I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1. ಪ್ರಥಮ ಚಿಕಿತ್ಸೆಯನ್ನು ಮೊಟ್ಟ ಮೊದಲಿಗೆ ಸೇಂಟ್ಜಾನ್ ಅಂಬುಲೆನ್ಸ್ ಸಂಘದವರು ಜಾರಿಗೆ ತಂದರು.
2. ಪ್ರಥಮ ಚಿಕಿತ್ಸಕನು ವ್ಯಕ್ತಿಯ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ.
II. ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1) ಪ್ರಥಮ ಚಿಕಿತ್ಸೆ ನೀಡುವಾಗ ರೋಗಿಗೆ ಸಾಕಷ್ಟು ಆತ್ಮಸ್ಥೈರ್ಯ ತುಂಬಬೇಕು
1) ಭಯ 2) ಆತ್ಮಸ್ಥೈರ್ಯ 3) ಆತ್ಮ ವಿಶ್ವಾಸ 4) ಪ್ರೇರಣೆ
2) ಪ್ರಥಮ ಚಿಕಿತ್ಸೆಯು ಅಪಘಾತವಾದ ವ್ಯಕ್ತಿಯ ದೇಹದ ಸ್ಥಿತಿ ಹದಗೆಡುವುದನ್ನು ತಪ್ಪಿಸುವುದು.
1) ಉತ್ತಮಗೊಳಿಸುವುದನ್ನು 2) ಹದಗೆಡುವುದನ್ನು
3) ಸದೃಡಗೊಳ್ಳುವುದನ್ನು 4) ಬಲಗೊಳ್ಳುವುದನ್ನು
3) ಪೂರಕ ಚಿಕಿತ್ಸೆ ಸಹಾಯವನ್ನು ಪ್ರಥಮ ಚಿಕಿತ್ಸೆ ಎನ್ನುತ್ತಾರೆ.
1) ಪೂರಕ ಚಿಕಿತ್ಸೆ 2) ವೈದ್ಯರ ನಂತರ ನೀಡುವ ಚಿಕಿತ್ಸೆ
3) ದೀರ್ಘ ಕಾಲದ ಚಿಕಿತ್ಸೆ 4) ಆಕಸ್ಮಿಕ ಚಿಕಿತ್ಸೆ
III. 'ಅ' ಪಟ್ಟಿಯೊಂದಿಗೆ 'ಬ'ಪಟ್ಟಿಯನ್ನು ಹೊಂದಿಸಿ ಬರೆಯಿರಿ.
IV. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಪ್ರಥಮ ಚಿಕಿತ್ಸೆಗೆ ಬೇಕಾಗುವ ಸಲಕರಣೆಗಳನ್ನು ಹೆಸರಿಸಿ?
ಉತ್ತರ :- ವಿವಿಧ ಬಗೆಯ ಬ್ಯಾಂಡೇಜ್, ನೋವು ನಿವಾರಕ ಸ್ಪ್ರೇ. ಹತ್ತಿ, ಮಾತ್ರೆಗಳು, ಟಿಂಚರ್, ಅಯೋಡಿನ್, ಸೋಡಿಯಂಬೈ ಕಾರ್ಬೋನೇಟ್, ಜಿಗುಟು ಪಟ್ಟಿಗಳು, ಬ್ಲೇಡ್, ಕತ್ತರಿ, ಚಿಮುಟ, ವಿವಿಧ ಬಗೆಯ ಮುಲಾಮು.
2. ಪ್ರಥಮ ಚಿಕಿತ್ಸೆಯ ಯಾವುದಾದರೊಂದು ಸುವರ್ಣ ನಿಯಮವನ್ನು ಬರೆಯಿರಿ ?
ಉತ್ತರ :- ರಕ್ತಸ್ರಾಮ ಆಗುತ್ತಿದರೆ ಕೂಡಲೆ ನಿಲ್ಲಿಸಬೇಕು, ಅಪಘಾತದ ತೀವ್ರತೆಯನ್ನು ಪರಿಶೀಲಿಸಿ ಚಿಕಿತ್ಸೆ ನೀಡಬೇಕು.
0 Comments