Recent Posts

ಹಾಕಿ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಭಾರತ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು 8 ಬಾರಿ ಜಯಿಸಿದೆ.

2. ರಾಷ್ಟ್ರೀಯ ಕ್ರೀಡಾದಿನ ವನ್ನು ಧ್ಯಾನ್ಚಂದ್ ರವರ ಹೆಸರಿನಲ್ಲಿ ಆಚರಿಸಲಾಗುತ್ತದೆ.

3. ಮಮತ ಖರಾಬ್ ಇವರು ಹರಿಯಾಣ ರಾಜ್ಯದವರು.

4. ಹಾಕಿ ವಿಶ್ವಕಪ್ನ್ನು ನಾಲ್ಕು ವರ್ಷಕ್ಕೊಮ್ಮೆ ಮತ್ತು ಎರಡು ಓಲಿಂಪಿಕ್ ಸ್ಪಧರ್ೆಗಳ ಮಧ್ಯದಲ್ಲಿ ನಡೆಸಲಾಗುತ್ತದೆ.

ಪ್ರ.ಸಂ 2. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಹಾಕಿ ಮಾಂತ್ರಿಕ ಎಂದು ಯಾರನ್ನು ಕರೆಯುತ್ತಾರೆ ?
ಉತ್ರರ :- ಧ್ಯಾನ್ಚಂದ್ ರವರನ್ನು ಹಾಕಿ ಮಾಂತ್ರಿಕ ಎಂದು ಕರೆಯುತ್ತಾರೆ.

2. ಏಕಮಾತ್ರ ವಿಶ್ವಕಪ್ ಪ್ರಶಸ್ತಿಯನ್ನು ಭಾರತ ಯಾವಾಗ ಜಯಿಸಿತು ?
ಉತ್ತರ :-

3. ಓಲಿಂಪಿಕ್ಸ್ ಹಾಕಿಯಲ್ಲಿ ಯಾವ ಆಟಗಾರನಿಗೆ ಅತ್ಯಧಿಕ ಪದಕಗಳು ಲಭಿಸಿವೆ ?
ಉತ್ತರ :- ಲೆಸ್ಲಿ ಕ್ಲೋಡಿಯಸ್

4. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಗಳಿಸಿದ ಏಕಮಾತ್ರ ಹಾಕಿ ಆಟಗಾರ ಯಾರು ?
ಉತ್ತರ :- ಧನರಾಜ್ ಪಿಳ್ಳೇ

5. ಯಾವ ಆಟಗಾರನನ್ನು 'ವಿದ್ಯುತ್ ಹಿಮ್ಮಡಿಯ ಮನುಷ್ಯ' ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು ಮತ್ತು ಏಕೆ ?
ಉತ್ತರ :- ಶಹಬಾಜ್ ಅಹಮ್ಮದ್ರವರನ್ನು 'ವಿದ್ಯುತ್ ಹಿಮ್ಮಡಿಯ ಮನುಷ್ಯ' ಎಂದು ಕರೆಯುತ್ತಾರೆ. ಇವರು ಆಟವನ್ನು  ತುಂಬಾ ವೇಗವಾಗಿ ಆಡುತ್ತಿದ್ದರು ಅದ್ದರಿಂದ ಈ ಹೆಸರು ಅವರಿಗೆ ಬಂದಿತು.

6. ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಆಟಗಾರರನ್ನು ಹೆಸರಿಸಿ.
ಉತ್ತರ :- ಎಂ.ಪಿ.ಗಣೇಶ್

ಪ್ರ.ಸಂ 2. ಈ ಕೆಳಗಿನ ಹಾಕಿ ಕ್ರೀಡಾಪಟುಗಳ ಕುರಿತು ಟಿಪ್ಪಣಿ ಬರೆಯಿರಿ.

1. ಧ್ಯಾನ್ಚಂದ್ :-  
ಉತ್ತರ :-ಧ್ಯಾನ್ಚಂದ್ ರವರು 29 ಆಗಸ್ಟ್ ನಲ್ಲಿ ಜನಿಸಿದ್ದರು. ಇವರು ವಿಶ್ವದ ಅತ್ಯುನ್ನತ ಹಾಕಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
3 ಬಾರಿ ಓಲಿಂಪಿಕ್ ಹಾಕಿಯಲ್ಲಿ ಭಾರತದ ಪರವಾಗಿ ಭಾಗವಹಿಸಿದ್ದರು. 1928ರಲ್ಲಿ ಆಮಸ್ಟರ್ಡಾಮ್ ನಲ್ಲಿ, 1932 ರಲ್ಲಿ ಲಾಸ್ ಎಂಜಲೀಸ್ನಲ್ಲಿ ಮತ್ತು 1936 ರಲ್ಲಿ ಜರ್ಮನಿಯ ಬರ್ಲಿನ್ ನಲ್ಲಿ ನಡೆದ ಓಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಒಟ್ಟು ಭಾರತದ 338 ಗೋಲುಗಳಲ್ಲಿ133  ಗೋಲುಗಳನ್ನು ತಮ್ಮ ಕೊಡುಗೆಯಾಗಿ ನೀಡಿದರು. 1935 ರಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ 43 ಪಂದ್ಯಗಳಿಂದ ಒಟ್ಟು 584 ಗೋಲುಗಳು ಭಾರತದ ಪರ ಬಂದರೆ, ಅದರಲ್ಲಿ 201 ಗೋಲುಗಳು ಧ್ಯಾನ್ಚಂದ್ ಅವರಿಂದ ಬಂದವು.  ಇವರ ಜನ್ಮ ದಿನವಾದ ಆಗಸ್ಟ್ 29 ನ್ನು ದೇಶದಲ್ಲಿ 'ರಾಷ್ಟ್ರೀಯ ಕ್ರೀಡಾ ದಿನ' ವೆಂದುಆಚರಿಸಲ್ಪಡುತ್ತದೆ.

