Recent Posts

ಅಡೆತಡೆ ಓಟಗಳು - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1.ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                    


1. ಪಿ.ಟಿ.ಉಷಾ ಅವರನ್ನು ಪಯೋಳಿ ಎಕ್ಸ್ಪ್ರೆಸ್ ಎಂಬ ಹೆಸರಿನಿಂದ ಸಹ ಕರೆಯುತ್ತಾರೆ.

2. ಜಾನ್ ಅಕಿಬುಅ 400 ಮೀ ಹರ್ಡಲ್ಸ್ ಓಟದಲ್ಲಿನ ಓಲಿಂಪಿಕ್ ದಾಖಲೆಗಳನ್ನು ಸ್ಥಾಪಿಸಿದ ಕ್ರೀಡಾಪಟು.

3. ಎಡ್ವಿನ್ ಮೊಸೆಸ್ ಹೆಚ್ಚು ದಾಖಲೆಗಳನ್ನು ಅಂತಾರಾಷ್ಟ್ರೀಯ  ಮಟ್ಟದಲ್ಲಿ ಮಾಡಿದ.

ಪ್ರ.ಸಂ 2. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಅಡೆತಡೆಯ ಅಗಲ ಎಷ್ಟು ?
ಉತ್ತರ :- 1.18-1.20 ಮೀ

2. ಹರ್ಡಲ್ಸ್ನ ತೂಕ ಎಷ್ಟು ?
ಉತ್ತರ :- 10 ಕಿ.ಗ್ರಾಂ

3. ಹದಿನಾಲ್ಕು ವರ್ಷದೊಳಗಿನ ಬಾಲಕ ಬಾಲಕಿಯರಿಗೆ ನಡೆಸಲಾಗುವ ಹರ್ಡಲ್ಸ್ ಸ್ಪರ್ಧೆಯ ದೂರವೇನು ?
ಉತ್ತರ :- 80 ಮೀ

4. ಮಹಿಳೆ ಮತ್ತು ಪುರುಷರಿಗೆ ನಡೆಸುವ ಹರ್ಡಲ್ಸ್ ಸ್ಪರ್ಧೆಯ ದೂರವನ್ನು ತಿಳಿಸಿ.
ಉತ್ತರ :- ಪುರುಷರಿಗೆ- 110 ಮೀ ಮತ್ತು ಮಹಿಳೆಯರಿಗೆ- 100 ಮೀ.

5. ಪಿ.ಟಿ.ಉಷಾ ರವರ ಕ್ರೀಡಾ ಸಾಧನೆಗಳನ್ನು ತಿಳಿಸಿ.
ಉತ್ತರ :- ಪಿಳವುಳ್ಳಕಂಡಿತೆಕ್ಕೆ ಪರಂಬಿಲ್ ಉಷಾ.

ಪ್ರ.ಸಂ 3. ಸಂಕ್ಷೀಪ್ತವಾಗಿ ವಿವರಿಸಿ.

