SUPPLYMENTARY READNG
THE STORY OF DHARMAVYADHA
THE STORY OF DHARMAVYADHA
– From “The Mahabharatha”
Exercise :
I.) Answer each of the following in a sentence or two :
1.) Why was Kaushika very angry with the bird?
Answer: While studying the Vedas, a crane disturbed Kaushika with its loud twitter and this made him angry with the bird.
2.) Why did the housewife delay in giving alms to Kaushika?
Answer: The housewife was attending to her husband who had just come home and this is why she delayed in giving alms to Kaushika.
3.) Who did she advise Kaushika to meet?
Answer: She advised Kaushika to meet Dharmavyadha in Mithila.
4.) Why did Kaushika feel stunned at the words of Dharmavyadha?
Answer: Dharmavyadha told Kaushika that he knew a chaste woman had sent her to him and this made him stunned at the words of Dharmavyadha.
5.) What did Kaushika do after his visit to Dharmavyadha?
Ans Kaushika spent his days in the service of his parents and in teaching others the Vedic lore he had mastered.
6.) What did Sage Markandeya tell Yudhishtira in the end?
Answer: In the end, Sage Markandeya told Yudhishtira that in every division of people, there are enlightened souls who can guide even scholars and masters of Vedic teachings.
Answer each of the following in a paragraph :
1.) Narrate how Kaushika felt on listening to the lady.
Answer: When Kaushika went to beg for alms at a woman’s home, then the woman delayed giving him the alms. She was attending to her husband who had just come home which made her delay. Then Kaushika glared at her. She then said to him that she was not a crane for his glare to burn her up. He was shocked and wondered how she came to know about the crane’s incident. She advised him to meet Dharmavyadha of Mithila who would teach him the path of Dharma.
2.) What are the essentials of Dharma, according to Dharmavyadha?
Answer: According to Dharmavyadha, one should engage in one’s inherent duty. One should be truthful, patient and merciful. One should not be elated in happiness or depressed in difficulties. One should engage in prayer and taps. One should appreciate the good qualities in others, not to boast. One should have bath in sacred rivers, visit holy places and serve one’s parents and the guru who ha bestowed knowledge on us.
3.) What can we learn from the story of Dharmavyadha?
Answer: We can learn many things from the story of Dharmavyadha. We should always speak the truth. We should always respect the elders and follow our duty. We should always see good in others.
THE STORY OF DHARMAVYADHA KANNADA SUMMARY
ಪ್ರಸ್ತುತ ಪಾಠ ಭಾರತದ ಮಹಾ ಕಾವ್ಯಗಳಲ್ಲಿ ಒಂದಾ ಮಹಾಭಾರತದಲ್ಲಿ ಬರುವ ಉಪ ಕಥೆಯಿತು. ಈ ಕಥೆಯನ್ನು ಮಾರ್ಕಾಂಡೆಯ ಮಹಾಋಷಿಗಳು ಧರ್ಮರಯನಿಗೆ ಹೇಳಿದ ಕಥೆಯಿದು.