2. ಎಂ.ಪಿ.ಗಣೇಶ್ :-
ಉತ್ತರ :-   ಕರ್ನಾಟಕದ ಕೊಡಗಿನಲ್ಲಿ  ಹುಟ್ಟಿ ಭಾರತವನ್ನು ಮೂರು ವಿಶ್ವಕಪ್ನಲ್ಲಿ ಪ್ರತಿನಿಧಿಸಿದ ಡಾ|| ಎಂ.ಪಿ.ಗಣೇಶ್ ಇವರು 1971 ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಂಚಿನ ಪದಕ. 1973 ರಲ್ಲಿ ಆಮ್ಸ್ಟರ್ಡಾಮ್ನಲ್ಲಿ ತಂಡದ ನಾಯಕರಾಗಿ ಬೆಳ್ಳಿ ಪದಕ, 1972 ರಲ್ಲಿ ಮ್ಯೂನಿಚ್ ನಲ್ಲಿ ನಡೆದ ಓಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದರು. 1972 ರಲ್ಲಿ ವಿಶ್ವ ಎಲೆವೆನ್ಗೆ ಆಯ್ಕೆಯಾಗಿ , 1970 -1974 ರ ವರೆಗೆ ಏಷ್ಯಾ ತಂಡಕ್ಕೆ ಆಡಿದರು.1973 ರಲ್ಲಿ ಇವರಿಗೆ ಅರ್ಜುನ್ ಪ್ರಶಸ್ತಿ ದೊರೆಯಿತು. ಇವರು ಅನೇಕ ಸಲ ಭಾರತೀಯ ತಂಡದ ತರಬೇತುದಾರರಾಗಿ, ತರಬೇತಿ ಸಮೀತಿಯ ಅಧ್ಯಕ್ಷರಾಗಿದ್ದರು. ಭಾರತದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ಕ್ರೀಡಾ ಪ್ರಾಧಿಕಾರದ (ಖಂ) ಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  

2. ಸೂರಜ್ ಲತಾದೇವಿ :-
ಉತ್ತರ :-  ಸೂರಜ್ ಲತಾದೇವಿ ಇವರು ಮಣಿಪುರದವರಾಗಿದ್ದು 1994 ರಲ್ಲಿ ಇಂದಿರಾ ಗಾಂದಿ ಗೋಲ್ಡ್ ಕಪ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಆಡುವ ಮೂಲಕ ತಮ್ಮ ಅಂತರರಾಷ್ಟ್ರೀಯ ಹಾಕಿ ವೃತ್ತಿ ಪ್ರಾರಂಭಿಸಿದರು. 1998 ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದರು.ಎರಡು ಬಾರಿ ಎಷ್ಯಾ ಕಪ್ ಆಡಿ ದ್ವಿತೀಯ ಸ್ಥಾನ ಹಾಗೂ 2004 ರಲ್ಲಿ ಪ್ರಥಮ ಸ್ಥಾನ,2002 ರಲ್ಲಿ ಸಂಯುಕ್ತ ಕ್ರೀಡಾಕೂಟದಲ್ಲಿ ಮತ್ತು 2003 ರಲ್ಲಿ ಆಪ್ರೋ ಏಷ್ಯನ್ ಗೇಮ್ಸ್ನಲ್ಲಿ ಪ್ರಥಮ ಸ್ತಾನ ಪಡೆದರು. ಭಾರತದ ಹಾಕಿ ತಂಡದ ನಾಯಕಿಯಾಗಿ ಹಲವು ವರ್ಷ ಇವರು ದೇಶವನ್ನು ಪ್ರತಿನಿಧಿಸಿದ್ದಾರೆ.

3. ಧನರಾಜ್ ಪಿಳ್ಳೆ :-
ಉತ್ತರ :-ಇವರು ನಮ್ಮ ದೇಶದ ಪ್ರಸಿದ್ದ ಆಟಗಾರರಾಗಿದ್ದೂ ತಮ್ಮ ಹದಿನೈದು ವರ್ಷಗಳ ಶ್ಲಾಘನೀಯ ಹಾಕಿ ಜೀವನದಲ್ಲಿ 4 ಒಲಿಂಪಿಕ್ಸ್, 4 ವಿಶ್ವಕಪ್, 4 ಚಾಂಪಿಯನ್ಸ್ ಟ್ರೋಫಿ ಮತ್ತು 4 ಏಷ್ಯನ್ ಕ್ರೀಡೆಗಳಲ್ಲಿಭಾರತವನ್ನು ಪ್ರತಿನಿಧಿಸಿದ್ದಾರೆ. ಇವರು ಬ್ಯಾಂಕಾಕ್ನ ಏಷ್ಯನ್ ಗೇಮ್ಸ್ನಲ್ಲಿ ಅತ್ಯಧಿಕ ಗೋಲುಗಳನ್ನು ಬಾರಿಸಿ ಗೆಲುವಿಗೆ ಕಾರಣರಾದರು.1994 ರ ಸಿಡ್ನಿ ವಿಶ್ವಕಪ್ನಲ್ಲಿ ತಮ್ಮ ಅತ್ಯುತ್ತಮ ಆಟದಿಂದಾಗಿ ವಿಶ್ವ ತಂಡಕ್ಕೆ ಆಯ್ಕೆಯಾದ ಏಕೈಕ ಭಾರತೀಯ.1900 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿರುತ್ತಾರೆ.2000 ರಲ್ಲಿ ಪದ್ಮಶ್ರೀ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುತ್ತಾರೆ.

You Might Like

Post a Comment

0 Comments