1. ಹರ್ಡಲ್ಸ್ನ ರಚನೆಯನ್ನು ವಿವರಿಸಿ.
ಉತ್ತರ :-  ಈ ಅಡೆತಡೆಯನ್ನು ಲೋಹ ಅಥವಾ ಇತರ ಸೂಕ್ತ ವಸ್ತುವಿನಿಂದ ರಚಿಸಲಾಗುವುದು. ಮತ್ತು ಇದರ ತುದಿಯ ಅಡ್ಡಪಟ್ಟಿಯನ್ನು ಮರದಿಂದ ಅಥವಾ ಇತರ ಸೂಕ್ತ ವಸ್ತುವಿನಿಂದ ಮಾಡಲಾಗಿರುತ್ತದೆ. ಹಾಗೆಯೇ ಈ ಅಡೆತಡೆಯು ಎರಡು ಕಾಲು ಮತ್ತು ಎರಡು ಕಂಬಗಳಿಂದ ಆಧಾರವಾಗಿದ್ದು ಒಂದು ಆಯತಾಕಾರದ ಚೌಕಟ್ಟಾಗಿರುತ್ತದೆ. ಒಂದೆರಡು ಅಡ್ಡಪಟ್ಟಿಯನ್ನು ಅಳವಡಿಸಿ ಹೆಚ್ಚು ಭದ್ರತೆ ಒದಗಿಸಿರುತ್ತದೆ. ಈ ಅಡೆತಡೆಯ ಎತ್ತರವನ್ನು ಹೆಚ್ಚು ಅಥವಾ ಕಡಿಮೆ ಮಾಡುವಂತಿರುತ್ತದೆ.
ಅಡೆತಡೆಯ ಅಗಲ - 1.18-1.20 ಮೀ,  ಪಾದದ ಗರಿಷ್ಟ ಉದ್ದ - 70 ಸೇ.ಮಿ, ಒಟ್ಟು ತೂಕ - 10 ಕಿ ಗ್ರಾಂ. ಅಡ್ಡಪಟ್ಟಿಯ ಅಗಲ - 7 ಸೇ.ಮೀ ಇರುತ್ತದೆ. ಅಡ್ಡಪಟ್ಟಿಯ ದಪ್ಪ- 1 ರಿಂದ 2.5 ಸೇ.ಮೀ ಇರಬೇಕು. ಈ ಅಡ್ಡಪಟ್ಟಿಯ ತುದಿಗಳನ್ನು ಹರ್ಡಲ್ಸ್ನ ಕಂಬಗಳಿಗೆ ಭದ್ರವಾಗಿ ನೆಲೆಗೊಳಿಸಬೇಕು.  ಅಡ್ಡಪಟ್ಟಿಗೆ ಬಿಳಿ ಮತ್ತು ಕಪ್ಪು ಬಣ್ಣದ ಪಟ್ಟಿಯನ್ನು ಹಾಕಬೇಕು ಮತ್ತು ಬಿಳಿ ಬಣ್ಣವು ಕನಿಷ್ಟ 22.5 ಸೇ.ಮೀ ಅಗಲವಿರುವಂತೆ ಪಟ್ಟಿಯ ಎರಡೂ ಕೊನೆಯಲ್ಲಿರಬೇಕು.  ಪ್ರತಿಯೊಂದು ಹರ್ಡಲ್ಸ್ಸ್ನ್ನು ಓಣಿಯಲ್ಲಿ ಇಡುವಾಗ ಇದರ ಪಾದಗಳು ಸ್ಫಧರ್ೆಯ ಪ್ರವೇಶದ ಎರಡು ಬದಿಗಳಲ್ಲಿರಬೇಕು.

2. ಹರ್ಡಲ್ಸ್ ಸ್ಪರ್ಧೆಯ ನಿಯಮಗಳ ಉಲ್ಲಂಘನೆಗಳನ್ನು ತಿಳಿಸಿ.
ಉತ್ತರ :-1. ತಮಗೆ ಹಂಚಿಕೆ ಮಾಡಿದ ಓಣಿಯಲ್ಲಿ ಓಡದಿರುವುದು.
2. ಹರ್ಡಲ್ಸ್ ಮೇಲೆ ಹಾರಿಕೊಂಡು ಹೋಗದಿದ್ದರೆ.
3.ಅಡೆತಡೆಯನ್ನು ದಾಟಿಕೊಂಡು ಹೋಗುವ ಸಂದರ್ಭದಲ್ಲಿ ತನ್ನ ಕಾಲನ್ನು ಹರ್ಡಲ್ಸ್ನ ಅಡ್ಡಪಟ್ಟಿಯ ಸಮಮಟ್ಟದ ಕೆಳಗೆ ಮುಟ್ಟದರೆ ಮತ್ತು ಸೈಡ್ ಹರ್ಡಲ್ಸ್ ಮಾಡಿದರೆ,
4.ಹರ್ಡಲ್ಸ್ನ್ನು ಕೈಯಿಂದ ಅಥವಾ ಕಾಲಿನಿಂದ ಉದೇಶಪೂರ್ವಕವಾಗಿ ಬೀಳಿಸಿದರೆ ಅನರ್ಹಗೊಳಿಸಲಾಗುವುದು.