ಒಂದಾನೊಂದು ಕಾಲದಲ್ಲಿ ಕೌಶಿಕನೆಂಬ ಋಷಿಯೊಬ್ಬ ನಿದ್ದನು. ಅವನು ವೇದಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದನು. ಜ್ಞಾನದಲ್ಲಿ ಮತ್ತು ಕಲಿಯುವಿಕೆಯಲ್ಲಿ ತಾನು ಎಲ್ಲರನ್ನು ಮೀರಿಸಬೇಕೆಂಬ ತನ್ನ ಮನೆ ಮತ್ತು ತಂದೆ ತಾಯಿಗಳನ್ನು ಬಿಟ್ಟು ಕಾಡಿಗೆ ಹೋಗುತ್ತಾನೆ. ಅಲ್ಲಿ ತನ್ನ ಕಲಿಕೆಯನ್ನು ಬೆನ್ನು ಹತ್ತುವ ಉದ್ದೇಶವಿರುತ್ತದೆ, ಒಂದು ದಿನ ಮರದ ಕೆಳಗೆ ಕುಳಿತು ವೇದಗಳನ್ನು ಕಲಿಯುತ್ತಿರುತ್ತಾನೆ. ಮರದ ಮೇಲಿದ್ದ ಪಕ್ಷಿಗಳ ಕಲರವ ಶಬ್ದದಿಂದ ಓದಲು ತೊಂದರೆಯಾಗುತ್ತದೆ. ನೋಡಿ ಮರದ ಕೊಂಬೆಯ ಮೇಲೆ ಕುಳಿತಿದ್ದ ಪಕ್ಷಿಯನ್ನು ಕೋಪದಿಂದ ದುರುಗುಟ್ಟಿಕೊಂಡು ನೋಡುತ್ತಾನೆ. ತಕ್ಷಣವೇ ಅವನ ಕಣ್ಣಿನ ದೃಷ್ಟಿಯಿಂದ ಆ ಬಲಾಕ ಪಕ್ಷಿಯು ಸುಟ್ಟು ಬೂದಿಯಾಗುತ್ತದೆ. ಕೌಶಿಕನಿಗೆ ವಿಷಾದವೆನಿಸುತ್ತದೆ. ಆದರೆ ತನ್ನಲ್ಲಿರುವ ತಪಸ್ಸು ಅಥವಾ ಜ್ಞಾನದ ಶಕ್ತಿಯನ್ನು ಕಂಡು ಹೆಮ್ಮೆ ಪಡುತ್ತಾನೆ. ಎಂದಿನಂತೆ ಭಿಕ್ಷಾಟನೆಗೆಂದು ಪಟ್ಟಣದೊಳಗೆ ಬರುತ್ತಾನೆ. ಆದರೂ ಮನಸ್ಸಿನಲ್ಲಿ ಆ ಘಟನೆಯೇ ಇದ್ದುದ್ದರಿಂದ ಅದರ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಒಂದು ಮನೆಯ ಮುಂದೆ ನಿಂತು ಭವತಿ ಭಿಕ್ಷಾಂದೇಹಿ ಎಂದ ಕೂಗುತ್ತಾನೆ. ಆ ಮನೆಯ ಒಡತಿಯು ಆಗ ತಾನೆ ಬಂದ ತನ್ನ ಗಂಡನನ್ನು ಉಪಚರಿಸುತ್ತಿರುತ್ತಾಳೆ. ಹಾಗಾಗಿ ಭಿಕ್ಷೆ ಕೊಡಲು ಸ್ವಲ್ಪ ತಡವಾಗುತ್ತದೆ. ನಂತರ ಬಂದು ಭಿಕ್ಷೆ ನೀಡುತ್ತಾಳೆ. ಆಗ ಅವಳನ್ನು ಕೌಶಿಕನು ದುರುಗುಟ್ಟಿಕೊಂಡು ನೋಡುತ್ತಾನೆ. ಅದಕ್ಕೆ ಅವಳು ಕೌಶಿಕನೇ ನೀನು ದುರುಗುಟ್ಟಿಕೊಂಡು ನೋಡುತ್ತಾನೆ. ಅದಕ್ಕೆ ಅವಳು ಕೌಶಿಕನೇ ನೀನು ದುರುಗುಟ್ಟಿ ನೋಡಿದರೆ ಸುಟ್ಟು ಹೋಗಲು ನಾನೇನು ಬಲಾಕ ಪಕ್ಷಿಯಲ್ಲ ಎಂದಾಗ ಕೌಶಿಕನಿಗೆ ಅತ್ಯಾಶ್ಚರ್ಯವಾಗುತ್ತದೆ. ತನ್ನ ಮನಸ್ಸಿನಲ್ಲಿ ಆಶ್ಚರ್ಯದಿಂದ ಹೇಳಿಕೊಳ್ಳುತ್ತಾನೆ. ಆ ವಿಷಯ ಈ ಹೆಂಗಸ್ಸಿಗೆ ಹೇಗೆ ಗೊತ್ತಾಯಿತು. ಎಂದು ಗಲಿಬಿಲಿಗೊಳ್ಳುವನು. ಇದನ್ನು ಅರ್ಥಮಾಡಿಕೊಂಡ ಅವಳು ನೀನು ವೇದಗಳನ್ನು ಓದಿಕೊಂಡು ಜ್ಞಾನಿಯಾಗಿರಬಹುದು. ಆದರೆ ನಿನಗೆ ಧರ್ಮ ಸೂಕ್ಷಗಳು ಅಥವಾ ರಹಸ್ಯಗಳು ಗೊತ್ತಿಲ್ಲ. ಮಿಥಿಲಾ ನಗರದಲ್ಲಿ ಧರ್ಮವ್ಯಾದನೆಂಬುವನು ಒಬ್ಬನಿದ್ದಾನೆ. ನೀನು ಅವನ ಹತ್ತಿರ ಈ ಧರ್ಮ ರಹಸ್ಯಗಳನ್ನು ಕಲಿಯಬಹುದು ಎಂದು ಹೇಳುತ್ತಾಳೆ. ಆಗ ಕೌಶಿಕನು ಮಿಥಿಲಾ ನಗರಕ್ಕೆ ಹೋಗುತ್ತಾನೆ.
