇಜು ವಿದ್ಯಾರ್ಥಿಗಳಿಗೆ ಎನ್.ಸಿ.ಸಿ.  ಕಲಿಕೆಯು ಒಂದು ಅಂಗವಾದಾ ರಾಗ ಬೇವೂರರು ಅದರ ಪ್ರಥಮ ನಿರ್ದೇಶಕರಾದರು . ಯುವಜನರು ನಾಳೆಯ ದೇಶ ರಕ್ಷಕರಾಗಬೇಕು ಎಂಬುದು ಅವರ ಬಯಕೆಯಾಗಿತ್ತು . 1973 ರ ಜನವರಿ 15 ರಂದು ಗೋಪಾಲರಾವ್ ಗುರುನಾಥ ರಾವ್ ಬೇವೂರರು ಭಾರತದ ಭೂ ಸೇನೆಯ ಒಂಬತ್ತನೆಯ ಮಹಾದಂಡ ನಾಯಕರಾದರು . ಜನರಲ್ ಜಿ.ಜಿ. ಬೇವೂರರ ಕರ್ತವ್ಯನಿಷ್ಠೆ , ದಕ್ಷ ಆಡಳಿತ ಕಂಡು ಭಾರತ ಸರ್ಕಾರವು ಅವರಿಗೆ “ ಪದ್ಮಭೂಷಣ ” ಪ್ರಶಸ್ತಿ ಹಾಗೂ ಪರಮ ವಿಶಿಷ್ಟ ಸೇವಾ ಪದಕವನ್ನು ಕೊಟ್ಟು ಗೌರವಿಸಿತು . ಮುಂದೆ ಡಾರ್ಜಿಲಿಂಗ್ನಲ್ಲಿ ಕಟ್ಟಿಸಿದ ಯುದ್ಧ ಸ್ಮಾರಕ ಭವನಕ್ಕೆ ಜನರಲ್ ಜಿ.ಜಿ. ಬೇವೂರರ ಹೆಸರಿಡ ಲಾಯಿತು .  ಒಮ್ಮೆ ಬೇವೂರಿನಲ್ಲಿ ಅವರಿಗೆ ಅದ್ದೂರಿಯಿಂದ ಸ್ವಾಗತ ದೊರೆತಾಗ “ ನಾನೊಬ್ಬ ಸೈನಿಕ , ನನಗೇಕೆ ರಕ್ಷಣೆ ? ಇದು ನನ್ನ ಊರು , ನನ್ನ ಜನ ” ಎಂದು ಹೇಳಿ ಜೀಪಿನಲ್ಲಿ ಕುಳಿತುಕೊಳ್ಳದೆ ರೈತನ ಗಾಡಿಯೊಂದರಲ್ಲಿ ಹೆಂಡತಿ ಯೊಂದಿಗೆ ಕುಳಿತು ಊರ ಜನರ ಯೋಗ ಕೇಮವನ್ನು ವಿಚಾರಿಸುತ್ತಾ ನಡೆದರು . ” ಮಾತಿಗಿಂತ ಕೃತಿ ಲೇಸು ” ಎಂಬ ತತ್ವ ಜನರಲ್ ಬೇವೂರ್ ಅವರದು . ನಿವೃತ್ತಿಯ ಅನಂತರ ಸೇವೆಯು ಭಾರತ ಸರಕಾರಕ್ಕೆ ವೈಖರಿಯನ್ನು ಗುರ್ತಿಸಿ ಭಾರತ ಸರ್ಕಾರವು ಬೇವೂರರನ್ನು ಡೆನ್ಮಾರ್ಕಿನ ರಾಯಭಾರಿಯನ್ನಾಗಿ ಎರಡು ವರ್ಷದ ಅವಧಿಗೆ ನೇಮಿಸಿತು . ಬೇವೂರಿನ ವರಪುತ್ರ ಭಾರತದ ಒಂಬತ್ತನೆಯ ಮಹಾದಂಡ ನಾಯಕರಾಗಿ ಸೇವೆ ಸಲ್ಲಿಸಿದ ಸಹೃದಯಿಯಾದ ಜಿ.ಜಿ. ಬೇವೂರರು 1989 ಅಕ್ಟೋಬರ್ 24 ರಂದು ಇಹಲೋಕ ತ್ಯಜಿಸಿದರು . ಆದರೂ ಅವರ ಸಾಹಸದ ಗಾಥೆಗಳೂ ಭಾರತದ ಮಹಾ ದಂಡನಾಯಕದ ಚರಿತ್ರೆಯಲ್ಲಿ ಅಮರವಾಗಿ ಉಳಿದಿವೆ .


You Might Like

Post a Comment

0 Comments