1. ಪಿ.ಟಿ.ಉಷಾ ರವರ ಕ್ರೀಡಾ ಸಾಧನೆಗಳನ್ನು ತಿಳಿಸಿ.
ಉತ್ತರ :-   ಪಿ.ಟಿ.ಉಷಾ ರವರ ಕ್ರೀಡಾ ಸಾಧನೆ :-
1. 1980 ರ ಮಾಸ್ಕೋ ಓಲಿಂಪಿಕ್ಸ್ನಲ್ಲಿ ಅವರು ತಮ್ಮ ಸಾಧನೆಯನ್ನು ತೋರಿಸಿರು.
2. 1982 ರ ನವದೇಹಲಿಯ ಏಷ್ಯಾಡ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕವನ್ನು 100 ಮೀ ಮತ್ತು 200 ಮೀ ನಲ್ಲಿ ಗಳಿಸಿದರು.
3. ಕರಾಚಿಯಲ್ಲಿ ನಡೆದ ಏಷಿಯನ್ ಟ್ರಯಾಕ್ ಮತ್ತು ಫೀಲ್ಡ್ ಚಾಂಪಿಯನ್ಶಿಪ್ನಲ್ಲಿ 400 ಮೀ ನಲ್ಲಿ ಹೊಸ ದಾಖಲೆಯೊಂದಿಗೆ ಬಂಗಾರದ ಪದಕವನ್ನು ಗಳಿಸಿದರು.
4. 1983 ರಿಂದ 1989 ರ ನಡುವೆ ಉಷಾ 13 ಬಂಗಾರದ ಪದಕವನ್ನು ಎ.ಟಿ.ಎಫ್ ಕ್ರೀಡಾಕೂಟದಲ್ಲಿ
ಗಳಿಸಿದರು.
5. 1984 ರ ಲಾಸ್ ಎಂಜೆಲ್ಸ್ ಓಲಿಂಪಿಕ್ನ 400 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಸೆಮಿ ಫೈನಲ್ನಲ್ಲಿ ಮೊದಲಿಗರಾಗಿ ಓಟವನ್ನು ಮುಕ್ತಾಯ ಮಾಡಿದರು. ಆದರೆ ಅಂತಿಮ 4 ನೇ ಸ್ಥಾನವನ್ನು ಪಡೆದರು. ಮತ್ತು ಒಂದು ಬೆಳ್ಳಿಯ ಪದಕವನ್ನು ಟ್ರ್ಯಾಕ್ ಮತ್ತು ಫೀಲ್ಡ್ ಸ್ಫರ್ಧೆಗಳಲ್ಲಿ ಗಳಿಸಿದರು. ಅವರು ಐದು ಬಂಗಾರದ ಪದಕಗಳನ್ನು ಏಷಿಯನ್ ಗೇಮ್ಸ್ನಲ್ಲಿ ಭಾಗವಹಿಸಿದ ಎಲ್ಲಾ ಸ್ಫರ್ಧೆಗಳಲ್ಲಿ ಹೊಸ ದಾಖಲೆ ನಿರ್ಮಿಸಿದರು.  
1. 1985 ರ ಜಕಾರ್ತದಲ್ಲಿ 6ನೇ ಏಷಿಯನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ಶಿಪ್ನಲ್ಲಿ 100ಮೀ, 200ಮೀ, 400ಮೀ ಮತ್ತು ಹರ್ಡಲ್ಸ್ನಲ್ಲಿ ಮತ್ತು 4ಥ400 ಮೀ ರಿಲೇ ಹಾಗೂ 4ಥ100 ಮೀ ರಿಲೇನಲ್ಲಿ ಕಂಚಿನ ಪದಕವನ್ನು ಪಡೆದರು. ಒಂದೇ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ 6 ಪದಕಗಳನ್ನು ಗಳಿಸಿ ಹೆಚ್ಚಿನ
ಬಂಗಾರದ ಪದಕಗಳನ್ನು ಗಳಿಸಿದ ಮಹಿಳೆ ಎಂಬುದು ದಾಖಲೆಯಾಗಿದೆ. ಉಷಾ 101 ಅಂತರರಾಷ್ಟ್ರೀಯ ಪದಕಗಳನ್ನು ಪಡೆದಿದ್ದಾರೆ.

ಪ್ರ.ಸಂ 4. ಎ ಪಟ್ಟಿಯಲ್ಲಿರುವ ಕ್ರೀಡಾ ಸಾಮಗ್ರಿಯೊಂದಿಗೆ ಬಿ ಪಟ್ಟಿಯಲ್ಲಿನ ಅಳತೆಯನ್ನು ಹೊಂದಿಸಿ ಬರೆಯಿರಿ.
                         ಎ                                                        ಬಿ
1. ಹರ್ಡಲ್ಸ್ನ ಪಾದದ ಗರಿಷ್ಟ ಉದ್ದ                   - 70 ಸೇ.ಮೀ
2. ಹರ್ಡಲ್ಸ್ನ ಅಡ್ಡಪಟ್ಟಿಯ ಅಗಲ                    -  7 ಸೇ.ಮೀ
3. ಹರ್ಡಲ್ಸ್ನ ಅಡ್ಡಪಟ್ಟಿಯ ದಪ್ಪ                     -  1 ರಿಂದ 2.5 ಸೇ.ಮೀ
4. ಮಹಿಳೆಯರ 400 ಮೀ ಹರ್ಡಲ್ಸ್ನ ಎತ್ತರ       - 0.762 ಮೀ  
 

You Might Like

Post a Comment

0 Comments