ಮಿಥಿಲಾ ನಗರದಲ್ಲಿರುವ ಧರ್ಮ ವ್ಯಾದನ ಅಂಗಡಿಗೆ ಬರುತ್ತಾನೆ. ಅದೊಂದು ಮಾಂಸವನ್ನು ಮಾರುವ ಅಂಗಡಿ. ಇವನನ್ನು ಕಂಡ ಧರ್ಮವ್ಯಾಧನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಬನ್ನಿಬನ್ನಿ. ನಿಮ್ಮನ್ನು ಆ ಗೃಹಿಣಿಯು ಕಳುಹಿಸಿದ್ದಾಳಲ್ಲವೇ ಎಂದು ಕೇಳುತ್ತಾನೆ. ಇದನ್ನು ಕೇಳಿದ ಕೌಶಿಕನಿಗೆ ಗಾಬರಿಯಾಗುತ್ತದೆ. ಇದುವರೆಗೂ ಕೌಶಿಕನಿಗೆ ತಾನೊಬ್ಬನೇ ಜ್ಞಾನಿಗಳಲ್ಲವೇ ನಿಜಕ್ಕೂ ಇವರು ಶ್ರೇಷ್ಟರು ಎಂಬುದಾಗಿ ವಿಚಾರ ಮಾಡಿ ಕೈಮುಗಿದು ಧರ್ಮವ್ಯಾದನಲ್ಲಿ ಬೇಡಿಕೊಳ್ಳುತ್ತಾನೆ. ದಯವಿಟ್ಟು ನನಗೆ ಧರ್ಮದ ರಹಸ್ಯಗಳನ್ನು ತಿಳಿಸಿ ಕೊಡಿ ಎಂದು ಕೇಳಿಕೊಳ್ಳುತ್ತಾನೆ. ಧರ್ಮವ್ಯಾದನು ಈ ರೀತಿ ಉತ್ತರಿಸುತ್ತಾನೆ. ನೀವು ವೇದ ಶಾಸ್ತ್ರಗಳಲ್ಲಿ ಪಾರಂಗತರು, ನಿಮ್ಮಂತರ ಪಂಡಿತರಗಿಗೆ ನಾನು ಏನನ್ನು ಹೇಳಿಕೊಡುವುದು. ಆದರೆ ನಾನೇನು ಮಾಡುತ್ತಿದ್ದೇನೆ. ಮತ್ತು ಯಾವ ಹಾದಿಯಲ್ಲಿ ಸಾಗುತ್ತಿದ್ದೇವೆ. ಎಂಬುದನ್ನು ಮಾತ್ರ ಹೇಳುತ್ತಾನೆ. ಯಾರೇ ಆಗಲಿ ಅವರವರ ಪ್ರಮುಖ ಕರ್ತವ್ಯಗಳನ್ನು ನಿಷ್ಟೆಯಿಂದ ಪ್ರಾಮಾಣಿಕನಾಗಿ ತಾಳ್ಮೆಯಿಂದ ಕರುಣೆಯಿಂದ ಮಾಡಬೇಕು. ಪ್ರಾರ್ಥನೆ ಜಪ ತಪಗಳನ್ನು ಮಾಡುತ್ತಾ ಇತರಲ್ಲಿರುವ ಒಳ್ಳೆಯ ಗುಣಗಳನ್ನು ಹೊಗಳುತ್ತಾ ಜಂಭ ಪಡದೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ತಂದೆ ತಾಯಿ ಮತ್ತು ನಮಗೆ ಜ್ಞಾನವನ್ನು ನೀಡಿದ ಗುರುಗಳ ಸೇವೆ ಮಾಡುತ್ತಾ ಜೀವನ ಮಾಡುತ್ತಿದ್ದೇವೆ. ಇದೇ ಧರ್ಮದ ರಹಸ್ಯ.
ನಾನು ನಮ್ಮ ವಂಶ ಪಾರಂಪಠ್ಯವಾದ ಮಾಂಸದ ಅಂಗಡಿಯಲ್ಲಿ ಮಾಂಸವನ್ನು ಮಾರುತ್ತಿದ್ದೇನೆ. ಆದರೆ ನಾನು ಪ್ರಾಣಿಗಳನ್ನು ಕೊಲ್ಲುವುದಿಲ್ಲ. ವ್ಯಾಪಾರದಲ್ಲಿ ಮೋಸವನ್ನು ನನಗೆ ಗೊತ್ತಿರುವಂತೆ ಇಲ್ಲಿಯವರೆಗೂ ಯಾರ ಹತ್ತಿರವೂ ಸುಳ್ಳು ಹೇಳಿಲ್ಲ. ನನಗೆ ಶತ್ರುಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನು ನನ್ನ ವೃದ್ದರ ಮಾತಾಪಿತರನ್ನು ಭಕ್ತಿ ಶ್ರದ್ದೆಯಿಂದ ಸೇವೆ ಮಾಡುತ್ತೇವೆ. ಅವರ ಆರ್ಶೀವಾದವೇ ನನಗೆ ಶ್ರೀರಕ್ಷೆ ಎಂದು ಧರ್ಮವ್ಯಾಧ ಕೌಶಿಕನಿಗೆ ಹೇಳಿದನು.
ನಂತರ ಕೌಶಿಕನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ತನ್ನ ತಂದೆ ತಾಯಿಯರನ್ನು ತೋರಿಸಿ ಅವರಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾನೆ. ಕೌಶಿಕನೂ ಸಹ ಅವರಿಗೆ ನಮಸ್ಕರಿಸುತ್ತಾನೆ. ನಂತರ ಧರ್ಮವ್ಯಾದನಿಗೆ ತಲೆ ತಗ್ಗಿಸಿ ಇಂದು ನನ್ನ ಅಹಂಕಾರ ಮಾಯಾವಾಯಿತು. ಇದುವವರೆಗೂ ನಾನೊಬ್ಬನೇ ಪಂಡಿತ ಜ್ಞಾನಿ ಎಂದು ಜಂಭ ಪಡುತ್ತಿದ್ದೆ. ನನ್ನ ವಯಸ್ಸಾದ ತಂದೆ ತಾಯಿಗಳನ್ನು ಬಿಟ್ಟು ಬಂದು ಅವರಿಗೆ ದುಃಖವನ್ನು ಕೊಟ್ಟೆ
ಇಂದು ನನ್ನ ಕಣ್ಣು ತೆರೆಯಿತು. ಈಗ ನನಗೆ ನನ್ನ ಧರ್ಮ ನನ್ನ ತಂದೆ ತಾಯಿಗಳ ಸೇವೆ ಮಾಡುವುದು ಎಂದು ಅರ್ಥವಾಯಿತು. ನಾನು ಅವರಲ್ಲಿಗೆ ಹೋಗಿ ಅವರಿಗೆ ಸಂತೋಷವನ್ನು ಕೊಡುತ್ತೇನೆ. ನೀವು ಹೇಳಿದ ಎಲ್ಲಾ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವೆನು ಎಂದು ಹೇಳಿ ತನ್ನ ಮನೆಗೆ ಹಿಂದಿರುಗಿದನು. ನಂತರ ಅವರ ತಂದೆ ತಾಯಿಗಳ ಸೇವೆ. ಮಾಡುತ್ತಾ ಮತ್ತು ಇತರರಿಗೆ ತಾನು ಕಲಿತ ವೇದ ಪಾಠಗಳನ್ನು ಹೇಳಿಕೊಡುತ್ತಾ ಕಾಲ ಕಳೆಯುತ್ತದ್ದನು.
0 Comments